ಹಾರ್ದಿಕ್​​ ಪಾಂಡ್ಯಗೆ ಬಿಗ್​ ಶಾಕ್​ ಕೊಟ್ಟ ಬಿಸಿಸಿಐ; ಟೀಮ್​ ಇಂಡಿಯಾದಿಂದಲೇ ಔಟ್​

author-image
Ganesh Nachikethu
Updated On
ಅಭಿಷೇಕ್​ ಶರ್ಮಾ ಅಬ್ಬರದ ಬ್ಯಾಟಿಂಗ್​; ಇಂಗ್ಲೆಂಡ್​ ವಿರುದ್ಧ ಭಾರತಕ್ಕೆ ರೋಚಕ ಗೆಲುವು
Advertisment
  • ನಾಳೆ ಟೀಮ್​ ಇಂಡಿಯಾ, ಇಂಗ್ಲೆಂಡ್ ನಡುವಿನ 4ನೇ ಟಿ20
  • ಪುಣೆ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯಲಿರೋ ಪಂದ್ಯ..!
  • ಟೀಮ್​ ಇಂಡಿಯಾದಿಂದ ಸ್ಟಾರ್​ ಆಲ್​ರೌಂಡರ್​ಗೆ ಕೊಕ್

ಇತ್ತೀಚೆಗೆ ರಾಜ್​ಕೋಟ್​ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ 3ನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್​ ವಿರುದ್ಧ ಟೀಮ್​ ಇಂಡಿಯಾ ಹೀನಾಯ ಸೋಲು ಕಂಡಿದೆ. ಕಳೆದ 2 ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಬ್ಯಾಟರ್​ಗಳು 3ನೇ ಟಿ20ಯಲ್ಲಿ ಕೈ ಕೊಟ್ಟರು. ರನ್​​ ಕಲೆ ಹಾಕಲು ಪರದಾಡಿದರು.

2ನೇ ಟಿ20 ಪಂದ್ಯದಲ್ಲಿ ಟಾಪ್​ ಆರ್ಡರ್​ ಬ್ಯಾಟರ್​ಗಳು ಕೈ ಕೊಟ್ಟಾಗ ತಿಲಕ್​ ವರ್ಮಾ ಭಾರತ ತಂಡವನ್ನು ಸೋಲಿನಿಂದ ಪಾರು ಮಾಡಿದ್ರು. ಮೂರನೇ ಟಿ20 ಪಂದ್ಯದಲ್ಲಿ ಭಾರತಕ್ಕೆ ಸರಣಿ ಗೆಲ್ಲುವ ಉತ್ತಮ ಅವಕಾಶವಿತ್ತು. ಆದರೆ ಅದು ಸಾಧ್ಯವಾಗಲಿಲ್ಲ.

ಗೆಲ್ಲಲೇಬೇಕಾದ ಒತ್ತಡದಲ್ಲಿ ಭಾರತ

ಟೀಮ್​ ಇಂಡಿಯಾ 4ನೇ ಟಿ20 ಪಂದ್ಯ ಗೆಲ್ಲಲೇಬೇಕಾಗಿದೆ. ಜನವರಿ 31ನೇ ತಾರೀಕಿನಂದು ಟೀಮ್​ ಇಂಡಿಯಾ ಪುಣೆ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಇಂಗ್ಲೆಂಡ್​ ವಿರುದ್ಧ ಸೆಣಸಲಿದೆ. ಇದಕ್ಕಾಗಿ ಟೀಮ್​ ಇಂಡಿಯಾದಲ್ಲಿ ಮೇಜರ್​ ಸರ್ಜರಿ ಆಗಲಿದೆ.

ಹಾರ್ದಿಕ್​ ಪಾಂಡ್ಯಗೆ ಕೊಕ್​​

ಭಾರತ ಕ್ರಿಕೆಟ್​ ತಂಡದ ಸ್ಟಾರ್​​ ಆಲ್​ರೌಂಡರ್​​ ಹಾರ್ದಿಕ್​ ಪಾಂಡ್ಯ. ಇವರು ಬಹಳ ಅಪಾಯಕಾರಿ ಬ್ಯಾಟರ್​ ಕೂಡ ಹೌದು. ಹಾಗೆಯೇ ತಂಡದ ಮೂರನೇ ಆಲ್​ರೌಂಡರ್​​ ಬೌಲರ್​​ ಪಾತ್ರ ಕೂಡ ನಿರ್ವಹಿಸಲಿದ್ದಾರೆ. ಈಗಾಗಲೇ ಇಂಗ್ಲೆಂಡ್​ ವಿರುದ್ಧ 3 ಟಿ20 ಪಂದ್ಯ ಆಡಿರೋ ಹಾರ್ದಿಕ್​ ಪಾಂಡ್ಯಗೆ 4ನೇ ಪಂದ್ಯದಿಂದ ರೆಸ್ಟ್​ ನೀಡಬಹುದು.

ಟೀಮ್​ ಇಂಡಿಯಾ ಆಟಗಾರರು ಮುಂಬರೋ ಏಕದಿನ ಸರಣಿ ಮತ್ತು ಚಾಂಪಿಯನ್ಸ್ ಟ್ರೋಫಿಗೆ ಸಿದ್ಧರಾಗಬೇಕಿದೆ. ಹಾರ್ದಿಕ್​ ಪಾಂಡ್ಯ ಅವರಿಗೂ ರೆಸ್ಟ್​ ಬೇಕಿದೆ. ಹೀಗಾಗಿ ಹಾರ್ದಿಕ್ ಬದಲಿಗೆ ಶಿವಂ ದುಬೆ ಅವರನ್ನು ಪ್ಲೇಯಿಂಗ್-11 ರಲ್ಲಿ ಅವಕಾಶ ಪಡೆಯಬಹುದು.

4ನೇ ಟಿ20ಗೆ ಭಾರತದ ಸಂಭಾವ್ಯ ಪ್ಲೇಯಿಂಗ್-11

ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಶಿವಂ ದುಬೆ, ರಿಂಕು ಸಿಂಗ್, ಅಕ್ಷರ್​ ಪಟೇಲ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ.

ಇದನ್ನೂ ಓದಿ:4ನೇ ಟಿ20 ಪಂದ್ಯಕ್ಕೆ ಬಲಿಷ್ಠ ಟೀಮ್​ ಇಂಡಿಯಾ ಕಣಕ್ಕೆ; ಸ್ಟಾರ್​​ ಆಟಗಾರರಿಗೆ ತಂಡದಿಂದ ಗೇಟ್​ಪಾಸ್​​​

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment