ಕನ್ನಡಿಗನಿಗಾಗಿ ತನ್ನ ಕ್ರಿಕೆಟ್​ ಕರಿಯರ್ ಅನ್ನೇ​ ತ್ಯಾಗ ಮಾಡಿದ R ಅಶ್ವಿನ್​​; ಕೊಟ್ಟ ಮಾತು ಉಳಿಸಿಕೊಂಡ್ರು!

author-image
Ganesh Nachikethu
Updated On
ಕನ್ನಡಿಗನಿಗಾಗಿ ತನ್ನ ಕ್ರಿಕೆಟ್​ ಕರಿಯರ್ ಅನ್ನೇ​ ತ್ಯಾಗ ಮಾಡಿದ R ಅಶ್ವಿನ್​​; ಕೊಟ್ಟ ಮಾತು ಉಳಿಸಿಕೊಂಡ್ರು!
Advertisment
  • ಟೀಮ್​ ಇಂಡಿಯಾದ ಅನುಭವಿ ಆಫ್ ಸ್ಪಿನ್ನರ್​​​​​​​​​ ಆರ್. ಅಶ್ವಿನ್
  • ಆರ್. ಅಶ್ವಿನ್ ದಿಢೀರ್ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ರು
  • ಕನ್ನಡಿಗನಿಗಾಗಿ ಕ್ರಿಕೆಟ್​ ಕರಿಯರ್​ ತ್ಯಾಗ ಮಾಡಿದ ಸ್ಟಾರ್​ ಪ್ಲೇಯರ್

ಟೀಮ್​ ಇಂಡಿಯಾದ ಸ್ಟಾರ್​​ ಕ್ರಿಕೆಟರ್​​ ರವಿಚಂದ್ರನ್ ಅಶ್ವಿನ್. ಇವರು ಕ್ರಿಕೆಟ್​ನ ರಿಯಲ್ ಜಂಟಲ್​ಮೆನ್. ತನ್ನ 14 ವರ್ಷಗಳ ಕ್ರಿಕೆಟ್ ಕರಿಯರ್​ನಲ್ಲಿ ಅಶ್ವಿನ್, ಕಾಂಟ್ರವರ್ಸಿಗಳಿಂದ ದೂರ ಉಳಿದ ಆಟಗಾರ. ತಾನಾಯ್ತು, ತನ್ನ ಕೆಲಸ ಆಯ್ತು ಅಂತ ಅಶ್ವಿನ್ ಇರ್ತಾರೆ. ಅದಕ್ಕೆ ಅಶ್ವಿನ್​ಗೆ ತಂಡದ ಸಹ ಆಟಗಾರರಷ್ಟೇ ಅಲ್ಲ! ಎದುರಾಳಿಗಳೂ ಮನಸಾರೆ ಗೌರವ​ ಕೊಡ್ತಾರೆ. ಈ ಜಂಟಲ್​ಮೆನ್ ಈಗ ಇಡೀ ಭಾರತೀಯ ಕ್ರಿಕೆಟ್​, ಹೆಮ್ಮ ಪಡುವಂತಹ ಕೆಲಸ ಮಾಡಿದ್ದಾರೆ.

ಅಶ್ವಿನ್​​​​​​ಗೆ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಆದ್ರೆ ಅಶ್ವಿನ್,​​​​​​ ಒಬ್ಬ ಲೆಜೆಂಡರಿ ಕ್ರಿಕೆಟರ್​ಗೇ ಅಭಿಮಾನಿ ಆಗಿದ್ರು. ನಿಮಗೆ ಈ ವಿಚಾರ ಗೊತ್ತಿರಬಹುದು. ಅಶ್ವಿನ್, ಟೀಮ್ ಇಂಡಿಯಾದ ದ ಗ್ರೇಟ್ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆಯ ಅಪ್ಪಟ ಅಭಿಮಾನಿ. ಸದ್ಯ ಭಾರತೀಯ ಟೆಸ್ಟ್ ಕ್ರಿಕೆಟ್​​ನಲ್ಲಿ ಅನಿಲ್ ಕುಂಬ್ಳೆ 619 ವಿಕೆಟ್ ಪಡೆದು, ನಂಬರ್ ವನ್ ಸ್ಥಾನದಲ್ಲಿದ್ದಾರೆ. ಆದ್ರೆ ಆ ದಾಖಲೆಯನ್ನ, ಇನ್ನು ಯಾವ ಭಾರತೀಯ ಬೌಲರ್ ಸಹ​ ಮುರಿಯಲ್ಲ ಬಿಡಿ.

ಈ ಹಿಂದೆ ಅನಿಲ್ ಕುಂಬ್ಳೆ ದಾಖಲೆಯನ್ನ ಮುರಿಯೋ ಒಬ್ಬ ಬೌಲರ್​ ಅಂದ್ರೆ, ಅದು ಆರ್.ಅಶ್ವಿನ್ ಅಂತ ಹೇಳಲಾಗ್ತಿತ್ತು. ಕುಂಬ್ಳೆ ಮತ್ತು ಅಶ್ವಿನ್ ನಡುವೆ ಇದ್ದ ಗ್ಯಾಪ್, ಜಸ್ಟ್ 82 ವಿಕೆಟ್ ಮಾತ್ರ. ಆಶ್ವಿನ್ ಮನಸು ಮಾಡಿದ್ರೆ ಈ ದಾಖಲೆಯನ್ನ ಮುರಿಯಬಹುದಿತ್ತು. ತವರಿನಲ್ಲಿ 10-15 ಟೆಸ್ಟ್ ಪಂದ್ಯಗಳನ್ನ ಆಡಿದ್ರೆ, ಭಾರತದ ನಂಬರ್ ವನ್ ಬೌಲರ್​ ಆಗಬಹುದಿತ್ತು. ಆದ್ರೆ ಅಶ್ವಿನ್ ಕುಂಬ್ಳೆ ದಾಖಲೆ ಮುರಿಯೋ ಮನಸು ಮಾಡಲಿಲ್ಲ.

ಕೊಟ್ಟ ಮಾತು ಉಳಿಸಿಕೊಂಡ ಅಶ್ವಿನ್​​

ಈ ಹಿಂದೆನೇ ಅಶ್ವಿನ್ ಹೇಳಿದ್ರು! ನಾನು ಯಾವತ್ತೂ ಅನಿಲ್ ಕುಂಬ್ಳೆ ಟೆಸ್ಟ್ ದಾಖಲೆಯನ್ನ ಮುರಿಯೊಲ್ಲ ಅಂತ. ಬೇಕಾದ್ರೆ 618 ವಿಕೆಟ್ ತೆಗೆದು ನಿವೃತ್ತಿ ಆಗ್ತೀನಿ. ಆದ್ರೆ ಅನಿಲ್ ಬಾಯ್​​ನ ಓವರ್​ ಟೇಕ್ ಮಾಡಲ್ಲ ಅಂದಿದ್ರು. ಆದ್ರೀಗ ಅಶ್ವಿನ್ ನುಡಿದಂತೆ ನಡೆದಿದ್ದಾರೆ. ಈಗಿನ ಕಾಲದಲ್ಲಿ ಎಷ್ಟೋ ಮಂದಿ ಆಟಗಾರರು ವಿಶ್ವ ದಾಖಲೆ ಮಾಡಬೇಕು ಅಂತ ಹಂಬಲಿಸ್ತಾರೆ! ತಂಡಕ್ಕಿಂತ ವೈಯಕ್ತಿಕ ದಾಖಲೇನೇ ಮುಖ್ಯ ಅಂತಿರ್ತಾರೆ. ಆದ್ರೆ ಅಶ್ವಿನ್​ಗೆ ದಿಗ್ಗಜ ಅನಿಲ್ ಕುಂಬ್ಳೆನೇ ಮುಖ್ಯ. ತಂಡಾನೇ ಮುಖ್ಯ ಅಂತ ತೋರಿಸಿಕೊಟ್ಟಿದ್ದಾರೆ. ಈ ಗ್ರೇಟ್ ಕ್ಯಾರೆಕ್ಟರ್ ಇರೋ ಜಂಟಲ್​ಮೆನ್ ಅಶ್ವಿನ್​ಗೆ, ಸಲಾಂ ಹೊಡೆಯಲೇಬೇಕು!

ಇದನ್ನೂ ಓದಿ: R ಅಶ್ವಿನ್​​ಗೆ ಮೊದಲೇ ಎಚ್ಚರಿಸಿದ್ದ BCCI; ಬಲವಂತಕ್ಕೆ ಮಣಿದು ನಿವೃತ್ತಿ ಘೋಷಿಸಿದ ಸ್ಟಾರ್​​ ಪ್ಲೇಯರ್​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment