ಇಬ್ಬರು ಕನ್ನಡಿಗರಿಗೆ ಪ್ಲೇಯಿಂಗ್-11ನಿಂದ ಗೇಟ್​ಪಾಸ್?​ ಲಾರ್ಡ್ಸ್​​ ಟೆಸ್ಟ್​ನಲ್ಲಿ ಒಟ್ಟು 4 ಮೇಜರ್ ಸರ್ಜರಿ..!

author-image
Ganesh
Updated On
ಟೀಂ ಇಂಡಿಯಾದಲ್ಲಿ ಇದೆ ಪ್ರಬಲ ಅಸ್ತ್ರ -2ನೇ ಟೆಸ್ಟ್​​ಗೆ ಕಣಕ್ಕಿಳಿಸಿದ್ರೆ ಗೆಲುವು ನಮ್ಮದೇ..!
Advertisment
  • ಎಡ್ಜ್​ಬಾಸ್ಟನ್​ ಗೆಲುವಿನ ಬಳಿಕ 3ನೇ ಟೆಸ್ಟ್​ಗೆ ಸಿದ್ಧತೆ
  • ಲಾರ್ಡ್ಸ್​​ ಟೆಸ್ಟ್​ಗೂ ಮುನ್ನ ಪ್ಲೇಯಿಂಗ್​-XIಗೆ ಸರ್ಜರಿ
  • ಕರುಣ್​ ನಾಯರ್​ ಬದಲು ಈಶ್ವರನ್​ಗೆ ಚಾನ್ಸ್​ ಸಾಧ್ಯತೆ

ಇಂಗ್ಲೆಂಡ್​​ ವಿರುದ್ಧದ 2ನೇ ಟೆಸ್ಟ್​ನಲ್ಲಿ ಟೀಮ್​ ಇಂಡಿಯಾ ದಾಖಲೆಯ ಜಯ ಸಾಧಿಸಿದೆ. ಇತಿಹಾಸದಲ್ಲೇ ಎಡ್ಜ್​ಬಾಸ್ಟನ್​ನಲ್ಲಿ​ ಚೊಚ್ಚಲ ಟೆಸ್ಟ್​ ಗೆದ್ದ ಸಾಧನೆ ಮಾಡಿದ ಯಂಗ್​ ಇಂಡಿಯಾ ಇದೀಗ ಆಂಗ್ಲರ ನೆಲದಲ್ಲಿ 14 ವರ್ಷಗಳ ಬಳಿಕ ಸರಣಿ ಗೆಲ್ಲೋ ಕನಸು ಕಾಣ್ತಿದೆ. ಇದಕ್ಕಾಗಿ ಮುಂದಿನ ಪಂದ್ಯದಲ್ಲಿ ಪ್ಲೇಯಿಂಗ್​​ ಇಲೆವೆನ್​ಗೆ ಭಾರಿ ಸರ್ಜರಿ ಮಾಡೋಕೆ ಮುಂದಾಗಿದೆ.

ಲಾರ್ಡ್ಸ್​​ ಟೆಸ್ಟ್​ಗೂ ಮುನ್ನ ಪ್ಲೇಯಿಂಗ್​-XIಗೆ ಸರ್ಜರಿ

ಹೀನಾಯ ಸೋಲುಂಡಿರೋ ಇಂಗ್ಲೆಂಡ್​ ಗಾಯಗೊಂಡ ಸಿಂಹದಂತಾಗಿದ್ದು ಮುಂದಿನ ಲಾರ್ಡ್ಸ್​ ಟೆಸ್ಟ್​ನಲ್ಲಿ ಟಫ್​ ಫೈಟ್​ ನೀಡೋದು ಪಕ್ಕಾ. ಹೀಗಾಗಿ ಬಲಿಷ್ಠ ಪ್ಲೇಯಿಂಗ್​ ಇಲೆವೆನ್​ ಕಣಕ್ಕಿಳಿಸೋಕೆ ಇಂಡಿಯನ್​ ಟೀಮ್​ ಮ್ಯಾನೇಜ್​ಮೆಂಟ್​ ಮುಂದಾಗಿದೆ. ಸಿಕ್ಕ 4 ಅವಕಾಶಗಳನ್ನೂ ಕೈ ಚೆಲ್ಲಿರೋ ಕರುಣ್​ ನಾಯರ್​ಗೆ ಕೊಕ್​ ಕೊಡೋ ಸಾಧ್ಯತೆ ದಟ್ಟವಾಗಿದೆ. 8 ವರ್ಷಗಳ ಬಳಿಕ ಕಮ್​​ಬ್ಯಾಕ್​ ಮಾಡಿದ ಕರುಣ್​, 4 ಇನ್ನಿಂಗ್ಸ್​ಗಳಿಂದ ಜಸ್ಟ್​ 77 ರನ್​ಗಳಿಸಿದ್ದಾರೆ. ಆಂಗ್ಲರ ನಾಡಲ್ಲಿ ರನ್​ಗಳಿಕೆಗೆ ಪರದಾಡ್ತಿರೋ ಕರುಣ್​ನ ಮುಂದಿನ ಪಂದ್ಯದಿಂದ ಡ್ರಾಪ್​ ಮಾಡೋ ಗಂಭೀರ ಚಿಂತನೆ ನಡೆದಿದೆ. ಒಂದು ವೇಳೆ ಲಾರ್ಡ್ಸ್​ ಟೆಸ್ಟ್​ನಿಂದ ಡ್ರಾಪ್​ ಕರುಣ್​ ಕರಿಯರ್​ ಕೂಡ ಅಂತ್ಯವಾಗೋ ಸಾಧ್ಯತೆಯನ್ನ ತಳ್ಳಿ ಹಾಕಿವಂತಿಲ್ಲ.

ಇದನ್ನೂ ಓದಿ: ವೈಯಕ್ತಿಕ 400 ರನ್​ ಬಾರಿಸೋ ಚಾನ್ಸ್​ ಕೈಚೆಲ್ಲಿದ ಕ್ಯಾಪ್ಟನ್​.. ವಿಯಾನ್ ವಿರುದ್ಧ ಫ್ಯಾನ್ಸ್​ ಭಾರೀ ಆಕ್ರೋಶ!

ಕರುಣ್​ ನಾಯರ್​ ಬದಲು ಈಶ್ವರನ್​ಗೆ ಚಾನ್ಸ್​..?

3ನೇ ಕ್ರಮಾಂಕದಲ್ಲಿ ಸಾಯಿ ಸುದರ್ಶನ್​, ಕರುಣ್​ ನಾಯರ್​ ವೈಫಲ್ಯ ಕಂಡಿದ್ದಾಗಿದೆ. ಸುದೀರ್ಘ ಕಾಲದಿಂದ ಬೆಂಚ್​ ಕಾದಿರೋ ಅಭಿಮನ್ಯು ಈಶ್ವರನ್​ಗೆ ಅವಕಾಶ ನೀಡೋಕೆ ಇದಕ್ಕಿಂತಾ ಒಳ್ಳೆ ಟೈಮ್​ ಇಲ್ಲ. ಟೆಸ್ಟ್​ ಸ್ಪೆಷಲಿಸ್ಟ್ ಅಭಿಮನ್ಯು ವಾರ್ಮ್​ ಅಪ್​ ಗೇಮ್​ನಲ್ಲಿ ಭಾರತ ಎ ಪರ ಕ್ರಮವಾಗಿ 68, 80 ರನ್​ ಗಳಿಸಿದ್ದಾರೆ. ಇಂಗ್ಲೆಂಡ್​ ಕಂಡೀಷನ್ಸ್​ಗೂ ಹೊಂದಿಕೊಂಡಿದ್ದಾರೆ. ಫಸ್ಟ್​ ಕ್ಲಾಸ್ ಕ್ರಿಕೆಟ್​ನಲ್ಲಿ 48ರ ಬ್ಯಾಟಿಂಗ್ ಅವರೇಜ್​ನಲ್ಲಿ 7841 ರನ್ ಗಳಿಸಿರೋ ಈಶ್ವರನ್​ಗೆ ಒಂದು ಅವಕಾಶ ನೀಡೋ ಸಾಧ್ಯತೆಯಿದೆ.

ನಿತೀಶ್​ ರೆಡ್ಡಿಗೆ ಪ್ಲೇಯಿಂಗ್​-XIನಿಂದ ಕೊಕ್​?

2ನೇ ಟೆಸ್ಟ್​​ನಲ್ಲಿ ಚಾನ್ಸ್​ ಗಿಟ್ಟಿಸಿಕೊಂಡ ಆಲ್​​​ರೌಂಡರ್​ ನಿತೀಶ್​ ರೆಡ್ಡಿ, ಬ್ಯಾಟಿಂಗ್​-ಬೌಲಿಂಗ್​ ಎರಡರಲ್ಲೂ ಫೇಲ್​ ಆಗಿದ್ದಾರೆ. ಟೀಮ್​ ಇಂಡಿಯಾದ ಪೇಸ್​ ಆಲ್​​ರೌಂಡರ್ ಯಾಕೋ ವರ್ಕೌಟ್​ ಆಗ್ತಿಲ್ಲ. ಹೀಗಾಗಿ ಒಬ್ಬ ಸ್ಪೆಷಲಿಸ್ಟ್​ ಬ್ಯಾಟರ್​ ಅಥವಾ ಸ್ಪೆಷಲಿಸ್ಟ್​ ಬೌಲರ್​ ಜೊತೆಗೆ ಕಣಕ್ಕಿಳಿಯೋ ಚರ್ಚೆಯೋ ನಡೆಸಿದೆ. ಇಂಗ್ಲೆಂಡ್​​ ಲಯನ್ಸ್​ ಎದುರು ಉತ್ತಮ ಆಟವಾಡಿದ ಜುರೇಲ್ 3 ಹಾಫ್​ ಸೆಂಚುರಿ ಸೇರಿ 4 ಇನ್ನಿಂಗ್ಸ್​​ಗಳಿಂದ 227 ರನ್​ಗಳಿಸಿದ್ದಾರೆ. ಲಾರ್ಡ್ಸ್​ ಪಿಚ್​ ಬ್ಯಾಟಿಂಗ್​ಗೆ ಹೆಚ್ಚು ಸಹಕಾರಿಯಾಗಲಿದೆ. ಹೀಗಾಗಿ ಸಾಲಿಡ್​ ಟಚ್​​ನಲ್ಲಿರೋ ಜುರೇಲ್​ಗೆ ಚಾನ್ಸ್​ ನೀಡಿದ್ರೆ ಬ್ಯಾಟಿಂಗ್​ ಡೆಪ್ತ್​ ಹೆಚ್ಚಲಿದೆ.

ಇದನ್ನೂ ಓದಿ: ಕ್ರಿಕೆಟ್​ ಜಗತ್ತಿಗೆ ಹೊಸ ಸಂದೇಶ; 10 ಬಿಗ್​ ಸಿಕ್ಸರ್​, 13 ಬೌಂಡ್ರಿ.. ಸೂರ್ಯವಂಶಿ ಸಿಡಿಲಬ್ಬರ, ಸೆಂಚುರಿ ‘ವೈಭವ’

ಜುರೇಲ್​ ಬದಲಾಗಿ ವೇಗಿ ಆರ್ಷ್​​ದೀಪ್​ ಸಿಂಗ್​ನ ಕಣಕ್ಕಿಳಿಸೋ ಲೆಕ್ಕಾಚಾರವೂ ತಂಡದಲ್ಲಿದೆ. ಲೆಫ್ಟ್​ ಆರ್ಮ್​ ಪೇಸರ್ ಎಂಟ್ರಿ ತಂಡದ ಬೌಲಿಂಗ್​ಗೆ ವೆರೈಟಿ ತರಲಿದೆ. ಕೌಂಟಿ ಕ್ರಿಕೆಟ್​ ಆಡಿದ ಅನುಭವ ಆರ್ಷ್​​ದೀಪ್​ ಸಿಂಗ್​ಗಿದ್ದು, ಪಂದ್ಯದಲ್ಲಿ ನೆರವಾಗಲಿದೆ.

ಸ್ಪಿನ್ನರ್​​ ಕುಲ್​​ದೀಪ್​ ಯಾದವ್​ ಕತೆ ಏನು?

ಚೈನಾಮನ್​ ಸ್ಪಿನ್ನರ್​ ಕುಲ್​​ದೀಪ್ ಯಾದವ್​​ ಕಳೆದ 2 ಪಂದ್ಯಗಳಿಂದ ಬೆಂಚ್​ಗೆ ಸೀಮಿತವಾಗಿದ್ದಾರೆ. 2ನೇ ಟೆಸ್ಟ್​ನಲ್ಲಿ ರವೀಂದ್ರ ಜಡೇಜಾ, ವಾಷಿಂಗ್ಟನ್​ ಸುಂದರ್​ ಬ್ಯಾಟಿಂಗ್​ನಲ್ಲಿ ಮಿಂಚಿದ್ರು. ಬೌಲಿಂಗ್​ ಎಫೆಕ್ಟಿವ್​ ಅನಿಸಲಿಲ್ಲ. ಸ್ಪಿನ್​​ ಬೌಲಿಂಗ್​ ಕೈ ಕೊಡ್ತಿರೋದು ಭಾರತಕ್ಕೆ ಹಿನ್ನಡೆಯಾಗ್ತಿದೆ. ಹೀಗಾಗಿ ಮುಂದಿನ ಪಂದ್ಯದಲ್ಲಿ ಕುಲ್​​ದೀಪ್​ ಯಾದವ್​​ನ ಕಾಣಕ್ಕಿಳಿಸೋ ಯೋಚನೆಯಿದೆ. ಕುಲ್​​ದೀಪ್​ ಕರೆತರಬೇಕಂದ್ರೆ ಜಡೇಜಾ - ಸುಂದರ್​ ಇಬ್ಬರಲ್ಲಿ ಒಬ್ಬರನ್ನ ಡ್ರಾಪ್​ ಮಾಡಬೇಕಿದೆ. ಯಾರು ಹೊರಬೀಳ್ತಾರೆ ಅನ್ನೋದು ಸದ್ಯ ಕುತೂಹಲ ಮೂಡಿಸಿದೆ.

ಬೂಮ್ರಾ ಕಮ್​​ಬ್ಯಾಕ್​..! ಪ್ರಸಿದ್ಧ ಕೃಷ್ಣ ಔಟ್?

3ನೇ ಟೆಸ್ಟ್​ ಪಂದ್ಯದಲ್ಲಿ ಬೂಮ್ರಾ ಕಮ್​ಬ್ಯಾಕ್​ ಮಾಡ್ತಾರೆ ಅನ್ನೋದನ್ನ ಕ್ಯಾಪ್ಟನ್​​ ಗಿಲ್​ ಈಗಾಗಲೇ ಕನ್ಫರ್ಮ್ ಮಾಡಿದ್ದಾರೆ. ಬೂಮ್ರಾ ಬಂದ್ರೆ ಕರ್ನಾಟಕದ ವೇಗಿ ಪ್ರಸಿದ್ಧ್​ ಕೃಷ್ಣ ಪ್ಲೇಯಿಂಗ್​ ಇಲೆವೆನ್​ನಿಂದ ಹೊರಬೀಳಲಿದ್ದಾರೆ. 2ನೇ ಟೆಸ್ಟ್​ನಲ್ಲೂ ಆಕಾಶ್​ದೀಪ್​, ಮೊಹಮ್ಮದ್​ ಸಿರಾಜ್​ ಇಬ್ಬರೂ ಸಾಲಿಡ್​ ಪರ್ಫಾಮೆನ್ಸ್​ ನೀಡಿದ್ರು. ಪ್ರಸಿದ್ಧ ಕೃಷ್ಣ ಎರಡೂ ಟೆಸ್ಟ್​​ ಪಂದ್ಯಗಳಲ್ಲಿ ಇಂಪ್ರೆಸ್ಸಿವ್​ ಅನಿಲಿಲ್ಲ. 6 ವಿಕೆಟ್​ ಬೇಟೆಯಾಡಿದ್ರೂ, ಉದಾರವಾಗಿ ರನ್​ ಬಿಟ್ಟು ಕೊಟ್ಟು ದುಬಾರಿಯಾಗಿದ್ದಾರೆ. ಹೀಗಾಗಿ ಪ್ರಸಿದ್ಧ್​ ಬೆಂಚ್​ ಕಾಯೋ ಸಾಧ್ಯತೆ ದಟ್ಟವಾಗಿದೆ.

ಒಟ್ಟಿನಲ್ಲಿ ಲಾರ್ಡ್ಸ್​ನಲ್ಲಿ ಮತ್ತೊಂದು ದಿಗ್ವಿಜಯದ ನಿರೀಕ್ಷೆಯಲ್ಲಿರೋ ಟೀಮ್​ ಇಂಡಿಯಾ ಮೇಜರ್​ ಸರ್ಜರಿ ಮಾಡಲು ಮುಂದಾಗಿದೆ. ಸದ್ಯಕ್ಕಂತೂ ಪ್ಲೇಯಿಂಗ್​​ ಇಲೆವೆನ್​ಗೆ 4 ಬದಲಾವಣೆ ಮಾಡಿ ಬಲಿಷ್ಠ ತಂಡವನ್ನ ಫೀಲ್ಡ್​​ಗಿಳಿಸೋ ಪ್ಲಾನ್​ ರೆಡಿಯಾಗಿದೆ. ಪಿಚ್​​ ನೋಡಿದ ಬಳಿಕ ಇನ್ನೂ ಕೆಲ ಬದಲಾವಣೆಗಳಾದ್ರೂ ಅಚ್ಚರಿಪಡಬೇಕಿಲ್ಲ.

ಇದನ್ನೂ ಓದಿ: ಚೊಚ್ಚಲ ಟೆಸ್ಟ್​ ಗೆದ್ದ ಖುಷಿ, ಗಿಲ್ ದೊಡ್ಡ ಎಡವಟ್ಟು.. ಕ್ಯಾಪ್ಟನ್​​ನಿಂದ ಒಪ್ಪಂದ ಉಲ್ಲಂಘನೆ​​!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment