/newsfirstlive-kannada/media/post_attachments/wp-content/uploads/2024/10/ROHIT-8.jpg)
ಬಾಂಗ್ಲಾ ವಿರುದ್ಧ ಕ್ಲೀನ್​ಸ್ವೀಪ್​ ಗೆಲುವು ದಾಖಲಿಸಿದ್ದ ಟೀಮ್​ ಇಂಡಿಯಾ, ನ್ಯೂಜಿಲೆಂಡ್​ ಎದುರಿನ ಮೊದಲ ಟೆಸ್ಟ್​ ಫೈಟ್​​​ನಲ್ಲಿ ಮುಖಭಂಗ ಅನುಭವಿಸಿದೆ. ಅತಿಯಾದ ಆತ್ಮವಿಶ್ವಾಸದಲ್ಲಿ ಕಣಕ್ಕಿಳಿದು ಮೊದಲ ಇನ್ನಿಂಗ್ಸ್​ನಲ್ಲಿ ಕಿವೀಸ್​​ ಎದುರು ಮಂಡಿಯೂರಿದೆ. ವಿಶ್ವ ಶ್ರೇಷ್ಟ ಆಟಗಾರರ ದಂಡೇ ಹೊಂದಿರೋ ಟೀಮ್​ ಇಂಡಿಯಾ, ಇಂತಹ ಹೀನಾಯ ಪರ್ಫಾಮೆನ್ಸ್​ ನೀಡುತ್ತೆ ಅಂತಾ ಯಾರೊಬ್ಬರೂ ಕನಿಷ್ಟ ಊಹೆಯನ್ನೂ ಮಾಡಿರಲಿಲ್ಲ.
/newsfirstlive-kannada/media/post_attachments/wp-content/uploads/2024/10/KL-RAHUL-1.jpg)
ಟೀಮ್ ಇಂಡಿಯಾ ಹಿನ್ನಡೆಗೆ ಕಾರಣವೇನು?
ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ಟೆಸ್ಟ್​ನ 2ನೇ ದಿನದಾಟದಲ್ಲಿ ಬ್ಯಾಟಿಂಗ್​ಗಿಳಿದ ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ಗಳು ಪೆವಿಲಿಯನ್​ ಪರೇಡ್​​ ನಡೆಸಿದ್ರು. ರೋಹಿತ್​ ಪಡೆಯ ಕಿವೀಸ್​ ಕಿವಿ ಹಿಂಡೋ ಲೆಕ್ಕಾಚಾರವೆಲ್ಲಾ ಮೊದಲ ಸೆಷನ್​ನಲ್ಲೇ ತಲೆಕೆಳಗಾಯ್ತು. ಮೊದಲು ಬ್ಯಾಟಿಂಗ್​ಗೆ ಬಂದ ಭಾರತ ತಂಡ ಜಸ್ಟ್​​ 46 ರನ್​ಗಳಿಗೆ ಆಲೌಟ್​ ಆಯ್ತು. ಬಲಿಷ್ಟ ಟೀಮ್​ ಇಂಡಿಯಾದ ಈ ಹೀನಾಯ ಹಿನ್ನಡೆಗೆ ಹಲವು ಕಾರಣಗಳಿವೆ.
ಕಾರಣ ನಂ.1: ರೋಹಿತ್ ಶರ್ಮಾ ಕೆಟ್ಟ ನಿರ್ಣಯ
ಪಂದ್ಯದಲ್ಲಿ ಟಾಸ್​ ಗೆದ್ದ ಟೀಮ್​ ಇಂಡಿಯಾ ಕ್ಯಾಪ್ಟನ್​ ರೋಹಿತ್​ ಶರ್ಮಾ ಮೊದಲು ಬ್ಯಾಟಿಂಗ್ ಮಾಡೋ ನಿರ್ಧಾರ ಕೈಗೊಂಡಿದ್ದೇ ತಪ್ಪು. ಪಿಚ್​ನಲ್ಲಿ ಇನ್ನೂ ತೇವಾಂಶ ಇತ್ತು. ಈ ಕಂಡಿಷನ್​​ನಲ್ಲಿ ಬ್ಯಾಟಿಂಗ್​ ಕಷ್ಟ. ರೋಹಿತ್​ ಶರ್ಮಾಗೆ ಇದು ಗೊತ್ತಿಲ್ಲದೇ ಇರೋ ವಿಚಾರವೇನಲ್ಲ. ಜೊತೆಗೆ ಕಿವೀಸ್​​ ತಂಡದಲ್ಲಿ ಕ್ವಾಲಿಟಿ ಪೇಸರ್ಸ್ ಇದ್ದಾರೆ. ಹೀಗಿದ್ರೂ, ರೋಹಿತ್​ ಮೊದಲು ಬ್ಯಾಟಿಂಗ್​ ಮಾಡೋ ನಿರ್ಧಾರ ಮಾಡಿದ್ದೇ ಮೊದಲ ಯಡವಟ್ಟು. ರಿಸ್ಕ್ ತೆಗೆದುಕೊಳ್ಳೋ ಅಗತ್ಯತೆಯೇ ಇರಲಿಲ್ಲ.
ಇದನ್ನೂ ಓದಿ:ಫೀಲ್ಡಿಂಗ್​ನಲ್ಲೂ ಟೀಮ್​ ಇಂಡಿಯಾ 3 ಮಹಾ ಯಡವಟ್ಟು; ಪಂತ್ ಹೀಗ್ಯಾಕೆ ಮಾಡಿದರು?
/newsfirstlive-kannada/media/post_attachments/wp-content/uploads/2024/10/ROHIT-7.jpg)
ಕಾರಣ ನಂ.2: ಪೇಸ್ ಮತ್ತು ಸ್ವಿಂಗ್
ಟಾಸ್​ ಸೋತು ಬೌಲಿಂಗ್​ಗಿಳಿದ ನ್ಯೂಜಿಲೆಂಡ್​ ತಂಡದ ಪೇಸರ್ಸ್​ ಬೆಂಗಳೂರು ಕಂಡೀಷನ್ಸ್​ನ ಸಖತ್ತಾಗಿ ಬಳಿಸಿಕೊಂಡ್ರು. ನ್ಯೂಜಿಲೆಂಡ್​​ನ ಮ್ಯಾಟ್​​​​​ ಹೆನ್ರಿ ಮತ್ತು ವಿಲಿಯಮ್ಸ್ ರೋರ್ಕೆಯ ಪೇಸ್ ಮತ್ತು ಸ್ವಿಂಗ್ ಬೌಲಿಂಗ್​ಗೆ, ಟೀಮ್ ಇಂಡಿಯಾ ಬ್ಯಾಟರ್ಸ್ ಬಳಿ ಉತ್ತರವೇ ಇರಲಿಲ್ಲ. ವರ್ಲ್ಡ್ ಕ್ಲಾಸ್ ಬ್ಯಾಟರ್ಸ್​ ಸ್ವಿಂಗ್​​ ಬೌಲಿಂಗ್ ಎದುರಿಸಲಾಗದೇ ಪೆವಿಲಿಯನ್ ಪರೇಡ್ ನಡೆಸಿದ್ರು.
ಕಾರಣ ನಂ.3: ಫೀಲ್ಡ್ ಪ್ಲೇಸ್​ಮೆಂಟ್ ಮತ್ತು ಫೀಲ್ಡಿಂಗ್
ನ್ಯೂಜಿಲೆಂಡ್​ ತಂಡದ ಸಕ್ಸಸ್​​ ಕ್ರೆಡಿಟ್, ಕ್ಯಾಪ್ಟನ್ ಟಾಮ್ ಲಾಥಮ್​​ಗೆ ಸಲ್ಲಬೇಕು. ಬೌಲರ್​​​ಗಳು ಸಾಲಿಡ್​​ ಸ್ಪೆಲ್​ಗಳನ್ನ ಹಾಕಿದ್ದು ಮಾತ್ರವಲ್ಲ. ನಾಯಕ ಟಾಮ್​ ಲಾಥಮ್ ಫೀಲ್ಡ್​ ಪ್ಲೇಸ್​ಮೆಂಟ್​ ಕೂಡ​​​ ಅದ್ಭುತವಾಗಿತ್ತು. ಅಕ್ಷರಶಃ, ಟೀಮ್​ ಇಂಡಿಯಾ ಬ್ಯಾಟಿಂಗ್​ ವೇಳೆ ಕಿವೀಸ್ ನಾಯಕನ ಆಲೋಚನೆ, ನೆಕ್ಸ್ಟ್ ಲೆವೆಲ್​ನಲ್ಲಿತ್ತು. ಇದಕ್ಕೆ ಬೆಸ್ಟ್ ಎಕ್ಸಾಂಪಲ್, ವಿರಾಟ್ ಕೊಹ್ಲಿ ವಿಕೆಟ್. ಇದೊಂದೇ ಅಲ್ಲ, ಭಾರತ ತಂಡದ ಬ್ಯಾಟಿಂಗ್​ ವೇಳೆ ಬ್ಲ್ಯಾಕ್​​​ ಕ್ಯಾಪ್ಸ್ ಫೀಲ್ಡಿಂಗ್, ಎಕ್ಸಲೆಂಟ್ ಆಗಿತ್ತು. ರನ್​ಗಳಿಕೆಗೆ ಕಡಿವಾಣ ಹಾಕೋದರ ಜೊತೆಗೆ ಟಫ್ ಕ್ಯಾಚ್​ಗಳನ್ನ ತೆಗೆದುಕೊಂಡು, ಬೌಲರ್​ಗಳಿಗೆ ಆತ್ಮವಿಶ್ವಾಸ ಹಾಗೂ ಬಲ ಎರಡನ್ನೂ ಹೆಚ್ಚಿಸಿದ್ರು.
ಕಾರಣ ನಂ.4: ಅತಿಯಾದ ಆತ್ಮವಿಶ್ವಾಸ
ಬಾಂಗ್ಲಾದೇಶ ತಂಡದ ವಿರುದ್ಧ ಈ ಹಿಂದಿನ ಟೆಸ್ಟ್​ ಸರಣಿಯಲ್ಲಿ ಅಬ್ಬರಿಸಿದ್ದ ಟೀಮ್ ಇಂಡಿಯಾ ಬ್ಯಾಟ್ಸ್​ಮನ್ಸ್​​, ನ್ಯೂಜಿಲೆಂಡ್ ವಿರುದ್ಧ ಸೈಲೆಂಟ್ ಆಗ್ಬಿಟ್ರು. ಕಿವೀಸ್ ಬೌಲರ್​ಗಳ ದಾಳಿಗೆ ಉತ್ತರವಿಲ್ಲದೇ ಚಿನ್ನಸ್ವಾಮಿಯಲ್ಲಿ ಪೆವಿಲಿಯನ್ ಪರೇಡ್ ನಡೆಸಿದ್ರು. ಕ್ಲೌಡಿ ಕಂಡೀಷನ್ಸ್​ನಲ್ಲಿ ಬಾಲ್ ರೀಡ್ ಮಾಡೋದು ಇರ್ಲಿ, ಬ್ಯಾಟಿಂಗ್ ಜೊತೆ ತಾಳ್ಮೆಯನ್ನೂ ಮರೆತಂತಿತ್ತು.
ಒಟ್ಟಿನಲ್ಲಿ ಸಾಲು ಸಾಲು ತಪ್ಪುಗಳನ್ನ ಮಾಡಿದ ಟೀಮ್​ ಇಂಡಿಯಾ ಮೊದಲ ಇನ್ನಿಂಗ್ಸ್​ನಲ್ಲಿ ಹೀನಾಯ ಪ್ರದರ್ಶನ ನೀಡಿ, ತೀವ್ರ ಹಿನ್ನಡೆ ಅನುಭವಿಸಿದೆ. 2ನೇ ಇನ್ನಿಂಗ್ಸ್​​ನಲ್ಲಾದ್ರೂ ತಪ್ಪಿಗಳನ್ನು ತಿದ್ದಿಕೊಂಡು ಬ್ಯಾಟಿಂಗ್​ ನಡೆಸುತ್ತಾ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us