Advertisment

2ನೇ ಟಿ20 ಪಂದ್ಯದಲ್ಲಿ ಕೈ ಕೊಟ್ಟ ಅಭಿಷೇಕ್​ ಶರ್ಮಾ; ಟೀಮ್​ ಇಂಡಿಯಾದಿಂದ ಗೇಟ್​ಪಾಸ್​

author-image
Ganesh Nachikethu
Updated On
2ನೇ ಟಿ20 ಪಂದ್ಯದಲ್ಲಿ ಕೈ ಕೊಟ್ಟ ಅಭಿಷೇಕ್​ ಶರ್ಮಾ; ಟೀಮ್​ ಇಂಡಿಯಾದಿಂದ ಗೇಟ್​ಪಾಸ್​
Advertisment
  • ಮೊದಲ ಟಿ20 ಪಂದ್ಯದಲ್ಲಿ ಗೆದ್ದು ಬೀಗಿದ ಟೀಮ್​ ಇಂಡಿಯಾ
  • 2ನೇ ಟಿ20 ಪಂದ್ಯದಲ್ಲೂ ಗೆಲ್ಲೋ ವಿಶ್ವಾಸದಲ್ಲಿ ಭಾರತ ತಂಡ!
  • ಮಹತ್ವದ ಪಂದ್ಯದಲ್ಲೇ ಟೀಮ್​ ಇಂಡಿಯಾಗೆ ಕೈಕೊಟ್ಟ ಬ್ಯಾಟರ್ಸ್​​

ಇಂದು ಟೀಮ್​ ಇಂಡಿಯಾ, ಸೌತ್​ ಆಫ್ರಿಕಾ ಮಧ್ಯೆ 2ನೇ ಟಿ20 ಪಂದ್ಯ ನಡೆಯಲಿದೆ. 2ನೇ ಪಂದ್ಯ ಗೆದ್ದು ಟಿ20 ಸರಣಿ ಗೆಲ್ಲೋ ಯೋಚನೆಯಲ್ಲಿ ಟೀಮ್​ ಇಂಡಿಯಾ ಇದೆ. ಟಾಸ್​ ಸೋತ್ರೂ ಫಸ್ಟ್​ ಬ್ಯಾಟಿಂಗ್​​ ಮಾಡಿದ ಟೀಮ್​ ಇಂಡಿಯಾಗೆ ಆರಂಭದಲ್ಲೇ ಆಘಾತ ಎದುರಾಗಿತ್ತು.

Advertisment

2ನೇ ಟಿ20 ಪಂದ್ಯದಲ್ಲಿ ಟೀಮ್​ ಇಂಡಿಯಾ 20 ಓವರ್​​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ ಕೇವಲ 124 ರನ್​ ಕಲೆ ಹಾಕಿ ಸಾಧಾರಣ ಟಾರ್ಗೆಟ್​ ನೀಡಿದೆ. ಪವರ್​ ಪ್ಲೇನಲ್ಲೇ ತಂಡ ಪ್ರಮುಖ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಅದರಲ್ಲೂ ತಂಡದ ಓಪನರ್​ ಆಗಿ ಬಂದ ಅಭಿಷೇಕ್​ ಶರ್ಮಾ ಬೇಗ ಔಟ್​ ಆಗಿ ಪೆವಿಲಿಯನ್​​ ಸೇರಿದ್ರು.

ಮತ್ತೆ ಕೈಕೊಟ್ಟ ಅಭಿಷೇಕ್​​

ಟೀಮ್ ಇಂಡಿಯಾದ ಸ್ಟಾರ್​ ಯುವ ಬ್ಯಾಟರ್​ ಅಭಿಷೇಕ್‌ ಶರ್ಮಾ. ಇವರು ರನ್‌ ಕಲೆ ಹಾಕುವಲ್ಲಿ ಫೇಲ್ಯೂರ್​ ಆಗುತ್ತಿದ್ದಾರೆ. ಹೀಗಾಗಿ ಟೀಮ್​ ಇಂಡಿಯಾಗೆ ಅಭಿಷೇಕ್​ ಶರ್ಮಾ ಅವರದ್ದು ದೊಡ್ಡ ಚಿಂತೆಯಾಗಿದೆ. ಕಾರಣ ಇವರು ಇದುವರೆಗೆ ಆಡಿರೋ 9 ಇನ್ನಿಂಗ್ಸ್​​ನಲ್ಲಿ 1 ಶತಕ ಸಿಡಿಸಿದ್ರು. ಉಳಿದ 8 ಇನ್ನಿಂಗ್ಸ್‌ಗಳಲ್ಲಿ ಅಭಿಷೇಕ್​ ಹೈಎಸ್ಟ್​​ ಸ್ಕೋರ್​​ ಕೇವಲ 16 ರನ್​​.

ಗೇಕೆಬರ್ಹಾದಲ್ಲಿ ನಡೆಯುತ್ತಿರೋ ಪಂದ್ಯದಲ್ಲಿ ಅಭಿಷೇಕ್ ಮತ್ತೊಮ್ಮೆ ಫೇಲ್ಯೂರ್​ ಆದ್ರು. ಅಭಿಷೇಕ್​ ಶರ್ಮಾ ಅವರಿಂದ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಉತ್ತಮ ಇನ್ನಿಂಗ್ಸ್ ನಿರೀಕ್ಷಿಸಲಾಗಿತ್ತು. ಈ ಪಂದ್ಯದಲ್ಲಿ ಕೇವಲ 4 ರನ್​ಗೆ ಔಟ್​ ಆಗಿದ್ದು, ಮೊದಲ ಪಂದ್ಯದಲ್ಲೂ ರನ್ ಗಳಿಸುವಲ್ಲಿ ವಿಫಲರಾಗಿದ್ದಾರೆ. ಇನಿಂಗ್ಸ್‌ನ 2ನೇ ಓವರ್‌ನಲ್ಲಿ ಜೆರಾಲ್ಡ್ ಕೋಟ್ಜಿ ಎಸೆತದಲ್ಲಿ ಮಾರ್ಕೊ ಯಾನ್ಸೆನ್​ಗೆ ಕ್ಯಾಚಿತ್ತು ಔಟಾದರು. ಇದಕ್ಕೂ ಮುನ್ನ ಡರ್ಬನ್‌ನಲ್ಲಿ ನಡೆದ ಪಂದ್ಯದಲ್ಲಿ 7 ರನ್ ಗಳಿಸಿ ವಿಕೆಟ್​​ ಒಪ್ಪಿಸಿದ್ರು.

Advertisment

ತಂಡದಿಂದ ಕೈ ಬಿಡೋದು ಪಕ್ಕಾ

ಕಳಪೆ ಪ್ರದರ್ಶನ ನೀಡುತ್ತಿರೋ ಕಾರಣ ಅಭಿಷೇಕ್​​ ಶರ್ಮಾ ಅವರನ್ನು ಮುಂದಿನ 2 ಪಂದ್ಯಗಳಿಂದ ಕೈ ಬಿಡಬೇಕು ಅನ್ನೋ ಕೂಗು ಕೇಳಿ ಬಂದಿದೆ. ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಲ್ಲಿ ಅಭಿಷೇಕ್ ಅವರು ಶತಕದ ನಂತರ ಯಾವುದೇ ದೊಡ್ಡ ಇನ್ನಿಂಗ್ಸ್ ಆಡಲಿಲ್ಲ. ಇತ್ತೀಚೆಗೆ ನಡೆದ ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿಯೂ ಸಹ ಅಭಿಷೇಕ್ ಕಳಪೆ ಪ್ರದರ್ಶನ ನೀಡಿದ್ರು.

ಟೀಮ್​ ಇಂಡಿಯಾ ಪ್ಲೇಯಿಂಗ್​ ಎಲೆವೆನ್​ ಹೀಗಿದೆ!

ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್ (ಕ್ಯಾಪ್ಟನ್​), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಅಕ್ಸರ್ ಪಟೇಲ್, ರವಿ ಬಿಷ್ಣೋಯ್, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್, ಆವೇಶ್​ ಖಾನ್​​.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment