/newsfirstlive-kannada/media/post_attachments/wp-content/uploads/2024/03/Sarfaraz-Khan.jpg)
ಆಸ್ಟ್ರೇಲಿಯಾ ಟೂರ್ ತನಕ ಟೀಮ್ ಇಂಡಿಯಾದಲ್ಲಿ ಎಲ್ಲವೂ ಒಕೆ, ಒಕೆ ಎನ್ನಲಾಗ್ತಿತ್ತು. ಯಾವಾಗ ಟೀಮ್ ಇಂಡಿಯಾ ಆಸ್ಟ್ರೇಲಿಯಾ ತಲುಪ್ತೋ, ಆಗಿನಿಂದಲೇ ಟೀಮ್ ಇಂಡಿಯಾದಲ್ಲಿ ಕಿಡಿಯಾಗಿದ್ದ ಬಂಡಾಯದ ಹೊಗೆ ಆಡಲಾರಂಭಿಸಿತ್ತು. ಟೀಮ್ ಇಂಡಿಯಾದಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋ ಡ್ರೆಸ್ಸಿಂಗ್ ರೂಮ್ನ ಸಿಕ್ರೇಟ್ಗಳು ಒಂದೊಂದಾಗಿ ರಿವೀಲ್ ಆಗ್ತಿತ್ತು.
ಆದ್ರೆ ಡ್ರೆಸ್ಸಿಂಗ್ ರೂಮ್ ಸಿನಿಮಾದ ಲೀಕ್ ಮಾಡ್ತಿದ್ದ ಆ ಲೀಕರ್ ಯಾರು ಅನ್ನೋದು ಪ್ರಶ್ನೆಯಾಗಿ ಉಳಿದಿತ್ತು. ಡ್ರೆಸ್ಸಿಂಗ್ ರೂಮ್ನ ಸೀಕ್ರೆಟ್ಸ್ ಲೀಕ್ ಮಾಡ್ತಿದ್ದ ಲೀಕರ್ ಎಂಬ ಆರೋಪ ಮುಂಬೈಕರ್ ಸರ್ಫರಾಜ್ ಖಾನ್ ಮೇಲೆ ಬಂದಿದೆ. ಈ ವಿಚಾರವಾಗಿ ಹೆಡ್ ಕೋಚ್ ಗಂಭೀರ್, ರಿವ್ಯೂವ್ ಮೀಟಿಂಗ್ನಲ್ಲಿ ಬಾಯ್ಬಿಟ್ಟಿದ್ದಾರೆ. ಡ್ರೆಸ್ಸಿಂಗ್ ರೂಮ್ ಟಾಕ್ಸ್ ಸೋರಿಕೆ ಬಗ್ಗೆ ಬಿಸಿಸಿಐಗೆ ದೂರು ನೀಡಿರುವ ಗಂಭೀರ್, ಸರ್ಫರಾಜ್ ಖಾನ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: BCCI ಕೈ ಸೇರಿದ ರಿಪೋರ್ಟ್.. ಗಂಭೀರ್ ವಿರುದ್ಧ ಗಂಭೀರ ವಿಚಾರ, ವರದಿಯಲ್ಲಿ ಏನಿದೆ?
ಏನಿದು ಆರೋಪ..?
ಮೆಲ್ಬೋರ್ನ್ ಟೆಸ್ಟ್ ಸೋಲಿನ ಬೆನ್ನಲ್ಲೇ ಗಂಭೀರ್ ಅವರು ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಇಡೀ ತಂಡದ ಮೇಲೆ ಹರಿಹಾಯ್ದಿದ್ದರಂತೆ. ಇಷ್ಟು ದಿನ ಮುಕ್ತವಾಗಿ ಆಡಲು ಬಿಟ್ಟಿದ್ದೆ, ಇನ್ಮುಂದೆ ನಾನು ಮಾಡಿದ ಪ್ಲಾನ್ನಂತೆ ಆಡಿ, ಇಲ್ಲ ಹೊರ ನಡೀರಿ ಎಂಬ ಸಂದೇಶ ನೀಡಿದ್ರಂತೆ. ಡ್ರೆಸ್ಸಿಂಗ್ ರೂಮ್ನ ಈ ವಾಗ್ವಾದ ಸೇರಿದಂತೆ ಇನ್ನಿತರ ವಿಚಾರಗಳನ್ನ ಸರ್ಫರಾಜ್ ಲೀಕ್ ಮಾಡಿದ್ದಾರೆ ಎಂದು ಹೇಳಲಾಗ್ತಿದೆ.
ಬೆಂಚ್ ಕಾಯಿಸಿದ ಸಿಟ್ಟಿನಲ್ಲಿ ಸರ್ಫರಾಜ್, ಡ್ರೆಸ್ಸಿಂಗ್ ರೂಮ್ನ ವಿಷ್ಯಗಳನ್ನು ಆಪ್ತ ಬಳಗದಲ್ಲಿ ಹಂಚಿಕೊಂಡ್ರಾ ಎಂಬ ಅನುಮಾನಗಲೂ ಇವೆ. ಸತ್ಯ ಹೊರ ಬರಬೇಕಾದ್ರೆ ನಿಷ್ಪಕ್ಷಪಾತ ತನಿಖೆ ನಡೆಯಬೇಕಿದೆ. ಒಂದು ವೇಳೆ ಸರ್ಫರಾಜ್ ಖಾನ್ ತಪ್ಪು ಮಾಡಿದ್ರೆ, ಅವರ ಕರಿಯರ್ಗೆ ದೊಡ್ಡ ಹೊಡೆತ ಬೀಳೋದ್ರಲ್ಲಿ ಯಾವುದೇ ಅನುಮಾನ ಇಲ್ಲ.
ಇದನ್ನೂ ಓದಿ: ಸಚಿನ್ ಪುತ್ರಿ ಆಸ್ಟ್ರೇಲಿಯಾ ಜಾಲಿ ಟ್ರಿಪ್; ಸರ್ಫಿಂಗ್, ರೇಸಿಂಗ್, ಸೈಕ್ಲಿಂಗ್ ಫುಲ್ ಮಸ್ತಿ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್