/newsfirstlive-kannada/media/post_attachments/wp-content/uploads/2025/01/KL_RAHUL_PANT-1.jpg)
ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಮ್​​ ಇಂಡಿಯಾ ಕ್ಯಾಪ್ಟನ್​​​ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಈ ಪಂದ್ಯ ಮಾರ್ಚ್ 2ನೇ ತಾರೀಕಿನಂದು ದುಬೈ ಇಂಟರ್​ ನ್ಯಾಷನಲ್​ ಸ್ಟೇಡಿಯಮ್​​ನಲ್ಲಿ ನಡೆಯಲಿದೆ.
ಸೆಮಿಫೈನಲ್​ನಲ್ಲೂ ಭಾರತ ನ್ಯೂಜಿಲೆಂಡ್​ ವಿರುದ್ಧ ಕಾದಾಟ ನಡೆಸಲಿದೆ. ಹೀಗಾಗಿ ಕ್ಯಾಪ್ಟನ್​ ರೋಹಿತ್​ ಶರ್ಮಾ ವಿಚಾರದಲ್ಲಿ ಮ್ಯಾನೇಜ್ಮೆಂಟ್ ಹೆಚ್ಚಿನ ರಿಸ್ಕ್ ತೆಗೆದುಕೊಳ್ಳಲು ಬಯಸುತ್ತಿಲ್ಲ. ಇದಕ್ಕೆ ಕಾರಣಕ್ಕೆ ರೋಹಿತ್​​ ಅವರಿಗೆ ರೆಸ್ಟ್​ ನೀಡಿ, ತಂಡವನ್ನು ಮುನ್ನಡೆಸಲು ಶುಭ್ಮನ್​​ ಗಿಲ್​ಗೆ ಅವಕಾಶ ನೀಡಲಿದೆ.
ಇನ್ನು, ಮುಂದಿನ ಪಂದ್ಯಕ್ಕಾಗಿ ಕ್ಯಾಪ್ಟನ್​ ರೋಹಿತ್​ ಶರ್ಮಾ ಟೀಮ್​ ಇಂಡಿಯಾದಿಂದ ಹೊರ ನಡೆದರೆ ಯಾರಿಗೆ ಚಾನ್ಸ್​​? ಅನ್ನೋ ಚರ್ಚೆ ಶುರುವಾಗಿದೆ. ಈ ಸಾಲಿನಲ್ಲಿ ಕೇಳಿ ಬಂದಿರೋ ಮೊದಲ ಹೆಸರು ರಿಷಬ್​ ಪಂತ್​​. ಪಂತ್​ ರೋಹಿತ್​ ಬದಲಿಗೆ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಅಖಾಡ ಪ್ರವೇಶಿಸಬಹುದು.
ರೋಹಿತ್​ ಜಾಗದಲಿ ಯಾರಿಗೆ ಚಾನ್ಸ್​?
ಟೀಮ್​ ಇಂಡಿಯಾದ ಸ್ಟಾರ್​ ವಿಕೆಟ್​ ಕೀಪರ್​ ಬ್ಯಾಟರ್​​ ರಿಷಬ್​ ಪಂತ್​. ಇವರು ಕ್ಯಾಪ್ಟನ್​ ರೋಹಿತ್​ ಶರ್ಮಾ ಜಾಗದಲ್ಲಿ ಆಡಲಿದ್ದಾರೆ. ಈಗಾಗಲೇ ನೆಟ್ಸ್​​ನಲ್ಲಿ ಪಂತ್​​ ಅಭ್ಯಾಸ ಶುರು ಮಾಡಿದ್ದಾರೆ. ವಿಶೇಷ ಎಂದರೆ ಶುಭ್ಮನ್​ ಗಿಲ್​ ಜತೆಗೆ ಪಂತ್​ ಓಪನಿಂಗ್​ ಮಾಡಬಹುದು.
ಕ್ಯಾಪ್ಟನ್​ ರೋಹಿತ್​ ಶರ್ಮಾ ಪಾಕ್ ವಿರುದ್ಧ ಪಂದ್ಯದಲ್ಲಿ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಎರಡು ದಿನಗಳ ರೆಸ್ಟ್​ ಬಳಿಕ ಭಾರತ ಅಭ್ಯಾಸ ಆರಂಭಿಸಿದೆ. ಈ ವೇಳೆ ರೋಹಿತ್ ಶರ್ಮಾ ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿದ್ರು. ಆದ್ರೆ, ಇನ್ನೂ ಫಿಟ್​ ಆಗಿಲ್ಲ ಅನ್ನೋ ಮಾಹಿತಿ ಲಭ್ಯವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us