/newsfirstlive-kannada/media/post_attachments/wp-content/uploads/2024/11/Surya_Hardik.jpg)
ಹೊಸ ವರ್ಷ.. ಹೊಸ ಸವಾಲು.. ಹೊಸ ಅಧ್ಯಾಯ.. ಟೀಮ್ ಇಂಡಿಯಾ ಮುಂದೆ ಈ ವರ್ಷ ದೊಡ್ಡ ಸವಾಲೇ ಇದೆ. 2025, ಟೀಮ್ ಇಂಡಿಯಾ ಪಾಲಿಗೆ ಅದೃಷ್ಟದ ವರ್ಷವಾಗಬೇಕು. ದೇಶ ವಿದೇಶಗಳಲ್ಲಿ ವೈಟ್​ಬಾಲ್, ರೆಡ್ ಬಾಲ್ ಫಾರ್ಮೆಟ್​​​​ ಗೆದ್ದು, ಕ್ರಿಕೆಟ್ ಅಭಿಮಾನಿಗಳನ್ನ ಸಂತಸ ಪಡಿಸ್ತಿರಬೇಕು. ಟೀಮ್ ಇಂಡಿಯಾ ರನ್​ಭೂಮಿಯಲ್ಲಿ ನಂಬರ್.1 ತಂಡವಾಗಬೇಕಂದ್ರೆ ಈ ಸವಾಲುಗಳನ್ನ ಗೆಲ್ಲಲೇಬೇಕು.
2024 ಟೀಮ್ ಇಂಡಿಯಾ ಪಾಲಿಗೆ ಸಹಿಗಿಂತ, ಕಹಿಯೇ ಜಾಸ್ತಿ. ವೆಸ್ಟ್ ಇಂಡೀಸ್​ನಲ್ಲಿ T20 ವಿಶ್ವಕಪ್ ಗೆದ್ದಿದ್ದು ಬಿಟ್ರೆ, ಪ್ರಮುಖ ಸರಣಿಗಳಲ್ಲಿ ಟೀಮ್ ಇಂಡಿಯಾ ಕಂಡಿದ್ದು, ಬರೀ ಸೋಲು. ಅದ್ರಲ್ಲೂ ತವರಿನಲ್ಲೇ ಟೀಮ್ ಇಂಡಿಯಾ ಎಡವಿದ್ದು, ಅಭಿಮಾನಿಗಳಿಗೆ ಇನ್ನೂ ಅರಗಿಸಿಕೊಳ್ಳೋಕೇ ಆಗ್ತಿಲ್ಲ. ಹಾಗಾಗಿ 2025, ಹೊಸ ವರ್ಷದಂದು ಟೀಮ್ ಇಂಡಿಯಾ ಕ್ರಿಕೆಟ್ ಅಭಿಮಾನಿಗಳ ಮನ ಗೆಲ್ಲಲು ಹೊರಟಿದೆ. ಅದಕ್ಕಾಗಿ ಸವಾಲನ್ನ ಮೆಟ್ಟಿನಿಂತು, ದಿಗ್ವಿಜಯ ಸಾಧಿಸೋಕೆ ಸಜ್ಜಾಗಿದೆ.
ಇದನ್ನೂ ಓದಿ:ಕ್ಯಾನ್ಸರ್ ಗೆದ್ದ ಶಿವಣ್ಣ.. ಅಮೆರಿಕದಿಂದಲೇ I will back ಎಂದ ಸೆಂಚುರಿ ಸ್ಟಾರ್​
‘ಸಿಡ್ನಿ ಟೆಸ್ಟ್’ ಗೆಲ್ಲೋದೇ ಮೊದಲ ಸವಾಲ್
ಈ ವರ್ಷದ ಆರಂಭದಲ್ಲೇ ಟೀಮ್ ಇಂಡಿಯಾ ಮುಂದೆ, ದೊಡ್ಡ ಸವಾಲೇ ಇದೆ. ಅದು ಸಿಡ್ನಿ ಟೆಸ್ಟ್ ಪಂದ್ಯ ಗೆಲ್ಲೋದು. ಈಗಾಗಲೇ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ 2-1 ಅಂತರದಿಂದ ಹಿನ್ನಡೆ ಸಾಧಿಸಿರುವ ಟೀಮ್ ಇಂಡಿಯಾ, ಅಟ್ಲೀಸ್ಟ್ ಸರಣಿ ಸಮಬಲ ಮಾಡಿಕೊಳ್ಳಲು ಹೋರಾಟ ಮಾಡಬೇಕು. WTC ಫೈನಲ್ ಪ್ರವೇಶಿಸುತ್ತೋ ಇಲ್ವೋ ಗೊತ್ತಿಲ್ಲ. ಅದಕ್ಕೂ ಮೊದಲು ಸಿಡ್ನಿ ವಾರ್​ ಗೆಲ್ಲಬೇಕು.
ಹಿರಿಯರ ‘ಭವಿಷ್ಯ’ ನಿರ್ಧಾರ ಮಾಡಬೇಕು
ಸಿಡ್ನಿ ಟೆಸ್ಟ್ ನಂತರ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ, ನಿವೃತ್ತಿ ಆಗ್ತಾರೆ ಅನ್ನೋ ಸುದ್ದಿ ಸುನಾಮಿಯಂತೆ ಹರಡುತ್ತಿದೆ. ಒಂದು ಸರಣಿಯಲ್ಲಿ ರೋಹಿತ್-ಕೊಹ್ಲಿ ಫ್ಲಾಪ್ ಆಗಿದ್ದಾರೆ ನಿಜ. ಹಾಗಂತ ಗುಡ್​ಬೈ ಹೇಳಬೇಕು ಅಂತಲ್ಲ. ಒಂದು ವೇಳೆ ಬಿಸಿಸಿಐ ರೋಹಿತ್-ಕೊಹ್ಲಿ ವಿರುದ್ಧ ಕಠಿಣ ನಿರ್ಧಾರ ತೆಗೆದುಕೊಳ್ಳಲೇಬೇಕು ಅಂತಿದ್ರೆ ಚೆನ್ನಾಗಿ ಯೋಚಿಸಿ ಎಚ್ಚರಿಕೆಯ ನಿರ್ಧಾರ ತೆಗೆದುಕೊಳ್ಳಬೇಕು. ಆತುರಾತುರವಾಗಿ ಎಮೋಷನಲ್ ಆಗಿ ನಿರ್ಧಾರ ಕೈಗೊಂಡ್ರೆ ಮುಂದೆ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ.
ಇದನ್ನೂ ಓದಿ:181 ಮಂದಿಯಲ್ಲಿ ಇಬ್ಬರು ಮಾತ್ರ ಬದುಕಿ ಬಂದರು.. ಇವರ ಜೀವ ಉಳಿಯಲು ನಿಗೂಢ ಕಾರಣ ಏನು?
‘ಚಾಂಪಿಯನ್ಸ್’ ಟ್ರೋಫಿ ಗೆಲ್ಲಬೇಕು
ಫೆಬ್ರವರಿ 9ರಂದು ಟಾಪ್ 8 ತಂಡಗಳ, ಚಾಂಪಿಯನ್ಸ್ ಟ್ರೋಫಿ ಟೂರ್ನಿ ನಡೆಯಲಿದೆ. ಇದು ಮಿನಿ ವಿಶ್ವಕಪ್​​ ಕೂಡ ಹೌದು. ಟೀಮ್ ಇಂಡಿಯಾ ತನ್ನೆಲ್ಲಾ ಪಂದ್ಯಗಳನ್ನ ದುಬೈನಲ್ಲಿ ಆಡಲಿದೆ. ಫೆಬ್ರವರಿ ತಿಂಗಳಲ್ಲಿ ದುಬೈನಲ್ಲಿ ಆಡೋದು ಅಷ್ಟು ಸುಲಭವಲ್ಲ. ದುಬೈ ಕಂಡೀಷನ್ಸ್ ಸಿಕ್ಕಾಪಟ್ಟೆ ಬಿಸಿ ಇರುತ್ತದೆ. ಆ ಚಾಲೆಂಜ್​ ಅನ್ನ ಗೆದ್ದು ಟೀಮ್ ಇಂಡಿಯಾ, ಚಾಂಪಿಯನ್ ಆಫ್ ಚಾಂಪಿಯನ್ಸ್ ಆಗಬೇಕಿದೆ.
‘ಟೆಸ್ಟ್ ಸರಣಿ ಗೆದ್ದು’ ಇತಿಹಾಸ ನಿರ್ಮಿಸಬೇಕು
ಜೂನ್ ತಿಂಗಳಲ್ಲಿ ಟೀಮ್ ಇಂಡಿಯಾ 5 ಟೆಸ್ಟ್ ಪಂದ್ಯಗಳ ಸರಣಿಯನ್ನಾಡಲು, ಇಂಗ್ಲೆಂಡ್​​​ಗೆ ಪ್ರಯಾಣ ಬೆಳಸಲಿದೆ. ಇಂಗ್ಲೆಂಡ್​​ನಲ್ಲಿ ಟೆಸ್ಟ್ ಸರಣಿ ಗೆಲ್ಲೋದು ಅಷ್ಟು ಸುಲಭವಲ್ಲ. ಸದ್ಯ ಟೆಸ್ಟ್ ಕ್ರಿಕೆಟ್​ನಲ್ಲಿ ಬಲಿಷ್ಟ ತಂಡವಾಗಿರುವ ಇಂಗ್ಲೆಂಡ್, ತವರಿನಲ್ಲಿ ಹೆಬ್ಬುಲಿಗಳಂತೆ ಹೋರಾಟ ನಡೆಸಲಿದ್ದಾರೆ. ಎದುರಾಳಿಗಳು ಆಂಗ್ಲರ ನಾಡಲ್ಲಿ ಟೆಸ್ಟ್ ಸರಣಿ ಗೆಲ್ಲೋದು ಸುಲಭದ ಮಾತಲ್ಲ. ಹಾಗಾಗಿ ಟೀಮ್ ಇಂಡಿಯಾ ಅಲ್ಲಿ ಗೆಲ್ಲೋದು ಟಫ್ ಟಾಸ್ಕ್ ಆಗಿದೆ.
‘ರನ್​​​​ಭೂಮಿ’ಯಲ್ಲಿ ಮಣಿಸಬೇಕು!
ಅಕ್ಟೋಬರ್​ನಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾದಲ್ಲಿ ಆಸ್ಟ್ರೇಲಿಯಾ ವಿರುದ್ಧ 3 ಏಕದಿನ ಮತ್ತು 5 T20 ಪಂದ್ಯಗಳ ಸರಣಿಯನ್ನಾಡಲಿದೆ. ನಂತರ ನವೆಂಬರ್​​​ನಲ್ಲಿ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 2 ಟೆಸ್ಟ್, 3 ಏಕದಿನ ಮತ್ತು 5 T20 ಪಂದ್ಯಗಳ ಸರಣಿಯನ್ನಾಡಲಿದೆ. ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ ವಿರುದ್ಧ ವೈಟ್​ಬಾಲ್ ಚಾಲೆಂಜ್​​​​​​ ಗೆದ್ದು, 2025ಕ್ಕೆ ಗುಡ್​ಬೈ ಹೇಳಬೇಕಿದೆ.
ಇದನ್ನೂ ಓದಿ:ಇಂಗ್ಲೆಂಡ್​ ವಿರುದ್ಧ ಸರಣಿ.. ಟೀಂ ಇಂಡಿಯಾದ ಮೂವರು ಹಿರಿಯ ಆಟಗಾರರು ಔಟ್..!
ಒಟ್ನಲ್ಲಿ..! PAST IS PAST..! 2024ರಲ್ಲಿ ಏನೇ ನಡೆದಿರಲಿ, ಅದನ್ನ ಬದಲಾಯಿಸೋಕೆ ಯಾರಿಂದಲೂ ಸಾಧ್ಯವಿಲ್ಲ. ಹಾಗಾಗಿ ಹೊಸ ವರ್ಷದಲ್ಲಿ ಮತ್ತೆ ಅದೇ ತಪ್ಪನ್ನ ಮಾಡದೇ, ಗೆಲುವಿನ ಹಾದಿಯಲ್ಲಿ ಸಾಗುವಂತಾಗಲಿ. ನಮ್ಮ ರನ್​ಭೂಮಿ ತಂಡ ಹಾಗೇ ನ್ಯೂಸ್​ಫಸ್ಟ್​ ತಂಡದ ಪರವಾಗಿ, ಟೀಮ್ ಇಂಡಿಯಾಕ್ಕೆ ಆಲ್​ ದ ಬೆಸ್ಟ್ ಹೇಳೋಣ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us