ಮೈದಾನದಲ್ಲೇ ಥರ್ಡ್ ಅಂಪೈರ್​ನಿಂದ KL ರಾಹುಲ್​ಗೆ ಅನ್ಯಾಯ; ಖಡಕ್​​ ಉತ್ತರ ಕೊಟ್ಟ ಕನ್ನಡಿಗ

author-image
Ganesh Nachikethu
Updated On
KL ರಾಹುಲ್​​ಗೆ ಜಾಕ್​​ಪಾಟ್​​; ಕರ್ನಾಟಕದ ಮೂವರು ಸ್ಟಾರ್​ ಆಟಗಾರರಿಗೆ ಸ್ಥಾನ
Advertisment
  • ಟೀಮ್​​ ಇಂಡಿಯಾ, ಆಸ್ಟೇಲಿಯಾ ನಡುವಿನ ಮೊಲದ ಟೆಸ್ಟ್
  • 2ನೇ ಇನ್ನಿಂಗ್ಸ್​ನಲ್ಲಿ ರಾಹುಲ್​, ಜೈಸ್ವಾಲ್​ ಭರ್ಜರಿ ಬ್ಯಾಟಿಂಗ್​​​
  • ತನಗಾದ ಅನ್ಯಾಯಕ್ಕೆ ಸೇಡು ತೀರಿಸಿಕೊಂಡ ಕೆ.ಎಲ್​ ರಾಹುಲ್​​

ಟೀಮ್​​ ಇಂಡಿಯಾ ಮತ್ತು ಆಸ್ಟೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಸರಣಿಯ ಮೊದಲ ಪಂದ್ಯ ಪರ್ತ್​​​ ಇಂಟರ್​ ನ್ಯಾಷನಲ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿದೆ. ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಜಸ್ಪ್ರೀತ್ ಬುಮ್ರಾ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಆಸೀಸ್ ಭಯಾನಕ ವೇಗದ ಬೌಲಿಂಗಿಗೆ ತತ್ತರಿಸಿದ ಭಾರತ ತಂಡ ಮೊದಲ ಇನ್ನಿಂಗ್ಸ್​ನಲ್ಲಿ 150 ರನ್​ಗೆ ಆಲೌಟ್​ ಆಯ್ತು. ಈ ಟಾರ್ಗೆಟ್​ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ ಕ್ಯಾಪ್ಟನ್​​ ಬುಮ್ರಾ, ಸಿರಾಜ್​, ಹರ್ಷಿತ್​​ ರಾಣಾ ಬೌಲಿಂಗ್​​ ಮಾರಕ ದಾಳಿಗೆ ತತ್ತರಿಸಿತು. ಕೇವಲ 104 ರನ್​​ಗೆ ಆಲೌಟ್​ ಆಯ್ತು.

ಮೊದಲ ಇನ್ನಿಂಗ್ಸ್​ನಲ್ಲಿ ಅಂಪೈರ್​ ತಪ್ಪು ನಿರ್ಧಾರದಿಂದ ಕೆ.ಎಲ್​ ರಾಹುಲ್​​ ವಿಕೆಟ್​​ ಒಪ್ಪಿಸಬೇಕಾಯ್ತು. ಪಂದ್ಯದ 23ನೇ ಓವರ್ ಮಿಚೆಲ್ ಸ್ಟಾರ್ಕ್ ಎಸೆಯುತ್ತಿದ್ರು. ಆಫ್ ಸ್ಟಂಪ್ ಕಡೆಗೆ ಬಿದ್ದ ಬಾಲ್ ಅನ್ನು ರಾಹುಲ್ ಡಿಫೆನ್ಸ್ ಮಾಡಲು ಹೋದ್ರು. ಆದರೆ, ಬ್ಯಾಟಿಗೆ ತಗುಲದೇ ಬಾಲ್ ವಿಕೆಟ್ ಕೀಪರ್ ಕಡೆಗೆ ಹೋಯಿತು. ಸ್ಟಾರ್ಕ್ ಅಪೀಲ್ ಮಾಡಿದ್ರು. ಮೂರನೇ ಅಂಪೈರ್​​ ಎಲ್ಲಾ ಆ್ಯಂಗಲ್ ಕ್ಯಾಮರಾ ನೋಡದೆ ಔಟ್​ ಎಂದು ತೀರ್ಪು ಕೊಟ್ರು.

ಅನ್ಯಾಯಕ್ಕೆ ಸೇಡು ತೀರಿಸಿಕೊಂಡ ಕೆ.ಎಲ್​ ರಾಹುಲ್​​

ತನಗಾದ ಅನ್ಯಾಯಕ್ಕೆ ಕೆ.ಎಲ್​ ರಾಹುಲ್​ ಸೇಡು ತೀರಿಸಿಕೊಂಡಿದ್ದಾರೆ. 2ನೇ ಇನ್ನಿಂಗ್ಸ್​ನಲ್ಲಿ ಟೀಮ್​ ಇಂಡಿಯಾ ಪರ ಓಪನರ್​ ಆಗಿ ಬಂದ ಕೆ.ಎಲ್​ ರಾಹುಲ್​ ಕಲ್ಲು ಬಂಡೆಯಂತೆ ನಿಂತು ಆಡಿದ್ರು. ತಾಳ್ಮೆಯಿಂದಲೇ ಬ್ಯಾಟ್​ ಬೀಸಿದ ರಾಹುಲ್​ ಅವರು, 124 ಬಾಲ್​ನಲ್ಲಿ 50 ರನ್​ ಚಚ್ಚಿದ್ರು. ಈ ಪೈಕಿ 4 ಬೌಂಡರಿಗಳು ಸೇರಿವೆ. ಇವರಿಗೆ ಯಶಸ್ವಿ ಜೈಸ್ವಾಲ್​​​ ಸಾಥ್​ ಕೊಟ್ಟರು.

ಇದನ್ನೂ ಓದಿ: RCB ಸೇರಲು ದಿನೇಶ್​ ಕಾರ್ತಿಕ್​​ಗೆ ಕಾಲ್​ ಮಾಡಿದ್ದ ಸ್ಟಾರ್​ ಆಟಗಾರರು; ಸತ್ಯ ಬಿಚ್ಚಿಟ್ಟ ಕೋಚ್​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment