ಪಾಕ್​​ ವಿರುದ್ಧ ಭಾರತಕ್ಕೆ ಪರಾಜಯ; ಟೀಮ್​​ ಇಂಡಿಯಾ ಹೀನಾಯ ಸೋಲಿಗೆ ಕಾರಣವೇನು?

author-image
Ganesh Nachikethu
Updated On
ಪಾಕ್​​ ವಿರುದ್ಧ ಭಾರತಕ್ಕೆ ಪರಾಜಯ; ಟೀಮ್​​ ಇಂಡಿಯಾ ಹೀನಾಯ ಸೋಲಿಗೆ ಕಾರಣವೇನು?
Advertisment
  • ಸದ್ಯ ನಡೆಯುತ್ತಿರೋ ಅಂಡರ್‌ 19 ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿ!
  • ಅಂಡರ್‌ 19 ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಹೀನಾಯ ಸೋಲು
  • ಪಾಕಿಸ್ತಾನದ ವಿರುದ್ಧ ಟೀಮ್​ ಇಂಡಿಯಾಗೆ 43 ರನ್​ನಿಂದ ಪರಾಜಯ

ಸದ್ಯ ನಡೆಯುತ್ತಿರೋ ಅಂಡರ್‌ 19 ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಭಾರತ ಕ್ರಿಕೆಟ್​ ತಂಡ ಭಾರೀ ನಿರಾಸೆ ಮೂಡಿಸಿದೆ. ಶನಿವಾರ ನಡೆದ ಪಾಕ್​​ ವಿರುದ್ಧದ ಪಂದ್ಯದಲ್ಲಿ ಟೀಮ್​ ಇಂಡಿಯಾ 43 ರನ್​ಗಳಿಂದ ಹೀನಾಯ ಸೋಲು ಕಂಡಿದೆ.

ಇನ್ನು, ಮೊದಲ ಪಂದ್ಯದಲ್ಲೇ ಟೀಮ್​ ಇಂಡಿಯಾ ಹೀನಾಯ ಸೋಲು ಕಂಡಿದ್ದು, ಭಾರೀ ಮುಜುಗರ ತಂದಿದೆ. ಬ್ಯಾಟಿಂಗ್​​ ಮತ್ತು ಬೌಲಿಂಗ್​​ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ಪರಿಣಾಮ ಟೀಮ್​ ಇಂಡಿಯಾ ಗೆಲುವು ಸಾಧಿಸಿದೆ.

ಪಾಕ್​​ ಮೊದಲ ಬ್ಯಾಟಿಂಗ್​​

ಮಹತ್ವದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ಮಾಡಿದ ಪಾಕ್​ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 281 ರನ್‌ ಸೇರಿಸಿತು. ಈ ಬೃಹತ್​ ಗುರಿಯನ್ನು ಬೆನ್ನತ್ತಿದ ಟೀಮ್​ ಇಂಡಿಯಾ 47.1 ಓವರ್​​ನಲ್ಲಿ 238 ರನ್​ಗಳಿಗೆ ಆಲೌಟ್​ ಆಗಿದೆ.

ಭಾರತದ ಕಳಪೆ ಆರಂಭ

ಭಾರತ ತಂಡದ ಆರಂಭ ಕಳಪೆಯಾಗಿತ್ತು. ಓಪನಿಂಗ್​ ಮಾಡಿದ ಆಯುಷ್ ಮಾತ್ರೆ ಹಾಗೂ ವೈಭವ್ ಸೂರ್ಯವಂಶಿ ರನ್​ ಕಲೆ ಹಾಕುವಲ್ಲಿ ವಿಫಲರಾಗಿದ್ರು. ಟೀಮ್​ ಇಂಡಿಯಾ ಕೇವಲ 28 ರನ್​ ಗಳಿಸಿದಾಗ ಈ ಇಬ್ಬರು ಪೆವಿಲಿಯನ್ ಸೇರಿದರು. ಬಳಿಕ ಭಾರತ ಬ್ಯಾಕ್​ ಟು ಬ್ಯಾಕ್​ ವಿಕೆಟ್​ ಕಳೆದುಕೊಂಡಿತು. 5ನೇ ವಿಕೆಟ್​​ಗೆ ಕಿರಣ್ ಚೋರ್ಮಲೆ, ನಿಖಿಲ್ ಕುಮಾರ್ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು.

ಕಿರಣ್ ಚೋರ್ಮಲೆ, ನಿಖಿಲ್ ಕುಮಾರ್ ಜೋಡಿ 59 ಎಸೆತಗಳಲ್ಲಿ 53 ರನ್‌ ಸಿಡಿಸಿ ತಂಡಕ್ಕೆ ಆಧಾರವಾದರು. ಮಧ್ಯಮ ಕ್ರಮಾಂಕದ ಬ್ಯಾಟರ್​ ನಿಖಿಲ್ 67 ರನ್‌ ಸಿಡಿಸಿದ್ರು. ಕಿರಣ್ ಚೋರ್ಮಲೆ, ಹರ್ವಂಶ ಪಂಗಾಲಿಯಾ, ಹಾರ್ದಿಕ್ ರಾಜ್, ಮೊಹಮ್ಮದ್ ಏನನ್ ಡಬಲ್​ ಡಿಜಿಟ್​ ಸಾಧಿಸಿ ತಂಡಕ್ಕೆ ನೆರವಾದ್ರು. ಯಾರು ದೊಡ್ಡ ಇನ್ನಿಂಗ್ಸ್​ ಕಟ್ಟದ ಕಾರಣ ಭಾರತ ತಂಡ ಸೋಲಬೇಕಾಯ್ತು.

ಇದನ್ನೂ ಓದಿ:ಆಸ್ಟ್ರೇಲಿಯಾ ವಿರುದ್ಧ ಮಹತ್ವದ ಟೆಸ್ಟ್​; ಟೀಮ್​ ಇಂಡಿಯಾಗೆ ಸ್ಟಾರ್​ ಪ್ಲೇಯರ್​ ಎಂಟ್ರಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment