/newsfirstlive-kannada/media/post_attachments/wp-content/uploads/2024/09/TEAM_INDIA.jpg)
- ಟೀಮ್ ಇಂಡಿಯಾ, ನ್ಯೂಜಿಲೆಂಡ್ ನಡುವೆ 3 ಪಂದ್ಯಗಳ ಟೆಸ್ಟ್
- ಅಕ್ಟೋಬರ್ 16ನೇ ತಾರೀಕಿನಿಂದ ನಡೆಯಲಿರೋ ಟೆಸ್ಟ್ ಸರಣಿ
- ಈ ಮಹತ್ವದ ಟೆಸ್ಟ್ ಸರಣಿಗೆ ಬಲಿಷ್ಠ ಟೀಮ್ ಇಂಡಿಯಾ ಪ್ರಕಟ
ಕ್ಯಾಪ್ಟನ್​ ರೋಹಿತ್​ ಶರ್ಮಾ ನೇತೃತ್ವದ ಟೀಮ್ ಇಂಡಿಯಾ 2 ಟೆಸ್ಟ್‌ಗಳ ಸರಣಿಯಲ್ಲಿ ಬಾಂಗ್ಲಾದೇಶವನ್ನು 2-0 ಅಂತರದಿಂದ ಸೋಲಿಸುವ ಮೂಲಕ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ. ಈಗ ಟೀಮ್​ ಇಂಡಿಯಾ ತವರಿನಲ್ಲಿ ಅಕ್ಟೋಬರ್ 16ನೇ ತಾರೀಕಿನಿಂದ ನ್ಯೂಜಿಲೆಂಡ್ ತಂಡವನ್ನು ಎದುರಿಸಲು ಸಜ್ಜಾಗಿದೆ.
ಈಗ ನ್ಯೂಜಿಲೆಂಡ್ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿಗೆ ಬಲಿಷ್ಠ ಟೀಮ್​ ಇಂಡಿಯಾ ಪ್ರಕಟವಾಗಿದೆ. ಟೀಮ್​ ಇಂಡಿಯಾವನ್ನು ಕ್ಯಾಪ್ಟನ್​ ರೋಹಿತ್​ ಶರ್ಮಾ ಮುನ್ನಡೆಸಲಿದ್ದಾರೆ. ಜಸ್​ಪ್ರಿತ್​ ಬೂಮ್ರಾ ಅವರು ಭಾರತ ಕ್ರಿಕೆಟ್​ ತಂಡದ ಉಪನಾಯಕ ಆಗಿದ್ದಾರೆ.
ಭಾರತ ತಂಡದ ಓಪನರ್ಸ್ ಆಗಿ ರೋಹಿತ್​ ಶರ್ಮಾ, ಜೈಸ್ವಾಲ್​ ಆಡಲಿದ್ದಾರೆ. ಗಿಲ್​​, ಕೊಹ್ಲಿ, ಟಾಪ್​ ಆರ್ಡರ್​ ಬ್ಯಾಟರ್​ಗಳಾಗಿದ್ದಾರೆ. ಕೆ.ಎಲ್​ ರಾಹುಲ್​, ಸರ್ಫರಾಜ್​ ಖಾನ್​​, ರಿಷಬ್​ ಪಂತ್​ ಅವರನ್ನು ಮಿಡಲ್​ ಆರ್ಡರ್​ ಬ್ಯಾಟರ್​ಗಳಾಗಿದ್ದಾರೆ. ಆಲ್​ರೌಂಡರ್​ ಸ್ಥಾನದಲ್ಲಿ ಆರ್​. ಅಶ್ವಿನ್​​, ರವೀಂದ್ರ ಜಡೇಜಾ, ಅಕ್ಷರ್​ ಪಟೇಲ್​ ಅವರು ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ನ್ಯೂಜಿಲೆಂಡ್​ ವಿರುದ್ಧ ಟೀಮ್​ ಇಂಡಿಯಾ ಹೀಗಿದೆ!
ರೋಹಿತ್​ ಶರ್ಮಾ (ಕ್ಯಾಪ್ಟನ್​), ಜಸ್​ಪ್ರಿತ್​ ಬೂಮ್ರಾ (ವಿಸಿ), ಯಶ್ವಸಿ ಜೈಸ್ವಾಲ್​​, ಶುಭ್ಮನ್​ ಗಿಲ್​​, ವಿರಾಟ್​ ಕೊಹ್ಲಿ, ಕೆ.ಎಲ್​ ರಾಹುಲ್​​, ಸರ್ಫರಾಜ್​ ಖಾನ್​​, ರಿಷಬ್​ ಪಂತ್​ (ವಿಕೆಟ್​ ಕೀಪರ್​), ಧೃವ್​ ಜುರೆಲ್​​, ರವಿಚಂದ್ರನ್​ ಅಶ್ವಿನ್​​, ರವೀಂದ್ರ ಜಡೇಜಾ, ಅಕ್ಷರ್​ ಪಟೇಲ್​​, ಕುಲ್ದೀಪ್​ ಯಾದವ್​, ಮೊಹಮ್ಮದ್​ ಸಿರಾಜ್​, ಆಕಾಶ್​ ದೀಪ್​​.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ