ಕೊನೆಯ ಟಿ20; ಬಲಿಷ್ಠ ಟೀಮ್​ ಇಂಡಿಯಾ ಕಣಕ್ಕೆ; ಸ್ಟಾರ್​ ಆಟಗಾರರಿಗೆ ಕೊಕ್​​

author-image
Ganesh Nachikethu
Updated On
ದಕ್ಷಿಣ ಆಫ್ರಿಕಾ ವಿರುದ್ಧ 2ನೇ ಟಿ20 ಕದನ; ಸ್ಟಾರ್​ ಬ್ಯಾಟ್ಸ್​​ಮನ್​​ಗೆ ಕೊಕ್..!
Advertisment
  • ಟೀಮ್​​ ಇಂಡಿಯಾ, ಇಂಗ್ಲೆಂಡ್​​ ನಡುವಿನ ಕೊನೆಯ ಟಿ20
  • ಟಾಸ್​ ಗೆದ್ದ ಇಂಗ್ಲೆಂಡ್​​ ಬೌಲಿಂಗ್​​, ಭಾರತ ತಂಡ ಬ್ಯಾಟಿಂಗ್​!
  • ಇಂಗ್ಲೆಂಡ್​ ತಂಡದ ವಿರುದ್ಧ ಬಲಿಷ್ಠ ಟೀಮ್​ ಇಂಡಿಯಾ ಕಣಕ್ಕೆ

ಟೀಮ್​​ ಇಂಡಿಯಾ, ಇಂಗ್ಲೆಂಡ್​​ ನಡುವಿನ 5 ಪಂದ್ಯಗಳ ಟಿ20 ಸರಣಿ ರೋಚಕ ಘಟ್ಟ ತಲುಪಿದೆ. ಇಂದು ಮುಂಬೈನ ವಾಂಖೆಡೆ ಇಂಟರ್​ ನ್ಯಾಷನಲ್​​ ಸ್ಟೇಡಿಯಮ್​ನಲ್ಲಿ ನಡೆಯಲಿರೋ ಕೊನೆಯ ಪಂದ್ಯದಲ್ಲಿ ಟಾಸ್​ ಗೆದ್ದಿರೋ ಇಂಗ್ಲೆಂಡ್​ ತಂಡ ಬೌಲಿಂಗ್​ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಟೀಮ್​ ಇಂಡಿಯಾ ಫಸ್ಟ್​ ಬ್ಯಾಟಿಂಗ್​ ಮಾಡಲಿದೆ.

ಭಾರತ, ಇಂಗ್ಲೆಂಡ್​​ ನಡುವಿನ ಕೊನೆಯ ಟಿ20 ಪಂದ್ಯ ಭಾರೀ ಕುತೂಹಲ ಹುಟ್ಟು ಹಾಕಿದೆ. ಈಗಾಗಲೇ ಟೀಮ್​ ಇಂಡಿಯಾ ಇಂಗ್ಲೆಂಡ್​ ವಿರುದ್ಧ ಟಿ20 ಸರಣಿ ಗೆದ್ದಿದೆ. 3-1 ಅಂತರದಲ್ಲಿ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಹೀಗಾಗಿ ಟೀಮ್​ ಇಂಡಿಯಾಗೆ ಇದು ಔಪಚಾರಿಕ ಪಂದ್ಯ ಆಗಿದ್ದು, ಇಂಗ್ಲೆಂಡ್​​ ಮಾತ್ರ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಇಂಗ್ಲೆಂಡ್​ ತಂಡಕ್ಕೆ ಇದು ಪ್ರತಿಷ್ಠೆ ಕಣವಾಗಿದೆ.

ಟೀಮ್​ ಇಂಡಿಯಾದ ಸ್ಟಾರ್​ ವೇಗಿ ಮೊಹಮ್ಮದ್​ ಶಮಿ. ಇವರು 3ನೇ ಟಿ20 ಪಂದ್ಯದಲ್ಲಿ ಟೀಮ್​ ಇಂಡಿಯಾ ಪರ ಕಣಕ್ಕಿಳಿದಿದ್ರು. ಒಂದೇ ಒಂದು ವಿಕೆಟ್​ ಪಡೆಯಲು ಸಾಧ್ಯವಾಗದ ಕಾರಣ ಇವರನ್ನು 4ನೇ ಟಿ20ಯಿಂದ ಬೆಂಚ್​​ ಕಾಯಿಸಲಾಗಿತ್ತು. ಈಗ ಕೊನೆಯ ಪಂದ್ಯಕ್ಕೆ ಟೀಮ್​ ಇಂಡಿಯಾಗೆ ಎಂಟ್ರಿ ನೀಡಿದ್ದಾರೆ. ಹಾಗಾಗಿ ಅರ್ಷದೀಪ್​ ಅವರನ್ನು ಬೆಂಚ್​ ಕಾಯಿಸಲಾಗಿದೆ. ಇದು ಬಿಟ್ಟು ಟೀಮ್​ ಇಂಡಿಯಾದಲ್ಲಿ ಬೇರೆ ಯಾವ ಚೇಂಜಸ್​ ಕೂಡ ಇಲ್ಲ.

ಕೊನೆಯ ಟಿ20 ಪಂದ್ಯಕ್ಕೆ ಬಲಿಷ್ಠ ಟೀಮ್​ ಇಂಡಿಯಾ ಹೀಗಿದೆ!

ಸಂಜು ಸ್ಯಾಮ್ಸನ್​​ (ವಿಕೆಟ್​ ಕೀಪರ್​), ಅಭಿಷೇಕ್​ ಶರ್ಮಾ, ತಿಲಕ್​ ವರ್ಮಾ, ಸೂರ್ಯಕುಮಾರ್​ ಯಾದವ್​​ (ಕ್ಯಾಪ್ಟನ್​), ರಿಂಕು ಸಿಂಗ್​, ಶಿವಂ ದುಬೆ, ಹಾರ್ದಿಕ್​ ಪಾಂಡ್ಯ, ಅಕ್ಷರ್​ ಪಟೇಲ್​​, ರವಿ ಬಿಷ್ಣೋಯ್​​, ಮೊಹಮ್ಮದ್​ ಶಮಿ, ವರುಣ್​ ಚಕ್ರವರ್ತಿ.

ಇದನ್ನೂ ಓದಿ:ಕೊನೆಯ ಟಿ20; ಟೀಮ್​ ಇಂಡಿಯಾಗೆ ಸ್ಟಾರ್​ ಪ್ಲೇಯರ್​ ಎಂಟ್ರಿ; ಸ್ಫೋಟಕ ಸುಳಿವು ಕೊಟ್ಟ ಕೋಚ್​

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment