ಆಸ್ಟ್ರೇಲಿಯಾ ವಿರುದ್ಧ 2ನೇ ಟೆಸ್ಟ್​​ಗೆ ಸ್ಟಾರ್​ ಕ್ರಿಕೆಟರ್​ ಎಂಟ್ರಿ; ಟೀಮ್​ ಇಂಡಿಯಾಗೆ ಬಂತು ಆನೆಬಲ

author-image
Ganesh Nachikethu
Updated On
ಮೊದಲ ಟೆಸ್ಟ್​ ಪಂದ್ಯದಿಂದ ಸ್ಟಾರ್​ ಆಟಗಾರರಿಗೆ ಕೊಕ್​​; ಟೀಮ್​ ಇಂಡಿಯಾದಲ್ಲಿ ಇವರಿಗೆ ಸ್ಥಾನ
Advertisment
  • ಟೀಮ್​ ಇಂಡಿಯಾ, ಆಸ್ಟ್ರೇಲಿಯಾ ಮಧ್ಯೆ 2ನೇ ಟೆಸ್ಟ್​!
  • ಭಾರತ ಕ್ರಿಕೆಟ್​ ತಂಡಕ್ಕೆ ಸ್ಟಾರ್​​ ಪ್ಲೇಯರ್​ ಎಂಟ್ರಿ ಕೊಟ್ರು
  • 2ನೇ ಪಂದ್ಯಕ್ಕೆ ಟೀಮ್​ ಇಂಡಿಯಾಗೆ ಬಂತು ಆನೆಬಲ

ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್​ ಇಂಡಿಯಾ 295 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಟೀಮ್​​ ಇಂಡಿಯಾ ಐಸಿಸಿ ವಿಶ್ವಟೆಸ್ಟ್ ಚಾಂಪಿಯನ್ಶಿಪ್ ಪಾಯಿಂಟ್ಸ್ ಟೇಬಲ್​​ನಲ್ಲಿ ಮೊದಲ ಸ್ಥಾನಕ್ಕೇರಿದೆ.

ಒಂದೆಡೆ ಟೀಮ್​ ಇಂಡಿಯಾ ಮೊದಲ ಸ್ಥಾನಕ್ಕೇರಿದ್ರೆ, ಇನ್ನೊಂದೆಡೆ ಆಸ್ಟ್ರೇಲಿಯಾಗೆ ಭಾರೀ ಹಿನ್ನಡೆ ಆಗಿದೆ. ಪ್ಯಾಟ್ ಕಮ್ಮಿನ್ಸ್ ನೇತೃತ್ವದ ಕಾಂಗರೂ ಪಡೆ 2ನೇ ಸ್ಥಾನಕ್ಕೆ ಕುಸಿದಿದೆ. ಪರ್ತ್ ಟೆಸ್ಟ್ ಪಂದ್ಯದ ನಂತರ ಡಬ್ಲ್ಯುಟಿಸಿ ಫೈನಲ್ ತಲುಪುವ ಸನ್ನಿವೇಶ ಬದಲಾಗಿದೆ.

ರೋಹಿತ್ ಶರ್ಮಾ ನಾಯಕತ್ವದ ಟೀಮ್​ ಇಂಡಿಯಾಗೆ ಆಸ್ಟ್ರೇಲಿಯಾ ವಿರುದ್ಧ ಇನ್ನೂ 4 ಟೆಸ್ಟ್ ಪಂದ್ಯಗಳು ಮಾತ್ರ ಬಾಕಿ ಉಳಿದಿವೆ. ಇದಲ್ಲದೆ, ಆಸ್ಟ್ರೇಲಿಯಾ ತವರಿನಲ್ಲಿ ಭಾರತದ ವಿರುದ್ಧ ನಾಲ್ಕು ಟೆಸ್ಟ್ ಮತ್ತು ಶ್ರೀಲಂಕಾದಲ್ಲಿ ಎರಡು ಟೆಸ್ಟ್ ಪಂದ್ಯಗಳನ್ನು ಆಡಬೇಕಾಗಿದೆ.

ಟೀಮ್ ಇಂಡಿಯಾದ ಗೆಲುವಿನ ಶೇಕಡಾವಾರು ಪ್ರಸ್ತುತ 61.11 ರಷ್ಟಿದ್ದರೆ, ಆಸ್ಟ್ರೇಲಿಯಾದ ಗೆಲುವಿನ ಶೇಕಡಾವಾರು 57.69 ಕ್ಕೆ ಇಳಿದಿದೆ. ಟೀಮ್​ ಇಂಡಿಯಾ ಒಂದು ಪಂದ್ಯ ಸೋತ್ರೂ ಬಹಳ ತೊಂದರೆಯಾಗಲಿದೆ. ನಾಳೆಯಿಂದ ಟೀಮ್​ ಇಂಡಿಯಾ, ಆಸ್ಟ್ರೇಲಿಯಾ ಮಧ್ಯೆ 2ನೇ ಟೆಸ್ಟ್​​ ಪಂದ್ಯ ಶುರುವಾಗಿದೆ. ಇದರ ಮಧ್ಯೆ ಟೀಮ್​ ಇಂಡಿಯಾ ಸ್ಟಾರ್​ ಪ್ಲೇಯರ್​ ಎಂಟ್ರಿ ನೀಡಿದ್ದಾರೆ.

ಶಮಿ ಭರ್ಜರಿ ಕಮ್​ಬ್ಯಾಕ್​

ಗಾಯದಿಂದ ಚೇತರಿಸಿಕೊಂಡು ಸುಮಾರು ಒಂದು ವರ್ಷದ ನಂತರ ವೇಗದ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ ಕ್ರಿಕೆಟ್​ಗೆ ಮರಳಿದ್ದಾರೆ. ಇತ್ತೀಚೆಗೆ ಭರ್ಜರಿ ಕಮ್​ಬ್ಯಾಕ್​ ನಂತರ ನಡೆದ ಪಂದ್ಯವೊಂದರಲ್ಲಿ ಶಮಿ 7 ವಿಕೆಟ್ ಪಡೆದು ತಂಡಕ್ಕೆ ರೋಮಾಂಚಕ ಗೆಲುವು ತಂದುಕೊಟ್ಟರು.

ರಣಜಿ ಟ್ರೋಫಿಯಲ್ಲಿ ಬಂಗಾಳ ಪರ ಆಡಿದ್ದ ಅವರು ಮಧ್ಯಪ್ರದೇಶದ ವಿರುದ್ಧ ಅದ್ಭುತ ಬೌಲಿಂಗ್ ಮಾಡಿದರು. ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಮರಳುವ ಮೊದಲು, ಅವರು ದೇಶೀಯ ಕ್ರಿಕೆಟ್​ನಲ್ಲಿ ತಮ್ಮ ಫಿಟ್ನೆಸ್ ಅನ್ನು ಸಾಬೀತುಪಡಿಸಲು ಮೈದಾನಕ್ಕೆ ಇಳಿದಿದ್ದರು.

ಮಧ್ಯಪ್ರದೇಶ ವಿರುದ್ಧದ ಮೊದಲ ಇನ್ನಿಂಗ್ಸ್​ನಲ್ಲಿ 4 ವಿಕೆಟ್ ಪಡೆದರೆ, ಎರಡನೇ ಇನ್ನಿಂಗ್ಸ್​ನಲ್ಲಿ 3 ವಿಕೆಟ್ ಪಡೆದರು. ಶಮಿ ಅವರ ಅದ್ಭುತ ಬೌಲಿಂಗ್​ ನೆರವಿನಿಂದ ಬಂಗಾಳ ತಂಡವು ಮಧ್ಯಪ್ರದೇಶವನ್ನು 11 ರನ್​ಗ​ಳಿಂದ ಸೋಲಿಸಿತು.

ಇದನ್ನೂ ಓದಿ:KL ರಾಹುಲ್​ ಬೆನ್ನಲ್ಲೇ ಪಂತ್​ಗೂ ಬಿಗ್​ ಶಾಕ್​ ಕೊಟ್ಟ ಲಕ್ನೋ ತಂಡದ ಮಾಲೀಕ; ಏನಾಯ್ತು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment