ರೋಹಿತ್​ ಶರ್ಮಾಗೆ ಗೇಟ್​ಪಾಸ್​​; ಕೊಹ್ಲಿ ಆಪ್ತ ಹಾರ್ದಿಕ್​ ಪಾಂಡ್ಯಗೆ ಟೀಮ್​ ಇಂಡಿಯಾ ಕ್ಯಾಪ್ಟನ್ಸಿ ಪಟ್ಟ

author-image
Ganesh Nachikethu
Updated On
ಕೈಕೊಟ್ಟ ಹಾರ್ದಿಕ್​​.. ವಿಶ್ವಕಪ್​​ಗಾಗಿ ಕೊಹ್ಲಿ, ರೋಹಿತ್​​ ಕಾಲು ಹಿಡಿದ ಸೆಲೆಕ್ಟರ್ಸ್​! ಏನಿದು ಸ್ಟೋರಿ?
Advertisment
  • ಟೀಮ್​ ಇಂಡಿಯಾ ಕ್ಯಾಪ್ಟನ್​ ರೋಹಿತ್ ಶರ್ಮಾಗೆ ಕೊಕ್​!
  • ವಿರಾಟ್​ ಕೊಹ್ಲಿ ವಿಚಾರದಲ್ಲಿ ಮಾತ್ರ ಬಿಸಿಸಿಐ ಸಾಫ್ಟ್​ ಕಾರ್ನರ್​
  • ಕೊಹ್ಲಿ ಆಪ್ತ ಹಾರ್ದಿಕ್​ ಪಾಂಡ್ಯಗೆ ಟೀಮ್​ ಇಂಡಿಯಾ ಕ್ಯಾಪ್ಟನ್ಸಿ

ಟೀಮ್​ ಇಂಡಿಯಾ ಕ್ಯಾಪ್ಟನ್​ ರೋಹಿತ್​ ಶರ್ಮಾ ಅವರಿಗೆ ನಿಮ್ಮ ದಾರಿ ನೋಡಿಕೊಳ್ಳಲು ಎಂದು ಬಿಸಿಸಿಐ ಸೂಚನೆ ನೀಡಿದೆ. ರೋಹಿತ್​ಗೆ ವಾರ್ನಿಂಗ್​ ನೀಡಿದ್ದು, ವಿರಾಟ್​ ಕೊಹ್ಲಿ ವಿಚಾರದಲ್ಲಿ ಮಾತ್ರ ಸಾಫ್ಟ್​ ಕಾರ್ನರ್​ ತೋರಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಸ್ಟಾರ್​ ಕ್ರಿಕೆಟರ್​ ವಿರಾಟ್​ ಕೊಹ್ಲಿ ಅವರನ್ನು ಮತ್ತಷ್ಟು ದಿನಗಳ ಕಾಲ ಏಕದಿನ ಫಾರ್ಮೆಟ್​ನಲ್ಲಿ ಮುಂದುವರಿಸೋ ಅಭಯ ನೀಡಿದೆ. ಇನ್ನೊಂದೆಡೆ ರೋಹಿತ್​​ಗೆ ನಿವೃತ್ತಿ ಆಗಿ ಎಂದು ಒತ್ತಡ ಹೇರಿದೆ. ಇದು ಸಹಜವಾಗಿ ರೋಹಿತ್ ಶರ್ಮಾಗೊಂದು ನ್ಯಾಯ, ವಿರಾಟ್​​ಗೊಂದು ನ್ಯಾಯ ಎಂಬ ಪ್ರಶ್ನೆ ಮಾಡುವಂತೆ ಮಾಡಿದೆ. ಇದಕ್ಕೆ ಕಾರಣ ಇಬ್ಬರ ಆಟ ಹಾಗೂ ವಯಸ್ಸು ಹಾಗೂ ಫಾರ್ಮ್​.

ಟೆಸ್ಟ್​ ಫಾರ್ಮೆಟ್​ಗೆ ಹೋಲಿಕೆ ಮಾಡಿದ್ರೆ, ಏಕದಿನ ಫಾರ್ಮೆಟ್​ನಲ್ಲಿ ವಿರಾಟ್​​ಗಿಂತ ರೋಹಿತ್, ಸಾಲಿಡ್ ಫಾರ್ಮ್​ನಲ್ಲಿದ್ದಾರೆ. ಇಬ್ಬರ ವಯಸ್ಸಿನ ಅಂತರದಲ್ಲೂ ಹೆಚ್ಚೇನಿಲ್ಲ. ಹೀಗಾಗಿ ರೋಹಿತ್ ಶರ್ಮಾ ವಿಚಾರದಲ್ಲಿ ಬಿಸಿಸಿಐ ಆಟ ಆಡ್ತಿದೆಯಾ ಎಂಬ ಅನುಮಾನ ಮೂಡಿಸದಿರಲ್ಲ. ಅಷ್ಟೇ ಅಲ್ಲ! ಏಕದಿನ ಫಾರ್ಮೆಟ್​​ಗೆ ಹೊಸ ನಾಯಕನಾಗಿ ಯಾರನ್ನ ನೇಮಿಸಬೇಕು ಅನ್ನೋ ಸ್ಪಷ್ಟ ನಿಲುವಿಗೂ ಬಂದಾಗಿದೆಯಂತೆ.

ಹಾರ್ದಿಕ್ ಪಾಂಡ್ಯಗೆ ಏಕದಿನ ನಾಯಕನ ಪಟ್ಟ ಫಿಕ್ಸ್..!

ಚಾಂಪಿಯನ್ಸ್​ ಟ್ರೋಫಿ ಬಳಿಕ ರೋಹಿತ್​ಗೆ ಗೇಟ್​ಪಾಸ್ ನೀಡಲು ನಿರ್ಧರಿಸಿರುವ ಬಿಸಿಸಿಐ, ನಂತರ ಟೀಮ್ ಇಂಡಿಯಾದ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆಗೆ ಉತ್ತರ ಹುಡುಕಾಗಿದೆ. ಸ್ಟಾರ್ ಆಲ್​ರೌಂಡರ್ ಹಾರ್ದಿಕ್​ ಪಾಂಡ್ಯಗೆ ಪಟ್ಟ ಕಟ್ಟಲು ಉತ್ಸುಕ ತೋರಿರುವ ಬಿಸಿಸಿಐ, ಸತತ ಇಂಜುರಿ ರೀಸನ್​ಗೆ ಬೂಮ್ರಾಗೆ ನಾಯಕತ್ವ ನೀಡದಿರಲು ಈಗಾಗಲೇ ತೀರ್ಮಾನಿಸಿದೆ. ಆದ್ರೆ, ಇದೆಲ್ಲಕ್ಕೂ ಚಾಂಪಿಯನ್ಸ್​ ಟ್ರೋಫಿ ಬಳಿಕವಷ್ಟೇ ಸ್ಪಷ್ಟ ಉತ್ತರ ಸಿಗಬೇಕಷ್ಟೇ.

ರೋಹಿತ್ ಶರ್ಮಾ ಭವಿಷ್ಯದ ಬಗ್ಗೆ ಕಠಿಣ ನಿಲುವು ತೆಗೆದುಕೊಂಡಿರುವ ಬಿಸಿಸಿಐ, ವಿರಾಟ್ ಕೊಹ್ಲಿ ವಿಚಾರದಲ್ಲಿ ಮಾತ್ರ ಸಾಫ್ಟ್​​​​​​​​ ಆಗಿದೆ. ಇದು ಸಹಜವಾಗಿ ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಇಡುವ ಯತ್ನನಾ ಎಂಬ ಪ್ರಶ್ನೆಯನ್ನು ಹುಟ್ಟಿಹಾಕಿದೆ. ಆದ್ರೆ, ಎಲ್ಲವೂ ಚಾಂಪಿಯನ್ಸ್​ ಟ್ರೋಫಿ ಬಳಿಕ ನೋಡೋಣ ಎಂದಿರುವ ರೋಹಿತ್, ಹೊಸ ದಾಳ ಉರುಳಿಸ್ತಾರಾ..? ಇಲ್ಲ ಶಾಕ್ ನೀಡ್ತಾರಾ ಅನ್ನೋದಕ್ಕೆ ಕಾಲವೇ ಉತ್ತರಿಸಬೇಕಷ್ಟೇ.

ಇದನ್ನೂ ಓದಿ:ಮದುವೆ ವೇದಿಕೆಯಲ್ಲೇ ನನ್ನನ್ನು ಕ್ಷಮಿಸಿ ಎಂದ ಡಾಲಿ; ಕ್ಷಮೆ ಕೇಳಲು ಕಾರಣವೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment