4,4,4,4,4,4,4,4,4,4,4,4,4,4,4,4,4,4; ಬಿಸಿಸಿಐಗೆ ಎಚ್ಚರಿಕಾ ಸಂದೇಶ ಕೊಟ್ಟ ಸ್ಫೋಟಕ ಬ್ಯಾಟರ್​​​​

author-image
Ganesh Nachikethu
Updated On
IND vs NZ; ಯುವ ಬ್ಯಾಟರ್ ಸರ್ಫರಾಜ್​ ಖಾನ್ ಮೇಲೆ ಬೆಟ್ಟದಷ್ಟು ನಿರೀಕ್ಷೆ.. ಯಾಕೆ ಗೊತ್ತಾ?
Advertisment
  • ಟೀಮ್​ ಇಂಡಿಯಾ, ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿ ಶುರು
  • ಇದರ ಬೆನ್ನಲ್ಲೇ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರೋ ಭಾರತ!
  • ಆಸೀಸ್​​ ವಿರುದ್ಧ 5 ಪಂದ್ಯಗಳ ಟೆಸ್ಟ್​​ ಸರಣಿ ಟೀಮ್​ ಇಂಡಿಯಾ

ಪ್ರಸ್ತುತ ಟೀಮ್​ ಇಂಡಿಯಾ, ನ್ಯೂಜಿಲೆಂಡ್ ತಂಡದ ನಡುವಿನ ಟೆಸ್ಟ್ ಸರಣಿ ಆರಂಭವಾಗಿದೆ. ಈ ಮಹತ್ವದ ಸರಣಿ ನಂತರ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಪ್ರವಾಸದ ವೇಳೆ ಆಸ್ಟ್ರೇಲಿಯಾ ವಿರುದ್ಧ ಟೀಮ್​​​ ಇಂಡಿಯಾ 5 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ.

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಭಾರತಕ್ಕೆ ಪ್ರಾಕ್ಟೀಸ್​ ಮಾಡಲು ಬೆಸ್ಟ್​ ಪ್ಲಾಟ್​ಫಾರ್ಮ್​​. ಇದಕ್ಕೆ ಕಾರಣ ಮುಂದಿನ ಟೆಸ್ಟ್​ ಸರಣಿ ಟೀಮ್​ ಇಂಡಿಯಾ ಆಡುತ್ತಿರುವುದು ವಿದೇಶಿ ನೆಲದಲ್ಲಿ ಎಂದರೆ ಆಸ್ಟ್ರೇಲಿಯಾದಲ್ಲಿ. ಹಾಗಾಗಿ ವಿದೇಶಿ ನೆಲದಲ್ಲಿ ಭಾರತ ಕ್ರಿಕೆಟ್​ ತಂಡದ ಆಟಗಾರರು ಉತ್ತಮ ಪ್ರದರ್ಶನ ನೀಡಲಿದ್ದಾರೆ ಅನ್ನೋ ನಿರೀಕ್ಷೆ ಇದೆ. ಕ್ಯಾಪ್ಟನ್​ ರೋಹಿತ್​​ ಶರ್ಮಾ, ವಿರಾಟ್​ ಕೊಹ್ಲಿ, ಕೆ.ಎಲ್​ ರಾಹುಲ್​​, ರಿಷಬ್​ ಪಂತ್​ ಕಾಂಗೂರು ನೆಲದಲ್ಲಿ ಹೇಗೆ ಆಡುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಹೀಗಾಗಿ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿ ಆರಂಭಕ್ಕೂ ಮುನ್ನ ಯಾರಿಗೆ ಟೀಮ್​ ಇಂಡಿಯಾದಲ್ಲಿ ಸ್ಥಾನ ಸಿಗಲಿದೆ ಅನ್ನೋ ಚರ್ಚೆ ಜೋರಾಗಿದೆ. ಇದರ ಮಧ್ಯೆ ಬಿಸಿಸಿಐ ಸೆಲೆಕ್ಷನ್​ ಕಮಿಟಿ ಕದವನ್ನು ಭಾರತದ ಭರವಸೆಯ ಬ್ಯಾಟರ್​ ತಟ್ಟಿದ್ದಾರೆ. ಮುಖ್ಯ ಕೋಚ್​​ ಗೌತಮ್​ ಗಂಭೀರ್​​​ ಮತ್ತು ಕ್ಯಾಪ್ಟನ್​ ರೋಹಿತ್​ ಶರ್ಮಾಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಟೀಮ್​ ಇಂಡಿಯಾದ ಜೂನಿಯರ್​ ರೋಹಿತ್​ ಶರ್ಮಾ!

ಭಾರತ ತಂಡದ ಭರವಸೆಯ ಬ್ಯಾಟರ್‌ ಸರ್ಫರಾಜ್‌ ಖಾನ್‌. ಇವರನ್ನು ಜೂನಿಯರ್​ ರೋಹಿತ್​ ಶರ್ಮಾ ಎಂದು ಕರೆಯಬಹುದು. ಕಾರಣ ಥೇಟ್​​ ರೋಹಿತ್​ ಶರ್ಮಾ ಬ್ಯಾಟಿಂಗ್​​ ಶೈಲಿಯನ್ನೇ ಹೋಲುವಂತೆ ಆಡುವ ಆಟಗಾರ ಸರ್ಫರಾಜ್. ಸದ್ಯ ಎಂ ಚಿನ್ನಸ್ವಾಮಿ ಅಂಗಳದಲ್ಲಿ ನಡೆಯುತ್ತಿರೋ ಟೀಮ್​ ಇಂಡಿಯಾ ಮತ್ತು ನ್ಯೂಜಿಲೆಂಡ್​ ತಂಡದ ಮಧ್ಯೆ ಮೊದಲ ಟೆಸ್ಟ್​​ ಪಂದ್ಯದಲ್ಲಿ ಶತಕ ಸಿಡಿಸೋ ಮೂಲಕ ಭಾರೀ ಸದ್ದು ಮಾಡುತ್ತಿದ್ದಾರೆ.

ಅಂತರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಚೊಚ್ಚಲ ಶತಕ

ನ್ಯೂಜಿಲೆಂಡ್‌ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದ 2ನೇ ಇನಿಂಗ್ಸ್‌ನಲ್ಲಿ ಸರ್ಫರಾಜ್​ ಖಾನ್​ ಅವರು ತಮ್ಮ ಇಂಟರ್​ ನ್ಯಾಷನಲ್​ ಕ್ರಿಕೆಟ್​​ನಲ್ಲಿ ಚೊಚ್ಚಲ ಶತಕ ಸಿಡಿಸಿದ್ರು. ಪಂದ್ಯದ 4ನೇ ದಿನದಾಟದ ಪಂದ್ಯ ಆರಂಭವಾದಾಗ ಟೀಮ್​ ಇಂಡಿಯಾ ಯುವ ಬ್ಯಾಟರ್​ ಸರ್ಫರಾಜ್ ಖಾನ್ ಮೇಲೆ ಎಲ್ಲರ ಚಿತ್ತ ನೆಟ್ಟಿತ್ತು. ಶುಕ್ರವಾರ 70 ರನ್‌ ಸಿಡಿಸಿ ಅಜೇಯರಾಗಿ ಉಳಿದಿದ್ದ ಸರ್ಫರಾಜ್​​ ಅವರು ಇಂದು ಅಬ್ಬರಿಸಿದ್ರು. ಅಗ್ರೆಸ್ಸಿವ್​ ಆಗಿ ಬ್ಯಾಟ್​ ಬೀಸಿದ ಇವರು ಕೇವಲ 110 ಎಸೆತಗಳಲ್ಲಿ ಮೊದಲ ಶತಕ ದಾಖಲಿಸಿದ್ರು. ಈ ಮೂಲಕ ತನ್ನನ್ನು ಮುಂದಿನ ಟೆಸ್ಟ್​ ಸರಣಿಗೂ ಪರಿಗಣಿಸಿ ಎಂದು ವಾರ್ನಿಂಗ್​ ಕೊಟ್ಟರು. ಇನ್ನೂ ಕ್ರೀಸ್​ನಲ್ಲೇ ಇದ್ದು ಬ್ಯಾಟಿಂಗ್​ ಮಾಡುತ್ತಿದ್ದಾರೆ. ಬರೋಬ್ಬರಿ 150 ರನ್​ ಸಿಡಿಸಿದ್ದು, 18 ಫೋರ್​​ ಮತ್ತು 3 ಸಿಕ್ಸರ್​​​ ಬಾರಿಸಿದ್ದಾರೆ.

ದೇಶೀಯ ಕ್ರಿಕೆಟ್​​ನಲ್ಲೂ ಅಬ್ಬರ

ದೇಶೀಯ ಟೂರ್ನಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಬಿಸಿಸಿಐ ಸೆಲೆಕ್ಷನ್​ ಕಮಿಟಿ ಗಮನ ಸೆಳೆದವರು ಸರ್ಫರಾಜ್​ ಖಾನ್​​​. ಇಂಗ್ಲೆಂಡ್‌ ವಿರುದ್ಧ ನಡೆದ ಸರಣಿಯಲ್ಲಿ ಆಡುವ ಅವಕಾಶ ಪಡೆದಿದ್ದ ಸರ್ಫರಾಜ್ ಮೂರು ಅರ್ಧಶತಕ ಬಾರಿಸಿ ಅಬ್ಬರಿಸಿದ್ರು. ಬೆಂಗಳೂರು ಟೆಸ್ಟ್​ನ ಮೊದಲ ಇನಿಂಗ್ಸ್‌ನಲ್ಲಿ ಸೊನ್ನೆ ಸುತ್ತಿದ ಇವರು ಈಗ ದ್ವಿಶತಕದತ್ತ ಮುನ್ನುಗ್ಗುತ್ತಿದ್ದಾರೆ.

ಇದನ್ನೂ ಓದಿ:ಎದುರಾಳಿಗಳಿಗೆ ನಡುಕ; ಆರ್​​​ಸಿಬಿ ತಂಡಕ್ಕೆ ಡೈನಾಮಿಕ್​​ ಬ್ಯಾಟರ್​ ರೀ ಎಂಟ್ರಿ!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment