/newsfirstlive-kannada/media/post_attachments/wp-content/uploads/2024/10/GAMBHIR.jpg)
ಕ್ರಿಕೆಟ್ ಜಗತ್ತಿನಲ್ಲಿ ಕೋಚ್ ಮತ್ತು ನಾಯಕನ ನಡುವಿನ ಭಿನ್ನಾಭಿಪ್ರಾಯ ಹೊಸದೇನೂ ಇಲ್ಲ. ಸೌರವ್ ಗಂಗೂಲಿ-ಗ್ರೆಗ್ ಚಾಪೆಲ್‌ನಿಂದ ಹಿಡಿದು ವಿರಾಟ್ ಕೊಹ್ಲಿ ಮತ್ತು ಅನಿಲ್ ಕುಂಬ್ಳೆವರೆಗೆ ಬಿರುಕು ಬಿಟ್ಟ ಪ್ರಕರಣಗಳನ್ನು ನೋಡಿದ್ದೇವೆ. ಆ ಪಟ್ಟಿಗೆ ರೋಹಿತ್ ಶರ್ಮಾ ಮತ್ತು ಗೌತಮ್ ಗಂಭೀರ್ ಹೆಸರು ಸೇರ್ಪಡೆಯಾಗಿದೆ.
ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ಗೌತಮ್ ಗಂಭೀರ್ ನಡುವೆ ಹಗ್ಗಜಗ್ಗಾಟ ಹೆಚ್ಚಿದೆ ಎಂದು ವರದಿಯಾಗಿದೆ. ಕನ್ನಡಿಗ ರಾಹುಲ್ ದ್ರಾವಿಡ್ ನಿವೃತ್ತಿ ನಂತರ ಟೀಂ ಇಂಡಿಯಾದಲ್ಲಿ ಎಲ್ಲವೂ ಸರಿ ಇಲ್ಲ. ಗಂಭೀರ್ ಅವರ ನಡೆಯಿಂದ ಕ್ಯಾಪ್ಟನ್ ರೋಹಿತ್ ಶರ್ಮಾ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎನ್ನಲಾಗಿದೆ. ಗಂಭೀರ್ ಕೋಚ್ ಆದ್ಮೇಲೆ ಮಾಡ್ತಿರುವ ಕೆಲಸಗಳು ರೋಹಿತ್ಗೆ ಇಷ್ಟ ಆಗುತ್ತಿಲ್ಲ. ಹೀಗಾಗಿ ಕೆಲಸದ ವಿಚಾರಕ್ಕೆ ಇಬ್ಬರ ನಡುವೆ ವಾಗ್ವಾದಗಳು ನಡೆಯುತ್ತಿವೆ. ಕೆಲವು ದಿನಗಳ ಹಿಂದೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿದೆ ಅಂತಲೂ ಹೇಳಲಾಗುತ್ತಿದೆ.
ಇದನ್ನೂ ಓದಿ:ದೀಪಾವಳಿ; ಮಾರ್ಕೆಟ್ನಲ್ಲಿ ಹೂವು, ಹಣ್ಣು, ತರಕಾರಿ ಭಾರೀ ದುಬಾರಿ.. ಬೆಲೆ ಕೇಳಿ ಗ್ರಾಹಕರು ಫುಲ್ ಶಾಕ್
ಜಗಳಕ್ಕೆ ಕಾರಣವೇನು?
ಗಂಭೀರ್ ಕೋಚ್ ಆದಮೇಲೆ ರೋಹಿತ್ ಶರ್ಮಾ ತಂಡದೊಳಗೆ ಕೆಲಸ ಮಾಡುತ್ತಿಲ್ಲ. ರೋಹಿತ್ ತಮ್ಮದೇ ರೀತಿಯಲ್ಲಿ ತಂಡವನ್ನು ನಡೆಸಲು ಬಯಸುತ್ತಾರೆ. ಆದರೆ ಗಂಭೀರ್ ಅವರು ಯಾವುದೇ ನಿರ್ಧಾರಗಳನ್ನು ತೆಗೆದುಕೊಂಡರೂ ಅದನ್ನು ಇಡೀ ತಂಡವು ಒಪ್ಪಿಕೊಳ್ಳಬೇಕು ಎಂದು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ. ಇತ್ತೀಚೆಗಷ್ಟೇ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯನ್ನು ಕಳೆದುಕೊಂಡಿರುವ ಭಾರತ ಇದೀಗ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ 0-2 ಅಂತರದಲ್ಲಿ ಹಿನ್ನಡೆಯಲ್ಲಿದೆ. ತಂಡದ ಪ್ರದರ್ಶನದ ಬಗ್ಗೆ ಕೋಚ್ ಮತ್ತು ನಾಯಕನ ನಡುವೆಯೂ ಭಿನ್ನಾಭಿಪ್ರಾಯ ಇದೆ ಎಂದು ಹೇಳಲಾಗಿದೆ.
ಹಿರಿಯ ಆಟಗಾರರ ಕಳಪೆ ಪ್ರದರ್ಶನದಿಂದ ಗಂಭೀರ್ ಸಂತಸಗೊಂಡಿಲ್ಲ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ರನ್ ಗಳಿಸಲು ಸಾಧ್ಯವಾಗಲಿಲ್ಲ. ತಂಡದಲ್ಲಿನ ಗುಂಪುಗಾರಿಕೆ ಸುದ್ದಿಗೆ ಸಂಬಂಧಿಸಿ ಕೆಲವು ಆಟಗಾರರು ರೋಹಿತ್ ಪರವಾಗಿದ್ದಾರೆ. ಕೆಲವು ಆಟಗಾರರು ಗಂಭೀರ್ ಅವರನ್ನು ಟೀಕಿಸುತ್ತಿದ್ದಾರೆ. ಅನೇಕರು ಪ್ರದರ್ಶನದತ್ತ ಮಾತ್ರ ಗಮನ ಹರಿಸಲು ಬಯಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ರೋಹಿತ್ ಶರ್ಮಾ ಮೇಲೆ RCB ಸೇರಿ ಈ 2 ಟೀಮ್ಗಳ ಕಣ್ಣು.. ಮುಂಬೈನಿಂದ ಹೊರ ಬರುತ್ತಾರಾ ಹಿಟ್ಮ್ಯಾನ್?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ