/newsfirstlive-kannada/media/post_attachments/wp-content/uploads/2025/06/ravindra-jadeja-and-kuldeep-yadav.jpg)
ಲೀಡ್ಸ್​ ಟೆಸ್ಟ್​ ಸೋತ ಟೀಮ್ ಇಂಡಿಯಾ ಈಗ 2ನೇ ಟೆಸ್ಟ್​ ಪಂದ್ಯಕ್ಕೆ ಸಜ್ಜಾಗ್ತಿದೆ. ಎಡ್ಜ್​ ಬಾಸ್ಟನ್​ನಲ್ಲಿ ಇಂಗ್ಲೆಂಡ್​ಗೆ ತಿರುಗೇಟು ನೀಡುವ ಮೂಲಕ ಸರಣಿ ಸಮಬಲದ ಲೆಕ್ಕಾಚಾರದಲ್ಲಿದೆ. ಈ ನಡುವೆ ಟೀಮ್ ಇಂಡಿಯಾದಲ್ಲಿ ಹೊಸ ತಲೆ ನೋವು ಸೃಷ್ಟಿಯಾಗಿದೆ.
ಇಂಡೋ-ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್​ ಕದನಕ್ಕೆ ಕೌಂಟ್​ಡೌನ್ ಶುರುವಾಗಿದೆ. ಲೀಡ್ಸ್​ನಲ್ಲಿ ಸೋತಿರುವ ಟೀಮ್ ಇಂಡಿಯಾ, ಗೆಲುವನ್ನೇ ಅರಿಯದ ಎಡ್ಜ್​ ಬಾಸ್ಟನ್​ನಲ್ಲಿ ಪುಟಿದೇಳುವ ಕನಸು ಕಾಣ್ತಿದೆ. ಸ್ಟ್ರಾಂಗ್ ಕಮ್​ಬ್ಯಾಕ್​​ನ ಲೆಕ್ಕಾಚಾರದಲ್ಲಿರುವ ಟೀಮ್ ಇಂಡಿಯಾಗೆ, ಎಡ್ಜ್​​ಬಾಸ್ಟನ್​ನಲ್ಲಿ ಸ್ಪಿನ್ನರ್ ಆಗಿ ಯಾರನ್ನು ಕಣಕ್ಕಿಳಿಸುವುದು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಇದನ್ನೂ ಓದಿ: ಪೊಲೀಸರ ಮುಂದೆ ಮಹತ್ವದ ಹೇಳಿಕೆ ಕೊಟ್ಟ ಸಂತ್ರಸ್ತೆ.. ಯಶ್ ದಯಾಳ್ ವಿರುದ್ಧ ಮಾಡಿದ ಆರೋಪ ಏನು..?
ಜಡ್ಡು vs ಕುಲ್ದೀಪ್.. ಎಡ್ಜ್​ಬಾಸ್ಟನ್​ನಲ್ಲಿ ಆಡೋದ್ಯಾರು?
ರವೀಂದ್ರ ಜಡೇಜಾ.. ಸೇನಾ ರಾಷ್ಟ್ರಗಳಲ್ಲಿ ಟೀಮ್​ ಇಂಡಿಯಾದ ಫಸ್ಟ್ ಚಾಯ್ಸ್ ಸ್ಪಿನ್​ ಆಲ್​​ರೌಂಡರ್. ಲೀಡ್ಸ್​ ಟೆಸ್ಟ್​ನಲ್ಲಿ ವಿಕೆಟ್ ಬೇಟೆಯಾಡಲು ಜಡೇಜಾ ಇನಿಲ್ಲದ ಸರ್ಕಸ್ ಮಾಡಿದ್ದಾರೆ. ಅಷ್ಟೇನು ಎಫೆಕ್ಟ್ ಅನಿಸದ ಜಡ್ಡು, ಮುಂದಿನ ಟೆಸ್ಟ್​ಗೆ ಬೇಕಾ ಎಂಬ ಪ್ರಶ್ನೆ ಉದ್ಭವಿಸಿದೆ.
ಮೊದಲ ಟೆಸ್ಟ್​ನಲ್ಲಿ ಜಡೇಜಾ
47 ಓವರ್​ ಬೌಲಿಂಗ್ ಮಾಡಿ 172 ರನ್ ಬಿಟ್ಟುಕೊಟ್ಟಿದ್ದಾರೆ. ಕೇವಲ ಒಂದೇ ಒಂದು ವಿಕೆಟ್ ಉರುಳಿಸಿದ ರವೀಂದ್ರ ಜಡೇಜಾ, 3.70 ಎಕಾನಮಿ ಕಾಯ್ದಕೊಂಡಿದ್ದಾರೆ. ರವೀಂದ್ರ ಜಡೇಜಾರ ಈ ಕಳಪೆ ಬೌಲಿಂಗ್ ಪ್ರದರ್ಶನವೇ ಎಡ್ಜ್​​ ಬಾಸ್ಟನ್​ನಲ್ಲಿ ಜಡ್ಡುಗೆ ಸ್ಥಾನ ನೀಡಬೇಕಾ ಎಂಬ ಚರ್ಚೆಗೆ ಕಾರಣವಾಗಿದೆ. ಜಡೇಜಾ ಬದಲು ಚೈನಾಮನ್ ಸ್ಪಿನ್ನರ್ ಕುಲ್​​ದೀಪ್​ ಯಾದವ್​​​ಗೆ ಸ್ಥಾನ ನೀಡಬೇಕೆಂಬ ಅಭಿಪ್ರಾಯ ವ್ಯಕ್ತವಾಗ್ತಿವೆ.
ಬತ್ತಳಿಕೆಯಲ್ಲಿನ ಪ್ರಬಲ ಅಸ್ತ್ರ ಪ್ರಯೋಗಿಸುತ್ತಾ ಭಾರತ..?
ರವೀಂದ್ರ ಜಡೇಜಾ ಹೊರತಾಗಿ ನೋಡಿದ್ರೆ ಟೀಮ್ ಇಂಡಿಯಾದ ಸೆಕೆಂಡ್ ಚಾನ್ಸ್​ ಸ್ಪಿನ್ನರ್ ಕುಲ್​ದೀಪ್ ಯಾದವ್. ಕಳೆದ ವರ್ಷ ತವರಿನಲ್ಲಿ ಇಂಗ್ಲೆಂಡ್ ತಂಡವನ್ನು ಕಾಡಿದ್ದ ಕುಲ್​ದೀಪ್, ಎಡ್ಜ್​ ಬಾಸ್ಟನ್​ನಲ್ಲಿ ಚಾನ್ಸ್​ ಸಿಕ್ರೇ ಬ್ಲಾಕ್ ಬಸ್ಟರ್ ಪರ್ಫಾಮೆನ್ಸ್​ ನೀಡ್ತಾರೆ ಎಂಬ ನಿರೀಕ್ಷೆಯಿದೆ. ಚೈನಾಮನ್​​​ ಸ್ಪಿನ್ನರ್​​ ಇಂಗ್ಲೆಂಡ್ ಎದುರು ಸಾಲಿಡ್ ಟ್ರ್ಯಾಕ್​ ರೆಕಾರ್ಡ್​ ಕೂಡ ಹೊಂದಿದ್ದಾರೆ.
2024ರಲ್ಲಿ ಇಂಗ್ಲೆಂಡ್ ಎದುರು ಕುಲ್​​ದೀಪ್
ಆಡಿದ 4 ಟೆಸ್ಟ್​ ಪಂದ್ಯಗಳಿಂದ 19 ವಿಕೆಟ್ ಉರುಳಿಸಿರುವ ಕುಲ್​ದೀಪ್ ಯಾದವ್, 3.35ರ ಎಕಾನಮಿಯಲ್ಲಿ ಒಮ್ಮೆ 4 ವಿಕೆಟ್, ಒಮ್ಮೆ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಹೀಗಾಗಿ ಬತ್ತಳಿಕೆಯಲ್ಲಿನ ಪ್ರಬಲ ಅಸ್ತ್ರವನ್ನ ಟೀಮ್ ಇಂಡಿಯಾ ಪ್ರಯೋಗಿಸಿದರು ಅಚ್ಚರಿ ಇಲ್ಲ.
ತವರಲ್ಲಿ ವ್ರಿಸ್ಟ್ ಸ್ಪಿನ್ನರ್​ಗಳ ಪರೀಕ್ಷೆ ಎದುರಿಸಿಲ್ಲ ಇಂಗ್ಲೆಂಡ್
2021ರಿಂದ ಇಂಗ್ಲೆಂಡ್ ಬರೋಬ್ಬರಿ 27 ಟೆಸ್ಟ್ ಪಂದ್ಯಗಳನ್ನ ತವರಿನಲ್ಲಾಡಿದೆ. ವ್ರಿಸ್ಟ್​ ಸ್ಪಿನ್ನರ್​ಗಳ ಎದುರು ಆಡಿದ್ದು ಕೇವಲ ಆರೇ ಆರು ಎಸೆತಗಳನ್ನಾಗಿದೆ. 2023ರ ಲಾರ್ಡ್ಸ್​ ಟೆಸ್ಟ್​ನಲ್ಲಿ ಸ್ಟೀವ್ ಸ್ಮಿತ್​​ರ ಎಸೆತಗಳನ್ನ ಬಿಟ್ರೆ ವ್ರಿಸ್ಟ್​ ಸ್ಪಿನ್ನರ್​ಗಳನ್ನೇ ಇಂಗ್ಲೆಂಡ್​ ಎದುರಿಸಿಲ್ಲ. ಇಂಗ್ಲೆಂಡ್ ತಂಡದಲ್ಲಿನ ಬಹುತೇಕ ಆಟಗಾರರು, ಗುಣ ಮಟ್ಟದ ಸ್ಪಿನ್ನರ್​ಗಳನ್ನ ಎದುರಿಸಿಲ್ಲ. ಹೀಗಾಗಿ ಕುಲ್​ದೀಪ್​ರಂಥ ಕ್ವಾಲಿಟಿ ಸ್ಪಿನ್ನರ್​​ನ ಕಣಕ್ಕಿಳಿಸಿದ್ರೆ, ಟೀಮ್ ಇಂಡಿಯಾಗೆ ಲಾಭವಾಗೋದ್ರಲ್ಲಿ ಡೌಟೇ ಇಲ್ಲ.
ಆಂಗ್ಲರ ಬಝ್​ಬಾಲ್​ಗೆ ಕುಲ್​​ದೀಪ್ ಕೌಂಟರ್..!
ಎಡ್ಜ್​ ಬಾಸ್ಟನ್​ ಪಿಚ್​ ಬೇಸಿಕಲಿ ಪೇಸ್ ಫ್ರೆಂಡ್ಲಿ. ಹೀಗಾಗಿ ಪೇಸರ್​ಗಳು ವಿಜೃಂಭಿಸ್ತಾರೆ. ಇದೇ ಎಡ್ಜ್​ ಬಾಸ್ಟನ್​ನಲ್ಲಿ ಕುಲ್​ದೀಪ್ ಕಮಾಲ್ ಮಾಡಬಲ್ಲರು. ಇಂಗ್ಲೆಂಡ್ ಹೆಡೆಮುರಿ ಕಟ್ಟಬಲ್ಲರು. ಬಝ್​ಬಾಲ್​ ಎಂಬ ಅಟ್ಯಾಕಿಂಗ್ ಬ್ರ್ಯಾಂಡ್ ಆಫ್ ಕ್ರಿಕೆಟ್ ಆಡುವ ಇಂಗ್ಲೆಂಡ್​​ಗೆ, ವೇರಿಯೇಷನ್ಸ್​ ಹೊಂದಿರುವ ಕುಲ್​ದೀಪ್​, ಬಿಗ್​​ ಥ್ರೆಟ್ ಆಗಬಲ್ಲರು. ಪಂದ್ಯ ಸಾಗಿದಂತೆ ಪಿಚ್​ ಸ್ಪಿನ್ನರ್​ಗಳಿಗೆ ಕೊಂಚ ನೆರವಾಗೋದ್ರಿಂದ ಇಂಗ್ಲೆಂಡ್​ನ ಕಾಡಬಲ್ಲರು. ಕುಲ್​ದೀಪ್ ಅಖಾಡದಲ್ಲಿದ್ರೆ, ಇಂಗ್ಲೆಂಡ್​​​​​ನ ಅಗ್ರೆಸ್ಸಿವ್ ಆಟ ಬ್ಯಾಕ್ ಫೈರ್ ಪಕ್ಕಾ. ಹೀಗಾಗಿ 2ನೇ ಟೆಸ್ಟ್​ನಲ್ಲಿ ಜಡೇಜಾ ಬದಲು ಕುಲ್​​ದೀಪ್​​ ಕಣಕ್ಕಿಳಿಯೋ ಸಾಧ್ಯತೆ ದಟ್ಟವಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ