/newsfirstlive-kannada/media/post_attachments/wp-content/uploads/2025/07/KL_RAHUL_HANUMAN.jpg)
ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಸೋತ ಟೀಮ್ ಇಂಡಿಯಾ, ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ನಲ್ಲಿ ಗೆಲುವಿಗೆ ಪಣತೊಟ್ಟಿದೆ. ಮ್ಯಾಂಚೆಸ್ಟರ್ ಮೈದಾನದ ಇತಿಹಾಸವನ್ನ ಬದಲಿಸೋಕೆ ಹೊರಟಿರೋ ಟೀಮ್ ಇಂಡಿಯಾ ಹನುಮನ ಮೊರೆ ಹೋಗಿದೆ. ಆಂಜನೇಯನ ಆರಾಧಿಸಿ ಅಭ್ಯಾಸದ ಅಖಾಡಕ್ಕೆ ಧುಮುಕಿದೆ. ಏನಿದು ಟೀಮ್ ಇಂಡಿಯಾದ ಹೊಸ ನಡೆ?.
ಇಂಗ್ಲೆಂಡ್ ವಿರುದ್ಧದ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ವಿರೋಚಿತ ಸೋಲುಂಡ ಟೀಮ್ ಇಂಡಿಯಾ ಇದೀಗ ಮುಂದಿನ ಟೆಸ್ಟ್ ಪಂದ್ಯಕ್ಕೆ ಸಿದ್ಧತೆ ಆರಂಭಿಸಿದೆ. ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನೆಕ್ಸ್ಟ್ ಟೆಸ್ಟ್ ಫೈಟ್ ನಡೆಯಲಿದ್ದು ಗೆಲುವಿನ ಹಳಿಗೆ ಮರಳಲು ಸಜ್ಜಾಗಿದೆ. ಲಂಡನ್ನಿಂದ ಬೆಕೆನ್ಹ್ಯಾಮ್ಗೆ ಪ್ರಯಾಣಿಸಿರೋ ಟೀಮ್ ಇಂಡಿಯಾ ಕೆಂಟ್ನಲ್ಲಿ ವಿಶೇಷ ಅಭ್ಯಾಸ ಆರಂಭಿಸಿದೆ.
ಡ್ರೆಸ್ಸಿಂಗ್ರೂಮ್ನಲ್ಲಿ ಮೊಳಗಿದ ಹನುಮಾನ್ ಚಾಲೀಸಾ.!
ಲಾರ್ಡ್ಸ್ನಲ್ಲಿ ನಡೆದ 3ನೇ ಟೆಸ್ಟ್ ಪಂದ್ಯವನ್ನ ಸೋತಿರುವ ಟೀಮ್ ಇಂಡಿಯಾ ಪಾಲಿಗೆ 4ನೇ ಟೆಸ್ಟ್ ಪಂದ್ಯ ಡು ಆರ್ ಡೈ ಆಗಿದೆ. ಸರಣಿ ಜೀವಂತ ಇರಬೇಕು ಎಂದರೆ ಗೆಲುವು ಅನಿವಾರ್ಯವಾಗಿದೆ. ಸ್ವಲ್ಪ ಯಾಮಾರಿದ್ರೂ ಸರಣಿ ಕೈ ಜಾರಲಿದೆ. ಹೀಗಾಗಿ ಶತಾಯಗತಾಯ ಮ್ಯಾಂಚೆಸ್ಟರ್ನಲ್ಲಿ ಗೆಲುವಿಗೆ ಟೀಮ್ ಇಂಡಿಯಾ ಪಣತೊಟ್ಟಿದ್ದು, ದೇವರ ಮೋರೆ ಹೋಗಿದೆ.
ಕೆಂಟ್ನಲ್ಲಿ ಟೀಮ್ ಇಂಡಿಯಾ ಅಭ್ಯಾಸಕ್ಕೆ ಬಂದ ಬೆನ್ನಲ್ಲೇ ಡ್ರೆಸ್ಸಿಂಗ್ ರೂಮ್ನಲ್ಲಿ ಕೋಚ್ ಗೌತಮ್ ಗಂಭೀರ್ ನೇತೃತ್ವದಲ್ಲಿ ಮೀಟಿಂಗ್ ನಡೆದಿದೆ. ಆ ಬಳಿಕ ಅಭ್ಯಾಸದ ಕಣಕ್ಕೆ ಇಳಿಯೋಕೂ ಎಲ್ಲಾ ಆಟಗಾರರು ಹನುಮಾನ ಚಾಲೀಸಾವನ್ನ ಕೇಳಿದ್ದಾರೆ. ಆಂಜನೇಯನನ್ನ ಆರಾಧಿಸಿದ ಬಳಿಕ ಆಟಗಾರರು ಅಭ್ಯಾಸದ ಕಣಕ್ಕಿಳಿದಿದ್ದಾರೆ.
ಲಾರ್ಡ್ಸ್ನಲ್ಲಿ ಟೀಮ್ ಇಂಡಿಯಾಗೆ ಕೈ ಕೊಟ್ಟಿತ್ತು ಲಕ್.!
ಲಾರ್ಡ್ಸ್ ಟೆಸ್ಟ್ನಲ್ಲಿ ಟೀಮ್ ಇಂಡಿಯಾಗೆ ಗೆಲ್ಲೋ ಅವಕಾಶವಿತ್ತು. ಅಂತಿಮ ದಿನದಾಟದ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡ್ರೂ, ಜಡೇಜಾ ಹೋರಾಟ, ಬೂಮ್ರಾ, ಸಿರಾಜ್ ತಾಳ್ಮೆಯ ಆಟ ಗೆಲುವಿನ ಭರವಸೆಯನ್ನ ಮೂಡಿಸಿತ್ತು. ಆದ್ರೆ, ಅಂತಿಮ ಹಂತದಲ್ಲಿ ಲಕ್ ಕೈ ಕೊಟ್ಟಿತ್ತು. ಬ್ಯಾಟ್ ಬಡಿದ ಬಾಲ್ ಉರುಳಿಕೊಂಡು ಹೋಗಿ ವಿಕೆಟ್ ಬಡಿದು ಅನ್ಲಕ್ಕಿ ರೀತಿಯಲ್ಲಿ ಭಾರತ ತಂಡ ಸೋಲ್ತು. ಇದೊಂದೆ ಅಲ್ಲ.. ಹಲವು ಡಿಆರ್ಎಸ್ಗಳು ಅಂಪೈರ್ಸ್ ಕಾಲ್ ಆಗಿ ಸ್ಟಿಕ್ ಆದ್ವು. ಬೈಸ್, ಲೆಗ್ಬೈಸ್ ರೂಪದಲ್ಲೇ ಬರೋಬ್ಬರಿ 55 ರನ್ಗಳು ಲೀಕ್ ಆದ್ವು. ಹೀಗೆ ಪಂದ್ಯದ ಹಲವು ಹಂತಗಳಲ್ಲಿ ಬ್ಯಾಡ್ ಲಕ್ ಕಾಡಿತು. ಆಂಜನೇಯನ ಆರಾಧನೆಗೆ ಇದೂ ಒಂದು ಕಾರಣ.
ಮ್ಯಾಂಚೆಸ್ಟರ್ನಲ್ಲಿ ಗೆದ್ದೇ ಇಲ್ಲ ಒಂದೂ ಪಂದ್ಯ.!
ನೆಕ್ಸ್ಟ್ ಟೆಸ್ಟ್ ಪಂದ್ಯ ನಡೆಯೋ ಮ್ಯಾಂಚೆಸ್ಟರ್ನ ಒಲ್ಡ್ಟ್ರಾಫರ್ಡ್ ಮೈದಾನದಲ್ಲಿ ಟೀಮ್ ಇಂಡಿಯಾ ಈವರೆಗೆ ಗೆಲುವು ಅನ್ನೋದನ್ನೇ ಕಂಡಿಲ್ಲ. ಈವರೆಗೆ ಒಲ್ಡ್ಟ್ರಾಫರ್ಡ್ನಲ್ಲಿ 9 ಪಂದ್ಯಗಳನ್ನ ಭಾರತ ತಂಡ ಆಡಿದೆ. ಈ ಪೈಕಿ 4 ಪಂದ್ಯಗಳನ್ನ ಸೋತಿದ್ರೆ, 5 ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿವೆ. ಇತಿಹಾಸದಲ್ಲೇ ಒಂದೂ ಪಂದ್ಯ ಗೆಲ್ಲದ ಅಂಗಳದಲ್ಲಿ ಜಯ ಸಾಧಿಸಲೇ ಬೇಕಾದ ಚಾಲೆಂಜ್ ಇದೀಗ ಟೀಮ್ ಇಂಡಿಯಾ ಮುಂದಿದೆ.
ಇದನ್ನೂ ಓದಿ:ಸಾರಾ, ಸನಾ ಏನ್ ಮಾಡ್ತಿದ್ದಾರೆ.. ಸಚಿನ್, ಗಂಗೂಲಿ ಪುತ್ರಿಯರ ಲೈಫ್ಸ್ಟೈಲ್ ಹೇಗೆಲ್ಲಾ ಇದೆ?
ಕೊಹ್ಲಿ, ಹಾರ್ದಿಕ್ ಹಾದಿಯಲ್ಲಿ ಯಂಗ್ ಇಂಡಿಯಾ.!
ಟೀಮ್ ಇಂಡಿಯಾದ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಹನುಮನ ಪರಮಭಕ್ತರು. ಪಾಸಿಟಿವ್ ಎನರ್ಜಿಗಾಗಿ ಹನುಮಾನ್ ಚಾಲೀಸಾವನ್ನ ಹೆಚ್ಚು ಹೆಚ್ಚು ಕೇಳ್ತಾ ಇದ್ರು. ಇದೀಗ ಇದೇ ಹಾದಿಯಲ್ಲಿ ಯುವ ಆಟಗಾರರನ್ನೇ ಒಳಗೊಂಡ ಟೀಮ್ ಇಂಡಿಯಾ ಕೂಡ ಸಾಗ್ತಿದೆ.
ಆಂಜನೇಯನ ಆರಾಧನೆ ಮಾಡೋ ಮೂಲಕ 4ನೇ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾ ಸಿದ್ಧತೆ ಆರಂಭಿಸಿದೆ. ಮ್ಯಾಂಚೆಸ್ಟರ್ನ ಒಲ್ಡ್ ಟ್ರಾಫರ್ಡ್ ಮೈದಾನದ ಇತಿಹಾಸ ಬದಲಿಸೋಕೆ ಪಣತೊಟ್ಟಿದೆ. ಸರಣಿ ಜೀವಂತವಾಗಿರಿಸಿಕೊಳ್ಳೋಕೆ ಸಜ್ಜಾಗ್ತಿರೋ ತಂಡಕ್ಕೆ ಹನುಮನ ಬಲ ಸಿಗುತ್ತಾ.? ಕಾದು ನೋಡೋಣ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ