newsfirstkannada.com

ಇಂಗ್ಲೆಂಡ್​​ ತಂಡವನ್ನು ಬಗ್ಗು ಬಡಿದ ಟೀಮ್​ ಇಂಡಿಯಾ; ಟಿ20 ವಿಶ್ವಕಪ್​​ ಫೈನಲ್​ಗೆ ರಾಯಲ್​ ಎಂಟ್ರಿ..!

Share :

Published June 28, 2024 at 1:39am

    ಟಿ20 ವಿಶ್ವಕಪ್​​ ಮೆಗಾ ವಾರ್​​ನಲ್ಲಿ ಟೀಮ್​ ಇಂಡಿಯಾ, ಇಂಗ್ಲೆಂಡ್​ ಜಿದ್ದಾಜಿದ್ದಿ

    ರೋಚಕ ಪಂದ್ಯದಲ್ಲಿ ಟೀಮ್​ ಇಂಡಿಯಾ ವಿರುದ್ಧ ಇಂಗ್ಲೆಂಡ್​ಗೆ ಹೀನಾಯ ಸೋಲು

    ಇಂಗ್ಲೆಂಡ್​​ ತಂಡದ ವಿರುದ್ಧ ಗೆದ್ದ ಟೀಮ್​ ಇಂಡಿಯಾ ನೇರ ಫೈನಲ್ಸ್​ಗೆ ಎಂಟ್ರಿ!

ಗಯಾನಾ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ 2024ರ ಟಿ20 ವಿಶ್ವಕಪ್​​ ಸೆಮಿ ಫೈನಲ್ ಹೈವೋಲ್ಟೇಜ್​ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟೀಮ್​ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಟಿ20 ವಿಶ್ವಕಪ್​ ಫೈನಲ್​ ಪ್ರವೇಶಿಸಿದೆ.

ಟಾಸ್ ಸೋತರೂ ಫಸ್ಟ್​ ಬ್ಯಾಟಿಂಗ್​ ಮಾಡಿದ ಟೀಮ್​ ಇಂಡಿಯಾ ಪರ ಓಪನರ್​ ಆಗಿ ಬಂದ ವಿರಾಟ್​ ಕೊಹ್ಲಿ ಮತ್ತೆ ಬ್ಯಾಟಿಂಗ್​ ವೈಫಲ್ಯ ಅನುಭವಿಸಿದ್ರು. ತಾನು ಆಡಿದ 9 ಬಾಲ್​ನಲ್ಲಿ 1 ಸಿಕ್ಸರ್​ ಸಮೇತ 9 ರನ್​ ಸಿಡಿಸಿ ವಿಕೆಟ್​ ಒಪ್ಪಿಸಿದ್ರು. ಟೋಪ್ಲಿ ಬೌಲಿಂಗ್​ನಲ್ಲಿ ಕ್ಲೀನ್​ ಬೌಲ್ಡ್​ ಆದರು. ಈ ಮೂಲಕ 2024ರ ಟಿ20 ವಿಶ್ವಕಪ್​ನಲ್ಲಿ ಕೆಟ್ಟ ದಾಖಲೆ ಬರೆದರು.

ನಂತರ ಕ್ರೀಸ್​ನಲ್ಲಿ ನಿಂತು ರೋಹಿತ್​​ ಶರ್ಮಾ ಅಗ್ರೆಸ್ಸಿವ್​ ಬ್ಯಾಟಿಂಗ್​ ಮಾಡಿದ್ರು. ತಾನು ಎದುರಿಸಿದ 39 ಬಾಲ್​ನಲ್ಲಿ 2 ಸಿಕ್ಸರ್​​, 6 ಫೋರ್​ ಸಮೇತ ಭರ್ಜರಿ 57 ರನ್​ ಚಚ್ಚಿದ್ರು. ಸೂರ್ಯಕುಮಾರ್​ ಯಾದವ್​ ಕೂಡ 2 ಸಿಕ್ಸರ್​​, 4 ಫೋರ್​ ಸಮೇತ 47 ರನ್​ ಬಾರಿಸಿದ್ರು. ಹಾರ್ದಿಕ್​ ಪಾಂಡ್ಯ 23, ಜಡೇಜಾ 17, ಅಕ್ಷರ್​ ಪಟೇಲ್​​ 10 ರನ್​ಗಳ ಸಹಾಯದಿಂದ ಟೀಮ್​ ಇಂಡಿಯಾ ಬೃಹತ್​ ಮೊತ್ತ ಪೇರಿಸಿತು. ಕಠಿಣ ಪಿಚ್​​ನಲ್ಲಿ ನಿಗದಿತ 20 ಓವರ್​​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 171 ರನ್​​ ಗಳಿಸಿತು. ಇಂಗ್ಲೆಂಡ್​ ತಂಡಕ್ಕೆ 172 ರನ್​ಗಳ ಬಿಗ್​ ಟಾರ್ಗೆಟ್​ ನೀಡಿತ್ತು.

ಇನ್ನು, ಟೀಮ್​ ಇಂಡಿಯಾ ಬಿಗ್​ ಟಾರ್ಗೆಟ್​ ಬೆನ್ನತ್ತಿದ ಇಂಗ್ಲೆಂಡ್​ ಭಾರತ ತಂಡದ ಬೌಲರ್​ಗಳ ಮಾರಕ ದಾಳಿಗೆ ತತ್ತರಿಸಿದೆ. ಹಾಗಾಗಿ ಇಂಗ್ಲೆಂಡ್ ತಂಡ 16.4 ಓವರ್​ನಲ್ಲಿ ಕೇವಲ 103 ರನ್​ಗಳಿಗೆ ಆಲೌಟ್​ ಆಗಿದೆ. ಟೀಮ್​ ಇಂಡಿಯಾ ಪರ ಕುಲ್ದೀಪ್​​ ಯಾದವ್​​, ಅಕ್ಷರ್​ ಪಟೇಲ್​ ತಲಾ 3 ವಿಕೆಟ್​ ತೆಗೆದು ಕಮಾಲ್​ ಮಾಡಿದ್ರು. ಬೂಮ್ರಾ ಕೂಡ 2 ವಿಕೆಟ್​ ತೆಗೆದರು. ಭಾರತ ತಂಡಕ್ಕೆ ಬರೋಬ್ಬರಿ 68 ರನ್​ಗಳ ಜಯ ಸಿಕ್ಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಇಂಗ್ಲೆಂಡ್​​ ತಂಡವನ್ನು ಬಗ್ಗು ಬಡಿದ ಟೀಮ್​ ಇಂಡಿಯಾ; ಟಿ20 ವಿಶ್ವಕಪ್​​ ಫೈನಲ್​ಗೆ ರಾಯಲ್​ ಎಂಟ್ರಿ..!

https://newsfirstlive.com/wp-content/uploads/2024/06/Team-India.jpg

Load More