newsfirstkannada.com

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್​ಗೆ ಈ ಆಟಗಾರ ಇದ್ದಿದ್ದರೆ ಬೇರೆಯದ್ದೇ ಆಗ್ತಿತ್ತು ಕಥೆ..!

Share :

Published January 30, 2024 at 11:46am

    ಟೀಮ್ ಇಂಡಿಯಾಗೆ ಮಾರಕ.. ಇಂಗ್ಲೆಂಡ್​ಗೆ ವರದಾನ

    ವಿರಾಟ್​ ಅನುಪಸ್ಥಿತಿ ಆಂಗ್ಲರಿಗೆ ವರದಾನ ಆಗಿದ್ದೇಗೆ..?

    ಪೋಪ್, ಹಾರ್ಟ್ಲೆಗೂ ವಿಲನ್ ಆಗ್ತಿದ್ದರು ವಿರಾಟ್..!

ಕನಸು ಮನಸಲ್ಲೂ ಟೀಮ್ ಇಂಡಿಯಾ ಸೋಲು ಕಾಣುತ್ತೆ ಅಂತಾ ಕ್ರಿಕೆಟ್ ಫ್ಯಾನ್ಸ್​ ಊಹಿಸಿರಲಿಲ್ಲ. ಆದ್ರೆ ಒಂದೇ ಒಂದು ದಿನದಲ್ಲಿ ಎಲ್ಲವೂ ಬದಲಾಯ್ತು. ಗೆಲ್ಲುವ ಕನಸು ನುಚ್ಚುನೂರಾಯ್ತು. ಇದಕ್ಕೆ ಕಾರಣಗಳು ಹಲವು.. ಅದ್ರಲ್ಲಿ ಮುಖ್ಯವಾದ ಕಾರಣ ಏನಪ್ಪಾ ಅಂದ್ರೆ ಅದು ಆ ಒಬ್ಬನ ಅಲಭ್ಯತೆ​. ಆತನೊಬ್ಬನಿಂದಲೇ ತಂಡ ಮುಖಭಂಗ ಅನುಭವಿಸಬೇಕಾಯ್ತು.

ನಾನು ನಾಯಕತ್ವ ವಹಿಸಿಕೊಂಡ ನಂತರ, ನಾವು ತಂಡವಾಗಿ ಸಾಕಷ್ಟು ಅದ್ಭುತ ಕ್ಷಣಗಳನ್ನ ಕಳೆದಿದ್ದೇವೆ. ನಾವು ಸಾಕಷ್ಟು ಶ್ರೇಷ್ಠ ಗೆಲುವುಗಳನ್ನ ಕಂಡಿದ್ದೇವೆ. ನಾವು ಕೆಲ ಅದ್ಭುತ ಪಂದ್ಯಗಳ ಭಾಗವೂ ಆಗಿದ್ದೇವೆ. ಆದ್ರೆ, ನಾವು ಎಲ್ಲಿದ್ದೇವೆ, ಯಾರ ಎದುರು ಆಡುತ್ತಿದ್ದೇವೆ ಎಂದು ಯೋಚಿಸಿದರೆ, ನನ್ನ ನಾಯಕತ್ವದಲ್ಲಿ ಈ ಗೆಲುವು 100ರಷ್ಟು ಶ್ರೇಷ್ಠ ಗೆಲುವಾಗಿದೆ -ಬೆನ್ ಸ್ಟೋಕ್ಸ್​, ಇಂಗ್ಲೆಂಡ್ ಕ್ಯಾಪ್ಟನ್
ಇದು ಇಂಗ್ಲೆಂಡ್ ತಂಡದ ಗ್ರೇಟೆಸ್ಟ್​ ಗೆಲುವು.. ಭಾರತದಲ್ಲಿ ಟೀಮ್ ಇಂಡಿಯಾ ಎದುರು ಹಿನ್ನಡೆ ಅನುಭವಿಸಿದ ಹೊರತಾಗಿಯೂ ಗೆದ್ದಿದ್ದು, ಇಂಗ್ಲೆಂಡ್ ಪಾಲಿನ ಐತಿಹಾಸಿಕ ಗೆಲುವೇ ಆಗಿದೆ. ಮೂರು ದಿನಗಳ ಕಾಲ ಪಾರಮ್ಯ ಮೆರೆದಿದ್ದ ಟೀಮ್ ಇಂಡಿಯಾವನ್ನ ಸೋಲಿನ ರುಚಿ ತೋರಿಸಿದ ಇಂಗ್ಲೆಂಡ್​ಗೆ ಶ್ರೇಷ್ಠ ಗೆಲುವು. ಇದೇ ಗೆಲುವು, ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ನುಂಗಲಾರದ ತುತ್ತಾಗಿದೆ.
ಟೀಮ್​ ಇಂಡಿಯಾ ಸೋಲಿಗೆ ಕಾರಣ ಹಲವಿವೆ. ಇಂಗ್ಲೆಂಡ್ ತಂಡದ ಅಟ್ಯಾಕಿಂಗ್ ಸ್ಟ್ರಾಟರ್ಜಿ, ಟೀಮ್ ಇಂಡಿಯಾ ಬ್ಯಾಟರ್​ಗಳ ವೈಫಲ್ಯತೆ, ತಿರುಮಂತ್ರವಾದ ಸ್ಪಿನ್ ಅಸ್ತ್ರ, ಬೇಜವಾಬ್ದಾರಿಯುತ ಆಟ.. ಇವೆಲ್ಲವೂ ಸೋಲಿಗೆ ಗುರಿ ಮಾಡಿದ್ವು. ಇದೆಲ್ಲಕ್ಕೂ ಮಿಗಿಲಾದ ಕಾರಣ ಒಂದಿದೆ. ಅದೇ ವಿರಾಟ್​ ಕೊಹ್ಲಿಯ ಅಲಭ್ಯತೆ.

ಕೊಹ್ಲಿ ಅಲಭ್ಯತೆಯೇ ಭಾರತದ ಸೋಲಿಗೆ ಕಾರಣ

ವಿರಾಟ್​ ಕೊಹ್ಲಿಯ ಅಲಭ್ಯತೆ ಹೈದ್ರಾಬಾದ್​ ಟೆಸ್ಟ್​ನಲ್ಲಿ ಟೀಮ್ ಇಂಡಿಯಾದ ಸೋಲಿಗೆ ಪ್ರಮುಖ ಕಾರಣ. ವಿರಾಟ್​ ಕೊಹ್ಲಿ ಒಬ್ಬ ಇದ್ದಿದ್ರೆ. ತಂಡದ ಫಲಿತಾಂಶ ಮೂರೇ ದಿನದಲ್ಲಿ ಬದಲಾಗ್ತಿತ್ತು. ಈಗ 4ನೇ ದಿನ ಸೋಲುಂಡಿರುವ ಟೀಮ್ ಇಂಡಿಯಾ, ಕೊಹ್ಲಿ ಇದ್ದಿದ್ರೆ 3ನೇ ದಿನವೇ ಗೆಲುವಿನ ವಿಜಯ ಪತಾಕೆ ಹಾರಿಸೋ ಸಾಧ್ಯತೆ ದಟ್ಟವಾಗಿತ್ತು.

ಮೊದಲ ಟೆಸ್ಟ್​ನಲ್ಲಿ ಬಹುವಾಗಿ ಕಾಡ್ತು ಕೊಹ್ಲಿ ಗೈರು
ನೂರಕ್ಕೆ ನೂರರಷ್ಟು ಹೈದ್ರಾಬಾದ್​ ಟೆಸ್ಟ್​ನಲ್ಲಿ ವಿರಾಟ್​ ಕೊಹ್ಲಿ ಗೈರು ಕಾಡಿತು. ಬ್ಯಾಟಿಂಗ್​ನಲ್ಲಿ ಮಾತ್ರವೇ ಅಲ್ಲ. ಆನ್​ಫೀಲ್ಡ್​ನಲ್ಲೂ ವಿರಾಟ್​ ಅನುಪಸ್ಥಿತಿ ಕಾಡುತ್ತಿತ್ತು. ಒಂದು ವೇಳೆ ಆನ್​ಫೀಲ್ಡ್​​ನಲ್ಲಿ ವಿರಾಟ್​ ಎಂಬ ಫೈರ್ ಇದ್ದಿದ್ರೆ, ನಿರಾಸಕ್ತವಾಗಿ ಕಾಣ್ತಿದ್ದ ಟೀಮ್ ಇಂಡಿಯಾದಲ್ಲಿ ಆತ್ಮ ವಿಶ್ವಾಸ ಮೂಡುತ್ತಿತ್ತು. ಸಹ ಆಟಗಾರರಿಗೆ ಹುರಿದುಂಬಿಸುತ್ತಾ ಬೂಸ್ಟ್​ ತುಂಬುತ್ತಿದ್ದ ವಿರಾಟ್​, ತಂಡದ ಎನರ್ಜಿಯನ್ನೇ ಬದಲಿಸುತ್ತಿದ್ದರು. ಇಂಥ ಎನರ್ಜಿ ತುಂಬುವ ಆಟಗಾರನ ಅಲಭ್ಯತೆ ಟೀಮ್ ಇಂಡಿಯಾವನ್ನ ಕಾಡ್ತು.

ಇಂಗ್ಲೆಂಡ್ ಆಟಗಾರರ ಆತ್ಮವಿಶ್ವಾಸವೂ ಕುಗ್ಗುತ್ತಿತ್ತು
ಡೆಫನೆಟ್ಲಿ ವಿರಾಟ್ ಎಂಬ ವೀರಾ ಸೇನಾನಿ ತಂಡದಲ್ಲಿ ಇದಿದ್ರೆ, ಇಂಗ್ಲೆಂಡ್​​ ತಂಡದ ಗೆಲ್ಲೋ ಆತ್ಮವಿಶ್ವಾಸ ಆರಂಭದಲ್ಲೇ ಕುಗ್ಗಿ ಹೋಗ್ತಿತ್ತು. ಇಂಗ್ಲೆಂಡ್ ತಂಡದ ಗೇಮ್​ಪ್ಲಾನ್​​ಗಳನ್ನೆಲ್ಲಾ ಉಲ್ಟಾ ಮಾಡ್ತಿದ್ದ ವಿರಾಟ್, ಇಂಗ್ಲೆಂಡ್​ ಬೌಲರ್​ಗಳನ್ನು ಇನ್ನಿಲ್ಲದೆ ಕಾಡುತ್ತಿದ್ದರು. ಭಾರತವನ್ನು 2ನೇ ಇನ್ನಿಂಗ್ಸ್​ನಲ್ಲಿ ಕಾಡಿದ ಡೆಬ್ಯು ಮ್ಯಾನ್ ಟಾಮ್ ಹಾರ್ಟ್ಲೆ ಕೊಹ್ಲಿ ಇದ್ದಿದ್ರೆ ಒತ್ತಡಕ್ಕೆ ಸಿಲುಕುತ್ತಿದ್ರು.

ಪೋಪ್ ಪಾಲಿಗೆ ವಿಲನ್ ಆಗ್ತಿದ್ದ ವಿರಾಟ್ ಕೊಹ್ಲಿ
ಟೀಮ್ ಇಂಡಿಯಾಗೆ ವಿಲನ್ ಆಗಿದ್ದೆ ಓಲಿ ಫೋಪ್​​​​​​​​​ರ ಅಮೋಘ ಇನ್ನಿಂಗ್ಸ್​. 2ನೇ ಇನ್ನಿಂಗ್ಸ್​ನಲ್ಲಿ ಓಲಿ ಪೋಪ್​ರ ಏಕಾಂಗಿ ಹೋರಾಟ ನಿಜಕ್ಕೂ ಅದ್ಬುತ. ಆದ್ರೆ, ಆನ್​ಫೀಲ್ಡ್​ನಲ್ಲಿ ವಿರಾಟ್​ ಇದ್ದಿದ್ರೆ. ಫೋಪ್ ಬಿಗ್ ಇನ್ನಿಂಗ್ಸ್ ಕಟ್ಟೋದು ನಿಜಕ್ಕೂ ಕಷ್ಟಸಾಧ್ಯವೇ ಆಗ್ತಿತ್ತು. ಯಾಕಂದ್ರೆ, ಸ್ಲಿಪ್​ನಲ್ಲಿ ನಿಲ್ಲುತ್ತಿದ್ದ ವಿರಾಟ್​​ ಕೊಹ್ಲಿಗೆ, ಓಲಿ ಪೋಪ್​ರ ಕಾನ್ಸಂಟ್ರೇಷನ್​ ಅನ್ನೇ ಭಗ್ನ ಮಾಡೋದಕ್ಕೆ ಹೆಚ್ಚು ಟೈಮ್​ ಬೇಕಾಗ್ತಾ ಇರಲಿಲ್ಲ.

ಅಷ್ಟೇ ಅಲ್ಲ, ಭಾರತೀಯ ಬೌಲರ್​ಗಳ ಬೆನ್ನಿಗೆ ನಿಂತು ಟಿಪ್ಸ್ ನೀಡುತ್ತಿದ್ದರು. ಫೀಲ್ಡ್​ ಸೆಟಪ್​ನಲ್ಲೂ ನಾಯಕನ ನೆರವಿಗೆ ನಿಲ್ತಾ ಇದ್ರು. ಕೊಹ್ಲಿಯ ಅನುಭವ ತಂಡಕ್ಕೆ ವರದಾನವಾಗ್ತಿತ್ತು ಅನ್ನೋದ್ರಲ್ಲಿ ಯಾವುದೆ ಅನುಮಾನ ಬೇಡ. ಒಟ್ಟಿನಲ್ಲಿ ಅನುಭವಿ ಕೊಹ್ಲಿಯ ಅಲಭ್ಯತೆ ಟೀಮ್ ಇಂಡಿಯಾಗೆ ಮಾರಕವಾಗಿ ಮಾರ್ಪಟ್ರೆ, ಎದುರಾಳಿ ಇಂಗ್ಲೆಂಡ್​ಗೆ ವರದಾನವಾಗಿದ್ದಂತೂ ಸುಳ್ಲಲ್ಲ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್​ಗೆ ಈ ಆಟಗಾರ ಇದ್ದಿದ್ದರೆ ಬೇರೆಯದ್ದೇ ಆಗ್ತಿತ್ತು ಕಥೆ..!

https://newsfirstlive.com/wp-content/uploads/2024/01/TEAM-INDIA-18.jpg

Load More