/newsfirstlive-kannada/media/post_attachments/wp-content/uploads/2025/02/Team-India-win.jpg)
ಇಂದು ನಾಗ್ಪುರದ ವಿಸಿಎ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ ಗೆದ್ದು ಬೀಗಿದೆ. ಬರೋಬ್ಬರಿ 4 ವಿಕೆಟ್ಗಳಿಂದ ಭರ್ಜರಿ ಗೆಲುವು ಸಾಧಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ಟೀಮ್ ಇಂಡಿಯಾಗೆ 249 ರನ್ಗಳ ಗುರಿ ನೀಡಿತ್ತು. ಇಂಗ್ಲೆಂಡ್ ನೀಡಿದ 249 ರನ್ಗಳ ಸಾಧಾರಣ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಪರ ಓಪನಿಂದ ಮಾಡಿದ ಕ್ಯಾಪ್ಟನ್ ರೋಹಿತ್ ಶರ್ಮಾ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು.
ಕೇವಲ 2 ರನ್ಗೆ ಔಟ್
ಕ್ಯಾಪ್ಟನ್ ರೋಹಿತ್ ಶರ್ಮಾ ತಾನು ಎದುರಿಸಿದ 7 ಬಾಲ್ಗಳಲ್ಲಿ ಕೇವಲ 2 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ರು. ಸಾಕೀಬ್ ಮಹ್ಮದ್ ಬೌಲಿಂಗ್ನಲ್ಲಿ ಲಿಯಾಮ್ ಲಿವಿಂಗ್ಸ್ಟೋನ್ಗೆ ಕ್ಯಾಚ್ ನೀಡಿ ಮೈದಾನದಿಂದ ಹೊರನಡೆದರು.
ಗಿಲ್ ಭರ್ಜರಿ ಬ್ಯಾಟಿಂಗ್
ಕ್ರೀಸ್ನಲ್ಲಿ ಕೊನೆಯವರೆಗೂ ನಿಂತು ಆಡಿದ ಶುಭ್ಮನ್ ಗಿಲ್ ಭರ್ಜರಿ ಬ್ಯಾಟಿಂಗ್ ಮಾಡಿದ್ರು. ತಾನು ಆಡಿದ 96 ಬಾಲ್ನಲ್ಲಿ ಬರೋಬ್ಬರಿ 14 ಫೋರ್ ಸಮೇತ 87 ರನ್ ಚಚ್ಚಿದ್ರು.
ಶ್ರೇಯಸ್ ಅಯ್ಯರ್ ತಮ್ಮ ಹಳೆಯ ಸ್ವರೂಪಕ್ಕೆ ಮರಳಿದ್ದಾರೆ. ಎಂದಿನಂತೆ ತಮ್ಮ ಅದ್ಭುತ ಆಟ ಪ್ರದರ್ಶಿಸಿದ ಇವರು ಇಂಗ್ಲೆಂಡ್ ತಂಡದ ಬೌಲರ್ಗಳನ್ನು ಕಾಡಿದರು. ತಾನು ಆಡಿದ 36 ಬಾಲ್ನಲ್ಲಿ 59 ರನ್ ಚಚ್ಚಿದ್ರು. ಈ ಪೈಕಿ 2 ಭರ್ಜರಿ ಸಿಕ್ಸರ್, 9 ಫೋರ್ ಸಿಡಿಸಿದ್ರು. ಇವರ ಬ್ಯಾಟಿಂಗ್ ಸ್ಟ್ರೈಕ್ ರೇಟ್ 160ಕ್ಕೂ ಹೆಚ್ಚಿತ್ತು.
ಅಕ್ಷರ್ ಪಟೇಲ್ 52, ಯಶಸ್ವಿ ಜೈಸ್ವಾಲ್ 15, ಹಾರ್ದಿಕ್ ಪಾಂಡ್ಯ 9, ರವೀಂದ್ರ ಜಡೇಜಾ 12 ರನ್ ಕಲೆ ಹಾಕಿದ್ರು. ಭಾರತ ತಂಡ ಈ ಗುರಿಯನ್ನು ಕೇವಲ 38.4 ಓವರ್ನಲ್ಲಿ ತಲುಪಿದ್ದು, 4 ವಿಕೆಟ್ಗಳಿಂದ ಗೆದ್ದು ಬೀಗಿದೆ.
ಇದನ್ನೂ ಓದಿ: 6,6,4,4,4,4,4,4,4,4,4; ಇಂಗ್ಲೆಂಡ್ ಬೌಲರ್ಗಳನ್ನು ಬಗ್ಗು ಬಡಿದ ಶ್ರೇಯಸ್ ಅಯ್ಯರ್
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ