ಭಾರತ-ಶ್ರೀಲಂಕಾ ನಡುವಿನ T20 ಸರಣಿ
ಅಭ್ಯಾಸ ಆರಂಭಿಸಿದ ಟೀಮ್ ಇಂಡಿಯಾ
ಸಿಂಹಳೀಯರ ಬೇಟೆಗೆ ಸೂರ್ಯಕುಮಾರ್ ಸಿದ್ಧ
T20 ಕ್ರಿಕೆಟ್ ಲೋಕದ ಸೂಪರ್ ಸ್ಟ್ರೈಕರ್ ಸೂರ್ಯಕುಮಾರ್ ಯಾದವ್ ಸಿಂಹಳೀಯರ ನಾಡಿಗೆ ಕಾಲಿಟ್ಟಾಗಿದೆ. ಬೌಂಡರಿ, ಸಿಕ್ಸರ್ಗಳ ಬ್ಯಾಂಡ್ ಬಜಾಯಿಸೋದೊಂದೇ ಬಾಕಿ ಉಳಿದಿರೋದು. ಟೀಮ್ ಇಂಡಿಯಾವನ್ನ ಎದುರಿಸಲು ಬಲಿಷ್ಠ ತಂಡವನ್ನೇ ಕಣಕ್ಕಿಳಿಸಿದ್ರೂ, ಲಂಕಾ ಪಡೆಗೆ ಸೂರ್ಯನ ಭಯ ಕಾಡ್ತಿದೆ. ಟೀಮ್ ಇಂಡಿಯಾ ಕ್ಯಾಪ್ಟನ್ ಈ ಹಿಂದೆ ಕೊಟ್ಟ ಏಟುಗಳು ಬಿಟ್ಟೂ ಬಿಡದೇ ಲಂಕನ್ನರನ್ನ ಕಾಡ್ತಿವೆ.
ಇಂಡೋ-ಲಂಕಾ ಟಿ20 ಸರಣಿ ಆರಂಭಕ್ಕೆ ಕೌಂಟ್ಡೌನ್ ಶುರುವಾಗಿದೆ. ಸೂಪರ್ ಶನಿವಾರ ಚುಟುಕು ದಂಗಲ್ಗೆ ಕಿಕ್ ಸ್ಟಾರ್ಟ್ ಸಿಗಲಿದೆ. ಈಗಾಗಲೇ ಸಿಂಹಳೀಯರ ನಾಡಿಗೆ ಕಾಲಿಟ್ಟಿರೋ ಟೀಮ್ ಇಂಡಿಯಾ ಅಭ್ಯಾಸದ ಕಣಕ್ಕೂ ಇಳಿದಿದೆ. ಹೊಸ ಕೋಚ್ ಗೌತಮ್ ಗಂಭೀರ್, ಹೊಸ ಕ್ಯಾಪ್ಟನ್ ಸೂರ್ಯ ಕುಮಾರ್ ಯಾದವ್ ಮಾರ್ಗದರ್ಶನದಲ್ಲಿ ನೆಟ್ಸ್ನಲ್ಲಿ ಬೆವರಿಳಿಸಿದೆ.
ಇದನ್ನೂ ಓದಿ:ಅಬಾರ್ಷನ್ ವೇಳೆ ಪ್ರಿಯತಮೆ ಸಾವು.. ಆಕೆಯ ಶವದ ಜೊತೆ ಇಬ್ಬರು ಮುದ್ದಾದ ಮಕ್ಕಳನ್ನೂ ನದಿಗೆ ಎಸೆದು ಸಾಯಿಸಿದ..
ಸಿಂಹಳೀಯರ ಬೇಟೆಗೆ ಸೂರ್ಯಕುಮಾರ್ ಸಿದ್ಧ
ಟಿ20 ತಂಡದ ಫುಲ್ ಟೈಮ್ ಕ್ಯಾಪ್ಟನ್ ಆದ ಬಳಿಕ ಮೊದಲ ಟಾಸ್ಕ್ಗೆ ಸೂರ್ಯಕುಮಾರ್ ಯಾದವ್ ಸಜ್ಜಾಗಿದ್ದಾರೆ. ಲಂಕನ್ನರ ಬೇಟೆಯಾಡಲು ಸಿಂಹಳೀಯರ ನಾಡಿಗೆ ಕಾಲಿಟ್ಟಿರೋ ಸೂರ್ಯ, ಅಭ್ಯಾಸದ ಕಣಕ್ಕೂ ಧುಮುಕಿದ್ದಾರೆ. ಅಕ್ಷರಶಃ ಹಸಿದ ಹೆಬ್ಬುಲಿಯಂತೆ ಸಿಂಹಳೀಯರನ್ನ ಭೇಟೆಯಾಡಲು ಸಜ್ಜಾಗಿದ್ದಾರೆ.
ಲಂಕಾ ಎದುರು ಧಗಧಗಿರಿಸುವ ಸೂರ್ಯ
ಶ್ರೀಲಂಕಾ ಎದುರಿನ ಪಂದ್ಯ ಅಂದ್ರೆ ಸಾಕು ಸೂರ್ಯಕುಮಾರ್ ಧಗಧಗಿಸಿ ಬಿಡ್ತಾರೆ. ಪ್ಯಾಡ್ ಕಟ್ಟಿ ಕ್ರೀಸ್ಗಿಳಿದ್ರೆ, ಬೌಂಡರಿ, ಸಿಕ್ಸರ್ಗಳ ಮೊರೆತ ಫಿಕ್ಸ್. ಅಭಿಮಾನಿಗಳಿಗಂತೂ ಭರ್ಜರಿ ಟ್ರೀಟ್ ಗ್ಯಾರಂಟಿ. ಈ ಹಿಂದೆ ಕೊಟ್ಟಿರೋ ಏಟುಗಳೇ ಲಂಕನ್ನರನ್ನ ಇಂದಿಗೂ ಬಿಡಿದೇ ಕಾಡ್ತಿವೆ. ಲಂಕಾ ಎದುರು ಆಡಿದ ಪಂದ್ಯಗಳಲ್ಲಿ ಸೂರ್ಯ ಕೊಟ್ಟಿರೋ ಒಂದೊಂದು ಹೊಡೆತಗಳೂ ಮುಟ್ಟಿ ನೋಡಿಕೊಳ್ಳುವಂತಿವೆ.
ಇದನ್ನೂ ಓದಿ:ಸೂಪರ್ ಸ್ಟಾರ್ಗಾಗಿ ಕಪ್ ಗೆಲ್ಲಿಸಿಕೊಟ್ಟ ಹೀರೋಗೆ ಅನ್ಯಾಯ..? ಗುಜರಾತ್ ಟೈಟನ್ಸ್ನಲ್ಲಿ ಭಾರೀ ಬದಲಾವಣೆ..!
ಬರೋಬ್ಬರಿ 63.50ರ ಸರಾಸರಿ.. 158ರ ಸ್ಟ್ರೈಕ್ರೇಟ್..!
ಶ್ರೀಲಂಕಾ ಎದುರು ಈ ಹಿಂದೆ ಆಡಿದ ಪಂದ್ಯಗಳಲ್ಲಿ ಸೂರ್ಯಕುಮಾರ್ ಯಾದವ್ ಬೌಲರ್ಗಳನ್ನ ಚೆಂಡಾಡಿದ್ದಾರೆ. ಬರೋಬ್ಬರಿ 63.50ರ ಸರಾಸರಿಯಲ್ಲಿ ರನ್ ಕಲೆ ಹಾಕಿದ್ದಾರೆ. ಬೌಂಡರಿ-ಸಿಕ್ಸರ್ಗಳಲ್ಲೇ ರನ್ ಡೀಲ್ ಮಾಡಿರೋ ಸೂರ್ಯಕುಮಾರ್ರ ಬ್ಯಾಟಿಂಗ್ ಸ್ಟ್ರೈಕ್ರೇಟ್ 158.75.
ಶ್ರೀಲಂಕಾ ಎದುರು ಸೂರ್ಯಕುಮಾರ್
ಶ್ರೀಲಂಕಾ ಎದುರು 5 T20 ಇನ್ನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ಸೂರ್ಯಕುಮಾರ್ ಯಾದವ್, 254 ರನ್ ಕಲೆ ಹಾಕಿದ್ದಾರೆ. 1 ಶತಕ, 1 ಅರ್ಧಶತಕ ಸಿಡಿಸಿ ಮಿಂಚಿರುವ ಮಿಸ್ಟರ್ 360 ಡಿಗ್ರಿ ಬ್ಯಾಟರ್, 17 ಬೌಂಡರಿ, 15 ಸಿಕ್ಸರ್ ಚಚ್ಚಿದ್ದು, 158.75ರ ಸ್ಟ್ರೈಕ್ರೇಟ್ ಹೊಂದಿದ್ದಾರೆ.
ಸೂರ್ಯಕುಮಾರ್ ಯಾದವ್ ಈಗಾಗ್ಲೇ ಸಾಕಷ್ಟು ಸಲ ಲಂಕಾ ದಹನ ಮಾಡಿದ್ದಾರೆ. ಇದೀಗ ಸಿಂಹಳೀಯರ ನಾಡಲ್ಲಿ ಮತ್ತೊಮ್ಮೆ ತಮ್ಮ ತಾಕತ್ತನ್ನ ತೋರಿಸಲು ರೆಡಿಯಾಗಿದ್ದಾರೆ. ಈ ಬಾರಿ ಶ್ರೀಲಂಕಾ ತಂಡ ಅಷ್ಟು ಸುಲಭಕ್ಕೆ ಶರಣಾಗಲು ಸಿದ್ಧವಿಲ್ಲ. ಸೂರ್ಯನನ್ನ ಕಟ್ಟಿ ಹಾಕಲು ಬಲಿಷ್ಟ ಬೌಲಿಂಗ್ ಪಡೆಯನ್ನೇ ಫೀಲ್ಡ್ಗಿಳಿಸಿದೆ. ಸೂರ್ಯನಿಗೆ ಈಗ ರಿಯಲ್ ಚಾಲೆಂಜ್ ಎದುರಾಗಲಿದೆ.
ಇದನ್ನೂ ಓದಿ:ರಾಹುಲ್ ದ್ರಾವಿಡ್ IPLಗೆ ರಿಟರ್ನ್.. KKRಗೆ ಬಿಗ್ ಶಾಕ್.. ಈ ತಂಡದ ನೂತನ ಕೋಚ್..!
ಟೀಮ್ ಇಂಡಿಯಾ ಎದುರಿನ ಸರಣಿಯಲ್ಲಿ ಶ್ರೀಲಂಕಾ ತಂಡ ಸ್ಟ್ರಾಂಗ್ ಬೌಲಿಂಗ್ ಅಟ್ಯಾಕ್ನ ಕಣಕ್ಕಿಳಿಸಲು ರೆಡಿಯಾಗಿದೆ. ಸ್ಟಾರ್ ಸ್ಪಿನ್ನರ್ಗಳಾದ ವನಿಂದು ಹಸರಂಗ, ಮಹೀಶಾ ತೀಕ್ಷಣ ಬೆರಳಲ್ಲೇ ಮ್ಯಾಜಿಕ್ ಮಾಡೋ ಸಾಮರ್ಥ್ಯ ಹೊಂದಿದ್ದಾರೆ. ಥೇಟ್ ಮಲಿಂಗರಂತೆ ಬೌಲಿಂಗ್ ಮಾಡೋ ಮಥಿಶಾ ಪತಿರಣ ಸೂರ್ಯನಿಗೆ ನಿಜಕ್ಕೂ ಸವಾಲಾಗಲಿದ್ದಾರೆ.
ಶ್ರೀಲಂಕಾದಲ್ಲಿ ಅತ್ಯುತ್ತಮ ಯುವ ಬೌಲರ್ಸ್ ಇದಾರೆ ನಿಜ. ಸೂರ್ಯನ ಶಾಖವನ್ನ ಇವ್ರು ತಡೆದುಕೊಳ್ತಾರಾ ಅನ್ನೋದು ದೊಡ್ಡ ಪ್ರಶ್ನೆಯಾಗಿದೆ. ವಿಶ್ವದ ಸೂಪರ್ ಸ್ಟಾರ್ ಬೌಲರ್ಗಳನ್ನೇ ಚಿಂದಿ ಉಡಾಯಿಸಿದ ಇತಿಹಾಸ ಸೂರ್ಯನದ್ದು. ಸಿಂಹಳೀಯರ ನಾಡಲ್ಲೂ ಸೂರ್ಯ ಸಿಡಿದ್ದೆದ್ರೆ ಯುವ ಬೌಲರ್ಸ್ ಚಿಂದಿ ಚಿತ್ರಾನ್ನ ಆಗೋದು ಪಕ್ಕಾ.
ಇದನ್ನೂ ಓದಿ:ಬೆಳ್ಳಂಬೆಳಗ್ಗೆ ಚಿಕ್ಕಬಳ್ಳಾಪುರದಲ್ಲಿ ಶೂಟೌಟ್.. ಚಿಕ್ಕಪ್ಪನಿಂದಲೇ ಅಣ್ಣನ ಮಗನ ಬರ್ಬರ ಕೊಲೆ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್