/newsfirstlive-kannada/media/post_attachments/wp-content/uploads/2024/11/KL-Rahul-Test-1.jpg)
ಟೀಮ್ ಇಂಡಿಯಾ, ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿ ಶುರುವಾಗಲು ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈ ಮಹತ್ವದ ಸರಣಿಗಾಗಿ ಸದ್ಯದಲ್ಲೇ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಬೆಳೆಸಲಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶೀಪ್ ದೃಷ್ಟಿಯಿಂದ ಹೇಗಾದ್ರೂ ಮಾಡಿ ಈ ಸರಣಿ ಗೆಲ್ಲಲೇಬೇಕು ಎಂದು ಟೀಮ್ ಇಂಡಿಯಾ ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದೆ.
ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್‌ಗೆ ದೊಡ್ಡ ತಲೆನೋವು ಎದುರಾಗಿದೆ. ಗಾಯಕ್ಕೆ ತುತ್ತಾಗಿರುವ ಆಟಗಾರರು ಮೊದಲ ಟೆಸ್ಟ್ ಪಂದ್ಯ ಆಡುವುದು ಡೌಟ್ ಎನ್ನಲಾಗುತ್ತಿದೆ. ಶುಭ್ಮನ್ ಗಿಲ್, ಕೆ.ಎಲ್ ರಾಹುಲ್ ಮತ್ತು ಸರ್ಫರಾಜ್ ಖಾನ್ ಗಾಯಕ್ಕೆ ತುತ್ತಾಗಿದ್ದಾರೆ. ಈಗ ಈ ಪೈಕಿ ಕೆ.ಎಲ್ ರಾಹುಲ್ ಸಂಪೂರ್ಣ ಫಿಟ್ ಆಗಿದ್ದು, ಮೈದಾನಕ್ಕೆ ಇಳಿಯೋದು ಪಕ್ಕಾ ಆಗಿದೆ.
ಭರ್ಜರಿ ಗುಡ್ನ್ಯೂಸ್ ಕೊಟ್ಟ ಕೆ.ಎಲ್ ರಾಹುಲ್
ಬಾರ್ಡರ್ ಗವಾಸ್ಕರ್ ಟ್ರೋಫಿ ಟೀಮ್ ಇಂಡಿಯಾಗೆ ಮಹತ್ವದ ಸರಣಿ. ಈ ಮಹತ್ವದ ಟೂರ್ನಿ ಗೆದ್ದರೆ ಮಾತ್ರ ಟೀಮ್ ಇಂಡಿಯಾ ನೇರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪ್ರವೇಶ ಮಾಡಲಿದೆ. ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧದ ಮೂರು ಟೆಸ್ಟ್ಗಳ ಸರಣಿಯಲ್ಲಿ ಹೀನಾಯ ಸೋಲು ಕಂಡ ಟೀಮ್ ಇಂಡಿಯಾಗೆ ಆಸ್ಟ್ರೇಲಿಯಾ ವಿರುದ್ಧ 4 ಪಂದ್ಯ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.
ಕೆ.ಎಲ್ ರಾಹುಲ್ಗೆ ಹೊಸ ಜವಾಬ್ದಾರಿ
ಪರ್ತ್‌ನಲ್ಲಿ ನಡೆಯಲಿರೋ ಮೊದಲ ಟೆಸ್ಟ್ ಪಂದ್ಯದಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ ಆಡೋದು ಡೌಟ್. ಹೀಗಾಗಿ ಟೀಮ್ ಇಂಡಿಯಾ ಆರಂಭಿಕ ಆಟಗಾರನ ಹುಡುಕಾಟದಲ್ಲಿದೆ. ಟೀಮ್ ಇಂಡಿಯಾ ಪರ ಇನಿಂಗ್ಸ್ ಆರಂಭಿಸುವ ಹೊಣೆ ಕೆಎಲ್ ರಾಹುಲ್ಗೆ ನೀಡಲಾಗಿದೆ.
ನವೆಂಬರ್ 22ರಿಂದ ಆಸ್ಟ್ರೇಲಿಯಾದಲ್ಲಿ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಕೌಟುಂಬಿಕ ಕಾರಣ ಕ್ಯಾಪ್ಟನ್ ರೋಹಿತ್ ಅವರು ಇನ್ನೂ ಪರ್ತ್ಗೆ ಹೋಗಿಲ್ಲ. ಮೊದಲ ಪಂದ್ಯವನ್ನು ರೋಹಿತ್ ಅವರೇ ಮುನ್ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. ಶೀಘ್ರದಲ್ಲಿ ಶರ್ಮಾ ಆಸ್ಟ್ರೇಲಿಯಾಗೆ ಪ್ರಯಾಣ ಬೆಳಸಲಿದ್ದಾರೆ.
ಇದನ್ನೂ ಓದಿ: RCB ಕೈ ಬಿಟ್ಟ ಈ ಮೂವರಿಗೆ ಭಾರೀ ಡಿಮ್ಯಾಂಡ್; 10 ಕೋಟಿಗೂ ಹೆಚ್ಚು ಸೇಲಾಗೋ ಆಟಗಾರರು ಇವ್ರೇ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ