/newsfirstlive-kannada/media/post_attachments/wp-content/uploads/2024/11/Shubman-Gill-Missed-Century.jpg)
ಮುಂಬೈನ ವಾಂಖೆಡೆ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಟೀಮ್ ಇಂಡಿಯಾ, ನ್ಯೂಜಿಲೆಂಡ್ ತಂಡದ ಮಧ್ಯೆ ಕೊನೆಯ ಟೆಸ್ಟ್ ನಡೆಯುತ್ತಿದೆ. ನ್ಯೂಜಿಲೆಂಡ್ ನೀಡಿದ ಟಾರ್ಗೆಟ್ ಬೆನ್ನತ್ತಿದ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್ನಲ್ಲಿ 262 ರನ್ಗಳಿಗೆ ಆಲೌಟ್ ಆಗಿದೆ.
ಭಾರತ ತಂಡದ ಭರವಸೆಯ ಆಟಗಾರ ಶುಭ್ಮನ್ ಗಿಲ್ ಹಾಗೂ ಸ್ಟಾರ್ ವಿಕೆಟ್ ಕೀಪರ್ ರಿಷಬ್ ಪಂತ್ ಅವರು ಅರ್ಧಶತಕ ಬಾರಿಸಿದ್ರು. ಇವರ ಅರ್ಧಶತಕದ ನೆರವಿನಿಂದ ಟೀಮ್ ಇಂಡಿಯಾ ನ್ಯೂಜಿಲೆಂಡ್ ತಂಡದ ವಿರುದ್ಧ ಮುನ್ನಡೆ ಸಾಧಿಸಿದೆ.
ಶುಭ್ಮನ್ ಗಿಲ್ ಅಬ್ಬರದ ಬ್ಯಾಟಿಂಗ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಮ್ ಇಂಡಿಯಾ ಪರ ಶುಭ್ಮನ್ ಗಿಲ್ ಮನಮೋಹಕ ಬ್ಯಾಟಿಂಗ್ ಮಾಡಿದ್ರು. 5ನೇ ವಿಕೆಟ್ಗೆ ಗಿಲ್ಗೆ ಪಂತ್ ಸಾಥ್ ನೀಡಿದ್ರು. ಇಬ್ಬರು 114 ಬಾಲ್ನಲ್ಲಿ 96 ರನ್ ಕಲೆ ಹಾಕಿದ್ರು. ಈ ಜೋಡಿಯನ್ನು ಕಟ್ಟಿ ಹಾಕುವಲ್ಲಿ ನ್ಯೂಜಿಲೆಂಡ್ ವಿಫಲವಾಗಿದೆ.
ಗಿಲ್ ಅಮೋಘ ಪ್ರದರ್ಶನ
ಟೀಮ್ ಇಂಡಿಯಾ ಪರ ಮಧ್ಯಮ ಕ್ರಮಾಂಕದಲ್ಲಿ ಶುಭ್ಮನ್ ಗಿಲ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ರು. ಇನ್ನಿಂಗ್ಸ್ ಉದ್ಧಕ್ಕೂ ನ್ಯೂಜಿಲೆಂಡ್ ತಂಡದ ಬೌಲರ್ಗಳ ಬೆವರಿಳಿಸಿದ್ರು. ಬರೋಬ್ಬರಿ 7 ಫೋರ್, 1 ಸಿಕ್ಸರ್ನಿಂದ 90 ರನ್ ಚಚ್ಚಿ ಔಟಾದ್ರು.
ಪಂತ್ 60, ವಾಷಿಂಗ್ಟನ್ ಸುಂದರ್ ಅಜೇಯ 38 ರನ್ ಸಿಡಿಸಿ ಔಟ್ ಆದರು. ರವೀಂದ್ರ ಜಡೇಜಾ 14 ರನ್ ಮಾಡಿದರು.
ಇನ್ನು, ಗಿಲ್ ಬರೋಬ್ಬರಿ 146 ಬಾಲ್ನಲ್ಲಿ 90 ರನ್ ಸಿಡಿಸಿ ಶತಕ ವಂಚಿತರಾದ್ರು. ಇವರ ಬ್ಯಾಟಿಂಗ್ ಸ್ಟ್ರೈಕ್ ರೇಟ್ 60ಕ್ಕೂ ಹೆಚ್ಚಿತ್ತು. ಸಂಕಷ್ಟದಲ್ಲಿದ್ದ ಭಾರತ ತಂಡವನ್ನು ಪಾರು ಮಾಡಿದ್ರು.
ವಿಕೆಟ್ ಕೀಪರ್ ಬ್ಯಾಟರ್ ರಿಷಬ್ ಪಂತ್ ಮನಮೋಹಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 59 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ ಸಹಾಯದಿಂದ 60 ರನ್ ಸಿಡಿಸಿ ತಂಡಕ್ಕೆ ಆಧಾರವಾದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ