/newsfirstlive-kannada/media/post_attachments/wp-content/uploads/2025/02/Shubhman-Gill_Team-India.jpg)
ಟೀಮ್​ ಇಂಡಿಯಾದ ಉಪನಾಯಕ ಶುಭ್ಮನ್​​ ಗಿಲ್​​. ಇವರು ಇತ್ತೀಚೆಗೆ ಅತ್ಯುತ್ತಮ ಫಾರ್ಮ್​ನಲ್ಲಿದ್ದಾರೆ. ಚಾಂಪಿಯನ್ಸ್​ ಟ್ರೋಫಿಗೆ ಮುನ್ನ ಗಿಲ್​ ಫಾರ್ಮ್​​ನಲ್ಲಿರೋದು ಟೀಮ್​ ಇಂಡಿಯಾಗೆ ಭರ್ಜರಿ ಗುಡ್​​ನ್ಯೂಸ್​​.
ಇಂಗ್ಲೆಂಡ್ ವಿರುದ್ಧದ 3 ಏಕದಿನ ಪಂದ್ಯಗಳಲ್ಲೂ ಗಿಲ್ ಅದ್ಭುತ ಬ್ಯಾಟಿಂಗ್​ ನಡೆಸಿದ್ರು. ಮೊದಲು ಎರಡು ಪಂದ್ಯಗಳಲ್ಲಿ ಬ್ಯಾಕ್​ ಟು ಬ್ಯಾಕ್​​​ ಹಾಫ್​ ಸೆಂಚೂರಿ ಸಿಡಿಸಿದ್ದ ಇವರು ಸದ್ಯ ನರೇಂದ್ರ ಮೋದಿ ಇಂಟರ್​ ನ್ಯಾಷನಲ್​ ಸ್ಟೇಡಿಯಮ್​​ನಲ್ಲಿ ನಡೆಯುತ್ತಿರೋ ಕೊನೆಯ ಮ್ಯಾಚ್​​​ನಲ್ಲಿ ಸ್ಫೋಟಕ ಶತಕ ಚಚ್ಚಿದ್ರು.
500 ದಿನಗಳ ನಂತರ ಶತಕ
ಬರೋಬ್ಬರಿ 500 ದಿನಗಳ ನಂತರ ಗಿಲ್ ತಮ್ಮ ಏಕದಿನ ಶತಕ ಬಾರಿಸಿದ್ದಾರೆ. ಇವರು 2023ರ ಸೆಪ್ಟೆಂಬರ್ 24ರಂದು ಇಂದೋರ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಕೊನೆಯ ಬಾರಿಗೆ ಶತಕ ಬಾರಿಸಿದ್ದರು. ಇಷ್ಟು ದಿನಗಳ ನಂತರ ಗಿಲ್​ ತಮ್ಮ 7ನೇ ಶತಕ ಪೂರೈಸಿದ್ರು.
ಟೀಮ್​ ಇಂಡಿಯಾಗೆ ಗಿಲ್​ ಆಸರೆ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಮ್​ ಇಂಡಿಯಾದ ಆರಂಭ ಕಳಪೆ ಆಗಿತ್ತು. ಕ್ಯಾಪ್ಟನ್​ ರೋಹಿತ್​​ ಶರ್ಮಾ ಕೇವಲ 2 ಎಸೆತಗಳನ್ನು ಆಡಿ ವಿಕೆಟ್​ ಒಪ್ಪಿಸಿದರು. ನಂತರ ಕ್ರೀಸ್​ಗೆ ಬಂದ ವಿರಾಟ್​​ ಕೊಹ್ಲಿ, ಶುಭ್ಮನ್​ ಗಿಲ್​ ಉತ್ತಮ ಇನ್ನಿಂಗ್ಸ್​ ಕಟ್ಟಿದರು.
ಸ್ಫೋಟಕ ಶತಕ
ನೆಲಕಚ್ಚಿ ನಿಂತು ಬ್ಯಾಟ್​ ಬೀಸಿದ ಗಿಲ್ ಹೊಡಿಬಡಿ ಆಟದ ಮೂಲಕ ಇಂಗ್ಲೆಂಡ್ ಬೌಲರ್‌ಗಳ ಮೇಲೆ ಒತ್ತಡ ಹೇರಿದರು. ತಾನು ಎದುರಿಸಿದ 102 ಎಸೆತಗಳಲ್ಲಿ ಗಿಲ್​​ 112 ರನ್​ ಚಚ್ಚಿದ್ರು. ಬರೋಬ್ಬರಿ 3 ಸಿಕ್ಸರ್​​, 14 ಭರ್ಜರಿ ಫೋರ್​​ ಸಿಡಿಸಿ ದಾಖಲೆ ಬರೆದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us