ಟೀಂ ಇಂಡಿಯಾಗೆ ವಿರೋಚಿತ ಸೋಲು.. ಆಂಗ್ಲರಿಗೆ ನೀರು ಕುಡಿಸಿದ ಜಡೇಜಾ, ಸಿರಾಜ್, ಬೂಮ್ರಾ..!

author-image
Ganesh
Updated On
ಟೀಂ ಇಂಡಿಯಾಗೆ ವಿರೋಚಿತ ಸೋಲು.. ಆಂಗ್ಲರಿಗೆ ನೀರು ಕುಡಿಸಿದ ಜಡೇಜಾ, ಸಿರಾಜ್, ಬೂಮ್ರಾ..!
Advertisment
  • ಭಾರತ-ಇಂಗ್ಲೆಂಡ್​ 3ನೇ ಟೆಸ್ಟ್​ ಪಂದ್ಯ
  • ರೋಚಕ ಗೆಲುವು ಸಾಧಿಸಿದ ಇಂಗ್ಲೆಂಡ್​
  • ಟೀಮ್​ ಇಂಡಿಯಾಗೆ ವಿರೋಚಿತ ಸೋಲು

ಇಂಡೋ-ಇಂಗ್ಲೆಂಡ್​​ ಲಾರ್ಡ್ಸ್​ ಟೆಸ್ಟ್​​ ಪಂದ್ಯದ ಕೊನೆಯ ದಿನದಾಟದ ಆರಂಭದಲ್ಲಿ ಟೀಮ್​ ಇಂಡಿಯಾ ಸುಲಭಕ್ಕೆ ಗೆಲ್ಲುತ್ತೆ ಅನ್ನೋ ನಿರೀಕ್ಷೆಯಿತ್ತು. ಫಸ್ಟ್​ ಸೆಷನ್​ ಅಂತ್ಯ ಬಳಿಕ ಇಂಗ್ಲೆಂಡ್​​ ಆರಾಮಾಗಿ ಗೆಲ್ಲುತ್ತೆ ಅನ್ನೋ ಮಾತು ಎಲ್ಲರ ಬಾಯಲ್ಲೂ ಬಂದಿತ್ತು. ಆದರೆ ಆಗಿದ್ದೇ ಬೇರೆ.. ಇಂಗ್ಲೆಂಡ್​ ಗೆಲುವಿಗಾಗಿ ಕಠಿಣ ಹೋರಾಟ ನಡೆಸ್ತು. ಇಂಡಿಯನ್​ ಟೈಲೆಂಟರ್ಸ್​​ ಸಖತ್​ ಕಾಟ ಕೊಟ್ರು.

ಸೆಷನ್​​-1: ಇಂಗ್ಲೆಂಡ್​ ಆರ್ಭಟಕ್ಕೆ ಟೀಮ್​ ಇಂಡಿಯಾ ಕಂಗಾಲ್​

4 ವಿಕೆಟ್​ ನಷ್ಟಕ್ಕೆ 58 ರನ್​ಗಳೊಂದಿಗೆ ಅಂತಿಮ ದಿನದಾಟ ಆರಂಭಿಸಿದ ಟೀಮ್​ ಇಂಡಿಯಾ ಆಘಾತದ ಮೇಲೆ ಆಘಾತ ಎದುರಿಸಿತು. 135 ರನ್​ಗಳ ಚೇಸಿಂಗ್​ಗಿಳಿದ ಟೀಮ್​ ಇಂಡಿಯಾಗೆ ಸೂಪರ್​ ಸ್ಟಾರ್​ ಬ್ಯಾಟ್ಸ್​​ಮನ್​​ಗಳು ಕೈ ಕೊಟ್ರು. ತೀವ್ರ ನಿರೀಕ್ಷೆಯಿಟ್ಟಿದ್ದ ರಿಷಭ್​ ಪಂತ್​ 9 ರನ್​ಗಳಿಸಿ ಔಟಾದ್ರು. ಜೋಫ್ರಾ ಆರ್ಚರ್​​ ಎಸೆತಕ್ಕೆ ಕ್ಲೀನ್​​ಬೋಲ್ಡ್​ ಆದ್ರು.

ಇದನ್ನೂ ಓದಿ: ಟೆಸ್ಟ್​​ನಲ್ಲಿ ಒಂದೇ ಚೆಂಡಿನಿಂದ 80 ಓವರ್​ ಮಾಡಬೇಕಾ..? ಡ್ಯೂಕ್ ಬಾಲ್ ಬಗ್ಗೆ ಗಿಲ್, ಸ್ಟೋಕ್ಸ್ ಅಸಮಾಧಾನ!

publive-image

ಭರವಸೆ ಮೂಡಿಸಿದ್ದ ಕೆ.ಎಲ್.ರಾಹುಲ್​ ಕೂಡ ಕೈಕೊಟ್ರು. 39 ರನ್​ಗಳಿಸಿದ್ದ ರಾಹುಲ್ ಬೆನ್​​ ಸ್ಟೋಕ್ಸ್​ ಬಲೆಗೆ ಬಿದ್ರು. ರಾಹುಲ್​ ನಿರ್ಗಮನದ ಬಳಿಕ ಬ್ಯಾಟಿಂಗ್​ಗೆ ಬಂದ ವಾಷಿಂಗ್ಟನ್​ ಸುಂದರ್​​ ಸೊನ್ನೆ ಸುತ್ತಿದ್ರು. 8ನೇ ವಿಕೆಟ್​ಗೆ ಜೊತೆಯಾದ ರವೀಂದ್ರ ಜಡೇಜಾ- ನಿತೀಶ್​ ರೆಡ್ಡಿ ಭರವಸೆ ಮೂಡಿಸಿದ್ರು. ರಕ್ಷಣಾತ್ಮಕ ಆಟವಾಡಿದ ಈ ಜೋಡಿ ಸಾಲಿಡ್​ ಜೊತೆಯಾಟವಾಡಿತು. 53 ಎಸೆತ ಎದುರಿಸಿ 13 ರನ್​ಗಳಿಸಿ ತಂಡಕ್ಕೆ ಆಸರೆಯಾಗಿದ್ದ ನಿತೀಶ್​ ರೆಡ್ಡಿ ಲಂಚ್​ ಬ್ರೇಕ್​ಗೂ ಮುನ್ನ ಎಡವಿದ್ರು. ಕ್ರಿಸ್​​ವೋಕ್ಸ್​​​ ನಿತೀಶ್​ ರೆಡ್ಡಿ ವಿಕೆಟ್​ ಉರುಳಿಸಿದ್ರು.

ಸೆಷನ್​​-2: ಜಡೇಜಾ - ಬೂಮ್ರಾ ಬೊಂಬಾಟ್​ ಬ್ಯಾಟಿಂಗ್​

2ನೇ ಸೆಷನ್​ನ ಬೇಗ ಮುಗಿಸಾಕ್ತೀವಿ ಅನ್ನೋ ಲೆಕ್ಕಾಚಾರದಲ್ಲಿದ್ದ ಆಂಗ್ಲರಿಗೆ ಶಾಕ್​ ಎದುರಾಯ್ತು. ರವೀಂದ್ರ ಜಡೇಜಾ-ಜಸ್​​ಪ್ರಿತ್​​ ಬೂಮ್ರಾ ಇಂಗ್ಲೆಂಡ್​​ ಬೌಲರ್​​ಗಳ ಬೆವರಿಳಿಸಿದ್ರು. ಪರ್ಫೆಕ್ಟ್​ ಗೇಮ್​​ಪ್ಲಾನ್​ನೊಂದಿಗೆ ಕಣಕ್ಕಿಳಿದ ಈ ಜೋಡಿ ಲೆಕ್ಕಾಚಾರದ ಜೊತೆಯಾಟವಾಡಿತು. 9ನೇ ವಿಕೆಟ್​​ಗೆ ಬರೋಬ್ಬರಿ 132 ಎಸೆತ ಎದುರಿಸಿದ ಈ ಜೋಡಿ 35 ರನ್​ಗಳ ಜೊತೆಯಾಟವಾಡಿತು.
ತಾಳ್ಮೆಯಿಂದ ಎಚ್ಚರಿಕೆಯ ಆಟವಾಡಿದ ಜಸ್​​ಪ್ರಿತ್​ ಬೂಮ್ರಾ ಬರೋಬ್ಬರಿ 54 ಎಸೆತಗಳನ್ನ ಎದುರಿಸಿದ್ರು. ಆಂಗ್ಲರ ದಾಳಿಯನ್ನ ದಿಟ್ಟವಾಗಿ ಮೆಟ್ಟಿನಿಂತ ಬೂಮ್ರಾ, 61.3ನೇ ಓವರ್​​ನಲ್ಲಿ ಕೆಟ್ಟ ಹೊಡೆತಕ್ಕೆ ಕೈ ಹಾಕಿದ್ರು. ಸುದೀರ್ಘ ಕಾಲದ ಹೋರಾಟ 54 ಎಸೆತಕ್ಕೆ ಅಂತ್ಯವಾಯ್ತು.

ಇದನ್ನೂ ಓದಿ: ಟೀಮ್ ಇಂಡಿಯಾಕ್ಕೆ ಕೈ ಕೊಟ್ಟ ಬ್ಯಾಟರ್ಸ್​​.. 193 ರನ್​ ಚೇಸ್​ ಮಾಡಲಾಗದ ಗಿಲ್​ ಸೇನೆಗೆ ಭಾರೀ ಅವಮಾನ! ​

publive-image

10ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​​ಗೆ ಬಂದ ಮೊಹಮ್ಮದ್​ ಸಿರಾಜ್​ ಕೂಡ ಆಂಗ್ಲರಿಗೆ ಟಫ್​ ಫೈಟ್​ ನೀಡಿದ್ರು. ಜಡೇಜಾಗೆ ಸಿರಾಜ್​​ ಸಾಥ್​ ನೀಡಿದ್ರು. ಅತ್ತ ಅದ್ಭುತ ಆಟ ಮುಂದುವರೆಸಿದ ಜಡೇಜಾ ಹಾಫ್​​ ಸೆಂಚುರಿ ಪೂರೈಸಿದ್ರು. ತಾಳ್ಮೆಯ ಆಟವಾಡಿದ ಸಿರಾಜ್​​ ಬರೋಬ್ಬರಿ 30 ಎಸೆತಗಳನ್ನ ಎದುರಿಸಿದ್ರು. ಕೆಣಕ್ತಾ ಇದ್ದ ಆಂಗ್ಲರನ್ನ ಕೂಲ್​ ಆಗಿ ಡೀಲ್​ ಮಾಡಿದ ಸಿರಾಜ್​​ ಸಾಲಿಡ್​ ಡಿಫೆನ್ಸಿವ್​ ಆಟವಾಟಿದ್ರು. ದೃರಾದೃಷ್ಟಕರ ರೀತಿಯಲ್ಲಿ 74ನೇ ಓವರ್​ನ 5ನೇ ಎಸೆತದಲ್ಲಿ ಔಟಾದ್ರು.

ಸಿರಾಜ್​ ಪತನದೊಂದಿಗೆ ಟೀಮ್​ ಇಂಡಿಯಾ 170 ರನ್​ಗಳಿಗೆ ಆಲೌಟ್​ ಆಯ್ತು. ರವೀಂದ್ರ ಜಡೇಜಾ ವಿರೋಚಿತ ಹೋರಾಟ ಸೋಲಿನೊಂದಿಗೆ ವ್ಯರ್ಥವಾಯ್ತು. ಬರೋಬ್ಬರಿ 181 ಎಸೆತ ಎದುರಿಸಿ 4 ಬೌಂಡರಿ, 1 ಸಿಕ್ಸರ್​ ಸಹಿತ 61 ರನ್​ಗಳಿಸಿದ ಜಡೇಜಾ ಅಜೇಯರಾಗುಳಿದ್ರು. 22 ರನ್​ಗಳ ರೋಚಕ ಗೆಲುವು ಸಾಧಿಸಿದ ಇಂಗ್ಲೆಂಡ್​​​ ಸರಣಿಯಲ್ಲಿ 2-1 ಅಂತರದಲ್ಲಿ ಮುನ್ನಡೆ ಸಾಧಿಸಿತು.

ಇದನ್ನೂ ಓದಿ: ಟೆಸ್ಟ್​ನಲ್ಲಿ ‘ವಿರಾಟ್​’ರೂಪ ದರ್ಶನ.. ಇಂಗ್ಲೆಂಡ್ ಬ್ಯಾಟರ್​​ಗಳ ಮೇಲೆ ಕೆಂಡಕಾರಿದ ಕ್ಯಾಪ್ಟನ್ ಗಿಲ್​​!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment