/newsfirstlive-kannada/media/post_attachments/wp-content/uploads/2025/02/Rohit_sharma-1.jpg)
ದುಬೈ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ನಾಕೌಟ್ ಹಂತದ ಕೊನೆಯ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದು ಬೀಗಿದೆ. ನ್ಯೂಜಿಲೆಂಡ್ ವಿರುದ್ಧ 44 ರನ್ಗಳಿಂದ ಜಯ ಸಾಧಿಸಿದೆ.
ಇನ್ನು, ಭಾರತ ತಂಡ ಗೆದ್ದ ಬಳಿಕ ಕ್ಯಾಪ್ಟನ್ ರೋಹಿತ್ ಶರ್ಮಾ ಮಾತಾಡಿದರು. ನ್ಯೂಜಿಲೆಂಡ್ ವಿರುದ್ಧ ಗೆದ್ದಿರುವುದು ಬಹಳ ಖುಷಿ ತಂದಿದೆ. ಇದೇ ರೀತಿ ಸೆಮಿಫೈನಲ್ನಲ್ಲೂ ಉತ್ತಮ ಪ್ರದರ್ಶನ ನೀಡಲಿದ್ದೇವೆ ಎಂದರು.
ಕ್ಯಾಪ್ಟನ್ ರೋಹಿತ್ ಏನಂದ್ರು?
ನಾಕೌಟ್ ಪಂದ್ಯವನ್ನು ಗೆಲುವಿನೊಂದಿಗೆ ಫಿನಿಶ್ ಮಾಡಿದ್ದು ಒಳ್ಳೆಯದು ಆಯ್ತು. ನ್ಯೂಜಿಲೆಂಡ್ ಬಲಿಷ್ಠ ಕ್ರಿಕೆಟ್ ತಂಡ. ಎಲ್ಲಾ ರೀತಿಯಲ್ಲೂ ನ್ಯೂಜಿಲೆಂಡ್ ಸಖತ್ ಸ್ಟ್ರಾಂಗ್. ಉತ್ತಮ ಫಲಿತಾಂಶ ಸಿಗೋದು ಬಹಳ ಮುಖ್ಯ. ನಾವು ಪರ್ಫೆಕ್ಟ್ ಗೇಮ್ ಆಡಿದ್ದೇವೆ ಎಂದರು ರೋಹಿತ್.
ನಮ್ಮ ಬೌಲಿಂಗ್ ವಿಭಾಗ ತುಂಬಾ ಸ್ಟ್ರಾಂಗ್ ಇದೆ. ಚಕ್ರವರ್ತಿ ತುಂಬಾ ಕ್ವಾಲಿಟಿ ಬೌಲರ್. ಮುಂದಿನ ಪಂದ್ಯದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಎಲ್ಲಾ ಪಂದ್ಯಗಳನ್ನು ಸೀರಿಯಸ್ ಆಗಿ ತೆಗೆದುಕೊಳ್ಳುತ್ತೇವೆ. ಒಳ್ಳೆಯ ತಂಡವು ಇದೆ. ಆಸ್ಟ್ರೇಲಿಯಾ ವಿರುದ್ಧ ಆಡಲು ಎದುರು ನೋಡುತ್ತಿದ್ದೇವೆ. ಅಂದು ಹೇಗೆ ಗೆಲ್ಲಬೇಕು ಎಂದು ಪ್ಲಾನ್ ಮಾಡುತ್ತೇವೆ ಎಂದರು.
ಇದನ್ನೂ ಓದಿ:ನ್ಯೂಜಿಲೆಂಡ್ ವಿರುದ್ಧ ಗೆದ್ದು ಬೀಗಿದ ಭಾರತ ತಂಡ; ಸೆಮಿಫೈನಲ್ ಗೆಲ್ಲೋಕೆ ಪ್ಲಾನ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ