/newsfirstlive-kannada/media/post_attachments/wp-content/uploads/2023/09/Shreyas-Iyer-1.jpg)
ಭಾರತ ತಂಡ ಇಂಗ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡುತ್ತಿದ್ದು, ಮೊದಲ ಪಂದ್ಯದಲ್ಲೇ ಗೆಲುವು ಸಾಧಿಸಿದೆ. ಈ ಮೂಲಕ ಏಕದಿನ ಸರಣಿಯಲ್ಲೂ ಇಂಗ್ಲೆಂಡ್ ತಂಡವನ್ನು ಬಗ್ಗು ಬಡಿದಿದೆ.
ಇಂದು ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಆಟಗಾರ ಶ್ರೇಯಸ್ ಅಯ್ಯರ್ ತಮ್ಮ ಹಳೆಯ ಸ್ವರೂಪಕ್ಕೆ ಮರಳಿದ್ದಾರೆ. ಎಂದಿನಂತೆ ತಮ್ಮ ಅದ್ಭುತ ಆಟ ಪ್ರದರ್ಶಿಸಿದ ಇವರು ಇಂಗ್ಲೆಂಡ್ ತಂಡದ ಬೌಲರ್ಗಳನ್ನು ಕಾಡಿದರು.
ಸಿಡಿಲಬ್ಬರದ ಅರ್ಧಶತಕ
ಇನ್ನು, ಶ್ರೇಯಸ್ ಅಯ್ಯರ್ ತಾನು ಆಡಿದ 36 ಬಾಲ್ನಲ್ಲಿ 59 ರನ್ ಚಚ್ಚಿದ್ರು. ಈ ಪೈಕಿ 2 ಭರ್ಜರಿ ಸಿಕ್ಸರ್, 9 ಫೋರ್ ಸಿಡಿಸಿದ್ರು. ಇವರ ಬ್ಯಾಟಿಂಗ್ ಸ್ಟ್ರೈಕ್ ರೇಟ್ 160ಕ್ಕೂ ಹೆಚ್ಚಿದೆ.
2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಶ್ರೇಯಸ್ ಅಯ್ಯರ್ ಅವರ ಅದ್ಭುತ ಆಟ ಟೀಮ್ ಇಂಡಿಯಾದ ಚಿಂತೆಯನ್ನು ದೂರ ಮಾಡಿದೆ. ಶ್ರೇಯಸ್ ಚಾಂಪಿಯನ್ಸ್ ಟ್ರೋಫಿಯಲ್ಲಿ 4ನೇ ಸ್ಥಾನಕ್ಕಾಗಿ ಪ್ರಬಲ ಸ್ಪರ್ಧಿಯಾಗಿದ್ದಾರೆ. ಅಷ್ಟೇ ಅಲ್ಲ 4ನೇ ಕ್ರಮಾಂಕದಲ್ಲಿ ಇಲ್ಲಿಯವರೆಗೆ ಅದ್ಭುತ ಪ್ರದರ್ಶನ ನೀಡಿದ್ದಾರೆ.
ನಾಗ್ಪುರದ ವಿಸಿಎ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ಟೀಮ್ ಇಂಡಿಯಾಗೆ 249 ರನ್ಗಳ ಗುರಿ ನೀಡಿತ್ತು. ಭಾರತ ತಂಡ ಈ ಗುರಿಯನ್ನು ಕೇವಲ 38.4 ಓವರ್ನಲ್ಲಿ ತಲುಪಿದ್ದು, 4 ವಿಕೆಟ್ಗಳಿಂದ ಗೆದ್ದು ಬೀಗಿದೆ.
ಇದನ್ನೂ ಓದಿ:RCB ಸ್ಟಾರ್ ಸಾಲ್ಟ್, ಜೇಕಬ್ ಬ್ಯಾಟಿಂಗ್ ಬೆಚ್ಚಿಬಿದ್ದ ಭಾರತ; ಟೀಮ್ ಇಂಡಿಯಾಗೆ ಇಂಗ್ಲೆಂಡ್ ಟಾರ್ಗೆಟ್ ಎಷ್ಟು?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ