newsfirstkannada.com

ಟಿ20 ವಿಶ್ವಕಪ್​ನಲ್ಲಿ ಭಾರತ ಫೈನಲ್​​​ಗೆ ಎಂಟ್ರಿ.. ಪಾಕಿಸ್ತಾನ ಹೇಳಿದ್ದೇನು.. ವಿಡಿಯೋ ವೈರಲ್..!

Share :

Published June 28, 2024 at 12:40pm

Update June 28, 2024 at 12:41pm

  ಇಂಗ್ಲೆಂಡ್ ಸೋಲಿಸಿ ಫೈನಲ್ ಪ್ರವೇಶಿಸಿರುವ ಭಾರತ

  ನಾಳೆ ದಕ್ಷಿಣ ಆಫ್ರಿಕಾ ವಿರುದ್ಧ ಫೈನಲ್​​ನಲ್ಲಿ ಹೋರಾಟ

  ಭಾರತ ಫೈನಲ್ ಪ್ರವೇಶ ಮಾಡಿದ್ದಕ್ಕೆ ಪಾಕ್ ಹೇಳಿದ್ದೇನು?

ಟಿ20 ವಿಶ್ವಕಪ್ ಫೈನಲ್​​​​ನಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ಜೊತೆ ಆಡಲಿದೆ. ನಾಳೆ ನಡೆಯುವ ಜಿದ್ದಾಜಿದ್ದಿನ ಪಂದ್ಯದಲ್ಲಿ ಯಾವ ತಂಡ ಗೆಲ್ಲಲಿದೆ ಅಂತಾ ಕ್ರಿಕೆಟ್ ಅಭಿಮಾನಿಗಳು ಕುತೂಹಲದಿಂದ ಕಾದು ಕೂತಿದ್ದಾರೆ.

ಭಾರತ ಇಂಗ್ಲೆಂಡ್ ತಂಡವನ್ನು ಸೋಲಿಸಿ ಫೈನಲ್ ಪ್ರವೇಶ ಮಾಡ್ತಿದ್ದಂತೆಯೇ ಪಾಕಿಸ್ತಾನ ಒಂದಷ್ಟು ಕ್ರಿಕೆಟ್ ಅಭಿಮಾನಿಗಳು ಬೇಸರ ಮತ್ತು ಖುಷಿಯನ್ನೂ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನಿ ತಂಡವು ಸೂಪರ್-8 ತಲುಪಲು ಸಾಧ್ಯವಾಗಲಿಲ್ಲ. ಇದರಿಂದ ಪಾಕಿಸ್ತಾನ್ ತಂಡದ ವಿರುದ್ಧ ಅಲ್ಲಿನ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಭಾರತದ ಫೈನಲ್ ಪ್ರವೇಶವನ್ನೂ ಶ್ಲಾಘಿಸಿದ್ದಾರೆ. ಇನ್ನ ಕೆಲವರು ಅಸಮಾಧಾನ ಕೂಡ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:Watch: ಫೈನಲ್ ಪ್ರವೇಶ ಮಾಡ್ತಿದ್ದಂತೆ ರೋಹಿತ್ ಕಣ್ಣಲ್ಲಿ ಬಿಕ್ಕಿಬಿಕ್ಕಿ ಬಂತು ಕಣ್ಣೀರು.. ಬೆನ್ನುತಟ್ಟಿ ಹಾರೈಸಿದ ಕೊಹ್ಲಿ

ಪಾಕಿಸ್ತಾನಿ ಯೂಟ್ಯೂಬರ್ ಸೊಹೈಬ್ ಚೌಧರಿ ಮಾತನಾಡಿ.. ಪ್ರಸ್ತುತ ಪಾಕಿಸ್ತಾನದ ಸ್ಥಿತಿ ‘ಅಬ್ದುಲ್ಲಾ ವಿದೇಶಿ ವಿವಾಹದ ಹುಚ್ಚನಂತೆ’ ಎಂದು ಗೇಲಿ ಮಾಡಿದ್ದಾರೆ. ಏಕೆಂದರೆ ಪಾಕಿಸ್ತಾನವು ಸೂಪರ್-8ಗೆ ಹೋಗಲು ಸಾಧ್ಯವಾಗಲಿಲ್ಲ. ಹೀಗಾಗಿ ಸೂಪರ್ 8 ಹಾಗೂ ನಂತರದ ಪಂದ್ಯಗಳು ಪಾಕಿಸ್ತಾನಕ್ಕೆ ಸಂಬಂಧ ಇಲ್ಲ. ಹೀಗಿದ್ದೂ ಕೆಲವು ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳು ಎಲ್ಲಾ ಪಂದ್ಯಗಳನ್ನು ವೀಕ್ಷಣೆ ಮಾಡುತ್ತಿದ್ದು, ನಾಳೆ ನಡೆಯುವ ಫೈನಲ್ ಪಂದ್ಯಕ್ಕಾಗಿ ಕಾಯುತ್ತಿದ್ದಾರೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ತೀವ್ರ ಪೈಪೋಟಿ ನಡೆಯಲಿದೆ ಎಂದು ಪಾಕಿಸ್ತಾನದ ಕ್ರಿಕೆಟ್ ಪ್ರೇಮಿಯೊಬ್ಬರು ಹೇಳಿದ್ದಾರೆ. ಸದ್ಯ ಭಾರತ ಉತ್ತಮವಾಗಿ ಆಡುತ್ತಿದೆ. ಒಂದೇ ಒಂದು ಪಂದ್ಯವನ್ನೂ ಸೋಲದೇ ಫೈನಲ್ ಪ್ರವೇಶ ಮಾಡಿದೆ. ದಕ್ಷಿಣ ಆಫ್ರಿಕ ಕೂಡ ಸೋಲನ್ನು ಕಂಡಿಲ್ಲ. ಹೀಗಾಗಿ ನಾಳೆಯ ಪಂದ್ಯ ಹೈವೋಲ್ಟೇಜ್ ಆಗಿರಲಿದೆ ಎಂದಿದ್ದಾನೆ.

ಇದನ್ನೂ ಓದಿ:ಕೊಹ್ಲಿ ಔಟ್ ಆಗ್ತಿದ್ದಂತೆ ದುಃಖ ವ್ಯಕ್ತಪಡಿಸಿದ ರೋಹಿತ್ ಪತ್ನಿ.. ಸ್ಫೂರ್ತಿಯ ಶ್ರೀರಕ್ಷೆ ಕೊಟ್ಟ ದ್ರಾವಿಡ್..!

ಕೆಲವು ಪಾಕಿಸ್ತಾನಿಗಳು ಬ್ಯಾಟಿಂಗ್ ಮತ್ತು ಬೌಲಿಂಗ್ ಅನ್ನು ಇಷ್ಟಪಡುತ್ತಾರೆ. ಜೊತೆಗೆ ತಮ್ಮ ದೇಶದ ಕ್ರಿಕೆಟ್ ಸ್ಥಿತಿಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್‌ನಲ್ಲಿ ರಾಜಕೀಯವಿದೆ, ಇದರಿಂದ ಕೆಲವು ವಿಚಾರಗಳು ತಪ್ಪಾಗುತ್ತಿವೆ. ಪಾಕಿಸ್ತಾನದಲ್ಲಿ ನಿಮ್ಮ ವಿದ್ಯಾರ್ಹತೆ ಕೇಳುವುದಿಲ್ಲ. ಇಲ್ಲಿ ಎಲ್ಲದಕ್ಕೂ ಲಿಂಕ್ ಮಾಡಲಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನದ ಕೆಲ ಯುವಕರು ದಕ್ಷಿಣ ಆಫ್ರಿಕಾ ಗೆಲ್ಲಲು ಬಯಸುತ್ತಾರೆ. ಮತ್ತು ಕೆಲವರು ಭಾರತ ಗೆಲ್ಲಲು ಬಯಸುತ್ತಾರೆ. ಏಕೆಂದರೆ ಪಾಕಿಸ್ತಾನದ ಯುವಕರು ಭಾರತದ ಅದ್ಭುತ ಬ್ಯಾಟಿಂಗ್ ಮತ್ತು ಬೌಲಿಂಗ್‌ನಿಂದ ಪ್ರಭಾವಿತರಾಗಿದ್ದಾರೆ ಅನ್ನೋದು ಅವರ ಹೇಳಿಕೆಯಿಂದ ಗೊತ್ತಾಗುತ್ತಿದೆ.

ಇದನ್ನೂ ಓದಿ:‘ಮಗು ಅಮ್ಮಾ, ಅಮ್ಮಾ ಅಂತಾ ನರಳುತ್ತಿತ್ತು..’ ಹಾವೇರಿ ಅಪಘಾತದ ನರಕ ಬಿಚ್ಚಿಟ್ಟ ಆ್ಯಂಬುಲೆನ್ಸ್ ಡ್ರೈವರ್..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟಿ20 ವಿಶ್ವಕಪ್​ನಲ್ಲಿ ಭಾರತ ಫೈನಲ್​​​ಗೆ ಎಂಟ್ರಿ.. ಪಾಕಿಸ್ತಾನ ಹೇಳಿದ್ದೇನು.. ವಿಡಿಯೋ ವೈರಲ್..!

https://newsfirstlive.com/wp-content/uploads/2024/06/PAK-FAN-1.jpg

Load More