ಕೊನೆಯ ಪಂದ್ಯದಲ್ಲೂ ಇಂಗ್ಲೆಂಡ್​​ಗೆ ಹೀನಾಯ ಸೋಲು; ಟೀಮ್​ ಇಂಡಿಯಾಗೆ 142 ರನ್​​ಗಳ ಭರ್ಜರಿ ಜಯ

author-image
Ganesh Nachikethu
Updated On
ಇಂಗ್ಲೆಂಡ್​ ತಂಡದಿಂದ ಭರ್ಜರಿ ಬ್ಯಾಟಿಂಗ್​​; ಟೀಮ್​ ಇಂಡಿಯಾಗೆ ಬಿಗ್​ ಟಾರ್ಗೆಟ್​
Advertisment
  • ಟಿ20 ಸರಣಿಯಲ್ಲಿ 4-1ರಲ್ಲಿ ಗೆದ್ದು ಬೀಗಿದ್ದ ಟೀಮ್​ ಇಂಡಿಯಾ
  • ಏಕದಿನ ಸರಣಿಯನ್ನೂ ಕ್ಲೀನ್​ ಸ್ವೀಪ್ ಮಾಡಿ ಭಾರತ ಅಧಿಪತ್ಯ
  • ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಮಹತ್ವದ ಸರಣಿ ಗೆದ್ದ ಭಾರತ

ಇತ್ತೀಚೆಗೆ ನಡೆದ ಟಿ20 ಸರಣಿಯಲ್ಲಿ 4-1ರಲ್ಲಿ ಗೆದ್ದು ಬೀಗಿದ್ದ ಟೀಮ್​ ಇಂಡಿಯಾ ಏಕದಿನ ಸರಣಿಯನ್ನೂ ಕ್ಲೀನ್​ ಸ್ವೀಪ್​ ಮಾಡಿದೆ. 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ನಡೆದ ಮಹತ್ವದ ಸರಣಿ ಗೆದ್ದು ಟೀಮ್​ ಇಂಡಿಯಾ ತನ್ನ ಪ್ರಾಬಲ್ಯ ತೋರಿಸಿದೆ.

ಇಂಗ್ಲೆಂಡ್​ ಆಲೌಟ್​​

ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲೂ ಅಧಿಪತ್ಯ ಸಾಧಿಸಿರೋ ಟೀಮ್​ ಇಂಡಿಯಾ ಮೂರು ಪಂದ್ಯಗಳಲ್ಲೂ ಗೆದ್ದು ಬೀಗಿದೆ. ಇಂದು ನರೇಂದ್ರ ಮೋದಿ ಇಂಟರ್​ ನ್ಯಾಷನಲ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 356 ರನ್ ಗಳಿಸಿ ದೊಡ್ಡ ಟಾರ್ಗೆಟ್​ ನೀಡಿತ್ತು. ಭಾರತದ 357 ರನ್​ಗಳ ಬೃಹತ್​ ಗುರಿ ಬೆನ್ನಟ್ಟಿದ ಇಂಗ್ಲೆಂಡ್​ 34.2 ಓವರ್​ಗಳಲ್ಲಿ 214 ರನ್​ಗಳಿಗೆ ಆಲೌಟ್ ಆಗಿದೆ.

ಟೀಮ್​ ಇಂಡಿಯಾ ಭರ್ಜರಿ ಬ್ಯಾಟಿಂಗ್​

ಟಾಸ್​ ಸೋತರೂ ಫಸ್ಟ್​ ಬ್ಯಾಟಿಂಗ್​​ ಮಾಡಿದ ಕ್ಯಾಪ್ಟನ್​ ರೋಹಿತ್​ ಶರ್ಮಾ ಕೇವಲ ಒಂದು ರನ್​ಗೆ ವಿಕೆಟ್​ ಒಪ್ಪಿಸಿದ್ರು. ರೋಹಿತ್​ ವಿಕೆಟ್​ ಬಿದ್ರೂ ಟೀಮ್​ ಇಂಡಿಯಾ ಪರ ಗಿಲ್​ ಅಬ್ಬರಿಸಿದರು. ಇವರು ಬರೋಬ್ಬರಿ 500 ದಿನಗಳ ನಂತರ ತಮ್ಮ ಏಕದಿನ ಶತಕ ಬಾರಿಸಿದ್ದಾರೆ. ಇಷ್ಟು ದಿನಗಳ ನಂತರ ಗಿಲ್​ ತಮ್ಮ 7ನೇ ಶತಕ ಪೂರೈಸಿದ್ರು.

ಕೊಹ್ಲಿ ಅಬ್ಬರ

ಕಳೆದ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ್ದ ವಿರಾಟ್​ ಕೊಹ್ಲಿ ಇಂದಿನ ಪಂದ್ಯದಲ್ಲಿ ಮಿಂಚಿದರು. ತಾನು ಎದುರಿಸಿದ 55 ಬಾಲ್​ನಲ್ಲಿ 1 ಭರ್ಜರಿ ಸಿಕ್ಸರ್​​, 7 ಫೋರ್​ ಸಮೇತ 52 ರನ್​ ಸಿಡಿಸಿದರು. ಕೊಹ್ಲಿ ಇವತ್ತು ಸಿಡಿಸಿದ ಅರ್ಧಶತಕ ಇವರ ಕ್ರಿಕೆಟ್ ವೃತ್ತಿ ಜೀವನಕ್ಕೆ ಹೊಸ ಕಳೆಯನ್ನೇ ನೀಡಿದೆ.

ಕೊಹ್ಲಿಗೆ ಸಾಥ್​ ನೀಡಿದ ಶ್ರೇಯಸ್​ ಅಯ್ಯರ್​​ ಅವರು, 64 ಬಾಲ್​ನಲ್ಲಿ 2 ಸಿಕ್ಸರ್​​, 6 ಫೋರ್​ ಸಮೇತ 78 ರನ್​​​ ಬಾರಿಸಿದ್ರು. ಇನ್ನು, 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೆ.ಎಲ್​ ರಾಹುಲ್​ ಹೊಡಿಬಟ ಆಟ ಆಡಿದರು. ಕೇವಲ 29 ಬಾಲ್​ನಲ್ಲಿ 1 ಸಿಕ್ಸರ್​​, 3 ಫೋರ್​​ನೊಂದಿಗೆ 40 ರನ್​ ಚಚ್ಚಿದ್ರು.

ಹಾರ್ದಿಕ್​ ಪಾಂಡ್ಯ 17, ಅಕ್ಷರ್​ ಪಟೇಲ್​​, ವಾಷಿಂಗ್ಟನ್​ ಸುಂದರ್​​ 14, ಹರ್ಷಿತ್​ ರಾಣಾ 13 ರನ್​​ ಗಳಿಸಿದ್ರು. ಈ ಮೂಲಕ ಟೀಮ್​ ಇಂಡಿಯಾ 50 ಓವರ್​ನಲ್ಲಿ 10 ವಿಕೆಟ್​​ ನಷ್ಟಕ್ಕೆ 356 ರನ್​ ಕಲೆ ಹಾಕಿತ್ತು.

ಇದನ್ನೂ ಓದಿ: 3 ಭರ್ಜರಿ ಸಿಕ್ಸರ್​​; ಬರೋಬ್ಬರಿ 14 ಫೋರ್​​​; ಕೊನೆಯ ಪಂದ್ಯದಲ್ಲಿ ಶತಕ ಸಿಡಿಸಿದ ಶುಭ್ಮನ್​​ ಗಿಲ್​​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment