ಟೀಮ್​​ ಇಂಡಿಯಾದ ಸ್ಟಾರ್ ಕ್ರಿಕೆಟರ್​​ ಮನೀಶ್​ ಪಾಂಡೆ ಯುಗಾಂತ್ಯ; ಕಾರಣವೇನು?

author-image
Ganesh Nachikethu
ಟೀಮ್​​ ಇಂಡಿಯಾದ ಸ್ಟಾರ್ ಕ್ರಿಕೆಟರ್​​ ಮನೀಶ್​ ಪಾಂಡೆ ಯುಗಾಂತ್ಯ; ಕಾರಣವೇನು?
Advertisment
  • ವಿಜಯ್ ಹಜಾರೆ ಏಕದಿನ ಸರಣಿಗೆ ಕರ್ನಾಟಕ ತಂಡ ಪ್ರಕಟ
  • ಕರ್ನಾಟಕ ತಂಡದದಿಂದ ಕ್ರಿಕೆಟರ್​​ ಮನೀಶ್​ ಪಾಂಡೆ ಔಟ್..​!
  • ಕರ್ನಾಟಕ ಪರ 118 ಪಂದ್ಯಗಳನ್ನಾಡಿರೋ ಮನೀಶ್​ ಪಾಂಡೆ

ಸದ್ಯ ದೇಶೀಯ ಟೂರ್ನಿಗಳು ನಡೆಯುತ್ತಿವೆ. ಮುಷ್ತಾಕ್ ಅಲಿ ಟಿ20 ಕ್ರಿಕೆಟ್‌ ಟೂರ್ನಿಯಲ್ಲೂ ಕರ್ನಾಟಕ ರಣಜಿ ತಂಡ ಭಾಗವಹಿಸಿದೆ. ಈ ಬೆನ್ನಲ್ಲೇ ನಡೆಯಲಿರೋ ವಿಜಯ್ ಹಜಾರೆ ಏಕದಿನ ಸರಣಿಗೂ ಕರ್ನಾಟಕ ಸಿದ್ಧತೆ ನಡೆಸಿದೆ. ಇದರ ನಡುವೆ ವಿಜಯ್‌ ಹಜಾರೆ ಸಂಭಾವ್ಯ ತಂಡ ಪ್ರಕಟವಾಗಿದೆ. ಸಂಭಾವ್ಯ ತಂಡದಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿರೋ ಕರ್ನಾಟಕದ ಮೂವರು ಆಟಗಾರರು ಸ್ಥಾನ ಪಡೆದಿದ್ದಾರೆ.

ಮೂವರು ಕನ್ನಡಿಗರಿಗೆ ಅವಕಾಶ

ಕರ್ನಾಟಕ 32 ಸದಸ್ಯರ ಸಂಭಾವ್ಯ ತಂಡ ಪ್ರಕಟಿಸಿದೆ. ಈ ತಂಡದಲ್ಲಿ ಕರ್ನಾಟಕದ ಸ್ಟಾರ್ ಆಟಗಾರ ಕೆಎಲ್ ರಾಹುಲ್​ಗೆ ಅವಕಾಶ ಸಿಕ್ಕಿದೆ. ಅಲ್ಲದೆ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಆಡುತ್ತಿರೋ ಪ್ರಸಿದ್ಧ ಕೃಷ್ಣ, ದೇವದತ್ ಪಡಿಕ್ಕಲ್​ ಸ್ಥಾನ ಪಡೆದಿದ್ದಾರೆ.

ಮನೀಶ್​ ಪಾಂಡೆಗೆ ಕೊಕ್​​

ಕರ್ನಾಟಕದಿಂದ ಅನುಭವಿ ಬ್ಯಾಟರ್ ಮನೀಶ್ ಪಾಂಡೆಯನ್ನು ಹೊರಗಿಡಲಾಗಿದೆ. ಹೀಗಾಗಿ ಮುಂದಿನ ರಣಜಿ ಟೂರ್ನಿಯಲ್ಲಿ ಮನೀಶ್ ಪಾಂಡೆ ಕರ್ನಾಟಕ ಪರ ಕಣಕ್ಕಿಳಿಯುವುದಿಲ್ಲ ಎಂದು ತಿಳಿದು ಬಂದಿದೆ. ಇವರ ಬದಲಿಗೆ ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡಲಾಗಿದೆ ಎಂದು ಕೆಎಸ್‌ಸಿಎ ಆಯ್ಕೆ ಸಮಿತಿ ಅಧ್ಯಕ್ಷ ಜೆ.ಅಭಿರಾಮ್ ತಿಳಿಸಿದ್ದಾರೆ.

ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಮನೀಶ್ ಪಾಂಡೆ ಕರ್ನಾಟಕ ಪರ 118 ಪಂದ್ಯಗಳನ್ನಾಡಿದ್ದಾರೆ. ಈ ಪೈಕಿ 25 ಶತಕ ಹಾಗೂ 32 ಅರ್ಧಶತಕ ಸಿಡಿಸಿದ್ದಾರೆ. ಒಟ್ಟು 7973 ರನ್ ಕಲೆ ಹಾಕಿದ್ದಾರೆ. ಲಿಸ್ಟ್ ಎ ಕ್ರಿಕೆಟ್​ನಲ್ಲಿ 192 ಪಂದ್ಯಗಳನ್ನಾಡಿರೋ ಪಾಂಡೆ 10 ಶತಕ ಹಾಗೂ 39 ಅರ್ಧಶತಕಗಳೊಂದಿಗೆ ಒಟ್ಟು 6310 ರನ್ ಬಾರಿಸಿದ್ದಾರೆ.

ವಿಜಯ್ ಹಜಾರೆ ಟ್ರೋಫಿಗೆ ತಂಡ ಹೀಗಿದೆ!

ಕೆ.ಎಲ್.ರಾಹುಲ್, ಮಯಾಂಕ್ ಅಗರ್ವಾಲ್, ಪ್ರಸಿದ್ಧ್ ಕೃಷ್ಣ, ದೇವದತ್ ಪಡಿಕ್ಕಲ್, ಎಲ್.ಆರ್.ಚೇತನ್, ಮೆಕ್ನೀಲ್ ನೊರೊನ್ಹಾ, ಶ್ರೇಯಸ್ ಗೋಪಾಲ್, ಕೆ.ಎಲ್.ಶ್ರೀಜಿತ್, ಅಭಿನವ್ ಮನೋಹರ್, ಮನೋಜ್ ಭಾಂಡಗೆ, ಹಾರ್ದಿಕ್ ರಾಜ್, ವಿ.ಕೌಶಿಕ್, ವಿದ್ಯಾಧರ್ ಪಾಟೀಲ್, ಶುಭಾಂಗ್ ಹೆಗ್ಡೆ, ಮೊಹ್ಲಾಷ್ ಶೆಟ್ಟಿ, ಆರ್. ಸ್ಮರಣ್, ಲವ್ನಿತ್ ಸಿಸೋಡಿಯಾ, ವಿ. ವೈಶಾಖ್, ಮನ್ವಂತ್ ಕುಮಾರ್, ಯಶೋವರ್ಧನ್ ಪರಂತಪ್, ಪ್ರವೀಣ್ ದುಬೆ, ಎಂ.ವೆಂಕಟೇಶ್, ನಿಕಿನ್. ಜೋಸ್, ಕೆ.ವಿ ಅನೀಶ್, ಕೆ. ಶಶಿಕುಮಾರ್, ಪಾರಸ್ ಗುರ್ಬಕ್ಸ್ ಆರ್ಯ, ಶಿಖರ್ ಶೆಟ್ಟಿ, ಕಿಶನ್ ಬೇಡರೆ, ಹರ್ಷಿಲ್ ಧರ್ಮನಿ, ವಿದಾವತ್ ಕವರಪ್ಪ, ಕೃತಿಕ್ ಕೃಷ್ಣ.

ಇದನ್ನೂ ಓದಿ:KL ರಾಹುಲ್​​ಗೆ ಜಾಕ್​​ಪಾಟ್​​; ಕರ್ನಾಟಕದ ಮೂವರು ಸ್ಟಾರ್​ ಆಟಗಾರರಿಗೆ ಸ್ಥಾನ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment