ಹೊಸ ಅಧ್ಯಾಯ, ಹೊಸ ಕ್ಯಾಪ್ಟನ್​.. ಕ್ರಿಕೆಟ್​ ದಿಗ್ಗಜರ ಮಾತು ಸುಳ್ಳು ಮಾಡಿದ ಯಂಗ್ ಇಂಡಿಯಾ

author-image
Bheemappa
ಹೊಸ ಅಧ್ಯಾಯ, ಹೊಸ ಕ್ಯಾಪ್ಟನ್​.. ಕ್ರಿಕೆಟ್​ ದಿಗ್ಗಜರ ಮಾತು ಸುಳ್ಳು ಮಾಡಿದ ಯಂಗ್ ಇಂಡಿಯಾ
Advertisment
  • ಅವತ್ತೇ ಆಂಗ್ಲರಿಗೆ ಹಿಟ್​ಮ್ಯಾನ್ ರೋಹಿತ್​ ನೀಡಿದ್ದ ಎಚ್ಚರಿಕೆ ಏನು?
  • ‘ಬಝ್‌ಬಾಲ್’ ಪ್ರಶ್ನೆಗೆ ಚಾಣಾಕ್ಷ ಉತ್ತರ ನೀಡಿದ ಶುಭ್​ಮನ್ ಗಿಲ್​​
  • ಮೊದಲ ಟೆಸ್ಟ್​ ಪಂದ್ಯದಲ್ಲಿ ಆಂಗ್ಲರಿಗೆ ಟೀಸರ್ ತೋರಿಸಿದ ಗಿಲ್ ಪಡೆ

ಇಂಗ್ಲೆಂಡ್ ಟೆಸ್ಟ್​ ಸಿರೀಸ್ ಆರಂಭವಾಗಿದೆ. ಮೊದಲ ಟೆಸ್ಟ್​​ನ ಮೊದಲ ಇನ್ನಿಂಗ್ಸ್​ನಲ್ಲೇ ಟೀಮ್ ಇಂಡಿಯಾ ಬ್ಯಾಟರ್​ಗಳು ಜಬರ್ದಸ್ತ್ ಪರ್ಫಾಮೆನ್ಸ್​ ನೀಡಿದ್ದಾರೆ. ಲೀಡ್ಸ್​​ನಲ್ಲಿ ಯಂಗ್ ಇಂಡಿಯಾ ಜಸ್ಟ್​ ಆಟವನ್ನಷ್ಟೇ ಆಡಿಲ್ಲ. ಇಂಗ್ಲೆಂಡ್​ಗೆ ತಕ್ಕ ಪಾಠವನ್ನೂ ಕಲಿಸಿದೆ.

ಇಂಡೋ -ಇಂಗ್ಲೆಂಡ್ ಟೆಸ್ಟ್ ಸಿರೀಸ್​ ಮೇಲೆಯೇ ವಿಶ್ವದ ಕಣ್ಣು ನೆಟ್ಟಿದೆ. ಯಾರು ಈ ಟೆಸ್ಟ್​ ಸರಣಿ ಗೆಲ್ತಾರೆ ಅನ್ನೋದಕ್ಕಿಂತ ಶುಭ್​ಮನ್ ಗಿಲ್​​ ನಾಯಕತ್ವದ ಯಂಗ್ ಇಂಡಿಯಾ, ಪರ್ಫಾಮೆನ್ಸ್ ಹೇಗಿರುತ್ತೆ ಅನ್ನೋದೆ ಎಲ್ಲರ ಕುತೂಹಲವಾಗಿದೆ. ಈ ಸರಣಿ ಆರಂಭಕ್ಕೂ ಮುನ್ನ ಕ್ರಿಕೆಟ್​ ಲೋಕ ಶುಭ್​ಮನ್​ ಪಡೆಗೆ ದೊಡ್ಡ ಸವಾಲು ಎದುರಾಗುತ್ತೆ ಎಂದೇ ಭಾವಿಸಿತ್ತು. ದಿಗ್ಗಜ ಆಟಗಾರರೆಲ್ಲಾ ಟೀಮ್ ಇಂಡಿಯಾಗೆ ಬಿಗೆಸ್ಟ್ ಚಾಲೆಂಜ್ ಎದುರಾಗುತ್ತೆ ಅಂತಾನೇ ವಿಶ್ಲೇಷಿಸಿದರು.

publive-image

ಟೀಮ್ ಇಂಡಿಯಾ ಪರದಾಡುತ್ತೆ ಎಂದು ಭಾವಿಸುತ್ತೇನೆ. ಶುಭ್​ಮನ್ ಗಿಲ್ ಯುವ ನಾಯಕ, ಸೀಮಿಂಗ್, ಬೌನ್ಸಿಂಗ್ ಕಂಡೀಷನ್ಸ್​ ಇರುತ್ತೆ. ಇದು ಟೀಮ್ ಇಂಡಿಯಾಗೆ ಟಫ್ ಚಾಲೆಂಜ್​ ಆಗಿರಲಿದೆ.

ಮ್ಯಾಥ್ಯೂ ಹೇಡನ್, ಮಾಜಿ ಕ್ರಿಕೆಟರ್

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್ ಮ್ಯಾಥ್ಯೂ ಹೇಡನ್ ಮಾತ್ರವಲ್ಲ. ಇಂಗ್ಲೆಂಡ್ ಮಾಜಿ ಕ್ಯಾಪ್ಟನ್ ನಾಸೀರ್ ಹುಸೇನ್ ಸಹ ಇಂಥದ್ದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಟೀಮ್ ಇಂಡಿಯಾ ಪರದಾಟ ನಡೆಸಲಿದೆ

ಇಂಗ್ಲೆಂಡ್ ತವರಿನಲ್ಲಿ ಉತ್ತಮ ದಾಖಲೆ ಹೊಂದಿದೆ. ಟೀಮ್ ಇಂಡಿಯಾ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅನುಭವ ಕಳೆದುಕೊಳ್ಳುತ್ತದೆ. ಹೋಮ್ ಕಂಡೀಷನ್ಸ್ ಇಂಗ್ಲೆಂಡ್​​ಗೆ ಅನುಕೂಲಕಾರಿ. ಸ್ವಿಂಗಿಂಗ್ ಕಂಡೀಷನ್ಸ್​ನಲ್ಲಿ ಟೀಮ್ ಇಂಡಿಯಾ ಪರದಾಟ ನಡೆಸಲಿದೆ ಎಂದು ನಾನು ಭಾವಿಸುತ್ತೇನೆ. ಈ ಕಾರಣಕ್ಕೆ 3-1ರ ಅಂತರದಿಂದ ಇಂಗ್ಲೆಂಡ್ ಗೆಲ್ಲುತ್ತೆ.

ನಾಸೀರ್ ಹುಸೇನ್, ಮಾಜಿ ಕ್ರಿಕೆಟರ್

ನಾಸೀರ್​ ಹುಸೆನ್​ ಮಾತ್ರವಲ್ಲ, ಇಂಗ್ಲೆಂಡ್​ನ ಬಹುತೇಕ ಮಾಜಿ ಕ್ರಿಕೆಟರ್​​ಗಳು ಯಂಗ್ ಇಂಡಿಯಾ ಕುರಿತು ಹಗುರವಾಗೇ ಮಾತನಾಡಿದ್ದರು. ಆದ್ರೆ, ಯಂಗ್​ ಇಂಡಿಯಾ ಲೀಡ್ಸ್​ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲೇ ಇದಕ್ಕೆಲ್ಲಾ ಉತ್ತರ ನೀಡಿದೆ. ಬ್ಯಾಟ್​ನಿಂದಲೇ ಉತ್ತರಿಸಿರೋ ಟೀಮ್​ ಇಂಡಿಯಾ, ವಿಶ್ವಕ್ಕೆ ಒಂದು ಸಂದೇಶ ಸಾರಿದೆ.

publive-image

ಪವರ್​ಫುಲ್​​ ಆಟದಿಂದ ಉತ್ತರ ನೀಡಿದ ಭಾರತ

ಇಂಗ್ಲೆಂಡ್​ಗೆ ಕಾಲಿಟ್ಟಿರುವ ಟೀಮ್ ಇಂಡಿಯಾದಲ್ಲಿ ಈಗ ಹೊಸ ಶಕೆ ಆರಂಭವಾಗಿದೆ. ಶುಭ್​ಮನ್ ನಾಯಕತ್ವದ ಯಂಗ್ ಇಂಡಿಯಾ, ದಿಗ್ಗಜರ ಅಲಭ್ಯತೆಯಲ್ಲಿ ಯಾವ ರೀತಿಯ ಆಟವಾಡುತ್ತೆ ಪ್ರಶ್ನೆ ಎಲ್ಲರಲ್ಲೂ ಕಾಡಿತ್ತು. ದಿಗ್ಗಜರು ಹೇಳಿದಂತೆ ಸ್ವಿಂಗ್ ಆ್ಯಂಡ್ ಬೌನ್ಸಿ ಕಂಡೀಷನ್ಸ್​ಗೆ ಎದೆಯೊಡ್ಡಿ ಯಂಗ್ ಬ್ಯಾಟರ್ಸ್ ಆಡಬಲ್ಲರೇ ಎಂಬ ಅನುಮಾನವೂ ಇತ್ತು. ಇದೀಗ ಈ ಪ್ರಶ್ನೆಗಳಿಗೆ ಟೀಮ್ ಇಂಡಿಯಾ ಪವರ್​ಫುಲ್​​ ಆಟದ ಉತ್ತರ ನೀಡಿದೆ.

ಹಿಟ್​​ಮ್ಯಾನ್ ಕೌಂಟರ್..! ಆಂಗ್ಲರಿಗೆ ನೀಡಿದ್ರು ಎಚ್ಚರಿಕೆ.!

ರೋಹಿತ್ ಶರ್ಮಾ​, ವಿರಾಟ್​ ಕೊಹ್ಲಿ ಅಲಭ್ಯತೆಯಲ್ಲಿ ಟೀಮ್ ಇಂಡಿಯಾ ಬ್ಯಾಟಿಂಗ್ ಬಗ್ಗೆ ಅಪಸ್ವರಗಳು ಕೇಳಿ ಬಂದಿತ್ತು. ಅಷ್ಟೇ ಅಲ್ಲ, ಈ ಸರಣಿ ಯುವ ಆಟಗಾರರ ಪಾಲಿಗೆ ಕಲಿಕೆಯ ಸರಣಿ ಅಂತಾನೇ ಹೇಳಿದ್ದುಂಟು. ಆದ್ರೆ, ಇದಕ್ಕೆ ಹಿಟ್​ಮ್ಯಾನ್ ರೋಹಿತ್ ಶರ್ಮಾ ಕೌಂಟರ್​ ನೀಡಿದ್ದರು. ನಮ್​ ಹುಡುಗರು, ಕಲಿಯಲು ಬಂದಿಲ್ಲ. ಕಲಿಸಲು ಬಂದಿದ್ದಾರೆ ಎಂಬ ಎಚ್ಚರಿಕೆ ನೀಡಿದ್ದರು.

ರೋಹಿತ್ ಶರ್ಮಾರ ಹೇಳಿಕೆಗೆ ತಕ್ಕಂತೆ ನಮ್ಮ ಯಂಗ್​ ಬ್ಯಾಟರ್ಸ್​ ಬ್ಯಾಟ್​ ಬೀಸಿದರು. ಕೆ.ಎಲ್.ರಾಹುಲ್, ಯಶಸ್ವಿ ಜೈಸ್ವಾಲ್, ಶುಭ್​ಮನ್ ಗಿಲ್, ರಿಷಭ್ ಪಂತ್ ಅವರದ್ದೇ ನೆಲದಲ್ಲಿ ಇಂಗ್ಲೆಂಡ್​​ ಬೌಲರ್​ಗಳನ್ನ ಅಟ್ಟಾಡಿಸಿದರು. ಇವರ ಆಟಕ್ಕೆ ಇಂಗ್ಲೆಂಡ್ ಅಕ್ಷರಶಃ ದಂಗಾಗಿ ಹೋಯಿತು.

ಇದನ್ನೂ ಓದಿ:ನಟ ಅನಿರುದ್ಧ ಅವರಿಂದ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್​ಗೆ ಪತ್ರ

publive-image

‘ಬಝ್‌ಬಾಲ್’ ಪ್ರಶ್ನೆಗೆ ಶುಭ್​ಮನ್ ಚಾಣಾಕ್ಷ ಉತ್ತರ..!

ಬಝ್‌ಬಾಲ್.. ಇಂಗ್ಲೆಂಡ್​ ತಂಡದ ಅಗ್ರೆಸ್ಸಿವ್​ ಬ್ರ್ಯಾಂಡ್​ ಆಫ್​ ಕ್ರಿಕೆಟ್​. ಇದನ್ನ ಟೀಮ್ ಇಂಡಿಯಾ ಹೇಗೆ ನಿಭಾಯಿಸುತ್ತೆ ಎಂಬ ಪ್ರಶ್ನೆ ಕೂಡ ಸರಣಿಗೂ ಮುನ್ನ ಕೇಳಿ ಬಂದಿತ್ತು. ಕ್ಯಾಪ್ಟನ್ ಶುಭ್​ಮನ್​ ಗಿಲ್​ಗೂ ಪ್ರೆಸ್​ಮೀಟ್​ನಲ್ಲಿ ಪ್ರಶ್ನೆ ಎದುರಾಗಿತ್ತು.

ನನ್ನ ಪ್ರಕಾರ ನೀವು ಆಗಸ್ಟ್ ತನಕ ಕಾಯಬೇಕಾಗುತ್ತದೆ. ನಾವು ಯಾವ ರೀತಿಯ ಕ್ರಿಕೆಟ್ ಆಡ್ತೀವಿ ಎಂಬುವುದನ್ನು ನೋಡಲು.

ಶುಭ್​ಮನ್ ಗಿಲ್​, ಟೀಮ್ ಇಂಡಿಯಾ ನಾಯಕ

ಮಾಧ್ಯಮಗೋಷ್ಠಿಯಲ್ಲಿ ಚಾಣಾಕ್ಷ ಉತ್ತರ ನೀಡಿದ್ದ ಶುಭ್​ಮನ್ ಗಿಲ್​, ಆನ್​ಫೀಲ್ಡ್​ನಲ್ಲಿ ಆಟದಿಂದಲೇ ಇದು ಬ್ರ್ಯಾಂಡ್​ ಆಫ್​ ಕ್ರಿಕೆಟ್​ ಅನ್ನೋದನ್ನ ತೋರಿಸಿದರು. ಅಷ್ಟ ದಿಕ್ಕುಗಳಿಗೂ ಚೆಂಡಿನ ದರ್ಶನ ಮಾಡಿಸಿದ ಆಟಗಾರರು ಟೀಸರ್ ತೋರಿಸಿದ್ದಾರೆ. ಬಿಗ್ ಸ್ಟಾರ್​​​ಗಳು ಇಲ್ದಿದ್ರೂ, ಯಾವುದೇ ಕಂಡೀಷನ್ಸ್​ನಲ್ಲಿ ಆಡಬಲ್ಲ ತಾಕತ್ತು ಯಂಗ್ ಇಂಡಿಯಾಗೆ ಇದೆ ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ. ಟೀಮ್ ಇಂಡಿಯಾವನ್ನು ಹಗುರವಾಗಿ ಪರಿಗಣಿಸಿದ್ರೆ, ಸಂಕಷ್ಟ ತಪ್ಪಿದಲ್ಲ ಎಂಬ ಸಂದೇಶ ಸಾರಿ ಸರಣಿ ಗೆಲ್ಲೋ ಭರವಸೆಯನ್ನೂ ಹುಟ್ಟು ಹಾಕಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment