‘ನನ್ನ ಯಾರು ತಡೆಯೋಕೆ ಸಾಧ್ಯವಿಲ್ಲ’- ಬಿಸಿಸಿಐಗೆ KL ರಾಹುಲ್ ಖಡಕ್​​​ ವಾರ್ನಿಂಗ್​​; ಕಾರಣವೇನು?

author-image
Ganesh Nachikethu
Updated On
ರೋಹಿತ್​ಗೆ ಬೇಕಿತ್ತು ಪಂತ್.. ರಾಹುಲ್​ಗೆ ಚಾನ್ಸ್​ ಸಿಕ್ಕಿರುವ ಹಿಂದಿದೆ ಓರ್ವ ಸೂತ್ರಧಾರನ ಕೈವಾಡ..!
Advertisment
  • ಟೀಮ್​ ಇಂಡಿಯಾದ ಸ್ಟಾರ್​ ವಿಕೆಟ್​ ಕೀಪರ್​​ ಕೆ.ಎಲ್​ ರಾಹುಲ್​​
  • ಟಿ20 ಕ್ರಿಕೆಟ್​​ಗೆ ಕಮ್​ಬ್ಯಾಕ್​ ಮಾಡೋ ಬಗ್ಗೆ ಕನ್ನಡಿಗನ ಮಾತು..!
  • ಕನ್ನಡಿಗ ಕೆ.ಎಲ್​ ರಾಹುಲ್​​​ ಬಿಸಿಸಿಐಗೆ ಸ್ಟ್ರಾಂಗ್​ ವಾರ್ನಿಂಗ್​​ ಕೊಟ್ರು

ಇತ್ತೀಚೆಗೆ ನಡೆದ ನ್ಯೂಜಿಲೆಂಡ್‌ ವಿರುದ್ಧದ ಸರಣಿಯಲ್ಲಿ ರನ್‌ ಕಲೆ ಹಾಕುವಲ್ಲಿ ವಿಫಲವಾಗಿದ್ದ ಕನ್ನಡಿಗ ಕೆ.ಎಲ್​ ರಾಹುಲ್​ ಅವರನ್ನು ಟೀಮ್​ ಇಂಡಿಯಾದಿಂದ ಕೈ ಬಿಡಲಾಗಿತ್ತು. ಈಗ ಭಾರತ ಎ ತಂಡದ ಪರ ಆಸ್ಟ್ರೇಲಿಯಾ ಪ್ರವಾಸದಲ್ಲೂ ರನ್‌ ಕಲೆ ಹಾಕುವಲ್ಲಿ ಹಿಂದೆ ಬಿದ್ದಿದ್ದಾರೆ. ಇದರ ಮಧ್ಯೆ ಟೀಮ್​ ಇಂಡಿಯಾ ಸ್ಟಾರ್​ ವಿಕೆಟ್​​ ಕೀಪರ್​​ ಕೆ.ಎಲ್​ ರಾಹುಲ್​​​ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ. 2025ರ ಐಪಿಎಲ್​​ ಮೆಗಾ ಹರಾಜಿನಲ್ಲಿ ಕೆ.ಎಲ್​ ರಾಹುಲ್​​ ಯಾವ ತಂಡ ಸೇರಬಹುದು ಎಂಬುದೀಗ ಟಾಕ್​​.

ಲಕ್ನೋ ಸೂಪರ್‌ ಜೈಂಟ್ಸ್‌ ತಂಡದಿಂದ ಕೆ.ಎಲ್​ ರಾಹುಲ್​ ಹೊರ ಬಂದಿದ್ದಾರೆ. ಹೀಗಾಗಿ ಇವ್ರು ಐಪಿಎಲ್​ ಮೆಗಾ ಹರಾಜಿಯಲ್ಲಿ ಭಾಗಿಯಾಗುವುದು ಪಕ್ಕಾ ಆಗಿದೆ. ಕಳೆದ ಸೀಸನ್​​ನಲ್ಲಿ ಲಕ್ನೋ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಮತ್ತು ಕೆ.ಎಲ್​ ರಾಹುಲ್​ ಮಧ್ಯೆ ಜಗಳ ಆಗಿತ್ತು. ಹಾಗಾಗಿ ಕೆ.ಎಲ್​​ ರಾಹುಲ್​ ಲಕ್ನೋ ತಂಡ ತೊರೆಯಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಈಗ ಅದರಂತೆಯೇ ರಾಹುಲ್​​ ಲಕ್ನೋ ಬಿಟ್ಟು ಹರಾಜಿಗೆ ಬಂದಿದ್ದಾರೆ.

ರಾಹುಲ್​ ಏನಂದ್ರು?

ಈ ಬಗ್ಗೆ ಸ್ಟಾರ್‌ ಸ್ಪೋರ್ಟ್ಸ್ ಜೊತೆ ಮಾತನಾಡಿದ ರಾಹುಲ್‌, ಲಕ್ನೋ ತಂಡವನ್ನು ಬಿಟ್ಟ ಬಗ್ಗೆ ಮೌನ ಮುರಿದಿದ್ದಾರೆ. ನಾನು ಹೊಸ ತಂಡ ಸೇರಲು ಕಾತುರದಿಂದ ಕಾಯುತ್ತಿದ್ದೇನೆ. ನಾನು ಯಾವ ತಂಡ ಸೇರಲಿದ್ದೇನೆ ಅನ್ನೋದು ಇನ್ನೂ ಖಾತ್ರಿಯಿಲ್ಲ. ನನಗೆ ಫ್ರೀಡಮ್​​ ಬೇಕು. ತಂಡದ ವಾತಾವರಣ ಚೆನ್ನಾಗಿ ಇರಬೇಕು. ನನ್ನ ಮನಸು ಒಳ್ಳೆಯದನ್ನು ಹುಡುಕುತ್ತಿದೆ ಎಂದರು.

ಟಿ20 ತಂಡಕ್ಕೆ ಕಮ್​ಬ್ಯಾಕ್​ ಮಾಡೋ ಗುರಿ

ಒಬ್ಬ ಆಟಗಾರನಾಗಿ ನಾನು ಎಲ್ಲಿದ್ದೇನೆ? ಎಂಬುದು ಗೊತ್ತಿದೆ. ಕಮ್​ಬ್ಯಾಕ್​ ಮಾಡಬೇಕು ಅನ್ನೋ ಅರಿವು ಇದೆ. ಹೀಗಾಗಿ ಐಪಿಎಲ್​ ಮುಂದಿನ ಸೀಸನ್​ಗಾಗಿ ಕಾಯುತ್ತಿದ್ದೇನೆ. ನನ್ನ ಆಟವನ್ನು ಎಂಜಾಯ್ ಮಾಡಲಿದ್ದೇನೆ. ಭಾರತ ಟಿ20 ತಂಡಕ್ಕೆ ಕಮ್​ಬ್ಯಾಕ್​​​ ಮಾಡುವುದೇ ನನ್ನ ಗುರಿ. ನನ್ನನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದರು.

ರಾಹುಲ್ ಸಾಧನೆ

ಟೀಮ್​ ಇಂಡಿಯಾದ ಸ್ಟಾರ್​ ವಿಕೆಟ್​ ಕೀಪರ್​ ಬ್ಯಾಟರ್​ ಕೆ.ಎಲ್​ ರಾಹುಲ್​​. ಇವರು ಭಾರತದ ಪರ 72 ಟಿ20 ಪಂದ್ಯಗಳನ್ನು ಆಡಿ 2265 ರನ್‌ ಸಿಡಿಸಿದ್ದಾರೆ. ಇದರಲ್ಲಿ 22 ಅರ್ಧಶತಕ ಹಾಗೂ 2 ಶತಕಗಳು ಸೇರಿವೆ. ಐಪಿಎಲ್‌ನಲ್ಲಿ 132 ಪಂದ್ಯಗಳನ್ನು ಆಡಿದ್ದು, 4683 ರನ್‌ ಬಾರಿಸಿದ್ದಾರೆ. ಇದರಲ್ಲಿ 4 ಶತಕ ಹಾಗೂ 37 ಅರ್ಧಶತಕಗಳು ಸೇರಿವೆ. ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್‌ ಗವಾಸ್ಕರ್‌ ಟ್ರೋಫಿಗೂ ಇವರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment