/newsfirstlive-kannada/media/post_attachments/wp-content/uploads/2024/09/Team-India-Test.jpg)
ಸೌತ್ ಆಫ್ರಿಕಾ ವಿರುದ್ಧದ 4 ಪಂದ್ಯಗಳ ಟಿ20 ಸರಣಿ ಮುಗಿದ ಬೆನ್ನಲ್ಲೇ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಇದೇ ತಿಂಗಳು 22ನೇ ತಾರೀಕಿನಿಂದ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ 5 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಇದರ ಮಧ್ಯೆ ಟೀಮ್ ಇಂಡಿಯಾಗೆ ಭರ್ಜರಿ ಗುಡ್ನ್ಯೂಸ್ ಒಂದಿದೆ.
ಹಲವು ದಿನಗಳಿಂದ ಕ್ರಿಕೆಟ್ನಿಂದ ದೂರು ಉಳಿದಿದ್ದ ಟೀಮ್ ಇಂಡಿಯಾದ ಸ್ಟಾರ್ ವೇಗಿ ಮೊಹಮ್ಮದ್ ಶಮಿ ಕಮ್ಬ್ಯಾಕ್ ಮಾಡಲು ಸಜ್ಜಾಗಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ವಿರುದ್ಧ ಹೇಗೆ ಆಡೋದು? ಎಂಬ ಟೀಮ್ ಇಂಡಿಯಾ ಚಿಂತೆಯನ್ನು ದೂರ ಮಾಡಿದ್ದಾರೆ. ಟೀಮ್ ಇಂಡಿಯಾ ಸೇರಲು ತಯಾರಿ ನಡೆಸಿಕೊಂಡಿರೋ ಮೊಹಮ್ಮದ್ ಶಮಿ ಮತ್ತೆ ಬ್ಯಾಟರ್‌ಗಳನ್ನು ಕಾಡಲಿದ್ದಾರೆ.
ಏಕದಿನ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ
ಕಳೆದ ವರ್ಷ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿದವ್ರು ಶಮಿ. ಇಡೀ ಟೂರ್ನಿಯಲ್ಲೇ ಹೈಎಸ್ಟ್ ವಿಕೆಟ್ ಟೇಕರ್ ಇವ್ರು. ಏಕದಿನ ವಿಶ್ವಕಪ್ ಫೈನಲ್ ಪಂದ್ಯದ ಬಳಿಕ ಮೈದಾನಕ್ಕೆ ಬರಲೇ ಇಲ್ಲ. ಇವರು ಪಾದದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು, ಈಗಷ್ಟೇ ಚೇತರಿಸಿಕೊಂಡಿದ್ದಾರೆ. ಇಂಟರ್ ನ್ಯಾಷನಲ್ ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡೋ ಮುನ್ನ ಶಮಿ ರಣಜಿಯಲ್ಲಿ ಬಂಗಳಾ ಪರ ಆಡಲಿದ್ದಾರೆ.
ಟೀಮ್ ಇಂಡಿಯಾಗೆ ಗುಡ್ನ್ಯೂಸ್
ಭಾರತ ಕ್ರಿಕೆಟ್ ತಂಡ ಸದ್ಯದಲ್ಲೇ ಆಸ್ಟ್ರೇಲಿಯಾ ಪ್ರವಾಸ ಬೆಳೆಸಲಿದೆ. ಈ ಪ್ರವಾಸಕ್ಕೆ ಪ್ರಕಟವಾದ ಟೀಮ್ ಇಂಡಿಯಾದಲ್ಲಿ ಶಮಿಗೆ ಸ್ಥಾನ ಸಿಕ್ಕಿಲ್ಲ. ಕಾರಣ ಅವರಿಗೆ ಫಿಟ್ನೆಸ್ ಸಮಸ್ಯೆ ಇತ್ತು. ಈಗ ಭಾರತಕ್ಕೆ ಶಮಿ ಭರ್ಜರಿ ಗುಡ್ನ್ಯೂಸ್ ಕೊಟ್ಟಿದ್ದಾರೆ. ಶಮಿ ರಣಜಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ರೆ, ಟೀಮ್ ಇಂಡಿಯಾ ಪರ ಆಡಬಹುದು.
ರಣಜಿ ತಂಡದಲ್ಲಿ ಶಮಿಗೆ ಸ್ಥಾನ
ಮೊಹಮ್ಮದ್ ಶಮಿ ಬಂಗಳಾ ರಣಜಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮಧ್ಯಪ್ರದೇಶ ವಿರುದ್ಧ ನಡೆಯುತ್ತಿರೋ ಬಂಗಾಳ ತಂಡಕ್ಕೆ ಇವರನ್ನು ಸೇರಿಸಿಕೊಳ್ಳಲಾಗಿದೆ. ಶಮಿ ಬಂಗಾಳ ತಂಡ ಸೇರಿದ ಕಾರಣ ಇದರ ಬೌಲಿಂಗ್ ಸ್ಟ್ರಾಂಗ್ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ