/newsfirstlive-kannada/media/post_attachments/wp-content/uploads/2024/07/Rohit-sharma-4.jpg)
ಟೀಮ್ ಇಂಡಿಯಾ ವಿಶ್ವಕಪ್ ಕಾಳಗದ ಅಗ್ನಿ ಪರೀಕ್ಷೆ ಗೆದ್ದಾಗಿದೆ. ಮಹಾ ಕದನದಲ್ಲಿ ಆಟಗಾರರು ನೀಡಿದ ಪ್ರದರ್ಶನಕ್ಕೆ ಹೀರೋಗಳಾಗಿದ್ದಾರೆ. ಆದ್ರೆ, ಬಾರ್ಬಡೋಸ್ನಲ್ಲಿ ಭಾರತ ವಿಜಯ ಪತಾಕೆ ಹಾರಿಸಿದ್ರ ಹಿಂದೆ ಒಂದು ಶಕ್ತಿಯಿದೆ. ಆಟಗಾರರ ಶ್ರಮದ ಜೊತೆ ದೈವಬಲವೂ ಟೀಮ್ ಇಂಡಿಯಾ ಕೈ ಹಿಡಿದಿದೆ.
ಅದ್ಭುತ. ಟೀಮ್ ಇಂಡಿಯಾ ಆಟಗಾರರ ಆಟ ಅಕ್ಷರಶಃ ಅದ್ಭುತ. ಬೆಂಕಿಯಂತಹ ಬ್ಯಾಟಿಂಗ್. ಬಿರುಗಾಳಿಯಂತಹ ಬೌಲಿಂಗ್. ಅದ್ಭುತ ಫೀಲ್ಡಿಂಗ್. ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯನ್ಸ್ ನೀಡಿದ ಪರ್ಫಾರ್ಮೆನ್ಸ್ ನಿಜಕ್ಕೂ ಅದ್ಭುತ. ಅದರಲ್ಲೂ ಸೌತ್ ಆಫ್ರಿಕಾ ಎದುರಿನ ಫೈನಲ್ಸ್ನಲ್ಲಿ ಭಾರತ ತಂಡ ನೀಡಿದ ಪರ್ಫಾಮೆನ್ಸ್ ಅಂತೂ ಇಂದಿಗೂ ಕ್ರಿಕೆಟ್ ಪ್ರೇಮಿಗಳನ್ನ ರೋಮಾಂಚನಗೊಳಿಸುತ್ತೆ. ಟೀಮ್ ಇಂಡಿಯಾ ನೀಡಿದ ಪ್ರದರ್ಶನ ಆ ರೇಂಜ್ಗೆ ಇತ್ತು.
ಪ್ರತಿ ಆಟಗಾರನಿಂದಲೂ ಬಂದಿತ್ತು ಸ್ಪೆಷಲ್ ಪರ್ಫಾಮೆನ್ಸ್..!
ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಅಜೇಯವಾಗಿ ಗೆದ್ದಿದೆ. ಇಲ್ಲಿ ಪ್ರತಿಯೊಬ್ಬ ಆಟಗಾರನ ಶ್ರಮವಿದೆ. ಒಗ್ಗಟ್ಟಿನ ಮಂತ್ರದ ಜೊತೆ ಗೆಲ್ಲಬೇಕೆಂಬ ಹಠ, ಛಲವಿದೆ. ಇದರ ಜೊತೆಗೆ ದೈವಬಲವೂ ತಂಡಕ್ಕಿತ್ತು. ಇದನ್ನ ಸ್ವತಃ ಟೀಮ್ ಇಂಡಿಯಾ ಆಟಗಾರರೇ ಒಪ್ಪಿಕೊಂಡಿದ್ದಾರೆ. ಟಿ20 ವಿಶ್ವಕಪ್ ಗೆಲುವಿನ ಶ್ರೇಯಸ್ಸಿನ ಕ್ರೆಡಿಟ್ನ ದೇವರಿಗೆ ನೀಡಿದ್ದಾರೆ. ವಿಕೆಟ್ ಕೀಪರ್ ರಿಷಭ್ ಪಂತ್ ದೇವರ ಪ್ಲಾನ್ ಎಂದ್ರೆ. ವೇಗಿ ಮೊಹಮ್ಮದ್ ಸಿರಾಜ್ ಅಲ್ಲಾ ಕಿ ದುವಾ ಎಂದಿದ್ದಾರೆ.
ಇದನ್ನೂ ಓದಿ: ಅರುಣ್ ಕಟಾರೆಯಿಂದ ಸ್ಯಾಂಡಲ್ವುಡ್ನ ಈ ಟೆಕ್ನಿಷನ್ಗೆ ಸಂಕಷ್ಟ! ಡಮ್ಮಿ ವೆಪನ್ ಕೊಟ್ಟಿದ್ದೇ ಈತನಂತೆ!
ಒಂದು ಮಿಸ್ಸಾಯ್ತು.. ಎರಡನೇ ಟ್ರೋಫಿ ಒಲಿಯಿತು..!
2023ರ ವಿಶ್ವಕಪ್ ವೇಳೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದ ರೋಹಿತ್, ಉಪಾಂತ್ಯದಲ್ಲಿ ಎಡವಿದ್ದರು. ಅದೇ ಪರ್ಫಾಮೆನ್ಸ್ ಅನ್ನ ಟಿ20 ವಿಶ್ವಕಪ್ನಲ್ಲೂ ಮುಂದುವರಿಸಿದ ಹಿಟ್ಮ್ಯಾನ್, ಇದೀಗ ಟೀಮ್ ಇಂಡಿಯಾವನ್ನ ಟಿ20 ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ತಿಮ್ಮಪ್ಪನ ಆಶೀರ್ವಾದವೇ ಇದಕ್ಕೆ ಕಾರಣ ಅನ್ನೋದು ಹಿಟ್ಮ್ಯಾನ್ ನಂಬಿಕೆ.
ಅಕ್ಷರ್-ಪಂತ್ರಿಂದಲೂ ತಿಮ್ಮಪ್ಪನ ದರ್ಶನ
ರೋಹಿತ್ ಶರ್ಮಾನೇ ಅಲ್ಲ.! ಟಿ20 ವಿಶ್ವಕಪ್ನಲ್ಲಿ ಅದ್ಬುತ ಪ್ರದರ್ಶನ ನೀಡಿದ್ದ ಅಕ್ಷರ್ ಪಟೇಲ್, ರಿಷಭ್ ಪಂತ್ ಜೊತೆಯಾಗಿಯೇ ತಿಮ್ಮಪ್ಪನ ದರ್ಶನ ಪಡೆದಿದ್ರು. ವಿಶೇಷ ಪೂಜೆ ಸಲ್ಲಿಸಿ ವರ ಬೇಡಿದ್ರು. ಇವ್ರೇ ಅಲ್ಲ. ಟೀಮ್ ಇಂಡಿಯಾ ವಿಶ್ವಕಪ್ ಗೆಲ್ಲುತ್ತೆ ಎಂದು ಭವಿಷ್ಯ ನುಡಿದಿದ್ದ ಬಿಸಿಸಿಐ ಕಾರ್ಯದರ್ಶಿ ಜಯ ಶಾ ಕೂಡ, ಟಿ20 ವಿಶ್ವಕಪ್ಗೂ ಮುನ್ನ ತಿಮ್ಮಪ್ಪನ ದರ್ಶನ ಪಡೆದಿದ್ರು.
ಇದನ್ನೂ ಓದಿ: ವಿಶ್ವಕಪ್ ಹೊತ್ತು ಭಾರತಕ್ಕೆ ಬಂದ ರೋಹಿತ್ ಪಡೆ.. ತೆರೆದ ಬಸ್ನಲ್ಲಿ ಮೆರವಣಿಗೆ, ಟ್ರೋಫಿ ಜೊತೆಗೆ ಸಂಭ್ರಮಾಚರಣೆ
ಪಾಂಡ್ಯ ಪೂಜೆಗೆ ತಕ್ಕ ಫಲ ಟಿ20 ವಿಶ್ವಕಪ್ನಲ್ಲಿ ಸಿಕ್ತು..!
ಐಪಿಎಲ್ನಲ್ಲಿ ಸತತ ವೈಫಲ್ಯ ಅನುಭವಿಸಿದ್ದ ಹಾರ್ದಿಕ್ ಪಾಂಡ್ಯ. ಟೂರ್ನಿ ಮಧ್ಯೆ ಗುಜರಾತ್ನ ಸೋಮನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ರು. ಶಿವ ಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿದ್ರು. ಸಂಕಷ್ಟಗಳನ್ನ ಪರಿಹರಿಸುವಂತೆ ಕೋರಿಕೊಂಡಿದ್ರು. ದೇವರ ಕೃಪೆಯೋ ಏನೋ ಐಪಿಎಲ್ನಲ್ಲಿ ಫೇಲಾದ ಪಾಂಡ್ಯ ವಿಶ್ವಕಪ್ನಲ್ಲಿ ಮಿಂಚಿದ್ರು. ವಿಶ್ವಕಪ್ನಲ್ಲಿ ಆಲ್ರೌಂಡ್ ಪ್ರದರ್ಶನ ನೀಡಿದ ಪಾಂಡ್ಯ, ಟಿ20 ವಿಶ್ವಕಪ್ನಲ್ಲಿ ಮ್ಯಾಚ್ ವಿನ್ನರ್ ಆಗಿ ಮೆರೆದಾಡಿದರು.
ಆಲ್ರೌಂಡರ್ ಜಡೇಜಾ ದಂಪತಿ ಕೂಡ ಆಯೋಧ್ಯೆಗೆ ಭೇಟಿ ನೀಡಿ ಬಾಲ ರಾಮನ ಆಶೀರ್ವಾದ ಪಡೆದಿದ್ರು. ಇನ್ನು ಚೈನಾಮನ್ ಕುಲ್ದೀಪ್ ಯಾದವ್, ವೃಂದಾವನದ ಬಂಕೆ ಬಿಹಾರಿ ಹಾಗೂ ವಿಶಾಖಪಟ್ಣಣಂನ ಸಚ್ಚಿದಾನಂದ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ರು. ಕುಲ್ದೀಪ್, ವಿಶ್ವಕಪ್ನಲ್ಲಿ ಭರ್ಜರಿ ಕಮಾಲ್ ಮಾಡಿದ್ರು ಅನ್ನೋದನ್ನ ಮರೆಯುವಂತಿಲ್ಲ.
ಇದನ್ನೂ ಓದಿ: ಕನ್ನಡಿಗರಿಗೆ ಹೆಮ್ಮೆಯ ಸಂಗತಿ! ರಾಷ್ಟ್ರೀಯ ವೈದ್ಯಕೀಯ ಆಯೋಗದ ಮುಖ್ಯಸ್ಥರಾಗಿ ಡಾ.B.N ಗಂಗಾಧರ್ ನೇಮಕ
ವಿಶ್ವಕಪ್ಗೂ ಮುನ್ನ ದೇವರ ದರ್ಶನ ಪಡೆದ ಆಟಗಾರರು ಇದೀಗ ಟಿ20 ವಿಶ್ವಕಪ್ ಗೆದ್ದ ಬಳಿಕ ತಮ್ಮ ಪ್ರದರ್ಶನದ ಬಗ್ಗೆ ಹೇಳಿಕೊಂಡಿದ್ದಕ್ಕಿಂತ ದೇವರ ಅನುಗ್ರಹ ಅಂತಾನೇ ಪುನರುಚ್ಚಿಸುತ್ತಿದ್ದಾರೆ. ದೇವರ ಆಶೀರ್ವಾದವೇ ನಮ್ಮ ಪರ್ಫಾಮೆನ್ಸ್ ಹಿಂದಿನ ಶಕ್ತಿ ಅಂತಾ ವಿರಾಟ್ ಕೊಹ್ಲಿ ಹೇಳ್ತಿದ್ದಾರೆ. ಇದನ್ನೇ ಈಗ ಕಪ್ ಗೆಲುವಿನ ಹಿಂದಿದ್ದ ದೈವಬಲ ಅಂತಾ ವ್ಯಾಖ್ಯಾನಿಸಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ