/newsfirstlive-kannada/media/post_attachments/wp-content/uploads/2024/08/Team-India_-News.jpg)
ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿ ಆರಂಭಕ್ಕೆ ಒಂದೂವರೆ ತಿಂಗಳು ಮಾತ್ರ ಬಾಕಿ ಇದೆ. ಈ ಮೆಗಾ ಟೂರ್ನಿಗೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಶುರುವಾಗಿವೆ. ಇನ್ನೂ 3 ದಿನದಲ್ಲಿ ಚಾಂಪಿಯನ್ಸ್ ಟ್ರೋಫಿಗೆ ಎಲ್ಲಾ ತಂಡಗಳು ಪ್ರಕಟಿಸಬೇಕು ಎಂದು ಐಸಿಸಿ ಗಡುವು ನೀಡಿದೆ.
ಇನ್ನು, ಬಿಸಿಸಿಐ ಕೂಡ ಬಲಿಷ್ಠ ಟೀಮ್​ ಇಂಡಿಯಾ ಪ್ರಕಟ ಮಾಡಬೇಕಿದೆ. ಇದರ ಭಾಗವಾಗಿ ಶನಿವಾರ ಬಿಸಿಸಿಐ ಸೆಲೆಕ್ಷನ್​ ಕಮಿಟಿ ಸಭೆ ನಡೆಸಲಿದೆ. ಟೀಮ್​ ಇಂಡಿಯಾದಲ್ಲಿ ಸ್ಥಾನಕ್ಕಾಗಿ ಸಾಕಷ್ಟು ಆಟಗಾರರ ಮಧ್ಯೆ ಪೈಪೋಟಿ ನಡೆಯುತ್ತಿದೆ. ಮುಖ್ಯ ಕೋಚ್​ ಗಂಭೀರ್​​ ಕೃಪೆ ಯಾರ ಮೇಲಿದೆ? ಅನ್ನೋ ಚರ್ಚೆ ಶುರುವಾಗಿದೆ.
ಪ್ಲೇಯಿಂಗ್​​ ಎಲೆವೆನ್​ ಆಯ್ಕೆ ಸವಾಲ್​​
ಚಾಂಪಿಯನ್ಸ್ ಟ್ರೋಫಿಗೆ ಟೀಮ್ ಇಂಡಿಯಾ ಪ್ಲೇಯಿಂಗ್​​ ಎಲೆವೆನ್ ಆಯ್ಕೆ ಮಾಡೋದು ಅಷ್ಟು ಸುಲಭವಲ್ಲ. ಇದಕ್ಕಾಗಿ ಬಿಸಿಸಿಐ ಸೆಲೆಕ್ಷನ್​ ಕಮಿಟಿ ಮತ್ತು ಗೌತಮ್ ಗಂಭೀರ್ ಮಹತ್ವದ ನಿರ್ಧಾರ ಕೈಗೊಳ್ಳಬೇಕಿದೆ.
ಕ್ಯಾಪ್ಟನ್​ ರೋಹಿತ್​ ಶರ್ಮಾ ಮತ್ತು ವಿರಾಟ್​ ಕೊಹ್ಲಿ ಹೊರತಾಗಿ ಮತ್ಯಾರಿಗೂ ಟೀಮ್​ ಇಂಡಿಯಾದಲ್ಲಿ ಸ್ಥಾನ ಖಾತ್ರಿಯಿಲ್ಲ. ಸ್ಟಾರ್​ ಆಲ್​ರೌಂಡರ್​ ರವೀಂದ್ರ ಜಡೇಜಾ ಚಾಂಪಿಯನ್ಸ್​​ ಟ್ರೋಫಿ ಆಡೋದು ಡೌಟ್​ ಆಗಿದೆ.
ಜಡೇಜಾಗೆ ಕೊಕ್​
ರವೀಂದ್ರ ಜಡೇಜಾ ಸೀಮಿತ ಓವರ್​ಗಳಲ್ಲಿ ಚಾರ್ಮ್ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಬಿಸಿಸಿಐ ಸೆಲೆಕ್ಷನ್​ ಕಮಿಟಿ ಅಕ್ಷರ್ ಪಟೇಲ್ ಮೇಲೆ ಗಮನ ಹರಿಸಿದೆ. ಏಕದಿನ ಪಂದ್ಯಗಳಲ್ಲಿ ಅಕ್ಷರ್ ಪರಿಣಾಮಕಾರಿ ಆಟ ಆಡಬಲ್ಲರು. ಜಡೇಜಾ ಸ್ಥಾನವನ್ನು ತುಂಬಬಲ್ಲ ಆಟಗಾರ ಅಕ್ಷರ್​ ಪಟೇಲ್​​. ಇವರು ಕೇವಲ ಬೌಲಿಂಗ್​ ಮಾತ್ರವಲ್ಲ ಬ್ಯಾಟಿಂಗ್​​ನಲ್ಲೂ ಸೈ ಎನಿಸಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us