/newsfirstlive-kannada/media/post_attachments/wp-content/uploads/2024/11/Kohli_Out.jpg)
ಟೀಮ್ ಇಂಡಿಯಾ, ನ್ಯೂಜಿಲೆಂಡ್ ತಂಡದ ನಡುವಿನ ಕೊನೆಯ ಟೆಸ್ಟ್ ನಡೆಯುತ್ತಿದೆ. ಮೊದಲ ದಿನದ ಆಟಕ್ಕೆ ಭಾರತ ಕ್ರಿಕೆಟ್ ತಂಡದ ಬ್ಯಾಟಿಂಗ್ ಚಿತ್ರಣವೇ ಬದಲಾಗಿ ಹೋಗಿದೆ.
ಮುಂಬೈನ ವಾಂಖೆಡೆ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಮಾಡಿದೆ. ಟೀಮ್ ಇಂಡಿಯಾ ನ್ಯೂಜಿಲೆಂಡ್ ತಂಡವನ್ನು ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 235 ರನ್ಗಳಿಗೆ ಆಲೌಟ್ ಮಾಡಿದೆ. ಜಡೇಜಾ 65 ರನ್ ನೀಡಿ 5 ವಿಕೆಟ್ ತೆಗೆದರೆ, ವಾಷಿಂಗ್ಟನ್ ಸುಂದರ್ 81 ರನ್ ನೀಡಿ 4 ವಿಕೆಟ್ ಕಿತ್ತರು.
ಕೇವಲ 8 ಬಾಲ್ನಲ್ಲಿ 3 ವಿಕೆಟ್ ಪತನ
ನ್ಯೂಜಿಲೆಂಡ್ ತಂಡದ ಸಾಧಾರಣ ಟಾರ್ಗೆಟ್ ಬೆನ್ನತ್ತಿದ ಟೀಮ್ ಇಂಡಿಯಾ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡಿದೆ. ಕೇವಲ 8 ಎಸೆತಗಳ ಅಂತರದಲ್ಲಿ ಬರೋಬ್ಬರಿ 3 ವಿಕೆಟ್ ಉರುಳಿದವು. ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ (30) ಮತ್ತು ಶುಭ್ಮನ್ ಗಿಲ್ (31 ಅಜೇಯ) ರನ್ ಗಳಿಸಿದ್ರು. ನಾಯಕ ರೋಹಿತ್ ಶರ್ಮಾ ಕೂಡ (18) ಇನಿಂಗ್ಸ್‌ಗೆ ಕೊಡುಗೆ ನೀಡುವಲ್ಲಿ ವಿಫಲವಾದರು.
ಮತ್ತೆ ಕೈ ಕೊಟ್ಟ ಕೊಹ್ಲಿ
ಮೂರನೇ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲೂ ಕೊಹ್ಲಿ ಬ್ಯಾಟಿಂಗ್ ವೈಫಲ್ಯ ಮುಂದುವರಿದಿದೆ. ಕೇವಲ 4 ರನ್ಗಳಿಗೆ ವಿರಾಟ್ ಕೊಹ್ಲಿ ಔಟ್ ಆಗಿದ್ದಾರೆ. ದಿನದಾಟದ ಕೊನೆಯಲ್ಲಿ ಅನಗತ್ಯ ರನ್‌ಗಾಗಿ ಓಡಿ ಕೊಹ್ಲಿ ರನೌಟ್ ಆದರು. ಈ ಮೂಲಕ ಭಾರತ ತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ರು. ಭಾರತ ತಂಡ 19 ಓವರ್ನಲ್ಲಿ 4 ವಿಕೆಟ್ ಕಳೆದುಕೊಂಡು 86 ರನ್ ಕಲೆ ಹಾಕಿದೆ.
Atleast Virat Kohli dived against New Zealand ? pic.twitter.com/gho5sInLf8
— M. (@IconicKohIi)
Atleast Virat Kohli dived against New Zealand 💔 pic.twitter.com/gho5sInLf8
— M. (@IxonicKohli) November 1, 2024
">November 1, 2024
ಎರಡು ಪಂದ್ಯಗಳಲ್ಲಿ ಹೀನಾಯ ಸೋಲು
ಟೀಮ್ ಇಂಡಿಯಾ ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ 8 ವಿಕೆಟ್‌ಗಳಿಂದ ಸೋತಿತ್ತು. ಬಳಿಕ ಪುಣೆಯಲ್ಲಿ ನಡೆದ 2ನೇ ಟೆಸ್ಟ್‌ನಲ್ಲಿ 113 ರನ್‌ಗಳ ಪರಾಜಯ ಅನುಭವಿಸಿದೆ. ಇದು ಮುಂದಿನ ವಿಶ್ವಟೆಸ್ಟ್ ಚಾಂಪಿಯನ್ಶಿಪ್ ಟ್ರೋಫಿ ಪರಿಣಾಮ ಬೀರಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ