newsfirstkannada.com

ಟಿ20 ವಿಶ್ವಕಪ್​ಗೆ ಬಲಿಷ್ಠ ಟೀಮ್​ ಇಂಡಿಯಾ ಪ್ರಕಟ; ಪಂತ್​ ಕಮ್​ಬ್ಯಾಕ್​​; ಯಾರಿಗೆ ಸ್ಥಾನ?

Share :

Published April 30, 2024 at 4:07pm

    ಇಂಡಿಯನ್​ ಪ್ರೀಮಿಯರ್​ ಲೀಗ್​ ಬೆನ್ನಲ್ಲೇ ಜೂನ್‌ ತಿಂಗಳಲ್ಲಿ ಟಿ20 ವಿಶ್ವಕಪ್​

    ಅಮೆರಿಕಾ ಮತ್ತು ವೆಸ್ಟ್ ಇಂಡೀಸ್ನಲ್ಲಿ ನಡೆಯಲಿರೋ ಐಸಿಸಿ ಮೆಗಾ ಟೂರ್ನಿ

    ಚುಟುಕು ಸಮರಕ್ಕೆ ಬಲಿಷ್ಠ ಟೀಮ್​ ಇಂಡಿಯಾ ಪ್ರಕಟ ಮಾಡಿದ ಬಿಸಿಸಿಐ!

ಇಂಡಿಯನ್​ ಪ್ರೀಮಿಯರ್​ ಲೀಗ್​ ಬೆನ್ನಲ್ಲೇ ಜೂನ್‌ ತಿಂಗಳಲ್ಲಿ ಟಿ20 ವಿಶ್ವಕಪ್​ ನಡೆಯಲಿದೆ. ಅಮೆರಿಕಾ ಮತ್ತು ವೆಸ್ಟ್ ಇಂಡೀಸ್ನಲ್ಲಿ ನಡೆಯೋ ಚುಟುಕು ಸಮರಕ್ಕೆ ಬಲಿಷ್ಠ ಟೀಮ್​ ಇಂಡಿಯಾ ಪ್ರಕಟವಾಗಿದೆ. ಅಳೆದು ತೂಗಿ ತಂಡ ಪ್ರಕಟಿಸಿರೋ ಬಿಸಿಸಿಐ ಹಲವು ಸ್ಟಾರ್​ ಕ್ರಿಕೆಟರ್ಸ್​ಗೆ ಕೊಕ್​ ನೀಡಿದೆ.

ಟೀಮ್​ ಇಂಡಿಯಾದ ಓಪನರ್ಸ್​ ಆಗಿ ಕ್ಯಾಪ್ಟನ್​ ರೋಹಿತ್​ ಶರ್ಮಾ, ಯಶ್ವಸಿ ಜೈಸ್ವಾಲ್​ಗೆ ಮಣೆ ಹಾಕಲಾಗಿದೆ. ಮೂರನೇ ಕ್ರಮಾಂಕದಲ್ಲಿ ವಿರಾಟ್​​ ಕೊಹ್ಲಿ ಆಡಲಿದ್ದಾರೆ. 4ನೇ ಸ್ಥಾನದಲ್ಲಿ ಸೂರ್ಯಕುಮಾರ್​ ಯಾದವ್​​ ಮತ್ತು ವಿಕೆಟ್​ ಕೀಪರ್​ ಬ್ಯಾಟರ್​ ಆಗಿ ರಿಷಭ್​ ಪಂತ್​ ಮತ್ತು ಸಂಜು ಸ್ಯಾಮ್ಸನ್​ ಆಯ್ಕೆಯಾಗಿದ್ದಾರೆ.

ಆಲ್​ರೌಂಡರ್​ ವಿಭಾಗದಲ್ಲಿ ಹಾರ್ದಿಕ್​ ಪಾಂಡ್ಯ ಮತ್ತು ಶಿವಂ​ ದುಬೆ, ಆರ್​. ಜಡೇಜಾ, ಅಕ್ಷರ್​ ಪಟೇಲ್​ ಆಯ್ಕೆಯಾಗಿದ್ದಾರೆ. ಸ್ಪಿನ್​ ವಿಭಾಗದಲ್ಲಿ ಕುಲ್ದೀಪ್​ ಯಾದವ್​​, ಚಹಾಲ್​​ ಹಾಗೂ ವೇಗಿ ವಿಭಾಗದಲ್ಲಿ ಅರ್ಷ್​​ದೀಪ್​ ಸಿಂಗ್​​, ಜಸ್​ಪ್ರೀತ್​ ಬೂಮ್ರಾ ಮತ್ತು ಸಿರಾಜ್​ಗೆ ಅವಕಾಶ ನೀಡಲಾಗಿದೆ.

ಇವರೊಂದಿಗೆ ರಿಂಕು ಸಿಂಗ್​​, ಶುಭ್ಮನ್​ ಗಿಲ್​​, ಖಲೀಲ್​ ಅಹ್ಮದ್​ ಮತ್ತು ಆವೇಶ್​ ಖಾನ್​ ಇದ್ದಾರೆ. ಟೀಮ್​ ಇಂಡಿಯಾದ ಉಪನಾಯಕರಾಗಿ ಹಾರ್ದಿಕ್​ ಪಾಂಡ್ಯ ಆಯ್ಕೆಯಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಟಿ20 ವಿಶ್ವಕಪ್​ಗೆ ಬಲಿಷ್ಠ ಟೀಮ್​ ಇಂಡಿಯಾ ಪ್ರಕಟ; ಪಂತ್​ ಕಮ್​ಬ್ಯಾಕ್​​; ಯಾರಿಗೆ ಸ್ಥಾನ?

https://newsfirstlive.com/wp-content/uploads/2024/01/Team-India.jpg

Load More