ಬೂಮ್ರಾ, ಸೂರ್ಯ ಔಟ್​! ಗಿಲ್​​ಗೆ ಇಲ್ಲ ಕ್ಯಾಪ್ಟನ್ಸಿ ಪಟ್ಟ.. ಏಷ್ಯಾಕಪ್​ ಟೂರ್ನಿಗೆ ಸಂಭಾವ್ಯ ಟೀಂ ಇಂಡಿಯಾ..!

author-image
Ganesh
Updated On
ಬೂಮ್ರಾ, ಸೂರ್ಯ ಔಟ್​! ಗಿಲ್​​ಗೆ ಇಲ್ಲ ಕ್ಯಾಪ್ಟನ್ಸಿ ಪಟ್ಟ.. ಏಷ್ಯಾಕಪ್​ ಟೂರ್ನಿಗೆ ಸಂಭಾವ್ಯ ಟೀಂ ಇಂಡಿಯಾ..!
Advertisment
  • ಕ್ಯಾಪ್ಟನ್ ಸೂರ್ಯ ಕುಮಾರ್​ ಯಾದವ್​​ ಆಡಲ್ಲ, ಯಾಕೆ..?
  • ಬೂಮ್ರಾ ನೇರವಾಗಿ ಟಿ-20 ವಿಶ್ವಕಪ್​​​ ಆಡಲು ಎಂಟ್ರಿ
  • ಅಕ್ಸರ್ ಪಟೇಲ್​ಗೆ ಉಪನಾಯಕನ ಪಟ್ಟ ಸಾಧ್ಯತೆ

ಏಷ್ಯಾ ಕಪ್ -2025 ಟೂರ್ನಿಗೆ ಬಿಸಿಸಿಐ ಮ್ಯಾನೇಜ್ಮೆಂಟ್​ ತೆರೆಮರೆಯಲ್ಲಿ ಸಜ್ಜಾಗುತ್ತಿದೆ. ಈ ಟೂರ್ನಿಯಲ್ಲಿ ಯಾರೆಲ್ಲ ಆಡಲು ಅವಕಾಶ ಪಡೆಯುತ್ತಾರೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ.

ಯಾಕೆಂದರೆ 2026 ಟಿ-20 ವಿಶ್ವಕಪ್​ ಪಂದ್ಯಕ್ಕೆ ಕೆಲವೇ ತಿಂಗಳು ಬಾಕಿಯಿರುವಾಗ ಏಷ್ಯಾ ಕಪ್ ನಡೆಯಲಿದೆ. ಏಷ್ಯಾಕಪ್​​ನಲ್ಲಿ ಆಡುವ ಬಹುತೇಕ ಆಟಗಾರರು ವಿಶ್ವಕಪ್​​ಗೂ ಆಯ್ಕೆ ಆಗಲಿದ್ದಾರೆ. ಹೀಗಾಗಿ ಯಂಗ್ ಇಂಡಿಯಾದಲ್ಲಿ ಯಾರೆಲ್ಲ ಇರಲಿದ್ದಾರೆ ಅನ್ನೋ ಚರ್ಚೆ ಶುರುವಾಗಿದೆ.

ಇದನ್ನೂ ಓದಿ: ಕಾರು ಡ್ರೈವರ್​​ ಮೇಲೆ MBA ವಿದ್ಯಾರ್ಥಿನಿಗೆ ಲವ್.. ಮದ್ವೆಯಾದ ಒಂದೇ ವರ್ಷದಲ್ಲಿ ಘೋರ ದುರಂತ..!

ಮಾಹಿತಿಗಳ ಪ್ರಕಾರ ಟಿ-20 ಕ್ಯಾಪ್ಟನ್ ಸೂರ್ಯ ಕುಮಾರ್ ಯಾದವ್ ಅವರು ಏಷ್ಯಾ ಕಪ್​​ನಲ್ಲಿ ಆಡೋದಿಲ್ಲ. ಇತ್ತೀಚೆಗೆ ಸೂರ್ಯ ಹರ್ನಿಯಾ ಸರ್ಜರಿಗೆ ಒಳಗಾಗಿದ್ದಾರೆ. ಹೀಗಾಗಿ ಅವರಿಗೆ ವಿಶ್ರಾಂತಿ ಹಿನ್ನೆಲೆಯಲ್ಲಿ ಸೂರ್ಯ ಕುಮಾರ್​ ಯಾದವ್ ಏಷ್ಯಾ ಕಪ್ ಮಿಸ್ ಮಾಡಿಕೊಳ್ಳಲಿದ್ದಾರೆ.

ಸೂರ್ಯ ಅಲಭ್ಯತೆಯಲ್ಲಿ ಟೀಂ ಇಂಡಿಯಾಗೆ ಯಾರು ಕ್ಯಾಪ್ಟನ್ ಅನ್ನೋ ಪ್ರಶ್ನೆ ಇದೆ. ಸದ್ಯ ಮಾಹಿತಿ ಪ್ರಕಾರ, ಸೂರ್ಯ ಬದಲಿಗೆ ಹಾರ್ದಿಕ್ ಪಾಂಡ್ಯ ಹೆಸರು ಕೇಳಿಬಂದಿದೆ. ಬ್ಯಾಟಿಂಗ್ ವಿಭಾಗದಲ್ಲಿ ಸಂಜು ಸ್ಯಾಮ್ಸನ್ಮ ತಿಲಕ್ ವರ್ಮಾ, ಅಭಿಷೇಕ್ ಶರ್ಮಾ, ಶ್ರೇಯಸ್ ಅಯ್ಯರ್, ರಿಂಕು ಸಿಂಗ್, ಧ್ರುವ್ ಜುರೇಲ್ ಇರಲಿದ್ದಾರೆ.

ಮಾತ್ರವಲ್ಲ ಶುಬ್ಮನ್ ಗಿಲ್ ಕೂಡ ಟಿ-20 ವಿಶ್ವಕಪ್ ಟೂರ್ನಿ ದೃಷ್ಟಿಯಿಂದ ತಂಡಕ್ಕೆ ಕಂಬ್ಯಾಕ್ ಮಾಡಲಿದ್ದಾರೆ. ಇನ್ನು, ಅಕ್ಸರ್ ಪಟೇಲ್​​ಗೆ ಉಪನಾಯಕ ಜವಾಬ್ದಾರಿ ಒಲಿಯುವ ಸಾಧ್ಯತೆ ಇದೆ. ಆಲ್​ರೌಂಡರ್ ಆಗಿ ಅಕ್ಷರ್​ ಪಟೇಲ್​​ ಪರಿಗಣಿಸಲಾಗಿದೆ. ಜೊತೆಗೆ ಎರಡನೇ ಆಲ್​ರೌಂಡರ್ ಆಗಿ ವಾಷಿಂಗ್ಟನ್ ಸುಂದರ್ ಹೆಸರು ಕೇಳಿಬಂದಿದೆ.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಘೋರ ದುರಂತ.. ಸರ್ಕಾರಿ ಶಾಲೆಯ ಕಟ್ಟಡ ಕುಸಿದು ನಾಲ್ವರು ಮಕ್ಕಳು ಬಲಿ..

ವೇಗದ ಬೌಲಿಂಗ್​ನಲ್ಲಿ ಅರ್ಷದೀಪ್​ ಹಾಗೂ ಸಿರಾಜ್, ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ ಹೆಸರು ಇದೆ. ಯಶ್ ದಯಾಳ್​​ಗೆ ಅವಕಾಶ ಸಿಕ್ಕರೂ ಅಚ್ಚರಿ ಇಲ್ಲ. ಇನ್ನು ಸ್ಟಾರ್ ವೇಗಿ ಜಸ್​ಪ್ರಿತ್ ಬೂಮ್ರಾ ತಂಡದಲ್ಲಿ ಇರೋದಿಲ್ಲ. ಅವರು ವಿಶ್ವಕಪ್​​​ಗೆ ಜಾಯಿನ್ ಆಗಲಿದ್ದಾರೆ. ಇನ್ನು, ಸ್ಪಿನ್ನರ್​​​ ವಿಭಾಗದಲ್ಲಿ ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ ಇರಲಿದ್ದಾರೆ.

ಏಷ್ಯಾ ಕಪ್​​ಗೆ ಟೀಂ ಇಂಡಿಯಾ: ಹಾರ್ದಿಕ್ ಪಾಂಡ್ಯ (ಕ್ಯಾಪ್ಟನ್), ಶುಬ್ಮನ್ ಗಿಲ್ , ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ, ಶ್ರೇಯಸ್ ಅಯ್ಯರ್, ತಿಲಕ್ ವರ್ಮಾ, ರಿಂಕು ಸಿಂಗ್, ಧ್ರುವ್ ಜರೇಲ್, ಅಕ್ಸರ್ ಪಟೇಲ್, ವಾಷಿಂಗ್ಟನ್ ಸುಂದರ್, ಹರ್ಷಿತ್ ರಾಣಾ/ಯಶ್ ದಯಾಳ್/ ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್, ಮೊಹ್ಮದ್ ಸಿರಾಜ್, ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ

ಇದನ್ನೂ ಓದಿ: ನೋವು ತಾಳಲಾರದೇ ಇಂಜೆಕ್ಷನ್ ಪಡೆದು ಬ್ಯಾಟ್ ಬೀಸಿದ ಪಂತ್.. ಇದೀಗ ಮತ್ತೊಂದು ಆಘಾತ..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment