/newsfirstlive-kannada/media/post_attachments/wp-content/uploads/2024/06/Kohli_Rohit_IND1.jpg)
ಟೀಮ್​ ಇಂಡಿಯಾದ ಸ್ಟಾರ್​ ಬ್ಯಾಟರ್​​. ಕೇವಲ 24 ವರ್ಷಕ್ಕೆ ಇವರ ಕ್ರಿಕೆಟ್​​ ಕರಿಯರ್​ ಮುಗಿದು ಹೋಯ್ತಾ? ಅನ್ನೋ ಚರ್ಚೆ ಶುರುವಾಗಿದೆ. ಇದಕ್ಕೆ ಕಾರಣ ಬಿಸಿಸಿಐ ಸೆಲೆಕ್ಷನ್​ ಕಮಿಟಿ ಈ ಆಟಗಾರನಿಗೆ ಯಾವುದೇ ಪ್ರಾಮುಖ್ಯತೆ ನೀಡುತ್ತಿಲ್ಲ ಎಂಬುದು.
ಕಳೆದ 3 ವರ್ಷಗಳಿಂದ ಟೀಮ್​ ಇಂಡಿಯಾದಲ್ಲಿ ಸ್ಥಾನ ಪಡೆಯಲು ಸಾಕಷ್ಟು ಪ್ರಯತ್ನ ನಡೆಸಿದ್ರೂ ಯಾವುದೇ ಪ್ರಯೋಜನ ಇಲ್ಲ. ವಿಶೇಷ ಎಂದರೆ ಆರಂಭದಲ್ಲಿ ಈತನನ್ನು ಸೆಹ್ವಾಗ್​​ ಮತ್ತು ಸಚಿನ್​​ ತೆಂಡೂಲ್ಕರ್​ ಅವರಿಗೆ ಕಂಪೇರ್​​ ಮಾಡಿದವರೇ ಇಂದು ತುಟಿಕ್​​ ಪಿಟಿಕ್​ ಎನ್ನುತ್ತಿಲ್ಲ. ಟೀಮ್ ಇಂಡಿಯಾ ಪರ ಅನೇಕ ಅದ್ಭುತ ಇನ್ನಿಂಗ್ಸ್ ಆಡಿದ್ರೂ ಬಿಸಿಸಿಐನಿಂದ ಮನ್ನಣೆ ಗಳಿಸದ ಆಟಗಾರ ಪೃಥ್ವಿ ಶಾ.
ಇತ್ತೀಚೆಗಷ್ಟೇ ಬಿಸಿಸಿಐ ಆಯ್ಕೆ ಸಮಿತಿ ಬಾಂಗ್ಲಾದೇಶ ವಿರುದ್ಧದ 3 ಪಂದ್ಯಗಳ ಟಿ20 ಸರಣಿಗೆ ಬಲಿಷ್ಠ ಟೀಮ್​​ ಇಂಡಿಯಾ ಪ್ರಕಟವಾಗಿದೆ. ಮುಂದಿನ ವಾರ ಎಂದರೆ ಅಕ್ಟೋಬರ್​​​ 6ನೇ ತಾರೀಕಿನಿಂದ 12 ರವರೆಗೆ ಭಾರತ, ಬಾಂಗ್ಲಾ ನಡುವಿನ ಟಿ20 ಸರಣಿ ನಡೆಯಲಿದೆ. ಈ ಸರಣಿಗೆ ಯುವ ಸ್ಟಾರ್ ಬ್ಯಾಟರ್ ಪೃಥ್ವಿ ಶಾ ಅವರನ್ನು ಆಯ್ಕೆ ಮಾಡಿಲ್ಲ.
/newsfirstlive-kannada/media/post_attachments/wp-content/uploads/2024/01/prithvi-shaw.jpg)
ಯುವ ಕ್ರಿಕೆಟರ್​ ಕರಿಯರ್​ ಮುಗಿಯಿತಾ?
ಯಾವುದೇ ಸಂದರ್ಭ ಆಗಲಿ ಪಂದ್ಯದ ದಿಕ್ಕನ್ನೇ ಬದಲಾಯಿಸೋ ಸಾಮರ್ಥ್ಯ ಪೃಥ್ವಿ ಶಾ ಹೊಂದಿದ್ದಾರೆ. ಇಷ್ಟೆಲ್ಲಾ ಸಾಮರ್ಥ್ಯ ಇದ್ರೂ ಇವರಿಗೆ ಟೀಮ್​ ಇಂಡಿಯಾದಲ್ಲಿ ಆಡಲು ಅವಕಾಶವೇ ನೀಡುತ್ತಿಲ್ಲ. ಬಿಗ್​ ಶಾಟ್​ಗಳಿಗೆ ಹೆಸರು ವಾಸಿಯಾಗಿರೋ ಇವರು ಕಳೆದ ಮೂರು ವರ್ಷಗಳಿಂದ ಟೀಮ್​ ಇಂಡಿಯಾ ಪರ ಆಡೇ ಇಲ್ಲ. ಹಾಗಾಗಿ ಇವರ ಕ್ರಿಕೆಟ್​ ಕರಿಯರ್​​ ಮುಗಿಯಿತಾ? ಎಂಬ ಪ್ರಶ್ನೆ ಎದ್ದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us