/newsfirstlive-kannada/media/post_attachments/wp-content/uploads/2025/02/ROHIT_TOSS_BABAR.jpg)
ಐಸಿಸಿ ಮೆಗಾ ಟೂರ್ನಮೆಂಟ್​ನಲ್ಲಿ ಟೀಮ್​ ಇಂಡಿಯಾ, ಪಾಕಿಸ್ತಾನ ಮತ್ತೊಮ್ಮೆ ಮುಖಾಮುಖಿ ಆಗುತ್ತಿವೆ. ಇಂದು ಅಂದರೆ ಫೆಬ್ರವರಿ 23ನೇ ತಾರೀಕು ನಡೆಯುತ್ತಿರೋ 2025ರ ಚಾಂಪಿಯನ್ಸ್​​ ಟ್ರೋಫಿ ಟೂರ್ನಿಯ ಮಹತ್ವದ ಪಂದ್ಯದಲ್ಲಿ ಎರಡು ತಂಡಗಳು ದುಬೈನಲ್ಲಿ ಪರಸ್ಪರ ಸೆಣಸಾಡುತ್ತಿವೆ.
ಟಾಸ್ ಗೆದ್ದ ಪಾಕಿಸ್ತಾನ ನಾಯಕ ರಿಜ್ವಾನ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಕ್ಯಾಪ್ಟನ್​ ರೋಹಿತ್​ ಶರ್ಮಾ ನೇತೃತ್ವದ ಟೀಮ್​ ಇಂಡಿಯಾ ಬೌಲಿಂಗ್ ಮಾಡಲಿದೆ. ಟೀಂ ಇಂಡಿಯಾದ ಎಲ್ಲಾ ಆಟಗಾರರು ಭರ್ಜರಿ ಫಾರ್ಮ್‌ನಲ್ಲಿದ್ದು, ಗೆಲ್ಲೋ ನಿರೀಕ್ಷೆಯಲ್ಲಿದ್ದಾರೆ.
/newsfirstlive-kannada/media/post_attachments/wp-content/uploads/2025/02/ROHIT_TOSS.jpg)
ಈಗಾಗಲೇ ಟೀಮ್​ ಇಂಡಿಯಾ ಬಾಂಗ್ಲಾದೇಶ ವಿರುದ್ಧದ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಇಂದು ಪಾಕ್​ ತಂಡವನ್ನು ಸೋಲಿಸಿ ಸೆಮಿಫೈನಲ್‌ಗೆ ಪ್ರವೇಶಿಸುವ ಉದ್ದೇಶ ಹೊಂದಿದೆ. ಇನ್ನೊಂದೆಡೆ ನ್ಯೂಜಿಲೆಂಡ್​​ ವಿರುದ್ಧ ಸೋತಿರೋ ಪಾಕಿಸ್ತಾನ ತಂಡ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಭಾರತದ ವಿರುದ್ಧ ಗೆಲ್ಲುವ ಮೂಲಕ ಟೂರ್ನಿಯಲ್ಲಿ ಉಳಿಯಲು ಪ್ರಯತ್ನಿಸಬೇಕಿದೆ.
ಪಾಕ್​ ವಿರುದ್ಧದ ಪಂದ್ಯಕ್ಕೆ ಟೀಮ್​ ಇಂಡಿಯಾದಲ್ಲಿ ಭಾರೀ ಬದಲಾವಣೆ ಆಗಿದೆ. ಮೂವರು ಸ್ಟಾರ್​ ಆಲ್​ರೌಂಡರ್​ಗಳಾದ ಹಾರ್ದಿಕ್​ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್​​ ಪಟೇಲ್​​ಗೂ ಅವಕಾಶ ನೀಡಲಾಗಿದೆ. ಟೀಮ್​ ಇಂಡಿಯಾ ಪ್ಲೇಯಿಂಗ್​ನಲ್ಲಿ ಎಲ್ಲರಿಗೂ ಬ್ಯಾಟ್​ ಬೀಸಬಲ್ಲ ಸಾಮರ್ಥ್ಯ ಇದೆ.
ಟೀಮ್​ ಇಂಡಿಯಾ ಪ್ಲೇಯಿಂಗ್​ ಎಲೆವೆನ್​ ಹೀಗಿದೆ!
ರೋಹಿತ್ ಶರ್ಮಾ (ಕ್ಯಾಪ್ಟನ್​), ಶುಭ್ಮನ್​​ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಶಮಿ.
ಪಾಕಿಸ್ತಾನ ತಂಡ ಹೀಗಿದೆ!
ಇಮಾಮ್-ಉಲ್-ಹಕ್, ಬಾಬರ್ ಆಜಂ, ಸೌದ್ ಶಕೀಲ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್/ನಾಯಕ), ಸಲ್ಮಾನ್ ಆಘಾ, ತಯ್ಯಬ್ ತಾಹಿರ್, ಖುಶ್ದಿಲ್ ಶಾ, ಶಾಹೀನ್ ಅಫ್ರಿದಿ, ನಸೀಮ್ ಶಾ, ಹ್ಯಾರಿಸ ರೌಫ್, ಅಬ್ರಾರ್ ಅಹ್ಮದ್.
ಇದನ್ನೂ ಓದಿ:INDvsPAK: ಸವಾಲುಗಳನ್ನ ಮೆಟ್ಟಿ ನಿಂತ್ರೆ ಮಾತ್ರ ಭಾರತಕ್ಕೆ ಅವಕಾಶ; ಪಾಕ್‌ಗೆ ಗೆಲ್ಲೋ ಅಡ್ವಾಂಟೇಜ್ ಜಾಸ್ತಿ!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us