ಚಾಂಪಿಯನ್ಸ್​ ಟ್ರೋಫಿ; ಎದುರಾಳಿಗಳಿಗೆ ಬಿಗ್ ಮೆಸೇಜ್ ಕೊಟ್ಟ ಟೀಂ ಇಂಡಿಯಾ..!

author-image
Ganesh
Updated On
ಚಾಂಪಿಯನ್ಸ್​ ಟ್ರೋಫಿ; ಎದುರಾಳಿಗಳಿಗೆ ಬಿಗ್ ಮೆಸೇಜ್ ಕೊಟ್ಟ ಟೀಂ ಇಂಡಿಯಾ..!
Advertisment
  • ಟೀಮ್​ ಇಂಡಿಯಾದ ಮೊದಲ ದಿನದ ಅಭ್ಯಾಸದಲ್ಲಿ ಏನಾಯ್ತು?
  • ICC ಕ್ರಿಕೆಟ್​ ಅಕಾಡೆಮಿಯಲ್ಲಿ ಟೀಮ್​ ಇಂಡಿಯಾ ಅಭ್ಯಾಸ
  • ಸ್ವಲ್ಪ ಮಸ್ತಿ, ಅಭ್ಯಾಸ ಜಾಸ್ತಿ, ಬೆವರಿಳಿಸಿದ ಟೀಮ್​ ಇಂಡಿಯಾ

ಇಂಗ್ಲೆಂಡ್​​ ವಿರುದ್ಧ ಕ್ಲೀನ್​ಸ್ವೀಪ್​ ವಿಜಯ ಸಾಧಿಸಿದ ಟೀಮ್​ ಇಂಡಿಯಾ ಇದೀಗ ಚಾಂಪಿಯನ್​ ಕಿರೀಟದ ಮೇಲೆ ಕಣ್ಣಿಟ್ಟಿದೆ. ಟ್ರೋಫಿ ಗೆದ್ದು ಬೀಗಲು ಟೀಮ್​ ಇಂಡಿಯಾ ಸಮರಾಭ್ಯಾಸ ಅರಬ್​ ನಾಡಲ್ಲಿ ಆರಂಭವಾಗಿದೆ.

ಪ್ರತಿಷ್ಟಿತ ಐಸಿಸಿ ಚಾಂಪಿಯನ್​​ ಟ್ರೋಫಿಗೆ ಕೌಂಟ್​ಡೌನ್​ ಶುರುವಾಗಿದೆ. ನಾಳೆಯಿಂದ ಪ್ರತಿಷ್ಟೆಯ ಸಮರಕ್ಕೆ ಕಿಕ್​ ಸ್ಟಾರ್ಟ್​ ಸಿಗಲಿದೆ. ಗುರುವಾರ ನಡೆಯೋ ಬಾಂಗ್ಲಾದೇಶ ಎದುರಿನ ಕದನದೊಂದಿಗೆ ಟೀಮ್​ ಇಂಡಿಯಾದ ಅಭಿಯಾನ ಆರಂಭವಾಗಲಿದೆ. ಟ್ರೋಫಿ ಗೆಲ್ಲೋ ಕನಸಿನೊಂದಿಗೆ ಈಗಾಗಲೇ ದುಬೈ ತಲುಪಿರೋ ರೋಹಿತ್​ ಪಡೆ ಭರ್ಜರಿ ಸಮರಾಭ್ಯಾಸ ನಡೆಸಿದೆ. ಆ ಮೂಲಕ ಎದುರಾಳಿಗಳಿಗೆ ಬಿಗ್ ಮೆಸೇಜ್ ಕಳುಹಿಸಿದೆ ಭಾರತ ತಂಡ.

ಟೀಮ್​ ಇಂಡಿಯಾ ಸಮರಾಭ್ಯಾಸ

ದುಬೈನ ಐಸಿಸಿ ಕ್ರಿಕೆಟ್​ ಅಕಾಡೆಮಿಯಲ್ಲಿ ಟೀಮ್​ ಇಂಡಿಯಾದ ಸಮರಾಭ್ಯಾಸ ಶುರುವಾಗಿದೆ. ಆರಂಭದಲ್ಲಿ ವಾರ್ಮ್​ ಅಪ್​​ ಮಾಡಿದ ರೋಹಿತ್​ ಪಡೆ ಕೆಲ ಕಾಲ ಫುಟ್ಬಾಲ್​ ಆಡಿದೆ. ಆ ಬಳಿಕ ಫನ್ನಿ ಫೀಲ್ಡಿಂಗ್​ ಸೆಷನ್​ನೊಂದಿಗೆ ಅಸಲಿ ಅಭ್ಯಾಸ ಆರಂಭವಾಯ್ತು. ಬಳಿಕ ಪ್ಯಾಡ್​ ಕಟ್ಟಿ ಕಣಕ್ಕಿಳಿದ ಇಂಡಿಯನ್​ ಸ್ಟಾರ್ಸ್​ ನೆಟ್ಸ್​ನಲ್ಲಿ ಭರ್ಜರಿ ಬ್ಯಾಟಿಂಗ್​ ನಡೆಸಿದ್ದಾರೆ. ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ , ಕೆ.ಎಲ್​ ರಾಹುಲ್​, ಹಾರ್ದಿಕ್​ ಪಾಂಡ್ಯ ಅಭ್ಯಾಸ ಅಖಾಡದಲ್ಲಿ ಬೆವರಿಳಿಸಿದ್ದಾರೆ.

ಇದನ್ನೂ ಓದಿ: ನಿಮಗೆ ನಾಚಿಕೆ ಆಗಬೇಕು.. ಹುಷಾರ್! ರಣವೀರ್ ಅಲಹಾಬಾದಿಯಾಗೆ ಸುಪ್ರೀಂಕೋರ್ಟ್ ತೀವ್ರ ತರಾಟೆ

publive-image

ವೇಗಿಗಳ ಎಸೆತಗಳನ್ನ ರೋಹಿತ್​ ಶರ್ಮಾ ಹೆಚ್ಚು ಎದುರಿಸಿದ್ರೆ, ಪ್ರಿನ್ಸ್​ ಶುಭ್​ಮನ್​ ಗಿಲ್​ಗೆ ಕಿಂಗ್​ ಕೊಹ್ಲಿ ಬ್ಯಾಟಿಂಗ್​ ಪಾಠ ಮಾಡಿದ್ದಾರೆ. ಕೊಹ್ಲಿ ಕೂಡ ಗಂಟೆಗೂ ಅಧಿಕ ಕಾಲ ಬ್ಯಾಟ್​ ಹಿಡಿದು ಅಭ್ಯಾಸ ನಡೆಸಿದ್ದಾರೆ. ವೇಗಿಗಳಾದ ಆರ್ಷ್​​ದೀಪ್​ ಸಿಂಗ್​, ಮೊಹಮ್ಮದ್​ ಶಮಿ ಸತತವಾಗಿ ಬೌಲಿಂಗ್​ ಮಾಡಿದ್ದಾರೆ. ಸ್ಪಿನ್ನರ್​ಗಳಾದ ವಾಷಿಂಗ್ಟನ್​ ಸುಂದರ್ ಹಾಗೂ ವರುಣ್​ ಚಕ್ರವರ್ತಿ ನೆಟ್ಸ್​ನಲ್ಲಿ ಬ್ಯಾಟ್ಸ್​ಮನ್​​ಗಳನ್ನ ಟ್ರಬಲ್​ ಮಾಡಿದ್ದಾರೆ.

ಇಂಜುರಿಗೆ ತುತ್ತಾದ ಪಂತ್​..

ಮೊದಲ ದಿನದ ಅಭ್ಯಾಸದಲ್ಲೇ ಟೀಮ್​ ಇಂಡಿಯಾಗೆ ಆಘಾತವು ಎದುರಾಗಿದೆ. ವಿಕೆಟ್​ ಕೀಪರ್​ ಬ್ಯಾಟ್ಸ್​​ಮನ್​ ರಿಷಭ್​ ಪಂತ್​ ಇಂಜುರಿಗೆ ತುತ್ತಾಗಿದ್ದಾರೆ. ಹಾರ್ದಿಕ್​ ಪವರ್​ಫುಲ್​ ಹಿಟ್​​ ಮಾಡಿದ್ರು. ಆ ಚೆಂಡು ನೇರವಾಗಿ ಬಂದು ಪಂತ್​ ಮೊಣಕಾಲಿಗೆ ಬಡಿದಿದೆ. ದಿಢೀರ್​​ ಕುಸಿದ ಪಂತ್, ನೋವಲ್ಲಿ​ ಕೆಲ ಕಾಲ ಒದ್ದಾಡಿದ್ರು.

ಒಟ್ಟಿನಲ್ಲಿ, ದುಬೈ ತಲುಪಿದ ಬಳಿಕ ನಡೆಸಿದ ಮೊದಲ ಅಭ್ಯಾಸದ ಸೆಷನ್​ನಲ್ಲಿ ಟೀಮ್​ ಇಂಡಿಯಾ ಆಟಗಾರರು, ಭರ್ಜರಿ ಅಭ್ಯಾಸ ನಡೆಸಿ ಸಮರಕ್ಕೆ ಸಿದ್ಧವಾಗಿದ್ದಾರೆ. ಆಟಗಾರರ ಅಭ್ಯಾಸ ಮ್ಯಾನೇಜ್​ಮೆಂಟ್​ಗೆ ಸಮಾಧಾನ ತರಿಸಿದ್ರೆ, ಪಂತ್​ ಇಂಜುರಿ ಟೆನ್ಶನ್​ಗೆ ಕಾರಣವಾಗಿದೆ. ಸರ್ಜರಿಯಾಗಿದ್ದ ಮೊಣಕಾಲಿಗೇ ಬಾಲ್​ ಬಡಿದಿದ್ದು, ಅಭ್ಯಾಸದ ಬಳಿಕವೂ ಕುಂಟುತ್ತಲೇ ಪಂತ್​ ಟೀಮ್​ ಬಸ್ ಹತ್ತಿದ್ದಾರೆ. ಹೀಗಾಗಿ​​ ಮೊದಲ ಪಂದ್ಯದ ಸೆಲೆಕ್ಷನ್​ಗೆ ಲಭ್ಯ ಇರೋದು ಬಹುತೇಕ ಅನುಮಾನವೇ.

ಇದನ್ನೂ ಓದಿ: ಬೆಂಗಳೂರಲ್ಲಿ ಹೆಂಗೆಲ್ಲ ಸೈಬರ್ ವಂಚನೆ ಆಗ್ತಿದೆ? ‘ಡಾರ್ಲಿಂಗ್ ಡೆವಿಡ್​’ನ ಕೋಟಿ ವಂಚನೆ ಕತೆ ಹೇಳಿ ಎಚ್ಚರಿಸಿದ ಅಧಿಕಾರಿ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment