ಪ್ರತಿಷ್ಠೆಯ ಕದನ; ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ ಆ 2 ಸೇಡನ್ನು ತೀರಿಸಲೇಬೇಕು!

author-image
Bheemappa
Updated On
ಇದೇ ಮೊದಲ ಬಾರಿಗೆ ಹೈಬ್ರಿಡ್ ಮಾದರಿಯಲ್ಲಿ ಚಾಂಪಿಯನ್ಸ್​ ಟೂರ್ನಿ; ಅದಕ್ಕೆ ಕಾರಣ ಯಾರು ಗೊತ್ತಾ?
Advertisment
  • ಪಾಕಿಸ್ತಾನವನ್ನ ಮಣಿಸುವುದು ಟೀಮ್ ಇಂಡಿಯಾಗೆ ಸುಲಭವಿಲ್ಲ
  • ಚಾಂಪಿಯನ್ಸ್​ ಟ್ರೋಫಿಗಳಲ್ಲಿ ಯಾವ ತಂಡದ ಮೇಲುಗೈ ಇರುತ್ತೆ?
  • UAE ಪಿಚ್​ಗಳು ಪಾಕಿಸ್ತಾನ ಆಟಗಾರರಿಗೆ ತವರಿನ ಪಿಚ್​ ಇದ್ದಾಗೆ

ಕ್ರಿಕೆಟ್​ ಲೋಕದಲ್ಲೀಗ ಇಂಡೋ -ಪಾಕ್​ ಫೈಟ್​ನ ಕಿಡಿ ಹೊತ್ತಿದೆ. ಪ್ರತಿಷ್ಠೆಯ ಕದನದ ಕಾವು ಅಭಿಮಾನಿಗಳ ವಲಯದಲ್ಲಿ ಜೋರಾಗಿದೆ. ಎಲ್ಲಿ ನೋಡಿದ್ರೂ, ಬದ್ಧವೈರಿಗಳ ನಡುವಿನ ಕಾದಾಟದದ್ದೇ ಚರ್ಚೆ. ಯಾಕಂದ್ರೆ, ಈ ಬಾರಿಯ ಕದನ ಅಭಿಮಾನಿಗಳ ಪಾಲಿಗೆ ರಿವೈಂಜ್ ಫೈಟ್.

ಭಾರತ- ಪಾಕ್​ನ ಹೈವೋಲ್ಟೇಜ್​ ಮ್ಯಾಚ್​ಗೆ ಕೌಂಡ್​ಡೌನ್ ಶುರುವಾಗಿದೆ. ಫೆಬ್ರವರಿ 23ರಂದು ನಡೆಯೋ ಈ ಪಂದ್ಯಕ್ಕೆ, ಇಡೀ ವಿಶ್ವವೇ ಕಾದು ಕುಳಿತಿದೆ. ಈಗಾಗಲೇ ಕ್ರೀಡಾ ವಿಶ್ಲೇಷಕರು, ಕ್ರಿಕೆಟ್ ಪಂಡಿತರು ಸೋಲು ಗೆಲುವಿನ ಲೆಕ್ಕಾಚಾರ ಹಾಕ್ತಿದ್ದಾರೆ. ಉಭಯ ತಂಡಗಳು ಗೆಲುವಿಗಾಗಿ ಟೊಂಕ ಕಟ್ಟಿ ನಿಂತಿವೆ.

publive-image

ಪಾಕ್ ಆತಿಥ್ಯದಲ್ಲಿ ನಡೀತಿರುವ ಚಾಂಪಿಯನ್ಸ್​ ಟ್ರೋಫಿ ಗೆಲ್ಲಲು ಟೀಮ್ ಇಂಡಿಯಾ ಇನ್ನಿಲ್ಲದ ಕಸರತ್ತು ನಡೆಸ್ತಿದ್ರೆ. ಅತ್ತ ಪಾಕ್ ಆಹ್ವಾನ ದಿಕ್ಕರಿಸಿ ದುಬೈನಲ್ಲಿ ಆಡಲು ಸಜ್ಜಾಗಿರುವ ಟೀಮ್ ಇಂಡಿಯಾಗೆ ಸೋಲಿನ ರುಚಿ ತೋರಿಸಲು ಪಾಕ್, ತೆರೆ ಹಿಂದೆಯೇ ರಣತಂತ್ರ ರೂಪಿಸ್ತಿದೆ. ಟೀಮ್ ಇಂಡಿಯಾ ಈ ಹಿಂದಿನ ರಿವೇಂಜ್ ತೀರಿಸಿಕೊಳ್ಳಲು ಸನ್ನದ್ಧವಾಗಿದೆ.

ಭಾರತ -ಪಾಕ್ ಫೈನಲ್ ಫೈಟ್..!

2017ರ ಚಾಂಪಿಯನ್ಸ್​ ಟ್ರೋಫಿ ಲೀಗ್​ ಮ್ಯಾಚ್​ನಲ್ಲಿ ಪಾಕ್​ ವಿರುದ್ಧ ಟೀಮ್​ ಇಂಡಿಯಾ 124 ರನ್​ಗಳ ದಿಗ್ವಿಜಯ ಸಾಧಿಸಿತ್ತು. ಅದೇ ಆತ್ಮವಿಶ್ವಾಸದಲ್ಲಿ ಜೂನ್, 18ರಂದು ಕೆನ್ನಿಂಗ್ಟನ್ ಓವಲ್​​ನಲ್ಲಿ ಫೈನಲ್ಸ್​ನಲ್ಲೂ ಕಣಕ್ಕಿಳಿದಿತ್ತು. ಆದ್ರೆ, ಅವತ್ತು ಫೈನಲ್ಸ್​ನಲ್ಲಿ ಟೀಮ್ ಇಂಡಿಯಾ ಲಕ್ ಬದಲಾಗಿತ್ತು.

ಟಾಸ್​ ಗೆದ್ದ ಟೀಮ್ ಇಂಡಿಯಾ, ಪಾಕ್​​ಗೆ ಫೀಲ್ಡಿಂಗ್ ಆಹ್ವಾನಿಸಿತ್ತು. ಇದರಂತೆ ಬ್ಯಾಟಿಂಗ್ ಆರಂಭಿಸಿದ ಪಾಕ್​ ಪರ ಅಜರ್ ಅಲಿ, ಫಖಾರ್ ಜಮಾನ್, ಬಾಬರ್ ಅಜಂ, ಮೊಹಮ್ಮದ್ ಹಫೀಜ್, ಟೀಮ್ ಇಂಡಿಯಾ ಬೌಲರ್​ಗಳನ್ನು ಬೆಂಡೆತ್ತಿದ್ದರು. ಭುವನೇಶ್ವರ್ ಕುಮಾರ್ ಹೊರತು ಪಡೆಸಿದರೆ, ಜಸ್​ಪ್ರೀತ್ ಬೂಮ್ರಾ, ಹಾರ್ದಿಕ್ ಪಾಂಡ್ಯ, ಅಶ್ವಿನ್, ರವೀಂದ್ರ ಜಡೇಜಾರನ್ನ ಮನಬಂದಂತೆ ತಳಿಸಿದ ಬ್ಯಾಟರ್​ಗಳು, 4 ವಿಕೆಟ್ ನಷ್ಟಕ್ಕೆ 338 ರನ್ ಕಲೆಹಾಕಿದ್ದರು.

ಈ ಸವಾಲಿನ ಮೊತ್ತ ಬೆನ್ನಟ್ಟಿದ ಟೀಮ್ ಇಂಡಿಯಾ ಬ್ಯಾಟರ್​, ಪಾಕ್​ ಬೌಲರ್​ಗಳ ಪವರ್ ಫುಲ್ ಬೌಲಿಂಗ್​ಗೆ ಪೆವಿಲಿಯನ್ ಪರೇಡ್ ನಡೆಸಿದ್ದರು. ಏಕಾಂಗಿ ಹೋರಾಟ ನಡೆಸಿದ್ದ ಹಾರ್ದಿಕ್, 43 ಎಸೆತಗಳಲ್ಲಿ 4 ಬೌಂಡರಿ, 6 ಸಿಕ್ಸರ್ ಒಳಗೊಂಡ 76 ರನ್ ಸಿಡಿಸಿದ್ರು. ಆದ್ರೆ, ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದರು. ಪರಿಣಾಮ ಟೀಮ್​ ಇಂಡಿಯಾ ಬರೋಬ್ಬರಿ 180 ರನ್​​ಗಳ ಹೀನಾಯ ಸೋಲು ಅನುಭವಿಸಿತ್ತು. ಇದ್ರೊಂದಿಗೆ ಚಾಂಪಿಯನ್ ಪಟ್ಟಕ್ಕೇರುವ ಕನಸು ನುಚ್ಚುನೂರಾಗಿತ್ತು.

2017, 2021ರ ದುಬೈ ಸೋಲಿನ ಪ್ರತೀಕಾರಕ್ಕೆ ಬೆಸ್ಟ್​ ಟೈಮ್..!

12 ವರ್ಷಗಳ ಬಳಿಕ ಚಾಂಪಿಯನ್ ಟ್ರೋಫಿ ಕನಸಿನೊಂದಿಗೆ ರೋಹಿತ್ ಪಡೆ, ದುಬೈನಲ್ಲಿ ಬೀಡು ಬಿಟ್ಟಿದೆ. ಟೀಮ್ ಇಂಡಿಯಾ ಮುಂದೆ ಚಾಂಪಿಯನ್ಸ್​ ಟ್ರೋಪಿ ಗೆಲ್ಲೋದು ಒಂದೇ ಗುರಿಯಿಲ್ಲ. ಪಾಕ್ ಎದುರು 2017ರಲ್ಲಿ ಎದುರಾಗಿದ್ದ ಸೋಲಿಗೆ ಸೇಡು ತೀರಿಸಿಕೊಳ್ಳಬೇಕಿದೆ. ಅಷ್ಟೇ ಅಲ್ಲ. ಪಟ್ಟು ಹಿಡಿದು ಪಾಕಿಸ್ತಾನದಿಂದ​ ದುಬೈಗೆ ಪಂದ್ಯ ಸ್ಥಳಾಂತರಿಸಿಕೊಂಡಿದೆ. ಇದಕ್ಕೆ ತಕ್ಕಂತೆ ಈಗ ದುಬೈನಲ್ಲಿ ಗೆಲ್ಲೋದು ಟೀಮ್ ಇಂಡಿಯಾಗೆ ಪ್ರತಿಷ್ಠೆಯೂ ಆಗಿದೆ.

ಇದನ್ನೂ ಓದಿ:ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಜರ್ಸಿ ಮೇಲೆ ಪಾಕಿಸ್ತಾನದ ಹೆಸರು.. ಭಾರೀ ವಿರೋಧ

publive-image

2021ರ ಟಿ20 ವಿಶ್ವಕಪ್​ನಲ್ಲಿ ಇದೇ ದುಬೈ ಸ್ಟೇಡಿಯಂನಲ್ಲೇ ವಿರಾಟ್ ನಾಯಕತ್ವದ ಟೀಮ್ ಇಂಡಿಯಾ, ಪಾಕ್​ ಎದುರು ತೀವ್ರ ಮುಖಭಂಗ ಅನುಭವಿಸಿತ್ತು. ಈ ಒಂದು ಸೋಲು ಟೀಮ್ ಇಂಡಿಯಾವನ್ನು ಲೀಗ್​ ಹಂತದಿಂದಲೇ ಹೊರ ಬೀಳುವಂತೆ ಮಾಡಿತ್ತು. ಇದೀಗ ಈ ಎರಡೂ ಸೋಲುಗಳ ಪ್ರತೀಕಾರಕ್ಕೆ ವೇದಿಕೆ ಸಜ್ಜಾಗಿದೆ.

ಪಾಕ್​​ 2ನೇ ತವರು UAE.. ಭಾರತಕ್ಕೆ ಬಿಗ್ ಚಾಲೆಂಜ್..!

ಟೀಮ್ ಇಂಡಿಯಾ ಸೋಲಿನ ಸೇಡು ತೀರಿಸಿಕೊಳ್ಳಲು ಲೆಕ್ಕಾಚಾರದಲ್ಲಿದೆ. ಆದ್ರೆ, ಚಾಂಪಿಯನ್ಸ್​ ಟ್ರೋಫಿಯಲ್ಲಿ ಪಾಕ್​ ತಂಡವನ್ನು ಮಣಿಸುವುದು ಸುಲಭದಲ್ಲ. ಯಾಕಂದ್ರೆ, ಚಾಂಪಿಯನ್ಸ್​ ಟ್ರೋಫಿಗಳಲ್ಲಿ ಪಾಕ್​ ತಂಡವೇ ಟೀಮ್ ಇಂಡಿಯಾ ಮೇಲೆ ಮೇಲುಗೈ ಸಾಧಿಸಿದೆ. 5 ಮುಖಾಮುಖಿಗಳಲ್ಲಿ 3 ಬಾರಿ ಗೆದ್ದಿರುವ ಪಾಕ್​, ದುಬೈನಲ್ಲಿ ಬಹುಪಾಲು ಪಂದ್ಯಗಳನ್ನಾಡಿದೆ. ಇಲ್ಲಿನ ಕಂಡೀಷನ್ಸ್​ ಬಗ್ಗೆ ಚೆನ್ನಾಗಿ ಅರಿತಿರುವ ಪಾಕ್​​ ತಂಡವನ್ನು ಮಣಿಸೋದು ಟೀಮ್ ಇಂಡಿಯಾಗೆ ನಿಜಕ್ಕೂ ಬಿಗ್ ಚಾಲೆಂಜ್.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment