/newsfirstlive-kannada/media/post_attachments/wp-content/uploads/2024/07/Kohli_Bumrah.jpg)
2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಟೀಮ್ ಇಂಡಿಯಾ, ಪಾಕಿಸ್ತಾನ ಮತ್ತೊಮ್ಮೆ ಮುಖಾಮುಖಿ ಆಗಿವೆ. ಇಂದು ಅಂದರೆ ಫೆಬ್ರವರಿ 23ನೇ ತಾರೀಕು ನಡೆಯುತ್ತಿರೋ 2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಮಹತ್ವದ ಪಂದ್ಯದಲ್ಲಿ ಎರಡು ತಂಡಗಳು ದುಬೈನಲ್ಲಿ ಪರಸ್ಪರ ಸೆಣಸಾಡುತ್ತಿವೆ.
ಟಾಸ್ ಗೆದ್ದ ಪಾಕಿಸ್ತಾನ ನಾಯಕ ರಿಜ್ವಾನ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಕ್ಯಾಪ್ಟನ್ ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಬೌಲಿಂಗ್ ಮಾಡುತ್ತಿದೆ. ಟೀಂ ಇಂಡಿಯಾದ ಎಲ್ಲಾ ಆಟಗಾರರು ಭರ್ಜರಿ ಫಾರ್ಮ್‌ನಲ್ಲಿದ್ದು, ಗೆಲ್ಲೋ ನಿರೀಕ್ಷೆಯಲ್ಲಿದ್ದಾರೆ.
ಟೀಮ್ ಇಂಡಿಯಾ ಪರ ಸ್ಟಾರ್ ವೇಗಿ ಮೊಹಮ್ಮದ್ ಶಮಿ ಮೊದಲ ಓವರ್ ಎಸೆದರು. ಭಯದಲ್ಲೇ ಬೌಲಿಂಗ್ ಮಾಡಿದ ಶಮಿ ಬರೋಬ್ಬರಿ 5 ವೈಡ್ ಎಸೆದರು. ಈ ಓವರ್ನಲ್ಲಿ ಬ್ಯಾಟ್ನಿಂದ ಬಂದಿದ್ದು ಕೇವಲ 1 ರನ್ ಮಾತ್ರ. ಒಂದು ಓವರ್ನಲ್ಲಿ ಟೋಟಲ್ 6 ರನ್ ನೀಡಿದರ ಶಮಿ. ಶಮಿ ಬೌಲಿಂಗ್ ಬಗ್ಗೆ ಟೀಮ್ ಇಂಡಿಯಾ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿದ್ದಾರೆ. ನಾಚಿಕೆ ಆಗಬೇಕು ನಿನಗೆ ಎಂದು ಕಿಡಿಕಾರಿದ್ದಾರೆ.
Repeat after me !!
Mohammed Shami is nothing without Jasprit Burmah
Mohammed Shami is nothing without Jasprit Burmah..... pic.twitter.com/uiEDNUY6KJ— Abhishek Kumar (@Abhishe71350486)
Repeat after me !!
Mohammed Shami is nothing without Jasprit Burmah
Mohammed Shami is nothing without Jasprit Burmah..... pic.twitter.com/uiEDNUY6KJ— Abhishek Kumar (@Abhishek060722) February 23, 2025
">February 23, 2025
ಭಾರತಕ್ಕೆ ಕಾಡುತ್ತಿದೆ ಬುಮ್ರಾ ಅನುಪಸ್ಥಿತಿ
ಇನ್ನು, ಶಮಿ ಕಳಪೆ ಬೌಲಿಂಗ್ ಮಾಡುತ್ತಿದ್ದು, ಟೀಮ್ ಇಂಡಿಯಾಗೆ ಜಸ್ಪ್ರಿತ್ ಬುಮ್ರಾ ಅನುಪಸ್ಥಿತಿ ಎದ್ದು ಕಾಣುತ್ತಿದೆ. ಶಮಿ ವಿಥೌಟ್ ಬುಮ್ರಾ ನಥಿಂಗ್ ಎಂದು ಟ್ರೆಂಡ್ ಆಗುತ್ತಿದೆ.
ಜಸ್ಪ್ರಿತ್ ಬುಮ್ರಾ ರಾಷ್ಟ್ರೀಯ ಕ್ರಿಕೆಟ್ ಅಕಡಾಮಿನಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಅವರು ಚೇತರಿಸಿಕೊಂಡಿದ್ದಾರೆ. ಅವರು ಎನ್‌ಸಿಎನಲ್ಲೇ ಇದ್ದು, ಆದಷ್ಟು ಬೇಗ ಟೀಮ್ ಇಂಡಿಯಾ ಸೇರಿಕೊಳ್ಳಲಿದ್ದಾರೆ ಎಂದು ಈ ಹಿಂದೆಯೇ ಪತ್ನಿ ಸಂಜನಾ ಗಣೇಶನ್ ಬಿಗ್ ಅಪ್ಡೇಟ್ ನೀಡಿದ್ದರು.
ಬುಮ್ರಾ ಇತ್ತೀಚಿಗೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಇವರು ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಆಡಿದ ಐದು ಪಂದ್ಯಗಳಲ್ಲಿ 32 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಸಿಡ್ನಿಯಲ್ಲಿ ನಡೆದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಇಂಜುರಿಗೆ ಒಳಗಾದರು.
ಇದನ್ನೂ ಓದಿ:ಮೊದಲ ಓವರ್ನಲ್ಲೇ ಮಹಾ ಎಡವಟ್ಟು; ನಾಚಿಕೆ ಆಗಬೇಕು ನಿನಗೆ ಎಂದು ಶಮಿ ವಿರುದ್ಧ ಬಹಿರಂಗ ಆಕ್ರೋಶ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ