newsfirstkannada.com

ಬಡತನ.. 3 ವರ್ಷ ಕ್ರಿಕೆಟ್​ ಆಡೋದನ್ನ ನಿಲ್ಲಿಸಿದ್ದ ಆಟಗಾರ.. ಆಕಾಶ್​ ದೀಪ್​ನ ಮನಮಿಡಿಯುವ ಕತೆ ಕೇಳಿದ್ರಾ?

Share :

Published February 24, 2024 at 5:17pm

Update February 24, 2024 at 5:18pm

    ಇಂದು ಅಂತರಾಷ್ಟ್ರೀಯ ಟೆಸ್ಟ್​ ಪಂದ್ಯಾಟಕ್ಕೆ ಪಾದಾರ್ಪಣೆ

    ಮೊದಲ ಇನ್ನಿಂಗ್ಸ್​ನಲ್ಲಿ ಮೂರು ವಿಕೆಟ್ ಕಿತ್ತ ಆಕಾಶ್​ ದೀಪ್​

    ಆಕಾಶ್​​ ದೀಪ್ 313ನೇ ಆಟಗಾರನಾಗಿ ಟೆಸ್ಟ್​ಗೆ ಪಾದಾರ್ಪಣೆ

ಭಾರತದ ಮತ್ತು ಇಂಗ್ಲೆಂಡ್​​ ನಡುವೆ ಟೆಸ್ಟ್​ ಪಂದ್ಯಾಟ ನಡೆಯುತ್ತಿದೆ. ಇಂದು ಅಂತರಾಷ್ಟ್ರೀಯ ಟೆಸ್ಟ್​ ಪಂದ್ಯಾಟಕ್ಕೆ ಪಾದಾರ್ಪಣೆ ಮಾಡಿದ ಭಾರತದ ವೇಗಿ ಆಕಾಶ್​ ದೀಪ್ ಮೊದಲ ಇನ್ನಿಂಗ್ಸ್​ನಲ್ಲಿ 3 ವಿಕೆಟ್​ ಕಬಳಿಸಿದ್ದಾರೆ. ಆ ಮೂಲಕ ತನ್ನ ಸಾಮರ್ಥ್ಯ ಪ್ರದರ್ಶಿಸಿದ್ದಾರೆ.

ಬುಮ್ರಾ ಬದಲಿಯಾಗಿ ಆಕಾಶ್​​

ರಾಂಚಿಯಲ್ಲಿ ನಡೆಯುತ್ತಿರುವ 4ನೇ ಟೆಸ್ಟ್​ ಪಂದ್ಯದಲ್ಲಿ ಭಾರತದ ವೇಗಿ ಬುಮ್ರಾ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಅವರ ಬದಲಿಗೆ ಆಕಾಶ್​ ದೀಪ್​ಗೆ ಅವಕಾಶ ನೀಡಲಾಗಿದೆ. ಹಾಗಾಗಿ ಇಂದು ಆಕಾಶ್​​ ದೀಪ್​ ಅಂತರಾಷ್ಟ್ರೀಯ ಟೆಸ್ಟ್​ ಪಂದ್ಯಕ್ಕೆ ಇಂದು ಪಾದಾರ್ಪಣೆ ಮಾಡಿದ್ದಾರೆ.

3 ವಿಕೆಟ್​ ಕಿತ್ತ ಆಕಾಶ್

ಇಂದು ಉತ್ತಮ ಬೌಲಿಂಗ್​ ಪ್ರದರ್ಶಿಸಿದ ಆಕಾಶ್​ ದೀಪ್​ ಇಂಗ್ಲೆಂಡ್​ ತಂಡದ ಝಾಕ್​ ಕ್ರೌಲಿ, ಬೆನ್​ ಡಕೆಟ್​, ಆಲಿ ಪೋಪ್​​ ಅವರ ವಿಕೆಟ್​​ ಕಿತ್ತಿದ್ದಾರೆ. ಇಂದಿನ ಮೊದಲ ದಿನದಾಟಕ್ಕೆ ಇಂಗ್ಲೆಂಡ್​ 7 ವಿಕೆಟ್​ ನಷ್ಟಕ್ಕೆ 302ರನ್​ ಗಳಿಸಿದೆ. 17 ಓವರ್​ ಬೌಲಿಂಗ್​ ಮಾಡಿದ ಆಕಾಶ್​​ 70 ರನ್​ ಜೊತೆಗೆ 3 ವಿಕೆಟ್​ ತಮ್ಮದಾಗಿಸಿಕೊಂಡಿದ್ದಾರೆ.

ಆರ್​ಸಿಬಿ ಕೊಟ್ಟ ಅವಕಾಶ

ಆಕಾಶ್​ನದ್ದು ಸಾಮಾನ್ಯ ಕುಟುಂಬ. ಬಡತನದಿಂದಾಗಿ ಕಷ್ಟದ ಜೀವನ ಸಾಗಿಸುತ್ತಾ ಬಂದ ಆಕಾಶ್​ ಇಂದು ಅಂತರಾಷ್ಟ್ರೀಯ ಟೆಸ್ಟ್​ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಅಂದಹಾಗೆಯೇ ತಂದೆಯನ್ನು ಕಳೆದುಕೊಂಡಿರುವ ಈ ಕ್ರಿಕೆಟಿಗ 3 ವರ್ಷ ಕ್ರಿಕೆಟ್​ ಆಡೋದನ್ನ ನಿಲ್ಲಿಸಿದ್ದರಂತೆ. ಆ ಬಳಿಕ ಕೋಲ್ಕತ್ತಾಗೆ ತೆರಳಿದ ಆಕಾಶ್​ ತಮ್ಮ ಸಾಮರ್ಥ್ಯದಿಂದ ಬಂಗಾಳದ 23 ವರ್ಷದೊಳಗಿನವರ ತಂಡ ಸೇರಿಕೊಂಡರು. ಆಕಾಶ್​​ ಸಾಧನೆಯನ್ನು ಕಂಡು ಆರ್​ಸಿಬಿ ತಂಡ 2022ರಲ್ಲಿ ತಮ್ಮ ತಂಡಕ್ಕೆ ಸೇರಿಸಿಕೊಂಡಿತು. ಸದ್ಯ ಈತ ತಾಯಿ ಮತ್ತು ಸಹೋದರನ ಜೊತೆಗಿದ್ದಾರೆ.

ಇಂದು ಆಕಾಶ್​​ ಭಾರತೀಯ ತಂಡದ 313ನೇ ಆಟಗಾರನಾಗಿ ಟೆಸ್ಟ್​ಗೆ ಪಾದಾರ್ಪಣೆ ಮಾಡಿದ್ದಾರೆ. ಮೊದಲ ದಿನವೇ ಆಕಾಶ್​ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಡತನ.. 3 ವರ್ಷ ಕ್ರಿಕೆಟ್​ ಆಡೋದನ್ನ ನಿಲ್ಲಿಸಿದ್ದ ಆಟಗಾರ.. ಆಕಾಶ್​ ದೀಪ್​ನ ಮನಮಿಡಿಯುವ ಕತೆ ಕೇಳಿದ್ರಾ?

https://newsfirstlive.com/wp-content/uploads/2024/02/Akash-deep.jpg

Load More