newsfirstkannada.com

ಸಮಸ್ಯೆ ಇದ್ದಾಗ ಮಾತ್ರ KL ರಾಹುಲ್ ನೆನಪಾಗ್ತಾರೆ.. ಈ ವಿಚಾರದಲ್ಲಿ ತಪ್ಪು ಮಾಡಿಬಿಡ್ತಾ ಬಿಸಿಸಿಐ..?

Share :

Published May 28, 2024 at 6:56am

    ಟೀಂ ಇಂಡಿಯಾಗೆ KL ರಾಹುಲ್​ಗೆ ಕಾಡುತ್ತಾ ಅನುಪಸ್ಥಿತಿ?

    ಅಂದು ಬೇಕಿದ್ದ ರಾಹುಲ್ ಈಗ ಬೇಡವಾದರಾ..?

    ಆಯ್ಕೆಗಾರ ಅಜಿತ್ ಅಗರ್ಕರ್ ಹೇಳಿಕೆ ಎಷ್ಟು ಸತ್ಯ?

ಟಿ20 ವಿಶ್ವಕಪ್​​​​​​ಗೆ ಕೌಂಟ್​ಡೌನ್ ಶುರುವಾಗಿದೆ. ಟೀಂ ಇಂಡಿಯಾ ಆಟಗಾರರು ಫ್ಲೈಟ್ ಹತ್ತಿಯೂ ಆಗಿದೆ. ಈ ಮಧ್ಯೆ ಆಟಗಾರರ ಆಯ್ಕೆ ವಿಚಾರವಾಗಿ ಪರ-ವಿರೋಧ ಚರ್ಚೆಗೆ ಫುಲ್​ಸ್ಟಾಪ್​ ಬಿದ್ದಿಲ್ಲ.

ಟಿ20 ವಿಶ್ವಕಪ್​ನಲ್ಲಿ ಕೆ.ಎಲ್.ರಾಹುಲ್​​, ಅನುಪಸ್ಥಿತಿ ಟೀಮ್ ಇಂಡಿಯಾಗೆ ಕಾಡುತ್ತಾ ಎಂಬ ಅನುಮಾನ ಕಾಡ್ತಿದೆ. ಹೌದು! ಟಿ20 ವಿಶ್ವಕಪ್​​ಗೆ ಆಯ್ಕೆಯಾಗಬೇಕಿದ್ದ ಕೆ.ಎಲ್.ರಾಹುಲ್​, ಸ್ಥಾನ ಗಿಟ್ಟಿಸುವಲ್ಲಿ ವಿಫಲರಾಗಿದ್ದಾರೆ. ಇದಕ್ಕೆ ಬಿಸಿಸಿಐ ಸೆಲೆಕ್ಷನ್ ಕಮಿಟಿ ಮುಖ್ಯಸ್ಥ ಅಜಿತ್ ಅಗರ್ಕರ್ ನೀಡಿದ್ದು, ಮಿಡಲ್ ಆರ್ಡರ್​​ ಬ್ಯಾಟರ್​​​​​ ಅಗತ್ಯತೆಯ ಕಾರಣಕ್ಕೆ ಕೈಬಿಟ್ಟಿರುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ:ನಿಂದನೆ, ಅವಮಾನ.. ಕುಸಿದು ಹೋದ ಪಾಂಡ್ಯ.. ಒಂದೂವರೆ ತಿಂಗಳು ಟೂರ್ನಿಯ ಅವಧಿಯಲ್ಲಿ ನತಾಶಾ ಮಾಡಿದ್ದೇನು?

ಕೆ.ಎಲ್.ರಾಹುಲ್ ಅದ್ಭುತ ಆಟಗಾರ ಎಂಬುವುದು ನಮಗೆಲ್ಲಾ ಗೊತ್ತು. ಮಿಡಲ್ ಆರ್ಡರ್​ನಲ್ಲಿ ಯಾರು ಬ್ಯಾಟಿಂಗ್ ಮಾಡ್ತಾರೆ ಎಂಬ ಬಗ್ಗೆ ಯೋಚಿಸಬೇಕಿದೆ. ಯಾಕಂದ್ರೆ, ಕೆ.ಎಲ್.ರಾಹುಲ್ ಟಾಪ್ ಆರ್ಡರ್​ನಲ್ಲಿ ಬ್ಯಾಟಿಂಗ್ ಮಾಡ್ತಿದ್ದಾರೆ-ಅಜಿತ್ ಅಗರ್ಕರ್​, ಸೆಲೆಕ್ಷನ್ ಕಮಿಟಿ ಮುಖ್ಯಸ್ಥ

ಸೆಲೆಕ್ಷನ್ ಕಮಿಟಿ ಮುಖ್ಯಸ್ಥನ ಈ ಹೇಳಿಕೆ ಎಲ್ಲರ ಅಸಮಾಧಾನಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ..! ಕೆಲ ಪ್ರಶ್ನೆಗಳನ್ನು ಉದ್ಭವಿಸುವಂತೆ ಮಾಡಿದೆ.

ಸಮಸ್ಯೆ ಇದ್ದಾಗ ಮಾತ್ರವೇ ನೆನಪಾಗ್ತಾರಾ ರಾಹುಲ್?
ಕಾಲವೊಂದಿತ್ತು. ಅಂದು ಎಲ್ಲಕ್ಕೂ ಕನ್ನಡಿಗ ಕೆ.ಎಲ್.ರಾಹುಲ್ ಬೇಕಾಗಿತ್ತು. ಅದು ಯಾವ ಮಟ್ಟಕ್ಕೆಂದ್ರೆ, ಟೀಮ್ ಇಂಡಿಯಾಗೆ ಓಪನರ್ ಸಮಸ್ಯೆಯಾದ್ರೆ, ಕನ್ನಡಿಗ ಕೆ.ಎಲ್​.ರಾಹುಲ್ ಬೇಕಾಗಿತ್ತು. ಒನ್​ ಡೌನ್​ ಬ್ಯಾಟರ್​ ಇಲ್ವಾ? ಕೆ.ಎಲ್.ರಾಹುಲ್ ನೋಡ್ಕಳ್ತಾರೆ ಬಿಡಿ. ಮಧ್ಯಮ ಕ್ರಮಾಂಕ ಸಂಕಷ್ಟದಲ್ಲಿದೆಯಾ ಕೆ.ಎಲ್.ರಾಹುಲ್, ತುಂಬ್ತಾನೆ ಬಿಟ್ಬಿಡಿ ಎನ್ನಲಾಗಿತ್ತು. ಇದಿಷ್ಟೇ ಅಲ್ಲ. ಮ್ಯಾಚ್​ ಫಿನಿಷರ್​ ವಿಕೆಟ್ ಕೀಪರ್​ ಇಲ್ವಾ ರಾಹುಲ್​​ಗೆ ಗ್ಲೌಸ್ ನೀಡಲಾಗ್ತಿತ್ತು. ನಾಯಕನಿಲ್ಲವೇ ಕನ್ನಡಿಗ ಮುನ್ನಡೆಸ್ತಾನೆ ಬಿಡಿ ಎಂದು ಹೇಳಿದ್ದುಂಟು. ಈ ನಂಬಿಕೆಯನ್ನ ಕೆ.ಎಲ್.ರಾಹುಲ್, ಉಳಿಸಿಕೊಂಡಿದ್ದುಂಟು. ಕ್ರಿಕೆಟ್ ದಿಗ್ಗಜರು ರಾಹುಲ್ ಆಟಕ್ಕೆ ಕೊಂಡಾಡಿದ್ದು ಉಂಟು.

ಇದನ್ನೂ ಓದಿ:ಮಹಿಳೆಯನ್ನು ನೀಲಗಿರಿ ತೋಪಿಗೆ ಎತ್ಕೊಂಡು ಹೋಗಿ ಅತ್ಯಾಚಾರ, ಕೊಲೆ.. 11 ವರ್ಷಗಳ ಕೇಸ್​ಗೆ ಬಿಗ್ ಟ್ವಿಸ್ಟ್..!

ಆದ್ರೀಗ ಇದೇ ಕೆ.ಎಲ್.ರಾಹುಲ್​​ ಟಿ20 ವಿಶ್ವಕಪ್​ನಲ್ಲಿ ಸ್ಥಾನ ನೀಡದ ಸೆಲೆಕ್ಷನ್ ಕಮಿಟಿ, ಮಿಡಲ್ ಆರ್ಡರ್​ನಲ್ಲಿ ಬ್ಯಾಟಿಂಗ್ ನಡೆಸ್ತಿಲ್ಲ ಎಂಬ ಸಬೂಬು ನೀಡಿದೆ. ಇದು ನಿಜಕ್ಕೂ ಕ್ರಿಕೆಟ್ ಅಭಿಮಾನಿಗಳ ಕಣ್ಣು ಕೆಂಪಾಗಾಗಿಸಿದೆ. ಅಂದು ಸಂಕಷ್ಟದದಲ್ಲಿದ್ದಾಗ ಸಂಕಷ್ಟಹರ ರಾಹುಲ್​ನ ನೆನಸಿಕೊಳ್ಳುತ್ತಿದ್ದ ಸೆಲೆಕ್ಷನ್ ಕಮಿಟಿ, ಇವತ್ತು ರಾಹುಲ್​ನ ಕೈಬಿಟ್ಟಿದೆ.

ODI ವಿಶ್ವಕಪ್​ನಲ್ಲಿ ಕೆ.ಎಲ್.ರಾಹುಲ್ ರೋಲ್ ಮರೆತ್ರಾ ಬಿಸಿಸಿಐ
ಕೆ.ಎಲ್.ರಾಹುಲ್, ಮಿಡಲ್ ಆರ್ಡರ್​ನಲ್ಲಿ ಬ್ಯಾಟಿಂಗ್ ನಡೆಸ್ತಿಲ್ಲ ಎಂಬ ಸಬೂಬು ನೀಡಿರುವ ಸೆಲೆಕ್ಷನ್ ಕಮಿಟಿ. ಏಕದಿನ ವಿಶ್ವಕಪ್​ನಲ್ಲಿ ಕೆ.ಎಲ್.ರಾಹುಲ್ ರೋಲ್ ಮರೆತಂತೆ ಕಾಣಿಸ್ತಿದೆ. ಯಾಕಂದ್ರೆ, ಅಂದು ವಿಕೆಟ್ ಕೀಪರ್ ಆ್ಯಂಡ್ ಬ್ಯಾಟರ್ ಆಗಿದ್ದ ಕೆ.ಎಲ್.ರಾಹುಲ್, ನಿಜಕ್ಕೂ ಅದ್ಭುತ ಪರ್ಫಾಮೆನ್ಸ್ ನೀಡಿದ್ರು. ವಿಕೆಟ್ ಹಿಂದೆ ಚಾಣಾಕ್ಷತೆ ಮರೆದಿದ್ದ ಕನ್ನಡಿಗ, ವಿಕೆಟ್ ಮುಂದೆ ಫಿನಿಷರ್ ರೋಲ್ ತುಂಬಿದ್ರು. ತಂಡ ಸಂಕಷ್ಟದಲ್ಲಿದ್ದಾಗ ಆಪ್ತ ರಕ್ಷಕನಾಗಿ ನಿಂತಿದ್ರು. ಗೆಲುವಿನ ಕಾಣಿಕೆ ನೀಡ್ತಿದ್ದರು. ಇದೆಲ್ಲವನ್ನ ಜಸ್ಟ್​ ಆರೇ ತಿಂಗಳಲ್ಲಿ ಸೆಲೆಕ್ಷನ್ ಕಮಿಟಿ ಆ್ಯಂಡ್ ಟೀಮ್ ಮರೆತಂತಿದೆ.

ಚುಟುಕು ಫಾರ್ಮೆಟ್​ನಲ್ಲೂ ಮಿಡಲ್ ಆರ್ಡರ್​ಗೆ ಕೆ.ಎಲ್.ಬೆಸ್ಟ್..!
ಏಕದಿನ ಫಾರ್ಮೆಟ್​ನಲ್ಲಿ ಸಕ್ಸಸ್ ಕಂಡಿರುವ ರಾಹುಲ್, ಟಿ20 ಫಾರ್ಮೆಟ್​ಗೆ ಸೂಟ್ ಆಗ್ತಾರಾ ಎಂಬ ನಿಮ್ಮ ಪ್ರಶ್ನೆಯಾಗಿರಬೇಕು. ಇದಕ್ಕೆ ಉತ್ತರ ಸೂಟ್ ಆಗ್ತಾರೆ ಅನ್ನೋದೇ ಆಗಿದೆ. ಟಿ20 ಫಾರ್ಮೆಟ್​ನಲ್ಲೂ ರಾಹುಲ್, 1ರಿಂದ 4ನೇ ಕ್ರಮಾಂಕದಲ್ಲೂ ಬ್ಯಾಟಿಂಗ್ ನಡೆಸಿದ್ದಾರೆ. 4ನೇ ಸ್ಲಾಟ್​ನಲ್ಲಿ ಆಡಿರುವ 4 ಪಂದ್ಯಗಳಿಂದ 174 ರನ್ ಸಿಡಿಸಿದ್ದಾರೆ. ಈ ಪೈಕಿ 1 ಶತಕ ಸಿಡಿಸಿರುವ ರಾಹುಲ್​​​​​​, ಸ್ಟ್ರೈಕ್​ರೇಟ್​​​ 175.75 ಆಗಿದೆ. ಇದಿಷ್ಟೇ ಅಲ್ಲ..! ಟೀಮ್ ಇಂಡಿಯಾದ ಲೀಗ್​ ಪಂದ್ಯಗಳನ್ನಾಡಲಿರುವ ಅಮೆರಿಕಾದಲ್ಲೂ ರಾಹುಲ್ ಅಬ್ಬರ ಜೋರಾಗಿದೆ. ಈ ಕಂಡೀಷನ್ಸ್​ನಲ್ಲಿ 1 ಶತಕ ಸಹಿತ, 130 ರನ್ ಸಿಡಿರುವ ರಾಹುಲ್, 188.40 ಸ್ಟ್ರೈಕ್​ರೇಟ್​​ನಲ್ಲಿ ಬ್ಯಾಟ್ ಬೀಸಿದ್ದಾರೆ.

ವಿಶ್ವಕಪ್​ನಲ್ಲಿ ಕೆ.ಎಲ್.ರಾಹುಲ್​ ಅನುಪಸ್ಥಿತಿ ಕಾಡುತ್ತಾ?
ಪ್ರತಿ ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಆಯ್ಕೆಯಲ್ಲಿ ಯಡವಟ್ಟು ನಡೆಯುತ್ತೆ. ಇದಕ್ಕೆ ಈ ಟಿ20 ವಿಶ್ವಕಪ್​ ಕೂಡ ಹೊರತಲ್ಲ. ಯಾಕಂದ್ರೆ, 2019ರ ಏಕದಿನ ವಿಶ್ವಕಪ್​ನಲ್ಲಿ ರಾಯುಡುಗೆ ಕೊಕ್ ನೀಡಿ ಯಡವಟ್ಟು ಮಾಡಿದ್ದ ಬಿಸಿಸಿಐ, 2021ರ ಟಿ20 ವಿಶ್ವಕಪ್​ನಲ್ಲಿ ಚಹಲ್​​ನ ಕೈಬಿಟ್ಟು ಬೆಲೆ ತೆತ್ತಿತ್ತು. ಆದ್ರೀಗ ಎಲ್ಲಾ ಕಂಡೀಷನ್ಸ್​ಗೂ ಒಗ್ಗಿಕೊಳ್ಳುವ ಕ್ಲಾಸಿಕ್ ಕೆ.ಎಲ್.ರಾಹುಲ್​ನ ಕೈಬಿಟ್ಟಿದೆ. ಇದು ಟೀಮ್ ಇಂಡಿಯಾಗೆ ಮಾರಕವಾದರೂ ಅಚ್ಚರಿ ಇಲ್ಲ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಸಮಸ್ಯೆ ಇದ್ದಾಗ ಮಾತ್ರ KL ರಾಹುಲ್ ನೆನಪಾಗ್ತಾರೆ.. ಈ ವಿಚಾರದಲ್ಲಿ ತಪ್ಪು ಮಾಡಿಬಿಡ್ತಾ ಬಿಸಿಸಿಐ..?

https://newsfirstlive.com/wp-content/uploads/2024/05/KL-RAHUL-9.jpg

Load More