/newsfirstlive-kannada/media/post_attachments/wp-content/uploads/2024/10/Kohli-Rahul.jpg)
ಟೀಮ್​ ಇಂಡಿಯಾ ಮತ್ತು ನ್ಯೂಜಿಲೆಂಡ್​ ನಡುವಿನ 3ನೇ ಟೆಸ್ಟ್​​ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಮ್​ನಲ್ಲಿ ನಡೆಯಲಿದೆ. ಇದಕ್ಕೆ ಟೀಮ್​ ಇಂಡಿಯಾ ಭರ್ಜರಿ ತಯಾರಿ ಮಾಡಿಕೊಂಡಿದೆ. ನವೆಂಬರ್​​ 1ನೇ ತಾರೀಕಿನಿಂದ ಶುರುವಾಗೋ ಈ ಟೆಸ್ಟ್​ ಪಂದ್ಯ 5ರ ವರೆಗೆ ನಡೆಯಲಿದೆ. ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ತಲುಪಲು ಈ ಪಂದ್ಯ ಗೆಲ್ಲಲೇಬೇಕಿದೆ. ಇದಕ್ಕೂ ಮುನ್ನ ಟೀಮ್​​ ಇಂಡಿಯಾಗೆ ಸ್ಟಾರ್​ ಪ್ಲೇಯರ್​ ಕೈ ಕೊಟ್ಟಿದ್ದಾರೆ.
3ನೇ ಟೆಸ್ಟ್​​ನಿಂದ ಪಂತ್​ ಔಟ್​​
ನ್ಯೂಜಿಲೆಂಡ್​​ ವಿರುದ್ಧದ 3ನೇ ಟೆಸ್ಟ್​​ನಿಂದ ಟೀಮ್​​ ಇಂಡಿಯಾ ವಿಕೆಟ್​ ಕೀಪರ್​ ಬ್ಯಾಟರ್​​ ರಿಷಬ್​ ಪಂತ್​ ಔಟ್​ ಆಗೋ ಸಾಧ್ಯತೆ ಇದೆ. ಮೊದಲ ಟೆಸ್ಟ್‌ನಲ್ಲಿ ಪಂತ್ ಕೀಪಿಂಗ್ ಮಾಡುವಾಗ ತೀವ್ರವಾಗಿ ಗಾಯಗೊಂಡಿದ್ದರು. ಮೊಣಕಾಲಿಗೆ ಎಲ್ಲಿ ಸರ್ಜರಿ ಆಗಿತ್ತೋ ಅದೇ ಜಾಗಕ್ಕೆ ಗಾಯ ಆಗಿತ್ತು. ಬಾಲ್​​ ಬಲವಾಗಿ ಬಿದ್ದ ಕಾರಣ ಪಂತ್ ನೋವಿನಿಂದ ಕುಸಿದು ಬಿದ್ದಿದ್ದರು. ಬಳಿಕ ಮೈದಾನದಿಂದ ಹೊರ ನಡೆದಿದ್ದು, ಇವರ ಬದಲಿಗೆ ಧ್ರುವ್ ಜುರೆಲ್ ವಿಕೆಟ್ ಕೀಪಿಂಗ್ ಮಾಡಿದ್ದರು. ರೆಸ್ಟ್​ ಮಾಡಿದ ನಂತರ 2ನೇ ಟೆಸ್ಟ್​ನಲ್ಲಿ ಬ್ಯಾಟಿಂಗ್​ ಮಾಡಿದ್ರು. ಆದರೆ, ರನ್ನಿಂಗ್​ ವೇಳೆ ಮತ್ತೆ ಅದೇ ಕಾಲಿಗೆ ಪೆಟ್ಟು ಬಿದ್ದಿದೆ ಎಂದು ತಿಳಿದು ಬಂದಿದೆ.
ಪಂತ್​ ಬದಲಿಗೆ ಕೆ.ಎಲ್​ ರಾಹುಲ್​ಗೆ ಸ್ಥಾನ
ಮೊದಲ ಟೆಸ್ಟ್ ಪಂದ್ಯ ಸೋಲಿನ ಕನ್ನಡಿಗ ಕೆ.ಎಲ್​ ರಾಹುಲ್​ ಅವರನ್ನು ಬೆಂಚ್​​ ಕಾಯಿಸಲಾಗಿತ್ತು. ಈಗ ಪಂತ್​​ಗೆ ಇಂಜೂರಿ ಆಗಿರೋ ಕಾರಣ ಇವರಿಗೆ ತಂಡದಲ್ಲಿ ಸ್ಥಾನ ನೀಡಲಾಗುವುದು ಎಂದು ತಿಳಿದು ಬಂದಿದೆ.
ಕೆ.ಎಲ್​​ ರಾಹುಲ್​ ಟೀಮ್​​ ಇಂಡಿಯಾದ ಸ್ಟಾರ್​ ಪ್ಲೇಯರ್​​. ಇತ್ತೀಚೆಗೆ ನಡೆದ ಬಾಂಗ್ಲಾದೇಶ ವಿರುದ್ಧ ಟೆಸ್ಟ್​ ಸೀರೀಸ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ರು. ಹಾಗಾಗಿ ಇವರನ್ನು ನ್ಯೂಜಿಲೆಂಡ್​ ತಂಡದ ವಿರುದ್ಧದ ಟೆಸ್ಟ್​ ಸರಣಿಗೆ ಆಯ್ಕೆ ಮಾಡಲಾಯ್ತು. ಆದರೀಗ, ಮೊದಲ ಟೆಸ್ಟ್​ನಲ್ಲೇ ಸಂಕಷ್ಟದಲ್ಲಿದ್ದ ಟೀಮ್​ ಇಂಡಿಯಾಗೆ ರಾಹುಲ್​ ಕೈ ಕೊಟ್ಟರು. ಈ ಮೂಲಕ ತನಗೆ ಸಿಕ್ಕ ಸುವರ್ಣಾವಕಾಶ ಕೈಚೆಲ್ಲಿದರು.
ಮೊದಲ ಟೆಸ್ಟ್​​ನಲ್ಲಿ ಹೀನಾಯ ಸೋಲಿನ ಬಳಿಕ ಟೀಮ್​ ಇಂಡಿಯಾ ಸ್ಟಾರ್​​ ಬ್ಯಾಟರ್​​​ ಕೆ.ಎಲ್​​ ರಾಹುಲ್​ ಹೆಚ್ಚು ಟೀಕೆಗೆ ಒಳಗಾಗಿದ್ದಾರೆ. ತವರಿನಲ್ಲಿ ನಡೆದ ಪಂದ್ಯದಲ್ಲಿ ಬ್ಯಾಟಿಂಗ್​ ವೈಫಲ್ಯ ಅನುಭವಿಸೋ ಮೂಲಕ ರಾಹುಲ್​ ಹೆಚ್ಚು ನಿರಾಸೆ ಮೂಡಿಸಿದ್ರು. ಮೊದಲ ಇನ್ನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾದ ಇವರು 2ನೇ ಇನ್ನಿಂಗ್ಸ್​ನಲ್ಲಿ ಕೇವಲ 12 ರನ್​ಗೆ ವಿಕೆಟ್​ ಒಪ್ಪಿಸಿದ್ರು. ಹೀಗಾಗಿ ಇವರನ್ನು 2ನೇ ಟೆಸ್ಟ್​​ ಪಂದ್ಯದಿಂದ ಬೆಂಚ್​​ ಕಾಯಿಸಲಾಗಿತ್ತು.
ಭಾರತಕ್ಕೆ ಹೀನಾಯ ಸೋಲು
ಇತ್ತೀಚೆಗೆ ನಡೆದ ನ್ಯೂಜಿಲೆಂಡ್​ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 113 ರನ್ ಗಳಿಂದ ಸೋಲು ಕಂಡಿತು. ಈ ಮೂಲಕ ಭಾರತ ಟೆಸ್ಟ್ ಸರಣಿಯನ್ನು ಕೈಚೆಲ್ಲಿದೆ.
ಪುಣೆಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಫಸ್ಟ್​ ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್​​ 259 ರನ್​ಗಳಿಗೆ ಆಲೌಟ್ ಆಗಿತ್ತು. ನಂತರ ಇನ್ನಿಂಗ್ಸ್ ಆರಂಭಿಸಿದ್ದ ಭಾರತ ತಂಡ ಕೇವಲ 156 ರನ್​ಗಳಿಗೆ ಆಲೌಟ್ ಆಗುವ ಮೂಲಕ 103 ರನ್ ಗಳ ಹಿನ್ನಡೆ ಅನುಭವಿಸಿತ್ತು. 2ನೇ ಇನ್ನಿಂಗ್ಸ್ ಆರಂಭಿಸಿದ್ದ ನ್ಯೂಜಿಲೆಂಡ್​ 255 ರನ್​​ ಕಲೆ ಹಾಕಿ ಆಲೌಟ್​ ಆಗಿತ್ತು. ಇದರೊಂದಿಗೆ ಭಾರತಕ್ಕೆ ಗೆಲ್ಲಲು 359 ರನ್ ಗುರಿ ನೀಡಿತ್ತು. ಈ ರನ್ ಗುರಿ ಬೆನ್ನಟ್ಟಿದ ಭಾರತ 245 ರನ್​ಗಳಿಗೆ ಆಲೌಟ್ ಆಗುವ ಮೂಲಕ 113 ರನ್ ಗಳಿಂದ ಪಂದ್ಯ ಸೋತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us