ಟೀಮ್​ ಇಂಡಿಯಾದಿಂದ ಭಾರೀ ಎಡವಟ್ಟು; ಸ್ಟಾರ್​​ ವೇಗಿ ಅರ್ಷದೀಪ್​​ ಕೈ ಬಿಟ್ಟು ತಪ್ಪು ಮಾಡಿದ್ರಾ ಸೂರ್ಯ?

author-image
Ganesh Nachikethu
Updated On
ಟೀಮ್​ ಇಂಡಿಯಾದಿಂದ ಭಾರೀ ಎಡವಟ್ಟು; ಸ್ಟಾರ್​​ ವೇಗಿ ಅರ್ಷದೀಪ್​​ ಕೈ ಬಿಟ್ಟು ತಪ್ಪು ಮಾಡಿದ್ರಾ ಸೂರ್ಯ?
Advertisment
  • ಟೀಮ್​ ಇಂಡಿಯಾ, ಇಂಗ್ಲೆಂಡ್ ನಡುವೆ 3ನೇ ಟಿ20 ಪಂದ್ಯ
  • ರಾಜ್​​ಕೋಟ್​​​ ಸ್ಟೇಡಿಯಮ್​​ನಲ್ಲಿ ನಡೆಯುತ್ತಿರೋ ಮ್ಯಾಚ್​​
  • ಭಾರತ ತಂಡದ ಸ್ಟಾರ್​ ಆಟಗಾರನಿಗೆ ಕೊಕ್​ ನೀಡಿದ್ಯಾಕೆ?

ಟೀಮ್​ ಇಂಡಿಯಾ, ಇಂಗ್ಲೆಂಡ್ ನಡುವಿನ 5 ಟಿ20 ಪಂದ್ಯಗಳ ಸರಣಿಯ 3ನೇ ಪಂದ್ಯ ಇಂದು ರಾಜ್​​ಕೋಟ್​​ನಲ್ಲಿ ನಡೆಯುತ್ತಿದೆ. ಕೋಲ್ಕತ್ತಾ ಮತ್ತು ಚೆನ್ನೈನಲ್ಲಿ ಗೆದ್ದು ಬೀಗಿರೋ ಭಾರತ ತಂಡವು ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. 3ನೇ ಪಂದ್ಯ ಗೆದ್ದು ಸರಣಿ ಸಾಧಿಸುವತ್ತ ಭಾರತ ತಂಡದ ಕಣ್ಣು ನೆಟ್ಟಿದೆ.

ಟಾಸ್​ ಗೆದ್ದ ಟೀಮ್​ ಇಂಡಿಯಾ ಕ್ಯಾಪ್ಟನ್​​ ಸೂರ್ಯಕುಮಾರ್​ ಯಾದವ್​​​ 3ನೇ ಟಿ20 ಪಂದ್ಯಕ್ಕಾಗಿ ಸಾಕಷ್ಟು ಬದಲಾವಣೆ ಮಾಡಿದ್ದಾರೆ. ವೇಗದ ಬೌಲರ್ ಮೊಹಮ್ಮದ್ ಶಮಿಗಾಗಿ ಸ್ಟಾರ್​ ಬೌಲರ್​ ಅರ್ಷದೀಪ್​ ಅವರನ್ನೇ ಕೈ ಬಿಡಲಾಗಿದೆ.

ಶಮಿ ಕಮ್​ಬ್ಯಾಕ್​​

ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಮೊಹಮ್ಮದ್ ಶಮಿ ಹೊರಗುಳಿದಿದ್ದರು. ಈಗ ಇವರು 3ನೇ ಪಂದ್ಯಕ್ಕೆ ಕಮ್​ಬ್ಯಾಕ್​ ಮಾಡಿದ್ದಾರೆ. 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಶಮಿ ಭಾರತ ತಂಡದ ಪ್ರಮುಖ ಆಟಗಾರ. ಹೀಗಾಗಿ ಇವರು ಟೀಮ್​ ಇಂಡಿಯಾ 3ನೇ ಪಂದ್ಯದಲ್ಲಿ ಕಣಕ್ಕಿಳಿದಿದ್ದು, ಇದು ಟೀಮ್​ ಇಂಡಿಯಾಗೆ ಚಾಂಪಿಯನ್ಸ್ ಟ್ರೋಫಿಗೆ ಪ್ಲಸ್​ ಆಗಲಿದೆ.

ತಂಡದಿಂದ ಅರ್ಷದೀಪ್​ ಔಟ್​

ಚೆನ್ನೈನಲ್ಲಿ ಎರಡನೇ ಟಿ20ಯಲ್ಲಿ ಆಡಿದ ಭಾರತ ಹನ್ನೊಂದರ ಬಳಗವನ್ನೇ ಬಹುತೇಕ ಮುಂದುವರಿಸಲಾಗಿದೆ. ಅರ್ಷದೀಪ್​ ಸಿಂಗ್​ ಜಾಗಕ್ಕೆ ಶಮಿ ಬಂದಿದ್ದಾರೆ. ಅರ್ಷದೀಪ್​ ಸಿಂಗ್​ ಟೀಮ್​ ಇಂಡಿಯಾದ ಸ್ಟಾರ್​ ವಿಕೆಟ್​ ಟೇಕರ್​​. ಇವರು ತಂಡದಿಂದ ಹೊರಗುಳಿದಿದ್ದು, ಪಂದ್ಯದ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು.

ಕಳೆದ ಪಂದ್ಯದಲ್ಲಿ ವಿಕೆಟ್‌ ಕೀಪರ್-ಬ್ಯಾಟರ್ ಧ್ರುವ್ ಜುರೆಲ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಆದ್ರೂ ಮತ್ತೆ ಅವರಿಗೆ ಅವಕಾಶ ನೀಡಲಾಗಿದೆ. ಬೆನ್ನು ನೋವಿನಿಂದ ರಿಂಕು ಸಿಂಗ್ ಅವರು ಮೂರನೇ ಟಿ20 ಪಂದ್ಯದಿಂದಲೂ ಹೊರಗುಳಿದಿದ್ದಾರೆ.

ಇದನ್ನೂ ಓದಿ:ಆರ್​​ಸಿಬಿ ಸ್ಟಾರ್​​​ ಪ್ಲೇಯರ್​ಗೆ ಮಾಸ್ಟರ್​ ಸ್ಟ್ರೋಕ್​​; ತಂಡದಿಂದಲೇ ಔಟ್​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment