ಕೆ.ಎಲ್​ ರಾಹುಲ್​ಗೆ ಬಿಗ್​ ಶಾಕ್​​; ಸ್ಟಾರ್​ ಬ್ಯಾಟರ್​​ ರಿಷಬ್​ ಪಂತ್​ಗೆ ಭರ್ಜರಿ ಗುಡ್​ನ್ಯೂಸ್​​

author-image
Ganesh Nachikethu
Updated On
ಚಾಂಪಿಯನ್ಸ್​ ಟ್ರೋಫಿಯಲ್ಲಿ KL ರಾಹುಲ್​​​​ಗೆ ಜಾಗವೇ ಇಲ್ಲ.. ಯಾಕೆಂದರೆ..
Advertisment
  • ಐಸಿಸಿ 2025ರ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್!
  • ಟೀಮ್​ ಇಂಡಿಯಾ, ಆಸ್ಟ್ರೇಲಿಯಾ ತಂಡಗಳು ಕಾದಾಟ
  • ವಿಕೆಟ್ ಕೀಪರ್ ರಿಷಬ್​ ಪಂತ್​​ಗೆ ಭರ್ಜರಿ ಗುಡ್​ನ್ಯೂಸ್​​

ಐಸಿಸಿ 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್​​ ಇಂಡಿಯಾದ ಭಾಗವಾಗಿರೋ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್​ ಪಂತ್​. ಇವರಿಗೆ ಇನ್ನೂ ಟೀಮ್​ ಇಂಡಿಯಾ ಪ್ಲೇಯಿಂಗ್​ ಎಲೆವೆನ್​ನಲ್ಲಿ ಅವಕಾಶ ಸಿಕ್ಕಿಲ್ಲ. ಕನ್ನಡಿಗ ಕೆ.ಎಲ್​​ ರಾಹುಲ್​​ ಮೇಲೆ ಭರವಸೆ ಇಟ್ಟು ಬಿಸಿಸಿಐ ಸೆಲೆಕ್ಷನ್​ ಕಮಿಟಿ ಆಯ್ಕೆ ಮಾಡಿದೆ. ಹಾಗೆಯೇ ಮೂರು ಪಂದ್ಯಗಳಲ್ಲೂ ರಾಹುಲ್​ ಅವರನ್ನೇ ಕಣಕ್ಕಿಳಿಸಿದೆ.

ಕೆ.ಎಲ್​ ರಾಹುಲ್​ ಜೊತೆಗೆ 2ನೇ ವಿಕೆಟ್ ಕೀಪರ್ ಆಗಿ ತಂಡಕ್ಕೆ ಆಯ್ಕೆಯಾಗಿದ್ದ ರಿಷಬ್ ಪಂತ್ ಬೆಂಚ್ ಕಾಯಬೇಕಾಗಿತ್ತು. ಈ ನಡುವೆ ಪಂತ್‌ಗೆ ಒಂದು ಒಳ್ಳೆಯ ಸುದ್ದಿ ಸಿಕ್ಕಿದೆ. ಮುಂದಿನ ಪಂದ್ಯದಲ್ಲಿ ಇವರಿಗೆ ಚಾನ್ಸ್​ ಸಿಗೋದು ಪಕ್ಕಾ ಆಗಿದೆ.

ನಾಳೆ ನಡೆಯಲಿರೋ 2025ರ ಐಸಿಸಿ ಚಾಂಪಿಯನ್ಸ್​ ಟ್ರೋಫಿ ಸೆಮಿಫೈನಲ್​ ಪಂದ್ಯದಲ್ಲಿ ಟೀಮ್​ ಇಂಡಿಯಾ, ಆಸ್ಟ್ರೇಲಿಯಾ ತಂಡಗಳು ಕಾದಾಟ ನಡೆಸಲಿವೆ. ಹೇಗಾದ್ರೂ ಮಾಡಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿ ಹಳೆಯ ಸೇಡು ತೀರಿಸಿಕೊಳ್ಳಲು ಟೀಮ್​ ಇಂಡಿಯಾ ಆಟಗಾರರು ಮುಂದಾಗಿದ್ದಾರೆ.

ಇತ್ತೀಚೆಗೆ ನಡೆದ ಕೊನೆಯ ಪಂದ್ಯದಲ್ಲಿ ನ್ಯೂಜಿಲೆಂಡ್​ ವಿರುದ್ಧ ಟೀಮ್​ ಇಂಡಿಯಾ 44 ರನ್​ಗಳಿಂದ ಗೆದ್ದು ಬೀಗಿತ್ತು. ಈ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಸ್ಥಾನದಲ್ಲಿದೆ. ಸೆಮಿಫೈನಲ್‌ ಪಂದ್ಯದಲ್ಲಿ ಟೀಮ್ ಇಂಡಿಯಾ, ಆಸ್ಟ್ರೇಲಿಯಾ ವಿರುದ್ಧ ಸೆಣಸಾಟ ನಡೆಸಲಿದೆ. ಈ ಪಂದ್ಯದಲ್ಲಿ ಆ 2 ಸೋಲುಗಳ ಲೆಕ್ಕಾ ಚುಕ್ತ ಮಾಡಲು ಟೀಮ್​ ಇಂಡಿಯಾ ಪ್ಲಾನ್​ ಮಾಡಿದೆ.

ರಾಹುಲ್​ಗೆ ಗೇಟ್​ಪಾಸ್​​

ಬಾಂಗ್ಲಾದೇಶ ವಿರುದ್ಧದ ಮೊದಲ ಪಂದ್ಯದಲ್ಲಿ ವಿಕೆಟ್​ ಕೀಪಿಂಗ್​ನಲ್ಲಿ ಸ್ಥಿರ ಪ್ರದರ್ಶನ ನೀಡಿ ಕೆ.ಎಲ್​​ ರಾಹುಲ್​​​ ಬೆಸ್ಟ್​​ ಫೀಲ್ಡಿಂಗ್​ ಅವಾರ್ಡ್​ಗೆ ಭಾಜನರಾದ್ರು. ಇದಾದ ಬಳಿಕ ನಡೆದ 2​ ಪಂದ್ಯಗಳಲ್ಲೂ ಕನ್ನಡಿಗ ಕೆ.ಎಲ್​ ರಾಹುಲ್​​​ ತಮ್ಮ ಫಾರ್ಮ್​​​ ಕಾಯ್ದುಕೊಳ್ಳುವಲ್ಲಿ ಎಡವಿದರು. ವಿಕೆಟ್​ ಕೀಪಿಂಗ್​​ ಮತ್ತು ಬ್ಯಾಟಿಂಗ್​​ನಲ್ಲಿ ವೈಫಲ್ಯ ಅನುಭವಿಸಿದ್ರು ಎನ್ನುವ ಮಾತುಗಳು ಕೇಳಿ ಬಂದಿವೆ. ಹೀಗಾಗಿ ರಾಹುಲ್​​ಗೆ ಕೊಕ್​​ ನೀಡಿ ಪಂತ್​ಗೆ ಅವಕಾಶ ನೀಡಲಾಗುವುದು ಎನ್ನುವ ಮಾಹಿತಿ ಲಭ್ಯವಾಗಿದೆ.

ಪಂತ್​​ಗೆ ಚಾನ್ಸ್​

ಕೆಎಲ್ ರಾಹುಲ್‌ ನ್ಯೂಜಿಲೆಂಡ್ ವಿರುದ್ಧ ವಿಕೆಟ್‌ ಕೀಪರ್ ಆಗಿ ಹಲವು ತಪ್ಪುಗಳನ್ನು ಮಾಡಿದ್ರು. ಇದು ಭಾರತ ತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಆದ್ದರಿಂದ ಸೆಮಿಫೈನಲ್​​ ಪಂದ್ಯಕ್ಕೆ ಕೆ.ಎಲ್​ ರಾಹುಲ್​ಗೆ ರೆಸ್ಟ್​ ನೀಡಿ ಪಂತ್​ ಅವರನ್ನು ಆಡಿಸೋ ಸಾಧ್ಯತೆ ಇದೆ.

ಇದನ್ನೂ ಓದಿ:ಸೆಮಿಫೈನಲ್​ ಪಂದ್ಯ; ಟೀಮ್​ ಇಂಡಿಯಾದಿಂದ ಕೆ.ಎಲ್​ ರಾಹುಲ್​ಗೆ ಗೇಟ್​ಪಾಸ್​; ಕಾರಣವೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment