ಟೀಮ್​​ ಇಂಡಿಯಾ ಗೆಲುವಿಗೆ ಕಾರಣ ಯಾರು? ಸ್ಫೋಟಕ ಸತ್ಯ ಬಿಚ್ಚಿಟ್ಟ ಕ್ಯಾಪ್ಟನ್​ ರೋಹಿತ್​​

author-image
Ganesh Nachikethu
Updated On
‘ಭಾರತ ಟಿ20 ವಿಶ್ವಕಪ್​ ಗೆಲ್ಲಲು ಈ ಮೂವರೇ ಕಾರಣ’- ಕೊನೆಗೂ ಸತ್ಯ ಬಿಚ್ಚಿಟ್ಟ ಕ್ಯಾಪ್ಟನ್​​ ರೋಹಿತ್​​
Advertisment
  • ಟೀಮ್ ಇಂಡಿಯಾದ ಕ್ಯಾಪ್ಟನ್​ ರೋಹಿತ್​ ಶರ್ಮಾ
  • ಇಂಗ್ಲೆಂಡ್​ ವಿರುದ್ಧ ರೋಹಿತ್​ ಅಮೋಘ ಪ್ರದರ್ಶನ
  • ಈ ಬಗ್ಗೆ ಕ್ಯಾಪ್ಟನ್​ ರೋಹಿತ್​ ಶರ್ಮಾ ಏನಂದ್ರು ಗೊತ್ತಾ?

ಟೀಮ್ ಇಂಡಿಯಾದ ಕ್ಯಾಪ್ಟನ್​ ರೋಹಿತ್​ ಶರ್ಮಾ. ಇವರು ಇತ್ತೀಚೆಗೆ ನಡೆದ 2ನೇ ಏಕದಿನ ಪಂದ್ಯದಲ್ಲಿ ಸಿಡಿಲಬ್ಬರದ ಶತಕ ಸಿಡಿಸಿದ್ದಾರೆ. ಕಟಕ್‌ ಇಂಟರ್​ ನ್ಯಾಷನಲ್​​​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ತಮ್ಮ ನೈಜ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ರೋಹಿತ್​ ಶರ್ಮಾ ಟೀಕೆಗಳಿಗೆ ಉತ್ತರ ನೀಡಿದ್ದಾರೆ.

ಇನ್ನೇನು ಕೆಲವೇ ದಿನಗಳಲ್ಲಿ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಶುರುವಾಗಲಿದೆ. ಈ ಹೊತ್ತಲ್ಲೇ ಟೀಮ್​ ಇಂಡಿಯಾ ಕ್ಯಾಪ್ಟನ್​ ರೋಹಿತ್​ ಶರ್ಮಾ ಫಾರ್ಮ್​​​ಗೆ ಬಂದಿದ್ದಾರೆ. ರೋಹಿತ್ ಶರ್ಮಾ ತಮ್ಮ ಅಮೋಘ ಬ್ಯಾಟಿಂಗ್​​ನಿಂದ 90 ಎಸೆತಗಳಲ್ಲಿ 12 ಬೌಂಡರಿ, 7 ಸಿಕ್ಸರ್‌ ಸಹಾಯದಿಂದ 119 ರನ್‌ ಚಚ್ಚಿದ್ರು. ಇದು ಇವರ ವೃತ್ತಿ ಜೀವನದ 32ನೇ ಶತಕ ಆಗಿದ್ದು, ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರು.

ಈ ಬಗ್ಗೆ ಏನಂದ್ರು?

ಪಂದ್ಯ ಮುಗಿದ ಬಳಿಕ ಮಾತಾಡಿದ ಕ್ಯಾಪ್ಟನ್​ ರೋಹಿತ್​ ಶರ್ಮಾ, ನನ್ನ ಬ್ಯಾಟಿಂಗ್​ ಬಗ್ಗೆ ನನಗೆ ಖುಷಿ ಇದೆ. ನಿಜಕ್ಕೂ ತಂಡಕ್ಕಾಗಿ ರನ್‌ ಕಲೆ ಹಾಕುವುದು ಖುಷಿಯ ವಿಚಾರ. ನಾವು ಈ ಪಂದ್ಯ ಗೆಲ್ಲಲೇಬೇಕಾದ ಒತ್ತಡದಲ್ಲಿ ಇದ್ದೆವು. ನಮಗೆ ಈ ಪಂದ್ಯ ಮಹತ್ವದಾಗಿತ್ತು ಎಂದರು.

ನಾನು ವಿಭಿನ್ನ ರೀತಿಯ ಬ್ಯಾಟಿಂಗ್ ಅಭ್ಯಾಸ ನಡೆಸಿದೆ. ಪಂದ್ಯವನ್ನು ಟಿ20ಗಿಂತ ದೊಡ್ಡದು, ಟೆಸ್ಟ್‌ಗಿಂತ ಚಿಕ್ಕದು ಎಂದು ಬ್ಯಾಟಿಂಗ್​ ಮಾಡಿದ್ದೇನೆ. ಎಷ್ಟು ಸಾಧ್ಯವೋ ಅಷ್ಟು ಹೊತ್ತು ಕ್ರೀಸ್‌ನಲ್ಲಿ ನಿಲ್ಲುವುದೇ ನನ್ನ ಗುರಿ ಆಗಿತ್ತು ಎಂದರು.

ಮಿಡ್ಲ್ ಓವರ್‌ಗಳಲ್ಲಿ ಬ್ಯಾಟಿಂಗ್ ಮಾಡುವುದು ಕೊಂಚ ಕಷ್ಟ. ನಾವು ಚೂರು ಯಾಮಾರಿದ್ರೂ ವಿಕೆಟ್‌ಗಳು ಬೀಳುತ್ತಿದ್ದವು. ಒಂದು ವೇಳೆ ಮಿಡ್ಲ್‌ ಓವರ್​ನಲ್ಲಿ ವಿಕೆಟ್​ ಬೀಳದಂತೆ ನೋಡಿಕೊಂಡರೆ ಸಾಕು ಪಂದ್ಯ ಗೆಲ್ಲಬಹುದು. ಇದು ನನ್ನ ಗೆಲುವಲ್ಲ, ಇಡೀ ತಂಡದ ಗೆಲುವು. ಭಾರತದ ಗೆಲುವಿಗೆ ಎಲ್ಲರೂ ಕಾರಣಕರ್ತರು ಎಂದರು.

ಇದನ್ನೂ ಓದಿ:RCB ಮಾಜಿ ಪ್ಲೇಯರ್​​ ಇಂದ ವರುಣ್ ಚಕ್ರವರ್ತಿ ಲಕ್ ಬದಲಾಯಿತಾ.. ಹೇಗೆ?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment